ರೆಡ್ಮಿ ನೋಟ್ 12 ಪ್ರೊ+ 5G ಖರೀದಿಸುವ ಮುನ್ನ ಈ ಅಂಶ ಗಮನಿಸಿ!
ಶಿಯೋಮಿ ಕಂಪನಿಯು ಹೊಸದಾಗಿ ಲಾಂಚ್ ಮಾಡಿರುವ ಶಿಯೋಮಿ ರೆಡ್ಮಿ ನೋಟ್ 12 ಪ್ರೊ+ 5G ಫೋನ್ ಆಕರ್ಷಕ ಹೈ ಎಂಡ್ ಫೀಚರ್ಸ್‌ಗಳಿಂದ ಗ್ರಾಹಕರನ್ನು ತಿರುಗಿ ನೋಡುವಂತೆ ಮಾಡಿದೆ. ಇನ್ನು ಈ ಫೋನ್ ಭಾರತದಲ್ಲಿ ಖರೀದಿಗೆ ಲಭ್ಯವಾಗಿದೆ. ಶಿಯೋಮಿ ರೆಡ್ಮಿ ನೋಟ್ 12 ಪ್ರೊ+ ಫೋನ್ ವೇಗದ ಪ್ರೊಸೆಸರ್ ಸೇರಿದಂತೆ ಹೈ ಎಂಡ್ ಕ್ಯಾಮೆರಾ ಆಯ್ಕೆಯಿಂದ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 1080 SoC ಪ್ರೊಸೆಸರ್ ಬಲವನ್ನು ಪಡೆದಿದೆ. ನೀವೆನಾದರೂ ಶಿಯೋಮಿ ರೆಡ್ಮಿ ನೋಟ್ 12 ಪ್ರೊ+ ಫೋನ್ ಅನ್ನು ಖರೀದಿಸಲು ಇಚ್ಛಿಸಿದರೇ, ಅದಕ್ಕೂ ಮುನ್ನ ಈ ಅಂಶಗಳನ್ನು ನೀವು ತಿಳಿಯಬೇಕು.

ಶಿಯೋಮಿ ರೆಡ್ಮಿ ನೋಟ್ 12 ಪ್ರೊ+ 5G ಫೋನ್ ಬೆಲೆ ಮತ್ತು ಫೀಚರ್ಸ್ ವಿಷಯಗಳಿಂದ ಇದೊಂದು ಮೀಡ್‌ರೇಂಜ್ ಮಾದರಿ ಫೋನ್ ಆಗಿದೆ. ಈ ಫೋನಿನ ಪ್ರಮುಖ ಆಕರ್ಷಣೆ ಎಂದರೇ ಇದರ ಕ್ಯಾಮೆರಾ ಆಗಿದ್ದು, 200 ಮೆಗಾಪಿಕ್ಸೆಲ್ ಸೆನ್ಸಾರ್ ಆಯ್ಕೆಯನ್ನು ಪಡೆದಿದೆ. ಇನ್ನು ಈ ಫೋನ್ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆ ಒಳಗೊಂಡಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಅನ್ನು ಸಹ ಒಳಗೊಂಡಿದೆ. ಇದರೊಂದಿಗೆ ಕೆಲವು ನೆಗೆಟಿವ್ ಅಂಶಗಳನ್ನು ಈ ಫೋನ್ ಹೊಂದಿದೆ.
ಪ್ಲಸ್ ಪಾಯಿಂಟ್: 200ಎಂಪಿ ಕ್ಯಾಮೆರಾ
ಶಿಯೋಮಿ ರೆಡ್ಮಿ ನೋಟ್ 12 ಪ್ರೊ+ 5G ಫೋನ್ (Redmi Note 12 Pro+) ಅತ್ಯುತ್ತಮ ಆಲ್‌ರೌಂಡರ್ ಫೋನ್ ಎನ್ನಬಹುದಾಗಿದೆ. ಈ ಫೊನ್ ತ್ರಿವಳಿ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾವು 200 ಮೆಗಾ ಪಿಕ್ಸಲ್ ಆಗಿದೆ. ಹಗಲು ಬೆಳಕಿನಲ್ಲಿ ಅತ್ಯುತ್ತಮ ಫೋಟೊಗಳನ್ನು ಸೆರೆಹಿಡಿಯುತ್ತೆ. ಹಾಗೆಯೇ ಮಂದ ಬೆಳಕಿನ ಪರಿಸ್ಥಿತಿಗಳಲ್ಲಿ ಉತ್ತಮ ಫೋಟೋ ನಿರೀಕ್ಷಿಸಬಹುದಾಗಿದೆ.

