Home
ಸುದ್ದಿಜಾಲ

ನೀವು ಕ್ರೆಡಿಟ್ ಕಾರ್ಡ್ ಬಳಕೆ ಮಾಡ್ತೀರಾ? ಹಾಗಿದ್ರೆ ಎಚ್ಚರ!

ಆನ್‌ಲೈನ್‌ ವಂಚನೆ ಪ್ರಕರಣ ಇದೇ ರೀತಿ ನಡೆಯುತ್ತವೆ ಎಂದು ಹೇಳಲು ಅಸಾಧ್ಯ. ಈ ಕಾರಣಕ್ಕೆ ಜನರು ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ಮೋಸ ಹೋಗುತ್ತಲೇ ಇದ್ದಾರೆ. ಈ ನಡುವೆ ಬೆಂಗಳೂರಿನ ಮಹಿಳೆಯೊಬ್ಬರು ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡುವಾಗ ಬರೋಬ್ಬರಿ 5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಹೌದು, ಬೆಂಗಳೂರು ಆನ್‌ಲೈನ್‌ ವಂಚಕರಿಗೆ ನೆಚ್ಚಿನ ಸ್ಥಳದಂತೆ ಆಗಿಬಿಟ್ಟಿದೆ. ಯಾವುದೇ ಹೊಸ ಹೊಸ ಆನ್‌ಲೈನ್‌ ವಂಚನೆ ಪ್ರಕರಣಗಳು ಬಹುಪಾಲು ಇಲ್ಲಿಂದಲೇ ವರದಿ ಆಗುತ್ತವೆ. ಈ ನಡುವೆ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ನವೀಕರಿಸುವ ಭಾಗವಾಗಿ ಮಹಿಳೆ ಭಾರೀ ಹಣ ಕಳೆದುಕೊಂಡಿದ್ದಾರೆ. ಹಾಗಿದ್ರೆ, ಈ ಮಹಿಳೆ ಹೇಗೆ ಮೋಸ ಹೋದರು?, ಈ ರೀತಿಯ ವಂಚನೆಯಿಂದ ಪಾರಾಗುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ನೀವು ಕ್ರೆಡಿಟ್ ಕಾರ್ಡ್ ಬಳಕೆ ಮಾಡ್ತೀರಾ? ಹಾಗಿದ್ರೆ ಎಚ್ಚರ!

ಕ್ರೆಡಿಟ್‌ ಕಾರ್ಡ್‌ ಬಳಕೆದಾರರೇ ಎಚ್ಚರ: 'ನಿಮ್ಮ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳ ಅವಧಿ ಮುಗಿಯುವ ಕಾರಣ ಕ್ರೆಡಿಟ್ ಕಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಳ್ಳಿ' ಎಂದು ಬಹುಪಾಲು ಜನರು ಮೆಸೆಜ್‌ ಒಂದನ್ನು ಸ್ವೀಕಾರ ಮಾಡಿರಬಹುದು. ಈ ಮೆಸೆಜ್‌ ಕಾನೂನುಬದ್ಧವಾಗಿ ಕಾಣಿಸಿಕೊಂಡರೂ ಸಹ ಅಲ್ಲಿ ಲಗತ್ತಿಸಲಾದ ಲಿಂಕ್‌ ನಿಮ್ಮನ್ನು ಸ್ಕ್ಯಾಮರ್‌ಗಳ ಬೆಲೆಗೆ ಬೀಳಿಸುತ್ತದೆ.

ಈ ಮೆಸೆಜ್‌ ಪ್ರಸ್ತುತ ದೇಶದಾದ್ಯಂತ ಸಂಭವಿಸುತ್ತಿರುವ ಹೊಸ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳ ಹಗರಣದ ಭಾಗವಾಗಿದೆ. ಅದರಂತೆ ಬೆಂಗಳೂರಿನ 60 ವರ್ಷದ ವಕೀಲರು ಈ ಹಗರಣಕ್ಕೆ ಬಲಿಯಾಗಿದ್ದಾರೆ. ಅಂದರೆ ಇವರು ಈ ಲಿಂಕ್‌ ಅನ್ನು ಕ್ಲಿಕ್‌ ಮಾಡಿ 4.9 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಇವರು ಹೈಗ್ರೌಂಡ್ಸ್ ಪ್ರದೇಶದ ಕುಮಾರ ಕೃಪಾ ರಸ್ತೆಯಲ್ಲಿ ವಾಸಿಸುತ್ತಿದ್ದು, ಸೆಪ್ಟೆಂಬರ್ 20 ರ ರಾತ್ರಿ ಇವರ ಮೊಬೈಲ್‌ಗೆ ಈ ಮೆಸೆಜ್‌ ಬಂದಿತ್ತಂತೆ.

