Chrome: ಕ್ರೋಮ್‌ನ ಇನ್ಕಾಗ್ನಿಟೋ ಮೋಡ್‌ನಲ್ಲಿ ಏನೇನನ್ನೋ ನೋಡ್ತೀರಾ? ಯಾರಿಗೂ ಗೊತ್ತಾಗೋಲ್ಲ ಅನ್ಕೊಂಡಿದ್ದೀರಾ!?
ಕ್ರೋಮ್ (Chrome) ಅನ್ನು ಯಾರು ತಾನೆ ಬಳಕೆ ಮಾಡುವುದಿಲ್ಲ ಹೇಳಿ. ಎಲ್ಲಾ ವಿಚಾರಕ್ಕೂ ಇದರ ಮೊರೆಹೋಗುತ್ತೇವೆ. ಅದರಂತೆ ಗೂಗಲ್ (Google) ಇದರಲ್ಲಿ ಸಾಕಷ್ಟು ಸುಧಾರಿತ ಫೀಚರ್ಸ್ ಅನ್ನೂ ಸಹ ನೀಡಿದ್ದು, ಈ ಮೂಲಕ ವಿವಿಧ ರೀತಿಯಲ್ಲಿ ಇದನ್ನು ಬಳಕೆ ಮಾಡಲು ಅನುಮತಿಸುತ್ತದೆ.
ಹೌದು, ಕ್ರೋಮ್ ಅನ್ನು ಸ್ಮಾರ್ಟ್‌ಫೋನ್ ಹೊಂದಿರುವ ಬಹುಪಾಲು ಮಂದಿ ಬಳಕೆ ಮಾಡುತ್ತಾರೆ. ಈ ಕ್ರೋಮ್‌ನಲ್ಲಿ ಸಾಕಷ್ಟು ವಿಶೇಷ ಫೀಚರ್ಸ್ ಆಯ್ಕೆಯೊಂದಿಗೆ ಇನ್ಕಾಗ್ನಿಟೋ ಮೋಡ್ (Incognito mode) ಸೌಲಭ್ಯ ಸಹ ಇದ್ದು, ಇದನ್ನು ಕೆಲವರು ಒಳ್ಳೆ ವಿಚಾರಕ್ಕೆ ಬಳಕೆ ಮಾಡಿದ್ರೆ ಇನ್ನೂ ಕೆಲವರು ಯಾವುದ್ಯಾವುದೋ ವಿಷಯಕ್ಕೆ ಬಳಕೆ ಮಾಡುತ್ತಿದ್ದಾರೆ. ಈ ನಡುವೆ ಈ ಇನ್ಕಾಗ್ನಿಟೋ ಬಳಕೆ ಮಾಡುವ ಬಳಕೆದಾರರು ಶಾಕ್ ಆಗುವ ವಿಷಯ ಹೊರಬಿದ್ದಿದೆ. ಹಾಗಿದ್ರೆ, ಏನಿದು ಹೊಸ ವಿಚಾರ, ಗೂಗಲ್ ಬಳಕೆದಾರರಿಗೆ ಭದ್ರತೆ ನೀಡುವುದಿಲ್ಲವೇ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಕ್ರೋನ್ ಇನ್ಕಾಗ್ನಿಟೋ ಮೋಡ್: ಇನ್ಕಾಗ್ನಿಟೋ ಅಥವಾ ಅಜ್ಞಾತ ಮೋಡ್ ಬಳಕೆ ಮಾಡಿಕೊಂಡು ಕಂಟೆಂಟ್ ಪಡೆಯುವ ಸಾಕಷ್ಟು ಮಂದಿ ನಮ್ಮ ನಡುವೆ ಇದ್ದಾರೆ. ಅದರಲ್ಲೂ ಈ ಮೋಡ್ ಮೂಲಕ ಗೂಗಲ್‌ನಲ್ಲಿ ಏನೇ ಸರ್ಚ್ ಮಾಡಿದ್ರೂ ಯಾರಿಗೂ ತಿಳಿಯುವುದಿಲ್ಲ ಎಂದು ಸ್ವತಃ ಗೂಗಲ್ ಒತ್ತಿ ಹೇಳಿತ್ತು. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ $ 5 ಬಿಲಿಯನ್ ತೆರಬೇಕಾದ ಪರಿಸ್ಥಿತಿ ಗೂಗಲ್‌ನದ್ದಾಗಿದೆ.