ಪ್ಲಸ್ ಪಾಯಿಂಟ್: ಅತ್ಯುತ್ತಮ ಡಿಸ್‌ಪ್ಲೇ
ಶಿಯೋಮಿ ರೆಡ್ಮಿ ನೋಟ್ 12 ಪ್ರೊ+ 5G ಫೋನ್ AMOLED ಪ್ಯಾನೆಲ್ ಅನ್ನು ಹೊಂದಿದ್ದು, 6.67 ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದೆ. ಇದು ಡಾಲ್ಬಿ ವಿಷನ್ ಮತ್ತು 120Hz ರಿಫ್ರೆಶ್ ರೇಟ್‌ಗೆ ಬೆಂಬಲದೊಂದಿಗೆ ಅತ್ಯುತ್ತಮ ಪ್ರಖರತೆಯನ್ನು ಹೊಂದಿದೆ.
ಪ್ಲಸ್ ಪಾಯಿಂಟ್: ವೇಗದ ಚಾರ್ಜರ್
ಈ ಫೋನ್ 4,980mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 120W ವೇಗದ ಚಾರ್ಜರ್ ಅನ್ನು ಒದಗಿಸುತ್ತದೆ. ಇದು ಸೂಪರ್ ಫಾಸ್ಟ್ ಮತ್ತು ಸುಮಾರು 10 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಬ್ಯಾಟರಿಯನ್ನು ಟಾಪ್ ಅಪ್ ಮಾಡಬಹುದು.

ಮೈನಸ್ ಪಾಯಿಂಟ್: ಬ್ಯಾಟರಿ ಸಾಮರ್ಥ್ಯ
ಶಿಯೋಮಿ ರೆಡ್ಮಿ ನೋಟ್ 12 ಪ್ರೊ+ 5G ಫೋನ್ 4,980 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಬ್ಯಾಕ್‌ಅಪ್ ಇನ್ನಷ್ಟು ಹೆಚ್ಚಿಸಲು ಅಧಿಕ ಬ್ಯಾಟರಿಯ ಅಗತ್ಯ ಇತ್ತು ಎಂದು ಹೇಳಬಹುದಾಗಿದೆ. ಏಕೆಂದರೆ ಮೀಡ್‌ರೇಂಜ್ ಮಾದರಿಯಲ್ಲಿ ಇರುವ ಈ ಫೋನ್ ಆಕರ್ಷಕ ಫೀಚರ್ಸ್‌ಗಳನ್ನು ಪಡೆದಿದೆ. ಅದಕ್ಕೆ ಅನುಗುಣವಾಗಿ 6,000 mAh ಬ್ಯಾಟರಿ ನೀಡಿದ್ದರೆ, ಹೆಚ್ಚು ಪೂರಕವಾಗಿ ಇರುತ್ತಿತ್ತು.
ಬೆಲೆ ಮತ್ತು ಲಭ್ಯತೆ
ಶಿಯೋಮಿ ರೆಡ್ಮಿ ನೋಟ್ 12 ಪ್ರೊ+ 5G ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಆ ಪೈಕಿ 8 GB + 256 GB ಸ್ಟೋರೇಜ್ ಆಯ್ಕೆಯ ಬೆಲೆ 29,999 ರೂ. ಆಗಿದೆ. ಇದರ 12 GB + 256 GB ಆಯ್ಕೆಯು 32,999 ರೂ. ಬೆಲೆ ಹೊಂದಿದೆ. ಇದು ಮಿ.ಕಾಮ್, ಫ್ಲಿಪ್‌ಕಾರ್ಟ್, ಮಿ.ಹೋಮ್ ಮೂಲಕ ಖರೀದಿಗೆ ಲಭ್ಯವಾಗಲಿದೆ.


Click it and Unblock the Notifications








