ಪಿಜ್ಜಾ ಆರ್ಡರ್ ಮಾಡಿ 95,000ರೂ. ಕಳೆದುಕೊಂಡ ಟೆಕ್ಕಿ!

|

ಪ್ರಸ್ತುತ ದಿನಮಾನಗಳಲ್ಲಿ ಆನ್‌ಲೈನ್‌ ವಂಚನೆಗಳು ಹೆಚ್ಚಾಗುತ್ತಿದ್ದು, ಹೀಗೆ ಆನ್‌ಲೈನ್ ವಂಚಕರು ಬೀಸುವ ಗಾಳಕ್ಕೆ ಸಿಲುಕುವವರಲ್ಲಿ ಟೆಕ್ಕಿಗಳು ಸೇರಿದ್ದಾರೆ ಎನ್ನುವ ಸಂಗತಿ ಅಚ್ಚರಿ ಅನಿಸುತ್ತದೆ. ಹೀಗೆ ಟೆಕ್ಕಿಯೊಬ್ಬರು ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಲು ಹೋಗಿ ವಂಚನೆಯ ಜಾಲಕ್ಕೆ ಸಿಲುಕಿ ಬರೊಬ್ಬರಿ 95,000ರೂ. ಹಣ ಕಳೆದುಕೊಂಡಿರುವ ಘಟನೆ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದಿದೆ.

ಎನ್.ವಿ.ಶೇಖ್

ಬೆಂಗಳೂರಿನ ಕೋರಮಂಗಲದ ಎನ್.ವಿ.ಶೇಖ್ ಅವರೇ ಹಣ ಕಳೆದುಕೊಂಡಿರುವ ಟೆಕ್ಕಿ ಆಗಿದ್ದು, ಇವರು ಡಿಸೆಂಬರ್ 1 ಮಧ್ಯಾಹ್ನ ಪಿಜ್ಜಾವನ್ನು ಆರ್ಡರ್ ಮಾಡಲು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫುಡ್‌ ಡೆಲಿವರಿ ಅಪ್ಲಿಕೇಶನ್ ಬಳಸಿದ್ದಾರೆ. ಆರ್ಡರ್ ಮಾಡಿ ಒಂದು ಗಂಟೆ ಸಮಯ ಕಳೆದರು ಆರ್ಡರ್ ಮಾಡಿರುವ ಪಿಜ್ಜಾ ಬರದಿರುವ ಕಾರಣ ಕಸ್ಟಮರ್ ಕೇರ್‌ ನಂಬರ್‌ಗೆ ಕರೆ ಮಾಡಿದ್ದಾರೆ.

ಕಸ್ಟಮರ್ ಕೇರ್

ಕಸ್ಟಮರ್ ಕೇರ್ ವ್ಯಕ್ತಿ ಮಾತನಾಡಿ ನಿಮ್ಮ ಪಿಜ್ಜಾ ಆರ್ಡರ್ ಸ್ವೀಕರಿಸಲಾಗಿಲ್ಲ. ನಿಮ್ಮ ಹಣವನ್ನು ಹಿಂದಿರುಗಿಸುತ್ತೆವೆ ಅದಕ್ಕಾಗಿ ನಾವು ಕಳುಹಿಸುವ ಲಿಂಕ್‌ ತೆರೆಯಿರಿ ಎಂದು ಹೇಳಿದ್ದಾರೆ. ಅವರಿ ಹೇಳಿದಂತೆ ಶೇಖ್ ಲಿಂಕ್ ತೆರೆದು ಅಲ್ಲಿ ಕೇಳಲಾಗಿರುವ ಬ್ಯಾಂಕ್ ಮಾಹಿತಿ ನೀಡಿದ್ದಾರೆ. ಅದಾದ ಕ್ಷಣ ಮಾತ್ರದಲ್ಲಿಯೇ ಶೇಖ್ ಅವರ ಖಾತೆಯಿಂದ 95,000ರೂ ಡೆಬಿಟ್ ಆಗಿ ಹೋಗಿರುತ್ತದೆ.

ಕಳೆದುಕೊಂಡ

ಹಣ ಕಳೆದುಕೊಂಡ ಬಳಿಕ ಶೇಖ್ ಅವರು ನೇರವಾಗಿ ಮಡಿವಾಳ ಪೊಲೀಸ್ ಠಾಣೆಯ ಮೇಟ್ಟಿಲೇರಿ ದೂರು ನೀಡಿದ್ದಾರೆ. ಕಳೆದುಕೊಂಡಿರುವ ಹಣ ತನ್ನ ತಾಯಿಯ ಕಾನ್ಸರ್ ಚಿಕಿತ್ಸೆಗಾಗಿ ಕೂಡಿಡಲಾಗಿದ್ದ ಹಣವಾಗಿತ್ತು ಎಂದು ದೂರು ನೀಡುವ ವೇಳೆ ಶೇಖ್ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್‌ರು ವಂಚಕರ ಶೋಧಕ್ಕೆ ಮುಂದಾಗಿದ್ದಾರೆ.

ಡೇಲಿವರಿ

ಈ ಬಗ್ಗೆ ಮಾತಾನಾಡಿದ ಫುಡ್‌ ಡೇಲಿವರಿ ಸಂಸ್ಥೆಯು ಶೇಖ್ ಅವರು ಮಾಡಿರುವುದು ನಿಜವಾದ ಕಸ್ಟಮರ್ ಕೇರ್ ನಂಬರ್ ಆಗಿರಲಿಲ್ಲ. ಗ್ರಾಹಕರ ದೂರು ಸ್ವೀಕರಿಸಲು ನಮ್ಮಲ್ಲಿ ಇ-ಮೇಲ್ ಮತ್ತು ಚಾಟ್ ವ್ಯವಸ್ಥೆ ಇದೆ ಎಂದಿದ್ದಾರೆ.

Most Read Articles
Best Mobiles in India

Read more about:
English summary
The techie from Bengaluru's Koramangala had used a food delivery app on his smartphone to order a pizza. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X