Home
ಸುದ್ದಿಜಾಲ

ಈ ಕಿಲಾಡಿಯನ್ನು ನೋಡಿ ಪೊಲೀಸರಿಗೆ ದಿಗ್ಬ್ರಮೆ, ಹ್ಯಾಕ್ ಮಾಡಿ ಕೋಟಿ ಕೋಟಿ ಸಂಪಾದನೆ, ಆದ್ರೆ ಈಗ?

ಆನ್‌ಲೈನ್‌ ಸ್ಕ್ಯಾಮ್‌ (Online scam) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುತ್ತವೆ. ಈ ಮೂಲಕ ಸಾಮಾನ್ಯ ಜನರು ಒಂದಲ್ಲಾ ಒಂದು ರೀತಿಯಲ್ಲಿ ಮೋಸ ಹೋಗುತ್ತಲೇ ಇದ್ದಾರೆ. ಈ ನಡುವೆ ಲಾಯಲ್ಟಿ ರಿವಾರ್ಡ್ ಸೈಟ್ ಅನ್ನು ಹ್ಯಾಕ್ ಮಾಡಿದ್ದ ಬೆಂಗಳೂರಿನ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದು, ಈತನಿಂದ ಕೋಟಿ ಕೋಟಿ ಹಣ ಹಾಗೂ ಕಾರು, ಚಿನ್ನ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಹೌದು, ಸ್ಕ್ಯಾಮ್‌ ಮಾಡಲು ಸ್ಕ್ಯಾಮರ್‌ಗಳು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇರುತ್ತಾರೆ. ಈ ನಡುವೆ ಲಾಯಲ್ಟಿ ರಿವಾರ್ಡ್ ಸೈಟ್ (Loyalty reward site)ಅನ್ನು ಹ್ಯಾಕ್ ಮಾಡುವ ಮೂಲಕ ಬೆಂಗಳೂರಿನ ಟೆಕ್ಕಿ ಐಷಾರಾಮಿ ಜೀವನ ನಡೆಸಿದ್ದಾನೆ. ಆದರೆ ಕೊನೆಗೂ ಈಗ ಪೊಲೀಸರ ಬಲೆಗೆ ಬಿದ್ದಿದ್ದು, ಈ ಮೂಲಕ ದೊಡ್ಡ ಹಗರಣ ಬೆಳಕಿಗೆ ಬಂದಿದೆ. ಹಾಗಿದ್ರೆ, ಏನಿದು ಹೊಸ ಸ್ಕ್ಯಾಮ್‌? ಆ ಟೆಕ್ಕಿ ಮಾಡುತ್ತಿದ್ದ ಖತರ್ನಾಕ್‌‌ ಐಡಿಯಾ ಏನು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಈ ಕಿಲಾಡಿಯನ್ನು ನೋಡಿ ಪೊಲೀಸರಿಗೆ ದಿಗ್ಬ್ರಮೆ, ಹ್ಯಾಕ್ ಮಾಡಿ ಕೋಟಿ ಕೋಟಿ ಸಂಪಾದನೆ

ಹ್ಯಾಕಿಂಗ್‌ ಗೀಳು: 23 ವರ್ಷದ ಬೊಮ್ಮಲೂರು ಲಕ್ಷ್ಮೀಪತಿ ಎಂಬ ಟೆಕ್ಕಿ ಎಚ್‌ಡಿಎಫ್‌ಸಿ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಅಮೆರಿಕನ್ ಎಕ್ಸ್‌ಪ್ರೆಸ್ ಮತ್ತು ಪೇಬ್ಯಾಕ್ ಸಹಭಾಗಿತ್ವದಲ್ಲಿ ಲಾಯಲ್ಟಿ ಮತ್ತು ರಿವಾರ್ಡ್ ಕಾರ್ಯಕ್ರಮಗಳನ್ನು ನಡೆಸುತ್ತಿರುವ ರಿವಾರ್ಡ್ 360 ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿದ್ದಾನೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ಲಕ್ಷಗಟ್ಟಲೆ ಗಿಫ್ಟ್ ವೋಚರ್‌ಗಳನ್ನು ಕದ್ದಿದ್ದಾನೆ. ಅಷ್ಟೇ ಅಲ್ಲದೆ ಚಿನ್ನ, ಮೋಟಾರ್‌ಸೈಕಲ್‌ಗಳು ಮತ್ತು ದುಬಾರಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಖರೀದಿ ಮಾಡಲು ಈ ವೋಚರ್ ಬಳಕೆ ಮಾಡಿದ್ದಾನೆ.

