Home
ಸುದ್ದಿಜಾಲ

ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಮೊಬೈಲ್‌ ಖರೀದಿಸುವ ಮುನ್ನ ಒಮ್ಮೆ ಈ ಅಂಶ ಗಮನಿಸಿ!

ಜನಪ್ರಿಯ ಸ್ಯಾಮ್‌ಸಂಗ್ ಕಂಪನಿಯು ಹೊಸದಾಗಿ ಲಾಂಚ್ ಮಾಡಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ತಿರುಗಿ ನೋಡುವಂತೆ ಮಾಡಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಫೋನ್ ಮೀಡ್‌ರೇಂಜ್‌ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಆನ್‌ಲೈನ್‌ ತಾಣದಲ್ಲಿ ಪ್ರಿ-ಆರ್ಡರ್‌ಗೆ ಲಭ್ಯವಿದೆ. ಅದರೆ ಮೀಡ್‌ರೇಂಜ್‌ ದರದಲ್ಲಿ ಈ ಫೋನ್‌ ಖರೀದಿ ಮಾಡಬಹುದೇ?

ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1080 6nm ಪ್ರೊಸೆಸರ್ ಪವರ್‌ ಅನ್ನು ಪಡೆದಿದೆ. ಹಾಗೆಯೇ 8 GB + 128 GB ಮತ್ತು 8 GB + 256 GB ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ. ಆರಂಭಿಕ ವೇರಿಯಂಟ್‌ ಫೋನ್ ಬೆಲೆಯು 30,999ರೂ. ಆಗಿದೆ. ನೀವೆನಾದರೂ ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಫೋನ್‌ ಅನ್ನು ಖರೀದಿಸಲು ಇಚ್ಛಿಸಿದರೇ, ಅದಕ್ಕೂ ಮುನ್ನ ಗ್ಯಾಲಕ್ಸಿ A34 5G ಫೋನ್‌ ಬಗ್ಗೆ ಕೆಲವು ಅಂಶಗಳನ್ನು ನೀವು ತಿಳಿಯಬೇಕು.

ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಮೊಬೈಲ್‌ ಖರೀದಿಸುವ ಮುನ್ನ ಒಮ್ಮೆ ಈ ಅಂಶ ಗಮನಿಸಿ

ಪಾಯಿಂಟ್‌ 1 : ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಫೋನ್ ಹಿಂಬದಿಯಲ್ಲಿ ಪ್ಲ್ಯಾಸ್ಟಿಕ್‌ ಪ್ಯಾನೆಲ್ ಹೊಂದಿದ್ದರೂ, ಇತ್ತೀಚಿನ ಗ್ಯಾಲಕ್ಸಿ S23 ಸರಣಿಯ ಕ್ಯಾಮೆರಾ ಲುಕ್‌ ಒಳಗೊಂಡಿದೆ. ಅಂದಹಾಗೆ ಈ ಫೋನ್ ಟ್ರಿಪಲ್‌ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ.

ಪಾಯಿಂಟ್‌ 2 : ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಫೋನ್ ಪಂಚ್ ಹೋಲ್‌ ಮಾದರಿಯ ವಿನ್ಯಾಸದೊಂದಿಗೆ 6.6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌, ಸೂಪರ್‌ ಅಮೊಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದರ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಜೊತೆಗೆ 1000 nits ಗರಿಷ್ಠ ಬ್ರೈಟ್ನೆಸ್‌ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಮೊಬೈಲ್‌ ಖರೀದಿಸುವ ಮುನ್ನ ಒಮ್ಮೆ ಈ ಅಂಶ ಗಮನಿಸಿ

ಪಾಯಿಂಟ್‌ 3 : ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಫೋನ್ 2.6GHz ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1080 ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಇತ್ತೀಚಿನ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಜೊತೆಗೆ 8 GB + 128 GB ಮತ್ತು 8 GB + 256 GB ವೇರಿಯಂಟ್‌ ಆಯ್ಕೆಯಲ್ಲಿ ಲಭ್ಯ.

ಪಾಯಿಂಟ್‌ 4 : ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಫೋನ್ ಪ್ರಾಥಮಿಕ ಕ್ಯಾಮೆರಾ 48 ಮೆಗಾಪಿಕ್ಸಲ್‌ ಸೆನ್ಸಾರ್‌ ಪಡೆದಿದೆ. ಇನ್ನುಳಿದ ಇತರ ಎರಡು ಕ್ಯಾಮೆರಾಗಳು 8 ಮೆಗಾಪಿಕ್ಸಲ್‌ ಹಾಗೂ 5 ಮೆಗಾಪಿಕ್ಸಲ್‌ ಸೆನ್ಸಾರ್‌ ಲೆನ್ಸ್‌ ಹೊಂದಿವೆ. ಕ್ಯಾಮೆರಾ 10x ವರೆಗೆ ಡಿಜಿಟಲ್‌ ಜೂಮ್‌ ಸಪೋರ್ಟ್‌ ಪಡೆದಿದ್ದು, 30fps ನಲ್ಲಿ 4K ರೆಸಲ್ಯೂಶನ್‌ನಲ್ಲಿ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.

ಪಾಯಿಂಟ್‌ 5 : ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಮೀಡ್‌ರೇಂಜ್‌ ದರದ ಫೋನ್‌ ಆಗಿದ್ದರೂ, ಸೆಲ್ಫಿ ಕ್ಯಾಮೆರಾ ಬರೀ 13 ಮೆಗಾ ಪಿಕ್ಸಲ್‌ ಸಾಮರ್ಥ್ಯ ಹೊಂದಿರುವುದು ಸಹಜವಾಗಿಯೆ ಅಚ್ಚರಿಯನಿಸುತ್ತದೆ. ಅದಾಗ್ಯೂ, ಇದು ಫೋಟೋ, ವಿಡಿಯೋ, ಪೋರ್ಟ್ರೇಟ್ ಮತ್ತು ಇತರೆ ಹೆಚ್ಚಿನ ಶೂಟಿಂಗ್ ಮೋಡ್‌ ಆಯ್ಕೆಗಳನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಮೊಬೈಲ್‌ ಖರೀದಿಸುವ ಮುನ್ನ ಒಮ್ಮೆ ಈ ಅಂಶ ಗಮನಿಸಿ

ಪಾಯಿಂಟ್‌ 6 : ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಫೋನ್‌ 5000 mAH ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದಿದ್ದು, 25W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಒಳಗೊಂಡಿದೆ. ಅಲ್ಲದೇ ಈ ಫೋನ್‌ ಒಂದೇ ಚಾರ್ಜ್‌ನಲ್ಲಿ ಸುಮಾರು 35 ಗಂಟೆಗಳ ಟಾಕ್ ಟೈಮ್ ಮತ್ತು 22 ಗಂಟೆಗಳ ಬ್ರೌಸಿಂಗ್ ಸಮಯ ಅನ್ನು ನೀಡುತ್ತದೆ.

Best Mobiles in India

English summary
Before buying the Samsung Galaxy A34 5G know these points and things more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+