ಬೆಂಗಳೂರಿಗರೇ ನಿಮ್ಮ ಮನೆಯನ್ನು ಆಧಾರ್ ಮಾದರಿಯಲ್ಲಿ ಕಡ್ಡಾಯವಾಗಿ ಲಿಂಕ್ ಮಾಡಬೇಕು: ಯಾಕೆ ಗೊತ್ತಾ...!

|

ಬೆಂಗಳೂರಿನಲ್ಲಿ ವಿಳಾಸವಿದ್ರೂ ಮನೆ ಹುಡುಕುವುದು ಕಷ್ಟ ಎನ್ನುವುದು ಸಾಮಾನ್ಯರ ಅಭಿಪ್ರಾಯವಾಗಿದೆ. ಈ ಸಮಸ್ಯೆಗೆ ಪರಿಹಾರ ನೀಡುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ಮನೆಗಳ ವಿಳಾಸವನ್ನು ಡಿಜಿಟಲ್ ಮಾಡುತ್ತಿದ್ದು, ಇದಕ್ಕಾಗಿ ಪ್ರತಿ ಮನೆಗೂ ಜಿಯೋಗ್ರಾಫಿಕಲ್ ಡಿಜಿಟಲ್ ನಂಬರ್ ವೊಂದನ್ನು ನೀಡುತ್ತಿದೆ. ಇದಕ್ಕಾಗಿ 'ಡಿಜಿ 7' ಎಂಬ ಮನೆ ಸಂಖ್ಯೆಯ ವ್ಯವಸ್ಥೆಯನ್ನು ಜಾರಿಗೆ ತರಲು ಯೋಜನೆ ಸಿದ್ಧಪಡಿಸಿದೆ.

ಬೆಂಗಳೂರಿಗರೇ ನಿಮ್ಮ ಮನೆಯನ್ನು ಆಧಾರ್ ಮಾದರಿಯಲ್ಲಿ ಕಡ್ಡಾಯವಾಗಿ ಲಿಂಕ್ ಮಾಡಬೇಕು:

ಈ ಹೊಸ ಡಿಜಿಟಲ್ ಸಂಖ್ಯೆಯಿಂದಾಗಿ ಬೆಂಗಳೂರಿನಲ್ಲಿ ಮನೆಗಳನ್ನು ಹುಡುಕುವುದು ಸುಲಭವಾಗಲಿದ್ದು, ಈ ಡಿಜಿಟಲ್‌ ಡೋರ್ ನಂಬರಿಂಗ್ ವ್ಯವಸ್ಥೆಯ ಅಡಿಯಲ್ಲಿ BBMP ಬೆಂಗಳೂರಿನಲ್ಲಿರುವ 17 ಲಕ್ಷ ಮನೆಗಳಲ್ಲಿ ಪ್ರತಿಯೊಂದು ಮನೆಗೂ 7 ಅಂಕಿಗಳ ಜಿಯೋಗ್ರಾಫಿಕಲ್ ಡಿಜಿಟಲ್ ಗುರುತಿನ ಸಂಖ್ಯೆಯನ್ನು ನೀಡಲಿದೆ. ಆಧಾರ್ ಮಾದರಿಯಲ್ಲಿ ಪ್ರತಿ ಮನೆಯೂ ವಿಶಿಷ್ಟ ಗುರುತನ್ನು ಪಡೆದುಕೊಳ್ಳಲಿದೆ. ಅಲ್ಲದೇ ಈ ಒಂದು ಸಂಖ್ಯೆಯಲ್ಲಿ ಆ ಮನೆಯ ಸಂಪೂರ್ಣ ಇತಿಹಾಸವನ್ನು ಪಡೆಯಬಹುದಾಗಿದೆ.

ಒಲಾ ಬುಕ್ ಮಾಡಲು, ಫುಡ್ ಆರ್ಡರ್ ಮಾಡಲು.!

ಒಲಾ ಬುಕ್ ಮಾಡಲು, ಫುಡ್ ಆರ್ಡರ್ ಮಾಡಲು.!

