Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಎಂಟ್ರಿ ಆದ್ವು ಹೊಸ ಸ್ಮಾರ್ಟ್‌ವಾಚ್‌: ಬೊಂಬಾಟ್‌ ಫೀಚರ್ಸ್!

ಸ್ಮಾರ್ಟ್‌ವಾಚ್‌ಗಳು ಇಂದು ಭಿನ್ನ ಫೀಚರ್ಸ್‌ ಮೂಲಕ ಗ್ರಾಹಕರ ಕಣ್ಮನ ಸೆಳೆಯುತ್ತಿವೆ. ಅದರಲ್ಲೂ ಇತ್ತೀಚಿಗೆ ಲಾಂಚ್‌ ಆಗುತ್ತಿರುವ ವಾಚ್‌ಗಳಂತೂ ಫೋನ್‌ಗೆ ಬದಲಿ ಸ್ಮಾರ್ಟ್‌ಡಿವೈಸ್‌ಗಳಂತೆ ಗೋಚರಿಸುತ್ತಿವೆ. ಈ ನಡುವೆ ಬೀಟ್‌ಎಕ್ಸ್‌ಪಿ ಎರಡು ಸ್ಮಾರ್ಟ್‌ವಾಚ್‌ಗಳನ್ನು ಬಜೆಟ್‌ ಬೆಲೆಯಲ್ಲಿ ಲಾಂಚ್ ಮಾಡಿದೆ.

ಹೌದು, ಬೀಟ್‌ಎಕ್ಸ್‌ಪಿ (beatXP) ಭಾರತದಲ್ಲಿ ತನ್ನ ಸ್ಮಾರ್ಟ್‌ವಾಚ್ ಶ್ರೇಣಿಯನ್ನು ವಿಸ್ತರಣೆ ಮಾಡಿಕೊಂಡಿದ್ದು, ಅದರಂತೆ ಈಗ ಫ್ಲಕ್ಸ್(Flux) ಮತ್ತು ವೆಗಾ ನಿಯೋ(Vega Neo) ಎಂಬ ಎರಡು ವಾಚ್‌ಗಳನ್ನು ಅನಾವರಣ ಮಾಡಿದೆ. ಈ ಮೊದಲು ಬೀಟ್‌ಎಕ್ಸ್‌ಪಿ ವೆಗಾ ಎಕ್ಸ್ ಹಾಗೂ ಮಾರ್ವ್ ಸೂಪರ್ ವಾಚ್‌ಗಳನ್ನು ಅನಾವರಣ ಮಾಡಿತ್ತು. ಹಾಗಿದ್ರೆ, ಈ ಹೊಸ ವಾಚ್‌ಗಳ ಪ್ರಮುಖ ಫೀಚರ್ಸ್‌ ಹಾಗೂ ಬಾರತದಲ್ಲಿ ಈ ವಾಚ್‌ಗಳಿಗೆ ಇರುವ ಬೆಲೆ ಎಷ್ಟೆಂದು ತಿಳಿಯೋಣ ಬನ್ನಿ.

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಎಂಟ್ರಿ ಆದ್ವು ಹೊಸ ಸ್ಮಾರ್ಟ್‌ವಾಚ್‌...

ಬೀಟ್‌ಎಕ್ಸ್‌ಪಿ ಫ್ಲಕ್ಸ್ : ಈ ಸ್ಮಾರ್ಟ್‌ವಾಚ್‌ 1.45 ಇಂಚಿನ ವೃತ್ತಾಕಾರದ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಇದು 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 415×415 ಸ್ಕ್ರೀನ್‌ ರೆಸಲ್ಯೂಶನ್‌ನೊಂದಿಗೆ ಆಲ್‌ವೇಸ್‌ ಆನ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ ಹಲವು ಕೆಲಸಗಳನ್ನು ಮಾಡಲು ಅನುಕೂಲ ಆಗುವ ಕ್ರೌನ್ ಬಟನ್‌ ಆಯ್ಕೆ ನೀಡಲಾಗಿದೆ.

ಇದರೊಂದಿಗೆ ಈ ವಾಚ್‌ನ ಫೀಚರ್ಸ್‌ ಕಡೆ ಕಣ್ಣಾಯಿಸಿವುದಾದರೆ ಬ್ಲೂಟೂತ್ ಆವೃತ್ತಿ v5.3 ಅನ್ನು ಹೊಂದಿದ್ದು, ಕರೆ ಸೌಲಭ್ಯವನ್ನೂ ಸಹ ಹೊಂದಿದೆ. ಜೊತೆಗೆ ತ್ವರಿತ ನೋಟಿಫಿಕೇಶನ್‌, 100+ ಕ್ಲೌಡ್‌ ವಾಚ್‌ ಫೇಸ್‌, 100+ ಸ್ಪೋರ್ಟ್‌ ಮೋಡ್‌ , ಎಐ ವಾಯ್ಸ್‌ಅ ಅಸಿಸ್ಟೆಂಟ್‌ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್‌ ಹೊಂದಿದ್ದು,
IP67 ರೇಟಿಂಗ್ ಆನ್ನು ಪಡೆದುಕೊಂಡಿದೆ.