ಅಂದರೆ ಈ ವರ್ಷದ ಜನವರಿ ಮತ್ತು ಜೂನ್ ನಡುವೆ ಲಕ್ಷ್ಮೀಪತಿ ಸುಮಾರು ಐದು ಲಕ್ಷ ಗಿಫ್ಟ್ ವೋಚರ್‌ಗಳನ್ನು (Gift Voucher) ಕದ್ದಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ 4.16 ಕೋಟಿ ರೂಪಾಯಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಖರೀದಿಸಲು ರಿಡೀಮ್ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಈತನಿಂದ 5.269 ಕೆಜಿ ಶುದ್ಧ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದ್ದು, ನಗರ ಪೊಲೀಸರ ಕಾರ್ಯಾಚರಣೆಯ ಇತಿಹಾಸದಲ್ಲಿಯೇ ಇದು ದೊಡ್ಡ ಮೌಲ್ಯದ್ದಾಗಿದೆ.

ಇನ್ನು ಈ ಲಕ್ಷ್ಮೀಪತಿ ತಮ್ಮ ಕಾಲೇಜು ದಿನಗಳಲ್ಲಿ ಖಾಸಗಿ ವಲಯದ ಬ್ಯಾಂಕ್‌ನಿಂದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಪಡೆದುಕೊಂಡಾಗಿನಿಂದ ಈ ಹ್ಯಾಕಿಂಗ್‌ ಕೆಲಸ ಮಾಡಿಕೊಂಡು ಬಂದಿದ್ದಾನಂತೆ. ಈ ಬಗ್ಗೆ ಪೊಲೀಸ್‌ ಉಪ ಆಯುಕ್ತ (ಆಗ್ನೇಯ) ಸಿ ಕೆ ಬಾಬಾ ಮಾಹಿತಿ ನೀಡಿದ್ದಾರೆ. ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್‌ ಮಾಡಲು ಬ್ಯಾಂಕ್‌ ನಿರಾಕರಿಸಿದಾಗ, ಆತ ಸರ್ವರ್‌ಗಳನ್ನು ಬಳಸಿಕೊಳ್ಳಲು ಮತ್ತು ಅನಿಯಮಿತ ವೋಚರ್‌ಗಳನ್ನು ಪಡೆಯಲು ಹ್ಯಾಕ್‌ ತಂತ್ರ ಬಳಕೆ ಮಾಡಿದ್ದಾನೆ ಎಂದಿದ್ದಾರೆ.

ಇದಾದ ನಂತರದಲ್ಲಿ ಆ ಟೆಕ್ಕಿ ವೋಚರ್‌ಗಳನ್ನು ಗಣನೀಯ ಪ್ರಮಾಣದ ಡಿಜಿಟಲ್ ಕರೆನ್ಸಿಯಾಗಿ ಪರಿವರ್ತಿಸಿಕೊಂಡಿದ್ದಾನೆ. ಈ ಹಣವನ್ನು ಚಿನ್ನ ಮತ್ತು ಬೆಳ್ಳಿಯಂತಹ ಅಮೂಲ್ಯ ಲೋಹಗಳಲ್ಲಿ ಹೂಡಿಕೆ ಮಾಡಿದ್ದಾನೆ. ವಿಷಯ ಏನೆಂದರೆ ಈ ಎಲ್ಲಾ ವೋಚರ್‌ಗಳು ವಿವಿಧ ಬ್ಯಾಂಕ್ ಕಾರ್ಡ್ ಹೊಂದಿರುವವರಿಗೆ ಮೀಸಲಾಗಿತ್ತು. ಆದರೆ, ಅದಕ್ಕೆ ಸಂಬಂಧಿಸಿದವರು ಅವುಗಳನ್ನು ಪಡೆದುಕೊಳ್ಳುವ ಮೊದಲು, ಅವುಗಳನ್ನು ಕದ್ದು ಖರ್ಚು ಮಾಡಿದ್ದಾನೆ.

ಈ ಘಟನೆ ಬೆಳಕಿಗೆ ಬಂದಿದ್ದು ಹೇಗೆ?: ಈ ಘಟನೆ ಸಂಬಂಧ ಜೂನ್ 24 ರಂದು ರಿವಾರ್ಡ್ 360 ನ ನಿರ್ದೇಶಕರು ದೂರು ಸಲ್ಲಿಕೆ ಮಾಡಿದ್ದರು. ನಂತರ ಪೊಲೀಸರು ಲಕ್ಷ್ಮೀಪತಿಯ ಜಾಡು ಹಿಡಿದಿದ್ದಾರೆ. ಗ್ರಾಹಕರಿಗೆ ನೀಡಲಾದ ಉಡುಗೊರೆ ಚೀಟಿಗಳನ್ನು ಮೊದಲೇ ರಿಡೀಮ್ ಮಾಡಲಾಗಿದ್ದರಿಂದ ರಿವಾರ್ಡ್ 360 ಗೆ ಅನುಮಾನ ಬಂದಿತ್ತು. ಈ ಮೂಲಕ ಕಂಪೆನಿಯು ಸೈಬರ್‌ ದಾಳಿ ಬಗ್ಗೆ ಶಂಕೆ ವ್ಯಕ್ತಪಡಿಸಿ ದೂರು ನೀಡಿತ್ತು.