ಡಿಜಿ 7 ನಂಬರ್ ಅನ್ನು ಬೆಳೆಯುತ್ತಿರುವ ಬೆಂಗಳೂರಿಗಾಗಿಯೇ ಮಾಡಲಾಗುತ್ತಿದೆ. ಒಲಾ ಬುಕ್ ಮಾಡುವ ಸಂದರ್ಭದಲ್ಲಿ ಮತ್ತು ಆನ್‌ಲೈನಿನಲ್ಲಿ ಆರ್ಡರ್ ಮಾಡಿ ಡೆಲಿವರಿ ಪಡೆಯಲು ಈ ನಂಬರ್ ಬಳಕೆ ಮಾಡಿಕೊಂಡರೆ ಸರಿಯಾದ ವಿಳಾಸವನ್ನು ಪತ್ತೆ ಮಾಡಬಹುದಾಗಿದೆ. ಜಿಯೋಗ್ರಾಫಿಕಲ್ ಡಿಜಿಟಲ್ ಸಂಖ್ಯೆಯಾಗಿರುವುದರಿಂದ ಡಿಜಿಟಲ್ ಮ್ಯಾಪಿನಲ್ಲಿ ವಿಳಾಸವನ್ನು ಹುಡುಕುವುದು ಸುಲಭ ಸಾಧ್ಯವಾಗಲಿದೆ.

ಆಧಾರ್ ಮಾದರಿ ಕಡ್ಡಾಯ:

ಆಧಾರ್ ಮಾದರಿ ಕಡ್ಡಾಯ:

ಡಿಜಿಟಲ್‌ ಡೋರ್ ನಂಬರಿಂಗ್ ವ್ಯವಸ್ಥೆಯಡಿಯಲ್ಲಿ ಮನೆಗಳ ಮಾಲೀಕರು ಬಿಬಿಎಂಪಿಯ ವೆಬ್‌ಸೈಟಿಲ್ಲಿ ಆಧಾರ್ ಮಾದರಿಯಲ್ಲಿ ನೋಂದಣಿಯಾಗಬೇಕಾಗಿದೆ. ಇದಕ್ಕಾಗಿಯೇ ಪ್ರಾಪರ್ಟಿ ಐಡೆಂಟಿಫಿಕೇಶನ್‌ ನಂಬರ್‌ (ಪಿಐಡಿ) ಮೂಲಕ ನೋಂದಣಿ ಮಾಡಿಕೊಳ್ಳುವುದನ್ನು BBMP ಕಡ್ಡಾಯ ಮಾಡಲಿದೆ.

ಒಂದೇ ಸಂಖ್ಯೆಯಲ್ಲಿ ಎಲ್ಲಾ ಮಾಹಿತಿ:

ಒಂದೇ ಸಂಖ್ಯೆಯಲ್ಲಿ ಎಲ್ಲಾ ಮಾಹಿತಿ:

ನೋಂದಣಿ ಮಾಡಿಕೊಂಡ ನಂತರದಲ್ಲಿ ಡಿಜಿಟಲ್‌ ಡೋರ್‌ ಐಡಿ ಮನೆಯ ಮಾಲೀಕರಿಗೆ ದೊರೆಯಲಿದ್ದು, ಇದರಲ್ಲಿ ಮನೆ ವಿಳಾಸ, ಆಸ್ತಿ ತೆರಿಗೆ ಪಾವತಿ ಇತಿಹಾಸ, ಮನೆಯ ಅಂತಸ್ತುಗಳ ಸಂಖ್ಯೆ ಸೇರಿದಂತೆ ಎಲ್ಲಾ ವಿವರಗಳನ್ನು ಪಡೆಯಬಹುದಾಗಿದೆ.

ಮೊಬೈಲ್ ಆಪ್:

ಮೊಬೈಲ್ ಆಪ್:

ಈ ಎಲ್ಲ ಮಾಹಿತಿಗಳನ್ನು ಪಡೆಯಲು ಮನೆಗಳ ಮಾಲೀಕರಿಗೆ ಆಪ್ ವೊಂದನ್ನು ಸಿದ್ಧಪಡಿಸಲಾಗುತ್ತಿದೆ. ಅದರಲ್ಲಿ ಯೂಸರ್ ಐಡಿ ಪಾಸ್ ವರ್ಡ್‌ ಕೊಟ್ಟರೆ ಈ ಡಿಜಿ ನಂಬರ್ ಅನ್ನು ಎಲ್ಲಿ ಬೇಕಾದರು ವಿಳಾಸದ ಸಾಕ್ಷಿಯಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!

ಓದಿರಿ: ಕೂದಲು ಉದುರುವ ಸಮಸ್ಯೆಗೆ ಪರಿಹಾರ:ಕೂದಲು ಆರೈಕೆಗೆ ಬಂದಿದೆ ಸ್ಮಾರ್ಟ್ ಬಾಚಣಿಗೆ..!

Best Mobiles in India

English summary
Bangalore Properties to Soon Have A Unique Digital Address. To Know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X