ಈ ಮೋಡ್‌ನಲ್ಲಿಯೂ ವೆಬ್‌ಸೈಟ್ ಬಳಕೆದಾರರ ಡೇಟಾವನ್ನು ಸಂಗ್ರಹಿಸಬಹುದು ಎಂದು ತಿಳಿದುಬಂದಿದೆ. ಆದಾಗ್ಯೂ, ವೆಬ್‌ಸೈಟ್‌ನ ಡೇಟಾ ಅಥವಾ ಚಟುವಟಿಕೆಯು ಆ ಡಿವೈಸ್‌ನ ಇತರ ಬಳಕೆದಾರರಿಗೆ ಗೋಚರಿಸುವುದಿಲ್ಲ. ಈ ಹಿಂದೆ ಟೆಕ್ ಕಂಪನಿಯು ಇದು ಖಾಸಗಿ ಬ್ರೌಸಿಂಗ್ ಎಂದು ಮಾಹಿತಿ ನೀಡಿತ್ತು. ಇದರಲ್ಲಿ ಬಳಕೆದಾರರ ಡೇಟಾ ಸುರಕ್ಷಿತವಾಗಿ ಉಳಿಯುತ್ತದೆ ಎಂದೆಲ್ಲಾ ತಿಳಿಸಿತ್ತು. ಆದರೆ, ಸುದೀರ್ಘ ಮೊಕದ್ದಮೆ ಮತ್ತು ಕಾನೂನು ಹೋರಾಟದ ನಂತರ ಗೂಗಲ್ ತನ್ನ ನೀತಿಯನ್ನು ಬದಲಾಯಿಸಿದೆ.

ಇದೀಗ ಎಚ್ಚೆತ್ತುಕೊಂಡಿರುವ ಗೂಗಲ್ ಇನ್ಕಾಗ್ನಿಟೋ ಮೋಡ್ ಬಳಸುವ ಬಳಕೆದಾರರಿಗೆ ನೀತಿಯನ್ನು ನವೀಕರಿಸಿದೆ. ಈ ಮೋಡ್ ಅನ್ನು ಬಳಸುವ ಮೊದಲು, ಬಳಕೆದಾರರು ಎಚ್ಚರಿಕೆಯನ್ನು ಪಡೆಯುತ್ತಾರೆ. ಗೂಗಲ್ ಕ್ರೋಮ್‌ನ ಹೊಸ 122.0.6251.0 ಆವೃತ್ತಿಯಲ್ಲಿ ಎಚ್ಚರಿಕೆ ಸಂದೇಶ ಬರಲಿದೆ.ಇದನ್ನು MSPowerUser ಗುರುತಿಸಿದೆ. ನೀವು ಈಗ ಖಾಸಗಿ ಬ್ರೌಸಿಂಗ್ ಮಾಡಬಹುದು ಮತ್ತು ಈ ಡಿವೈಸ್ ಅನ್ನು ಬಳಸುವ ಇತರ ಜನರು ನಿಮ್ಮ ಚಟುವಟಿಕೆಯನ್ನು ನೋಡಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ಡೌನ್‌ಲೋಡ್‌ಗಳು, ಬುಕ್‌ಮಾರ್ಕ್‌ಗಳು ಮತ್ತು ರೀಡಿಂಗ್ ಲಿಸ್ಟ್‌ನಂತಹ ಐಟಂಗಳನ್ನು ಉಳಿಸಲಾಗುತ್ತದೆ ಎಂಬ ಸಂದೇಶ ಕಾಣಿಸಿಕೊಳ್ಳಲಿದೆ.