4,999 ರೂ ಮೊತ್ತದ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳ ಅವಧಿ ಮುಗಿಯಲಿದೆ ಎಂದು ಮೆಸೆಜ್‌ನಲ್ಲಿ ಉಲ್ಲೇಖ ಮಾಡಲಾಗಿದ್ದು, ಈ ವೇಳೆ ಎಲ್ಲಿ ಈ ಹಣ ಹೋಗಿಬಿಡುತ್ತದೋ ಎಂದು ಭಯಪಟ್ಟು ಲಗತ್ತಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ಆದರೆ, ಇದು ಅವರ ಫೋನ್‌ನಲ್ಲಿ ಆಪ್‌ ವೊಂದನ್ನು ಇನ್‌ಸ್ಟಾಲ್‌ ಮಾಡಿದೆ. ಈ ವೇಳೆ ಆಕೆ ತನ್ನ ಕಾರ್ಡ್ ವಿವರಗಳನ್ನು ಆಡ್‌ ಮಾಡಿದ್ದಾರೆ.

ಮೊದಮೊದಲು ಸಂತ್ರಸ್ತೆಗೆ ತಾನು ವಂಚನೆಗೆ ಬಲಿಯಾಗಿರುವುದು ಗೊತ್ತೇ ಇರಲಿಲ್ಲವಂತೆ. ಆಕೆಯ ಕ್ರೆಡಿಟ್ ಕಾರ್ಡ್‌ಗೆ ಲಿಂಕ್ ಮಾಡಲಾದ ನಾಲ್ಕು ಅಸಾಮಾನ್ಯ ನಗದು ವಹಿವಾಟುಗಳನ್ನು ತನಿಖೆ ಮಾಡಲು ಬ್ಯಾಂಕ್ ಸಿಬ್ಬಂದಿ ಆಕೆಯನ್ನು ಸಂಪರ್ಕಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಇದಾದ ನಂತರದಲ್ಲಿ ಕಾರ್ಡ್‌ ಅನ್ನು ತಕ್ಷಣವೇ ಬ್ಲಾಕ್‌ ಮಾಡಲಾಗಿದೆ. ವಿಷಯ ಏನೆಂದರೆ ಮಹಿಳೆ ಇನ್‌ಸ್ಟಾಲ್‌ ಮಾಡಿದ ಹೊಸ ಆಪ್‌ ದುಷ್ಕರ್ಮಿಗಳಿಗೆ ಆಕೆಯ ಫೋನ್ ಮೇಲೆ ಕಂಟ್ರೋಲ್‌ ನೀಡಿದೆ.

ಮಹಿಳೆ ತನ್ನ ಕ್ರೆಡಿಟ್ ಕಾರ್ಡ್‌ನ ವಿವರಗಳನ್ನು ಎಂಟ್ರಿ ಮಾಡಿದಾಗ ಅವುಗಳನ್ನು ಸ್ಕ್ಯಾಮರ್‌ಗಳು ನಕಲು ಮಾಡಿಕೊಂಡಿದ್ದಾರೆ. ಆಕೆಯ ಕ್ರೆಡಿಟ್ ಕಾರ್ಡ್‌ಗೆ ಲಾಗ್ ಇನ್ ಮಾಡಿ ಹಣ ವಂಚನೆ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವೇಳೆ ಗಮನಿಸಬೇಕಾದ ಮತ್ತೊಂದು ವಿಷಯ ಏನೆಂದರೆ ಈ ಮೆಸೆಜ್ ಈಗ ಎಲ್ಲಾ ಕಡೆ ಹರಿದಾಡುತ್ತಿದೆ.

