ನಿಮ್ಮ ಹಳೆಯ ಐಫೋನ್ ಮಾರಾಟ ಮಾಡುವಾಗ ಈ ತಪ್ಪು ಮಾಡಲೇಬೇಡಿ!

|

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ ಆಪಲ್ ಇತ್ತೀಚಿಗಷ್ಟೆ ನೂತನವಾಗಿ ಐಫೋನ್‌ 13 ಸರಣಿಯನ್ನು ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಹೊಸ ಐಫೋನ್‌ ಲಾಂಚ್ ಬೆನ್ನಲ್ಲೇ ಕಂಪನಿಯು ಕೆಲವು ಹಳೆಯ ಮಾಡೆಲ್‌ ಐಫೋನ್‌ಗಳಿಗೆ ಭರ್ಜರಿ ರಿಯಾಯಿತಿ ಘೋಷಿಸಿದೆ. ಹಾಗೆಯೇ ಕೆಲವೊಂದು ವಿಶೆಷ ಸೇಲ್‌ಗಳಲ್ಲಿ ಡಿಸ್ಕೌಂಟ್‌ನಲ್ಲಿ ಐಫೋನ್‌ಗಳು ಲಭ್ಯ. ಈ ನಿಟ್ಟಿನಲ್ಲಿ ಕೆಲವು ಬಳಕೆದಾರರು ಹಳೆಯ ಐಫೋನ್‌ ಮಾರಿ ಹೊಸ ಐಫೋನ್‌ ಖರೀದಿಗೆ ಮುಂದಾಗುತ್ತಾರೆ. ಆದರೆ ಹಳೆಯ ಐಫೋನ್ ಮಾರುವಾಗ ಕೆಲವು ಸಂಗತಿಗಳನ್ನು ಗಮನಿಸಲೇಬೇಕು.

ಮಾರಾಟ

ಹೌದು, ಹಳೆಯ ಐಫೋನ್‌ ಮಾರಾಟ ಮಾಡಿಹೊಸ ಐಫೋನ್ ಖರೀದಿಗೆ ಮುಂದಾಗುವ ಗ್ರಾಹಕರು ಹಳೆಯ ಫೋನ್ ಮಾರಾಟ ಮಾಡುವಾಗ ಕೆಲವು ಸಂಗತಿಗಳ ಬಗ್ಗೆ ಎಚ್ಚರವಹಿಸಬೇಕಿದೆ. ಏಕೆಂದರೇ ಬಳಕೆ ಮಾಡಿದ ಐಫೋನ್‌ನಲ್ಲಿ ಕೆಲವು ಖಾಸಗಿ ಮಾಹಿತಿ, ಪ್ರಮುಖ ಮಾಹಿತಿ, ಫೋಟೊ, ವಿಡಿಯೋ ಸೇರಿದಂತೆ ಇತ್ಯಾದಿ ಬಹುಮುಖ್ಯ ಎನಿಸುವ ದಾಖಲೆಗಳು ಇರುತ್ತವೆ. ಈ ಬಗ್ಗೆ ಗಮನ ನೀಡುವುದು ಅವಶ್ಯಕವಾಗಿದೆ. ಹಾಗಾದರೆ ಹಳೆಯ ಐಫೋನ್ ಮಾರಾಟ ಮಾಡುವ ಮುನ್ನ ಗ್ರಾಹಕರು ಯಾವೆಲ್ಲಾ ಅಂಶಗಳನ್ನು ಗಮನಿಸಬೇಕು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ ಡೇಟಾವನ್ನು ವರ್ಗಾಯಿಸಲು ಯಾವುದೇ ಕಾರಣಕ್ಕೂ ಮರೆಯಬೇಡಿ

