ಬೆಂಗಳೂರು ಟ್ರಾಫಿಕ್ ನಿವಾರಣೆಗೆ ವಾಟ್ಸಾಪ್‌ನ ನೆರವು

By Shwetha
|

ಇಂದಿನ ಜನಜೀವನದಲ್ಲಿ ಬೇರೆಲ್ಲಾ ಸಮಸ್ಯೆಗಳಿಗಿಂತ ನಿಮ್ಮನ್ನು ಹೆಚ್ಚು ಗೋಳು ಹೊಯ್ದುಕೊಳ್ಳುವುದು ಟ್ರಾಫಿಕ್ ಸಮಸ್ಯೆಯಾಗಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಂತೂ ಟ್ರಾಫಿಕ್ ಸಮಸ್ಯೆ ಹೆಚ್ಚು ತೀವ್ರವಾಗಿದ್ದು ಕಚೇರಿಗೆ ಬರುವಾಗ ನಿಧಾನವಾಗುವುದು, ಸರಿಯಾದ ಸಮಯಕ್ಕೆ ಕಾರ್ಯಕ್ರಮಕ್ಕೆ ಹೋಗಲಾಗದೇ ಇರುವುದು ಹೀಗೆ ಟ್ರಾಫಿಕ್‌ನಿಂದ ಜನರು ಅನುಭವಿಸುವ ಕಷ್ಟಗಳು ಒಂದೇ ಎರಡೇ? ಇನ್ನು ಸರಕಾರ ಕೂಡ ಟ್ರಾಫಿಕ್ ಸಮಸ್ಯೆಯನ್ನು ನೀಗಿಸುವ ಸಲುವಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಪರಿಹಾರ ಮಾತ್ರ ಶೂನ್ಯವಾಗಿದೆ.

ಓದಿರಿ: ವಾಟ್ಸಾಪ್ ಸಂಪರ್ಕಕ್ಕೆ ನಿರ್ಬಂಧನೆ ಹೇಗೆ?

ಅದಕ್ಕೆಂದೇ ಜನಸಾಮಾನ್ಯರು ಟ್ರಾಫಿಕ್‌ನ ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತಮ್ಮದೇ ವಿಧಾನದಲ್ಲಿ ಕೆಲವೊಂದು ಮಾರ್ಗಗಳನ್ನು ಅನುಸರಿಸುತ್ತಿದ್ದು ಇದು ಒಂದು ರೀತಿಯಲ್ಲಿ ಬಹು ಹೆಚ್ಚು ಎನ್ನಬಹುದಾದ ಟ್ರಾಫಿಕ್‌ನ ಸಮಸ್ಯೆಗೆ ಪರಿಹಾರವನ್ನು ಒದಗಿಸಲು ನೆರವಾಗಲಿದೆ. ಅದು ಏನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.

ವಾಟ್ಸಾಪ್ ನೆರವು

ವಾಟ್ಸಾಪ್ ನೆರವು

ಸಾಮಾಜಿಕ ತಾಣವಾದ ವಾಟ್ಸಾಪ್‌ನಲ್ಲಿ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕುವಂತಹ ಹೊಸ ಉಪಾಯವೊಂದು ಸಿದ್ಧವಾಗಿದೆ.

ವಾಟ್ಸಾಪ್ ಸಂಖ್ಯೆ 7259100100

ವಾಟ್ಸಾಪ್ ಸಂಖ್ಯೆ 7259100100

ಟ್ರಾಫಿಕ್ ಜಾಮ್ ಎಲ್ಲಿಯಾಗಿದೆ ಎಂಬುದನ್ನು ವಾಟ್ಸಾಪ್ ಸಂಖ್ಯೆ 7259100100 ಗೆ ಮಾಹಿತಿ ಕಳುಹಿಸಿದರೆ ಸಾಕು ಅದಕ್ಕೆ ಬೇಕಾದ ಸೂಕ್ತ ಕ್ರಮವನ್ನು ಕೂಡಲೇ ಕೈಗೊಳ್ಳಲಾಗುತ್ತದೆ.