ಇನ್ನು ನಿಮ್ಮ ಡಿವೈಸ್ ಅನ್ನು ಬಳಕೆ ಮಾಡುವ ಇತರ ಬಳಕೆದಾರರಿಗೆ ನಿಮ್ಮ ಚಟುವಟಿಕೆಯನ್ನು ನೋಡಲು ಸಾಧ್ಯವಾಗುವುದಿಲ್ಲ ಎಂಬುದು ಇದರ ಅರ್ಥವಾಗಿದೆ. 2020 ರಿಂದ ನಡೆಯುತ್ತಿರುವ ಮೊಕದ್ದಮೆಯನ್ನು ಟೆಕ್ ಕಂಪನಿಯು ಇತ್ಯರ್ಥಪಡಿಸಿದ ನಿರ್ಧಾರದ ನಂತರ ಈ ಖಾಸಗಿ ಬ್ರೌಸಿಂಗ್ ನೀತಿಯನ್ನು ಬದಲಾಯಿಸಿದೆ. ಯಾಕೆಂದರೆ 2020 ರಲ್ಲಿ ಬಳಕೆದಾರರು ಗೂಗಲ್ ವಿರುದ್ಧ ಮೊಕದ್ದಮೆ ಹೂಡಿದ್ದರು ಮತ್ತು ಆ ವೇಳೆ ಗೂಗಲ್ ಬಳಕೆದಾರರ ನೈಜ ಸಮಯದ ಡೇಟಾವನ್ನು ಟ್ರ್ಯಾಕ್ ಮಾಡಲಿಲದೆ, ಸಂಗ್ರಹಿಸಲಾಗುತ್ತದೆ ಎಂದು ಆರೋಪಿಸಲಾಗಿತ್ತು.

ಗೂಗಲ್ ಕಾನೂನು ಕ್ರಮವನ್ನು ತಪ್ಪಿಸಲು ಪ್ರಯತ್ನಿಸಿದರೂ, ಅಂತಿಮವಾಗಿ ಪ್ರಕರಣವನ್ನು ಇತ್ಯರ್ಥಗೊಳಿಸಲು $5 ಬಿಲಿಯನ್ ಖರ್ಚು ಮಾಡಿದೆ. ಇಷ್ಟಾದರೂ ಸಹ ಗೂಗಲ್ ತನ್ನ ಯಾವುದೇ ತಪ್ಪನ್ನು ಒಪ್ಪಿಕೊಳ್ಳುವ ಕೆಲಸ ಮಾಡುತ್ತಿಲ್ಲ. ಗೂಗಲ್ ಎಂದಿನಂತೆ ವ್ಯವಹಾರವನ್ನು ಮುಂದುವರೆಸಿದೆ. ಇನ್ಕಾಗ್ನಿಟೋ ಮೋಡ್ ಗಾಗಿ ಹೊಸ ಟ್ಯಾಬ್ ಪೇಜ್ ಅನ್ನು ಸೈಲೆಂಟ್ ಆಗಿ ನವೀಕರಿಸುವ ಕೆಲಸ ಮಾಡುತ್ತಿದೆ.
ಗೂಗಲ್ ಈಗ ತನ್ನ ಖಾಸಗಿ ಬ್ರೌಸಿಂಗ್ ಅಂದರೆ ಅಜ್ಞಾತ ಮೋಡ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಬಳಕೆದಾರರ ಡೇಟಾವನ್ನು ಸಂಗ್ರಹಿಸಲಾಗಿಲ್ಲ ಎಂದು ಹೇಳಿಕೊಳ್ಳುತ್ತಿದೆ. ಇನ್ನು ಎಲ್ಲಾ ಕ್ರೋಮ್ ಬಳಕೆದಾರರಿಗೆ ಈ ಹೊಸ ಎಚ್ಚರಿಕೆಯನ್ನು ಮುಂದಿನ ತಿಂಗಳೊಳಗೆ ಹೊರತರಬಹುದು. ಈ ಎಚ್ಚರಿಕೆಯನ್ನು ಅನುಮೋದಿಸಿದ ನಂತರವೇ ಬಳಕೆದಾರರು ಈ ಮೋಡ್ ಅನ್ನು ಬಳಸಬಹುದು ಎಂದು ತಿಳಿದುಬಂದಿದೆ.


Click it and Unblock the Notifications








