ವಾಟ್ಸಾಪ್, ಟ್ವಿಟ್ಟರ್, ಟೆಲಿಗ್ರಾಮ್‌, ಐಮೆಸೆಜ್‌ ಆಪ್‌ಗಳು ಈ ಒಂದೇ ಆಪ್‌ನಲ್ಲಿ ಲಭ್ಯ!

|

ಪ್ರಸ್ತುತ ಇನ್‌ಸ್ಟಂಟ್‌ ಮೆಸೆಜಿಂಗ್ ಅಪ್ಲಿಕೇಶನ್‌ಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಇವುಗಳಲ್ಲಿ ಮುಖ್ಯವಾಗಿ ವಾಟ್ಸಾಪ್‌, ಟೆಲಿಗ್ರಾಮ್, ಸಿಗ್ನಲ್ ಟ್ವಿಟ್ಟರ್ ನಂತಹ ಅಪ್ಲಿಕೇಶನ್‌ಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಬಹುತೇಕ ಬಳಕೆದಾರರು ಈ ಎಲ್ಲ ಮೆಸೆಜ್‌ ಅಪ್ಲಿಕೇಶನ್‌ಗಳನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡಿರುತ್ತಾರೆ. ಆದ್ರೆ ಬೀಪರ್ ಅಪ್ಲಿಕೇಶನ್ ಎಲ್ಲ ಪ್ರಮುಖ ಮೆಸೆಜ್ ಅಪ್ಲಿಕೇಶನ್‌ಗಳು ಒಂದೇ ಆಪ್‌ನಲ್ಲಿ ಸಿಗುವಂತೆ ಮಾಡಿದೆ.

ಬೀಪರ್

ಹೌದು, ಬೀಪರ್ ಅಪ್ಲಿಕೇಶನ್‌ನಲ್ಲಿ ವಾಟ್ಸಾಪ್‌, ಟೆಲಿಗ್ರಾಮ್, ಟ್ವಿಟ್ಟರ್, ಸಿಗ್ನಲ್ ಆಪ್‌ಗಳು ಲಭ್ಯವಿದ್ದು, ಅಷ್ಟೇ ಯಾಕೆ ಆಪಲ್‌ನ ಐಮೆಸೆಜ್‌ ಸಹ ಇರುವುದು ಆಕರ್ಷಣಿಯ ಅನಿಸಿದೆ. ಇನ್ನು ಈ ಬೀಪರ್‌ ಅಪ್ಲಿಕೇಶನ್ ಅನ್ನು ಪೆಬಲ್ ಸಿಇಒ ಮತ್ತು ಸಂಸ್ಥಾಪಕ ಎರಿಕ್ ಮಿಗಿಕೋವ್ಸ್ಕಿ ರೂಪಿಸಿದ್ದಾರೆ. ಬೀಪರ್ ಆಪ್‌ ಮ್ಯಾಕೋಸ್, ವಿಂಡೋಸ್, ಲಿನಕ್ಸ್, ಐಒಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ಲಭ್ಯವಿದೆ.

ಓಪನ್

ಮ್ಯಾಟ್ರಿಕ್ಸ್ ಓಪನ್ ಸೋರ್ಸ್ ಪ್ರಾಜೆಕ್ಟ್‌ನಲ್ಲಿ ಬೀಪರ್ ಅಪ್ಲಿಕೇಶನ್ ಅನ್ನು ನಿರ್ಮಿಸಲಾಗಿದೆ, ಇದು ಮ್ಯಾಟ್ರಿಕ್ಸ್ ಇತರ ಚಾಟ್ ನೆಟ್‌ವರ್ಕ್‌ಗಳಾದ ವಾಟ್ಸಾಪ್, ಟೆಲಿಗ್ರಾಮ್, ಡಿಸ್ಕಾರ್ಡ್, ಸ್ಕೈಪ್ ಮತ್ತು ಹೆಚ್ಚಿನವುಗಳ ನಡುವೆ ‘ಸೇತುವೆಗಳನ್ನು' ಬರೆಯಲು ಡೆವಲಪರ್‌ಗಳಿಗೆ ಅವಕಾಶ ನೀಡುತ್ತದೆ. ಬೀಪರ್ ಚಂದಾದಾರಿಕೆ ಸೇವೆಯಾಗಿದೆ ಮತ್ತು ಅದನ್ನು ಬಳಸುವವರು ತಿಂಗಳಿಗೆ $ 10 (ರೂ. 730 ರೂ) ಪಾವತಿಸಬೇಕಾಗುತ್ತದೆ ಎಂಬುದನ್ನು ಗಮನಿಸಿ.

ಸಂಯೋಜಿಸಿರುವ

ಬೀಪರ್ ಆಪ್‌ ಈಗಾಗಲೇ ಸಂಯೋಜಿಸಿರುವ 15 ಅಪ್ಲಿಕೇಶನ್‌ಗಳ ಹೊರತಾಗಿ, ಪ್ರತಿ ಕೆಲವು ವಾರಗಳಿಗೊಮ್ಮೆ ಹೊಸ ನೆಟ್‌ವರ್ಕ್ ಅನ್ನು ಸೇರಿಸುತ್ತದೆ ಎಂದು ಎರಿಕ್ ಹೇಳಿಕೊಂಡಿದ್ದಾರೆ. ಬೀಪರ್‌ಗೆ ಬರುವ ಮುಂದಿನ ಡಾರ್ಕ್ ಮೋಡ್ ವೈಶಿಷ್ಟ್ಯವು ಸೇರ್ಪಡೆಗೊಳ್ಳಲಿದೆ ಎನ್ನಲಾಗಿದೆ. ಬೀಪರ್ ಒಂದು ಸೀಮಿತ ಪರೀಕ್ಷೆಯಾಗಿದ್ದು, ಸೇವೆಯನ್ನು ಬಳಸಲು ಬಳಕೆದಾರರು ಸೈನ್ ಅಪ್ ಮಾಡಬೇಕಾಗುತ್ತದೆ. ಬೀಪರ್ ಅಪ್ಲಿಕೇಶನ್ ಬೆಂಬಲಿಸುವ ಮೆಜಿಂಗ್ ಅಪ್ಲಿಕೇಶನ್ ಪಟ್ಟಿ ಮುಂದೆ ನೋಡೋಣ ಬನ್ನಿರಿ.

ಡಾರ್ಕ್‌ ಮೋಡ್

• Whatsapp
• Facebook Messenger
• iMessage
• Android Messages (SMS)
• Telegram
• Twitter
• Slack
• Hangouts
• Instagram
• Skype
• IRC
• Matrix
• Discord
• Signal
• Beeper network

Best Mobiles in India

English summary
Beeper is a universal chat app that aims to integrate chat platforms like Telegram, WhatsApp, Signal, iMessage, Instagram, and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X