ಐಫೋನ್ ಡೇಟಾವನ್ನು ವರ್ಗಾಯಿಸಲು ಯಾವುದೇ ಕಾರಣಕ್ಕೂ ಮರೆಯಬೇಡಿ

ಬಳಕೆದಾರರು ಐಫೋನ್ ಅಥವಾ ಐಪ್ಯಾಡ್ ಅನ್ನು ಮಾರಾಟ ಮಾಡುವ ಮುನ್ನ ಡೇಟಾವನ್ನು ಸುರಕ್ಷಿತವಾಗಿ ಬ್ಯಾಕಅಪ್ ಮಾಡುವುದು ಮುಖ್ಯ. ಅದಕ್ಕಾಗಿ ಬಳಕೆದಾರರು ಐಕ್ಲೌಡ್ ಬಳಸಿ ಹಳೆಯ ಐಫೋನ್‌ನಲ್ಲಿರುವ ಡೇಟಾ ವನ್ನು ಸುಲಭವಾಗಿ ಬ್ಯಾಕಅಪ್ ಮಾಡಲು ಅವಕಾಶ ಇದೆ. ಅದಕ್ಕಾಗಿ ಬಳಕೆದಾರರು ಐಕ್ಲೌಡ್‌ನಲ್ಲಿ ಸೆಟ್ಟಿಂಗ್‌ಗಳು> ಐಕ್ಲೌಡ್> ಐಕ್ಲೌಡ್ ಬ್ಯಾಕಅಪ್‌ಗೆ ಹೋಗಿ ಮತ್ತು ಆಟೋಮ್ಯಾಟಿಕ್ ಬ್ಯಾಕಅಪ್ ಅನ್ನು ಆನ್ ಮಾಡ ಬೇಕು.

ಆಫ್‌ಲೈನ್ ಡೇಟಾ ಟ್ರಾನ್ಸ್‌ಫರ್ ಮಾಡುವುದು ಮರೆಯಲೇಬೇಡಿ

ಆಫ್‌ಲೈನ್ ಡೇಟಾ ಟ್ರಾನ್ಸ್‌ಫರ್ ಮಾಡುವುದು ಮರೆಯಲೇಬೇಡಿ

ಡೇಟಾ ಬ್ಯಾಕ್‌ಅಪ್‌ ಪಡೆಯುವುದು ಮುಖ್ಯ. ಈ ನಿಟ್ಟಿನಲ್ಲಿ ಒಂದು ವೇಳೆ ಐಕ್ಲೌಡ್‌ನಲ್ಲಿ ನಿಮಗೆ ಜಾಗ ಇರದಿದ್ದರೇ ಅಥವಾ ವಿಶ್ವಾಸಾರ್ಹ ಇಂಟರ್ನೆಟ್ ಕನೆಕ್ಷನ್ ಇರದಿದ್ದರೇ, ಆಗ ನಿಮ್ಮ ನೆರವಿಗೆ ಬರುವುದೇ ಆಪಲ್‌ನ ಐಟ್ಯೂನ್ಸ್ ಸಾಫ್ಟ್‌ವೇರ್. ಈ ಸಾಫ್ಟ್‌ವೇರ್ ಬಳಸಿ ನಿಮ್ಮ ಪ್ರಮುಖ ಡೇಟಾವನ್ನು ಸರಳವಾಗಿ ಆಫ್‌ಲೈನ್ ಮೂಲಕ ಬ್ಯಾಕ್‌ಅಪ್ ಮಾಡಬಹುದಾಗಿದೆ. ಇನ್ನು ಯಾವುದೇ ಮ್ಯಾಕ್ ಅಥವಾ ಪಿಸಿಯಲ್ಲಿ ಐಟ್ಯೂನ್ಸ್ ಸಾಫ್ಟ್‌ವೇರ್ ಅನ್ನು ಇನ್‌ಸ್ಟಾಲ್‌ ಮಾಡಿ, ವೈ-ಫೈ ಅಥವಾ ಕೇಬಲ್ ಮೂಲಕ ಡೇಟಾವನ್ನು ಬ್ಯಾಕಪ್ ಮಾಡಬಹುದು.

ಐಫೋನ್‌ ಡಿವೈಸ್‌ಗೆ ಕನೆಕ್ಟ್‌ ಆದ ಡಿವೈಸ್‌ಗಳನ್ನು ಮರೆಯದೇ ಅನ್‌ಪೇರ್‌ ಮಾಡಿ

ಐಫೋನ್‌ ಡಿವೈಸ್‌ಗೆ ಕನೆಕ್ಟ್‌ ಆದ ಡಿವೈಸ್‌ಗಳನ್ನು ಮರೆಯದೇ ಅನ್‌ಪೇರ್‌ ಮಾಡಿ

ಬಳಕೆದಾರರು ಐಫೋನ್ ಬಳಕೆ ಮಾಡುವಾಗ ಅವರ ಫೋನಿಗೆ ಇತರೆ ಕೆಲವೊಂದು ಡಿವೈಸ್‌ಗಳನ್ನು ಕನೆಕ್ಟ್ ಮಾಡಿರುತ್ತಾರೆ. ಮಾರಾಟ ಮಾಡುವ ಸಂದರ್ಭದಲ್ಲಿ ಕನೆಕ್ಟ್ ಮಾಡಿರುವ ಇತರೆ ಎಲ್ಲ ಡಿವೈಸ್‌ಗಳನ್ನು ಅನ್‌ಪೇರ್ ಮಾಡುವುದು ಒಳಿತು. ವೈ ಫೈ ಮೂಲಕ ಅಥವಾ ಬ್ಲೂಟೂತ್ ಸಂಪರ್ಕದ ಮೂಲಕ ಕನೆಕ್ಟ್ ಮಾಡಲಾದ, ಏರ್‌ಪಾಡ್, ವಾಚ್‌ ಸೇರಿದಂತೆ ಯಾವುದೇ ಡಿವೈಸ್‌ ಇದ್ರೂ ಅದನ್ನು ಅನ್‌ಪೇರ್ ಮಾಡಿಬಿಡಿ. ಸುರಕ್ಷತೆಯ ದೃಷ್ಠಿಯಿಂದ ಈ ಕೆಲಸ ಮಾಡುವುದು ಅವಶ್ಯ.

