ವಿವೋ X80 ಪ್ರೊ ಮೊಬೈಲ್‌ ಖರೀದಿಸುವ ಮುನ್ನ ಒಮ್ಮೆ ಈ ಅಂಶ ಗಮನಿಸಿ!

|

ವಿವೋ ಕಂಪನಿಯು ಹೊಸದಾಗಿ ಲಾಂಚ್ ಮಾಡಿರುವ ವಿವೋ X80 ಪ್ರೊ ಫೋನ್ ಆಕರ್ಷಕ ಹೈ ಎಂಡ್‌ ಫೀಚರ್ಸ್‌ಗಳಿಂದ ಗ್ರಾಹಕರನ್ನು ತಿರುಗಿ ನೋಡುವಂತೆ ಮಾಡಿದೆ. ಇನ್ನು ಈ ಫೋನ್ ಸದ್ಯದಲ್ಲೇ ಖರೀದಿಗೆ ಲಭ್ಯವಾಗಲಿದೆ. ವಿವೋ X80 ಪ್ರೊ ಫೋನ್ ವೇಗದ ಪ್ರೊಸೆಸರ್‌ ಸೇರಿದಂತೆ ಹೈ ಎಂಡ್‌ ಕ್ಯಾಮೆರಾ ಆಯ್ಕೆಯಿಂದ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್‌ 1 ಪ್ರೊಸೆಸರ್‌ ಬಲವನ್ನು ಪಡೆದಿದೆ. 12GB RAM + 256GB ವೇರಿಯಂಟ್‌ ಫೋನ್ ಬೆಲೆಯು 79,999ರೂ. ಆಗಿದೆ. ನೀವೆನಾದರೂ ವಿವೋ X80 ಪ್ರೊ ಫೋನ್‌ ಅನ್ನು ಖರೀದಿಸಲು ಇಚ್ಛಿಸಿದರೇ, ಅದಕ್ಕೂ ಮುನ್ನ ವಿವೋ X80 ಪ್ರೊ ಫೋನ್‌ ಬಗ್ಗೆ ಕೆಲವು ಅಂಶಗಳನ್ನು ನೀವು ತಿಳಿಯಬೇಕು.

ವಿವೋ X80 ಪ್ರೊ ಮೊಬೈಲ್‌ ಖರೀದಿಸುವ ಮುನ್ನ ಒಮ್ಮೆ ಈ ಅಂಶ ಗಮನಿಸಿ!

ಪಾಯಿಂಟ್‌ 1
ವಿವೋ X80 ಪ್ರೊ ಬೆಲೆ ಮತ್ತು ಫೀಚರ್ಸ್‌ ವಿಷಯಗಳಿಂದ ಇದೊಂದು ಹೈ ಎಂಡ್‌ ಮಾದರಿ ಫೋನ್ ಆಗಿದೆ. ಇದು ಪ್ರೀಮಿಯಂ ಸ್ಮಾರ್ಟ್‌ಫೋನ್ ಆದರೆ ಹೆಚ್ಚು ಬಳಕೆದಾರ ಸ್ನೇಹಿ ವಿನ್ಯಾಸವನ್ನು ಹೊಂದಿಲ್ಲ. ಫೋನ್ ದೊಡ್ಡದಾಗಿದೆ ಮತ್ತು 219 ಗ್ರಾಂಗಳಷ್ಟು ತೂಕ ಹೊಂದಿದೆ. ಇದು ದೀರ್ಘಾವಧಿಯ ಬಳಕೆಯಲ್ಲಿ ಆಯಾಸವನ್ನು ಹೆಚ್ಚಿಸುತ್ತದೆ. ಇನ್ನು ಈ ಫೋನ್ ಎಜಿ ಮ್ಯಾಟ್ ಗ್ಲಾಸ್ ಫಿನಿಶ್ ನುಣುಪಾದವಾಗಿ ಕಾಣುತ್ತದೆ. ಹಿಂಭಾಗದ ಫಲಕವು ಫಿಂಗರ್‌ಪ್ರಿಂಟ್ ಸ್ಮಡ್ಜ್‌ಗಳಿಂದ ದೂರವಿರುತ್ತದೆ. ಇದು ಜಾರು ಅಲ್ಲ ಮತ್ತು ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 ರೇಟ್ ಆಗಿದೆ.

ಪಾಯಿಂಟ್ 2
ವಿವೋ X80 ಪ್ರೊ ಒಂದು ಕ್ಯಾಮೆರಾ ಚಾಂಪ್ ಫೋನ್ ಎನಿಸಿಕೊಂಡಿದೆ. ಈ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದ್ದು, 50 ಮೆಗಾ ಪಿಕ್ಸೆಲ್ ಮುಖ್ಯ ಸಂವೇದಕ, 48 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸಂವೇದಕ, 12 ಮೆಗಾ ಪಿಕ್ಸೆಲ್ ಪೋರ್ಟ್ರೇಟ್ ಸಂವೇದಕ ಮತ್ತು 8 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಹಾಗೆಯೇ ಮುಂಭಾಗವು 32-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಪಡೆಯುತ್ತದೆ.

ವಿವೋ X80 ಪ್ರೊ ಮೊಬೈಲ್‌ ಖರೀದಿಸುವ ಮುನ್ನ ಒಮ್ಮೆ ಈ ಅಂಶ ಗಮನಿಸಿ!