ಇನ್ನು ಈ ಲಕ್ಷ್ಮೀಪತಿಯನ್ನು ಪತ್ತೆ ಮಾಡಲು ಪೊಲೀಸರು ಟನ್‌ಗಟ್ಟಲೆ ತಾಂತ್ರಿಕ ಪುರಾವೆಗಳನ್ನು ಶೋಧನೆ ಮಾಡಿದ್ದಾರಂತೆ. ಜೊತೆಗೆ ಇದು ದೊಡ್ಡ ಜಾಲ ಇರಬಹುದು ಅಂದುಕೊಂಡು ಪೊಲೀಸರು ಶತಪ್ರಯತ್ನ ನಡೆಸಿದ್ದಾರೆ. ಆದರೆ, ಕೊನೆಗೆ ಈ ಒಬ್ಬ ಟೆಕ್ಕಿಯೇ ಈ ಎಲ್ಲಾ ಕೃತ್ಯಗಳನ್ನು ಮಾಡುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಮೂಲಕ ಪೊಲೀಸರೇ ದಿಗ್ಬ್ರಮೆಗೊಂಡಿದ್ದಾರಂತೆ.

ಈ ಲಕ್ಷ್ಮೀಪತಿಯನ್ನು ಬಿಟ್‌ಕಾಯಿನ್ ಹಗರಣದ ಹಿಂದಿರುವ ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯೊಂದಿಗೆ ಹೋಲಿಕೆ ಮಾಡಲಾಗಿತ್ತು. ಆದರೆ, ಈತನ ದಾರಿಯೇ ಬೇರೆಯಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅಂದರೆ ಶ್ರೀಕೃಷ್ಣನಂತೆ ಬಿಟ್‌ಕಾಯಿನ್ ಅಥವಾ ಇತರ ಕ್ರಿಪ್ಟೋಕರೆನ್ಸಿಗಳನ್ನು ಖರೀದಿಸಲು ಆಸಕ್ತಿ ತೋರಿಲ್ಲ. ಬದಲಾಗಿ ಕೇವಲ ವೋಚರ್‌ ವಿಷಯಕ್ಕೆ ಮಾತ್ರ ಕೈ ಹಾಕಿದ್ದಾನೆ.

ಈ ಕಿಲಾಡಿಯನ್ನು ನೋಡಿ ಪೊಲೀಸರಿಗೆ ದಿಗ್ಬ್ರಮೆ, ಹ್ಯಾಕ್ ಮಾಡಿ ಕೋಟಿ ಕೋಟಿ ಸಂಪಾದನೆ

ಈತನಿಂದ ವಶಪಡಿಸಿಕೊಂಡ ಸ್ವತ್ತಿನ ವಿವರ: ಈತನಿಂದ 3.4 ಕೋಟಿ ಮೌಲ್ಯದ 5.269 ಕೆಜಿ 24 ಕ್ಯಾರೆಟ್ ಚಿನ್ನ, 21.8 ಲಕ್ಷ ಮೌಲ್ಯದ 27.2 ಕೆಜಿ ಬೆಳ್ಳಿ, 11.13 ರೂ. ಲಕ್ಷ ನಗದು, 12 ಲಕ್ಷ ಮೌಲ್ಯದ 7 ದ್ವಿಚಕ್ರ ವಾಹನಗಳು, ಫ್ಲಿಪ್ ಕಾರ್ಟ್ ವ್ಯಾಲೆಟ್ ನಲ್ಲಿ 26 ಲಕ್ಷ ರೂ., ಅಮೆಜಾನ್ ವಾಲೆಟ್ ನಲ್ಲಿ 3.5 ಲಕ್ಷ ರೂ, 1.3 ಲಕ್ಷ ಮೌಲ್ಯದ 2 ಲ್ಯಾಪ್‌ಟಾಪ್‌ಗಳು, 90,000 ಮೌಲ್ಯದ 3 ಮೊಬೈಲ್ ಫೋನ್‌ಗಳು ಇವನ ಬಳಿ ಸಿಕ್ಕಿವೆ.

Best Mobiles in India

English summary
Scammers keep finding new ways to scam. Meanwhile, a 23-year-old youth named Lakshmipati, who has hacked the loyalty reward site and arrested.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+