ಐಮೆಸೆಜ್ ಮತ್ತು ಫೇಸ್‌ಟೈಮ್‌ ಅಕೌಂಟ್‌ಗಳನ್ನು ಅನ್‌ಲಿಂಕ್ ಮಾಡಲು ಮರೆಯದಿರಿ

ಐಮೆಸೆಜ್ ಮತ್ತು ಫೇಸ್‌ಟೈಮ್‌ ಅಕೌಂಟ್‌ಗಳನ್ನು ಅನ್‌ಲಿಂಕ್ ಮಾಡಲು ಮರೆಯದಿರಿ

ಹಳೆಯ ಐಫೋನ್ ಮಾರಾಟ ಮಾಡುವ ಮುನ್ನ, ನಿಮ್ಮ ಐಫೋನ್‌ನಲ್ಲಿ ಲಿಂಕ್ ಮಾಡಲಾದ ಐಮೆಸೆಜ್ ಮತ್ತು ಫೇಸ್‌ಟೈಮ್‌ ಅಕೌಂಟ್‌ಗಳನ್ನು ಅನ್‌ಲಿಂಕ್ ಮಾಡಲು ಮರೆಯದಿರಿ. ಈ ಖಾತೆಗಳನ್ನು ಅನ್‌ಲಿಂಕ್ ಮಾಡಲು ಈ ಮುಂದಿನ ಕ್ರಮ ಫಾಲೋ ಮಾಡಿ ಸೆಟ್ಟಿಂಗ್‌ಗಳು > ಮೆಸೆಜ್‌ ಆಯ್ಕೆಗೆ ಹೋಗಿ ಮತ್ತು ಟಾಗಲ್ ಮೇಲೆ ಟ್ಯಾಪ್ ಮಾಡಿ. ನಂತರ ಸೆಟ್ಟಿಂಗ್‌ಗಳು > ಫೇಸ್‌ಟೈಮ್‌ಗೆ ಹೋಗುವ ಮೂಲಕ ಫೇಸ್‌ಟೈಮ್ ಖಾತೆಗಳನ್ನು ಆಫ್ ಮಾಡಬಹುದು.

ಆಪ್ ಸ್ಟೋರ್‌ ಅನ್ನು ಮರೆಯದೇ ಸೈನ್ ಔಟ್ ಮಾಡಿರಿ

ಆಪ್ ಸ್ಟೋರ್‌ ಅನ್ನು ಮರೆಯದೇ ಸೈನ್ ಔಟ್ ಮಾಡಿರಿ

ಹಳೆಯ ಐಫೋನ್ ಮಾರಾಟ ಮಾಡುವ ಮುನ್ನ ನಿಮ್ಮ ಐಕ್ಲೌಡ್‌ ಅಕೌಂಟ್‌ನಿಂದ ಸೈನ್‌ ಔಟ್‌ ಮಾಡುವುದನ್ನು ಮಿಸ್ ಮಾಡಬೇಡಿರಿ. ಇದು ನಿಮ್ಮ ಫೋನಿನಲ್ಲಿ ಸರ್ಚ್ ಮೈ ಫೀಚರ್ ನಿಷ್ಕ್ರಿಯ ಮಾಡುತ್ತದೆ. ಒಂದು ವೇಳೆ ನಿಮ್ಮ ಡಿವೈಸ್‌ನಲ್ಲಿ ಸರ್ಚ್ ಮೈ ಫೀಚರ್ ನಿಷ್ಕ್ರಿಯ ಮಾಡದಿದ್ದರೇ, ಹೊಸ ಬಳಕೆದಾರರಿಗೆ ಆ ಐಫೋನ್ ಬಳಕೆ ಮಾಡುವುದು ಕಷ್ಟ ಎನಿಸುವುದು.

Best Mobiles in India

English summary
Before Selling Your old Apple iPhone Follow These Important Things.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X