ಪಾಯಿಂಟ್ 3
ವಿವೋ X80 ಪ್ರೊ ಕ್ಯಾಮರಾ ಕಾರ್ಯಕ್ಷಮತೆಯನ್ನು ಬದಿಗಿಟ್ಟು, ಈ ಫೋನಿನಿಂದ ಉತ್ತಮವಾದದನ್ನು ಪಡೆಯಲು ವಿವೋ ಕ್ಯಾಮರಾ ಅಪ್ಲಿಕೇಶನ್‌ನಲ್ಲಿ ಸಾಕಷ್ಟು ಆಯ್ಕೆಗಳನ್ನು ಸೇರಿಸಿದೆ. ಪ್ರತಿಯೊಂದು ಸಂವೇದಕ ಮತ್ತು ಮೋಡ್‌ಗೆ ಫಿಲ್ಟರ್‌ಗಳು, ಶೈಲಿಗಳು ಮತ್ತು LUT ಗಳು ಇವೆ. ಪೋರ್ಟ್ರೇಟ್ ಕ್ಯಾಮೆರಾ ಕೆಲವು ಝೈಸ್ ಬೊಕೆ ಮೋಡ್‌ಗಳನ್ನು ಹೊಂದಿದೆ. ವೀಡಿಯೊ ರೆಕಾರ್ಡಿಂಗ್ ಸಿನಿಮೀಯ ಮೋಡ್ ಮತ್ತು ಹಾರಿಜಾನ್ ಮಟ್ಟದ ಸ್ಥಿರೀಕರಣವನ್ನು ಪಡೆಯುತ್ತದೆ.

ಪಾಯಿಂಟ್ 4
ವಿವೋ X80 ಪ್ರೊ ಫೋನಿನ ಪ್ರಮುಖ ವಿಷಯವೆಂದರೆ ಅದರ ದೊಡ್ಡ ಮತ್ತು ಉತ್ತಮ ಗುಣಮಟ್ಟದ ಡಿಸ್‌ಪ್ಲೇ. ಈ ಫೋನ್ 6.78 ಇಂಚಿನ 2K 120Hz LTPO E5 ಸ್ಯಾಮ್‌ಸಂಗ್ AMOLED ಪ್ಯಾನೆಲ್‌ನೊಂದಿಗೆ 1500 nits ಗರಿಷ್ಠ ಬ್ರೈಟ್ನೆಸ್‌, 10-ಬಿಟ್ ಬಣ್ಣಗಳು ಮತ್ತು HDR10+ ಬೆಂಬಲವನ್ನು ಹೊಂದಿದೆ. ಡಿಸ್‌ಪ್ಲೇ ವಿಷಯದಲ್ಲಿ ಈ ಫೋನ್ ಆಕರ್ಷಕವಾಗಿ ಕಾಣುತ್ತದೆ. ವಿವೋ ಫಿಂಗರ್‌ಪ್ರಿಂಟ್ ಸೆನ್ಸಾರ್‌ಗಾಗಿ ದೊಡ್ಡ ಪ್ರದೇಶವನ್ನು ಸಹ ಬಳಸಿದೆ.

ಪಾಯಿಂಟ್ 5
ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್‌ 1 ಚಿಪ್ ಅನ್ನು ಫೋನ್‌ನಿಂದ ಅತ್ಯುತ್ತಮವಾಗಿ ಹೊರತರಲು ಉತ್ತಮವಾಗಿ ಆಪ್ಟಿಮೈಸ್ ಮಾಡಲಾಗಿದೆ. ಗೇಮಿಂಗ್ ಕಾರ್ಯಕ್ಷಮತೆ ಕೂಡ ಸಾಕಷ್ಟು ಉತ್ತಮ ಎನಿಸಲಿದೆ. ಇದು ಕೆಲವು ಸುಧಾರಣೆಗಳನ್ನು ಹೊಂದಬಹುದಾದ ಸಾಫ್ಟ್‌ವೇರ್ ಆಗಿದೆ. ಫ್ಲ್ಯಾಗ್‌ಶಿಪ್ ಫೋನ್‌ಗಾಗಿ ವಿವೋ X80 ಪ್ರೊ ನಲ್ಲಿ ಇನ್ನೂ ಸಾಕಷ್ಟು ಪ್ರಿ ಇನ್‌ಸ್ಟಾಲ್ ಆಗಿರುವ ಅಪ್ಲಿಕೇಶನ್‌ಗಳಿವೆ. ಕೊನೆಯದಾಗಿ ವಿವೋ X80 ಪ್ರೊ ಹಲವು ಅಮಶಗಳಲ್ಲಿ ಆಕರ್ಷಕ ಎನಿಸುತ್ತದೆ. ಈ ಫೋನ್ ತನ್ನ ಕ್ಯಾಮರಾ ಸಿಸ್ಟಮ್ನೊಂದಿಗೆ ಪ್ರಭಾವ ಬೀರಲು ವಿನ್ಯಾಸಗೊಳಿಸಲಾಗಿದೆ. ಕ್ಯಾಮೆರಾ ಹಾರ್ಡ್‌ವೇರ್ ಮತ್ತು ಅದರ ವಿವೋ ಆಪ್ಟಿಮೈಸೇಶನ್ ನಿಜವಾಗಿಯೂ ಎದ್ದು ಕಾಣುತ್ತದೆ.

Best Mobiles in India

English summary
Before Buying The Vivo X80 Pro Phone Know These Points.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X