ಈ ರೀತಿಯ ವಂಚನೆಯಿಂದ ದೂರ ಇರುವುದು ಹೇಗೆ?: ಅಪೇಕ್ಷಿಸದ ಮೆಸೆಜ್‌ಗಳು, ಇಮೇಲ್‌ಗಳು ಅಥವಾ ಫೋನ್ ಕರೆಗಳನ್ನು ಸ್ವೀಕರಿಸುವಾಗ ಜಾಗರೂಕರಾಗಿರಿ, ವಿಶೇಷವಾಗಿ ಅವರು ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಕೇಳಿದರೆ ಇದು ಮೋಸದ ವ್ಯವಹಾರ ಎಂದುಕೊಳ್ಳಿ. ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಮೊದಲು, ಮೂಲವನ್ನು ಪರಿಶೀಲಿಸಿ. ಅವರ ಅಧಿಕೃತ ವೆಬ್‌ಸೈಟ್ ಅಥವಾ ಹೇಳಿಕೆಯಿಂದ ಸಂಪರ್ಕ ಮಾಹಿತಿಯನ್ನು ಬಳಸಿಕೊಂಡು ನಿಮ್ಮ ಬ್ಯಾಂಕ್ ಅಥವಾ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಿ.

ಅಜ್ಞಾತ ಅಥವಾ ಪರಿಶೀಲಿಸದ ಮೂಲಗಳಿಂದ ಮೆಸೆಜ್‌ಗಳಲ್ಲಿನ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ. ಕ್ಲಿಕ್ ಮಾಡುವ ಮೊದಲು URL ಅನ್ನು ನೋಡಲು ಮರೆಯಬೇಡಿ. ಅದು ಅಧಿಕೃತ ವೆಬ್‌ಸೈಟ್‌ನ URL ಗೆ ಹೊಂದಿಕೆಯಾಗುತ್ತಿದೆಯೇ ಎಂದು ಈ ಮೂಲಕ ಖಚಿತಪಡಿಸಿಕೊಳ್ಳಿ. ನಿಮ್ಮ ಡಿವೈಸ್‌ ಅನ್ನು ನವೀಕೃತ ಆಂಟಿವೈರಸ್ ಮತ್ತು ಆಂಟಿ-ಮಾಲ್‌ವೇರ್ ಸಾಫ್ಟ್‌ವೇರ್‌ನೊಂದಿಗೆ ರಕ್ಷಿಸಿ.

ನೀವು ಕ್ರೆಡಿಟ್ ಕಾರ್ಡ್ ಬಳಕೆ ಮಾಡ್ತೀರಾ? ಹಾಗಿದ್ರೆ ಎಚ್ಚರ!

ನಿಮ್ಮ ಆನ್‌ಲೈನ್ ಖಾತೆಗಳಿಗೆ, ವಿಶೇಷವಾಗಿ ಬ್ಯಾಂಕಿಂಗ್ ಮತ್ತು ಹಣಕಾಸು ವೆಬ್‌ಸೈಟ್‌ಗಳಿಗೆ ಬಲವಾದ ಮತ್ತು ಅನನ್ಯ ಪಾಸ್‌ವರ್ಡ್‌ಗಳನ್ನು ಬಳಸುವುದು ಅಗತ್ಯವಾಗಿದೆ. ಬಹು ಮುಖ್ಯವಾಗಿ, ಸಾಮಾನ್ಯ ವಂಚನೆಗಳು ಮತ್ತು ಫಿಶಿಂಗ್ ತಂತ್ರಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ನೀವು ಸ್ಕ್ಯಾಮ್ ಮೆಸೆಜ್‌ಅನ್ನು ಸ್ವೀಕರಿಸಿದ್ದೀರಿ ಅಥವಾ ವಂಚನೆಗೆ ಬಲಿಯಾಗಿದ್ದೀರಿ ಎಂದು ನಿಮಗೆ ಅನಿಸಿದರೆ ಅದನ್ನು ನಿಮ್ಮ ಬ್ಯಾಂಕ್, ಸೂಕ್ತ ಅಧಿಕಾರಿಗಳು ಮತ್ತು ಸೈಬರ್ ಸೆಲ್‌ಗೆ ಮಾಹಿತಿ ನೀಡಿ.

Best Mobiles in India

English summary
Bangalore has become a favorite destination for online fraudsters. Any new online fraud cases are mostly reported from here. Meanwhile, the woman lost a huge amount of money as part of renewing her credit card reward points.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+