ತೀರಿಸಲಾಗದ ಸಮಸ್ಯೆ

ತೀರಿಸಲಾಗದ ಸಮಸ್ಯೆ

ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಒಂದು ತೀರಿಸಲಾಗದ ಸಮಸ್ಯೆ ಎಂದೆನಿಸಿದ್ದು ಅದಕ್ಕಾಗಿ ಜನರು ಹರಸಾಹಸ ಪಡುತ್ತಿದ್ದಾರೆ. ಎಂಬುದಾಗಿ ಹೆಚ್ಚಿನ ದಿನಪತ್ರಿಕೆಗಳಲ್ಲಿ ಸುದ್ದಿಯಾಗುತ್ತಿದೆ.

ಕ್ವೆಸ್ಟ್ ಗ್ಲೋಬಲ್

ಕ್ವೆಸ್ಟ್ ಗ್ಲೋಬಲ್

ಇಂಜಿನಿಯರಿಂಗ್ ಕನ್‌ಸಲ್ಟಿಂಗ್ ಫರ್ಮ್ ಕ್ವೆಸ್ಟ್ ಗ್ಲೋಬಲ್, ಬೆಂಗಳೂರಿನಲ್ಲಿ 3000 ಉದ್ಯೋಗಿಗಳನ್ನು ಹೊಂದಿದೆ.

ಬೆಂಗಳೂರಿನ ಟ್ರಾಫಿಕ್

ಬೆಂಗಳೂರಿನ ಟ್ರಾಫಿಕ್

ಆದರೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನರಿತು ತನ್ನ 1000 ಉದ್ಯೋಗಿಗಳ ನೇಮಕಾತಿಯನ್ನು ತಿರುವನಂತಪುರದಲ್ಲಿ ಮಾಡುತ್ತಿದೆ.

ಟ್ರಾಫಿಕ್ ಒತ್ತಡ

ಟ್ರಾಫಿಕ್ ಒತ್ತಡ

ಟ್ರಾಫಿಕ್ ಒತ್ತಡದಿಂದ ಉದ್ಯೋಗಿಗಳು ಬಳಲುತ್ತಿರುವುದು ಮತ್ತು ಟ್ರಾಫಿಕ್ ಸಮಸ್ಯೆಯಿಂದ ಕಚೇರಿಗೆ ಇವರುಗಳು ನಿಧಾನವಾಗಿ ಬರುತ್ತಿರುವುದು ಕಂಪೆನಿಗೆ ಹಿನ್ನಡೆಯನ್ನು ಉಂಟುಮಾಡಿದೆ.

ಬೆಂಗಳೂರು ಆಡಳಿತ ವರ್ಗ

ಬೆಂಗಳೂರು ಆಡಳಿತ ವರ್ಗ

ಬೆಂಗಳೂರು ಆಡಳಿತ ವರ್ಗವು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಟ್ರಾಫಿಕ್‌ನಂತಹ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲು ತೀರ್ಮಾನಿಸಿದೆ.

ಸರಕಾರದ ಈ ಹೊಸ ಕ್ರಮ

ಸರಕಾರದ ಈ ಹೊಸ ಕ್ರಮ

ಜನರೂ ಕೂಡ ಸರಕಾರದ ಈ ಹೊಸ ಕ್ರಮಗಳಿಗೆ ತಮ್ಮನ್ನು ತೊಡಗಿಸಿಕೊಂಡಾಗ ಆಡಳಿತ ವರ್ಗದೊಂದಿಗೆ ಕೈಜೋಡಿಸಿದಾಗ ಯಾವುದೇ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

Best Mobiles in India

English summary
Now people can send info on a particular location where traffic jams occur through whats-app to 7259100100 and measures would be taken immediately.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X