ಅದರಲ್ಲೂ ಅತ್ಯುತ್ತಮವಾದ ಬ್ಯಾಟರಿ ಬ್ಯಾಕಪ್‌ ನೀಡಲಿದೆ ಎಂದು ಕಂಪೆನಿ ತಿಳಿಸಿದೆ. ಅಂದರೆ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಏಳು ದಿನಗಳ ವರೆಗೆ ಈ ವಾಚ್‌ ಅನ್ನು ಬಳಕೆ ಮಾಡಬಹುದಾಗಿದೆ. ಈ ಮೂಲಕ ವಾಚ್‌ ಅನ್ನು ಪದೇ ಪದೇ ಚಾರ್ಜಿಂಗ್‌ ಮಾಡುವ ಅಥವಾ ಚಾರ್ಜ್‌ ಇಲ್ಲದೆ ಆಫ್‌ ಆಗುವ ಸನ್ನಿವೇಶ ಉಂಟಾಗುವುದಿಲ್ಲ.

ಬೀಟ್‌ಎಕ್ಸ್‌ಪಿ ವೆಗಾ ನಿಯೋ : ಈ ಸ್ಮಾರ್ಟ್‌ವಾಚ್‌ ಸಹ 1.43 ಇಂಚಿನ ವೃತ್ತಾಕಾರದ ಫುಲ್‌ ಟಚ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದು 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 466X466 ಸ್ಕ್ರೀನ್ ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, 60 HZ ರಿಫ್ರೆಶ್ ರೇಟ್‌ ಅಸಾಧಾರಣ ಬಳಕೆದಾರರ ಅನುಭವವನ್ನು ಖಚಿತಪಡಿಸುತ್ತದೆ.

ಬೀಟ್‌ಎಕ್ಸ್‌ಪಿ ವೆಗಾ ನಿಯೋ ಫೀಚರ್ಸ್: ಈ ವಾಚ್‌ ಫ್ಲಕ್ಸ್‌ನಂತೆಯೇ ಆಕರ್ಷಕ ಫೀಚರ್ಸ್‌ ಅನ್ನು ಹೊಂದಿದ್ದು, ಬ್ಲೂಟೂತ್ ಆವೃತ್ತಿ v5.3, ಕರೆ ಸೌಲಭ್ಯ, ತ್ವರಿತ ಅಧಿಸೂಚನೆಗಳು, 24×7 ಆರೋಗ್ಯ ಮಾನಿಟರಿಂಗ್, 100+ ಸ್ಪೋರ್ಟ್‌ ಮೋಡ್‌, ಎಐ ವಾಯ್ಸ್‌ ಅಸಿಸ್ಟೆಂಟ್ ಸೇರಿದಂತೆ ಅನೇಕ ಅಗತ್ಯ ಫೀಚರ್ಸ್‌ ಪಡೆದುಕೊಂಡಿದೆ. ಉಳಿದಂತೆ IP68 ರೇಟಿಂಗ್‌ ಹೊಂದಿರುವ ಈ ವಾಚ್‌ 300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 7 ದಿನಗಳ ಬ್ಯಾಟರಿ ಬ್ಯಾಕಪ್‌ ನೀಡಲಿದೆ.

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಎಂಟ್ರಿ ಆದ್ವು ಹೊಸ ಸ್ಮಾರ್ಟ್‌ವಾಚ್‌...

ಬೀಟ್‌ಎಕ್ಸ್‌ಪಿ ವೆಗಾ ನಿಯೋ, ಬೀಟ್‌ಎಕ್ಸ್‌ಪಿ ಫ್ಲಕ್ಸ್ ಬೆಲೆ ಹಾಗೂ ಲಭ್ಯತೆ: ಬೀಟ್‌ಎಕ್ಸ್‌ಪಿ ಫ್ಲಕ್ಸ್ ಸ್ಮಾರ್ಟ್‌ವಾಚ್‌ಗೆ 1799ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ಆಫರ್‌ ಬೆಲೆಯಾಗಿ ಇದನ್ನು ನೀವು 1399 ರೂ.ಗಳಿಗೆ ಖರೀದಿ ಮಾಡಬಹುದು. ಹಾಗೆಯೇ ಬೀಟ್‌ಎಕ್ಸ್‌ಪಿ ವೆಗಾ ನಿಯೋ1999ರೂ.ಗ ಪರಿಚಯಾತ್ಮಕ ಬೆಲೆ ಪಡೆದಿದೆ. ಈ ವಾಚ್‌ಗಳು ಅಮೆಜಾನ್‌ ಹಾಗೂ ಬೀಟ್‌ಎಕ್ಸ್‌ಪಿ ವೆಬ್‌ಸೈಟ್‌ನಲ್ಲಿ ಲಭ್ಯ ಇವೆ.

Best Mobiles in India

English summary
beatXP has expanded its smartwatch lineup in India by unveiling two watches, the Flux and the Vega Neo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+