Subscribe to Gizbot

ವಾಟ್ಸಾಪ್ ಸಂಪರ್ಕಕ್ಕೆ ನಿರ್ಬಂಧನೆ ಹೇಗೆ?

Written By:

ಮೆಸೇಜಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಬಳಕೆದಾರರನ್ನು ಹೊಂದಿ ವಿಖ್ಯಾತವಾಗಿರುವ ವಾಟ್ಸಾಪ್ ಸಾಮಾಜಿಕ ತಾಣದಲ್ಲಿ ತನ್ನದೇ ಪಡಿಯಚ್ಚನ್ನು ಉಂಟುಮಾಡುತ್ತಿದೆ. ಒಂದಿಲ್ಲೊಂದು ಸುಧಾರಣೆಗಳನ್ನು ಮಾಡುತ್ತಾ ಈ ತಾಣ ಇಂದು ಅದ್ವಿತೀಯ ರೀತಿಯಲ್ಲಿ ಮುನ್ನಡೆಯನ್ನು ಪಡೆದುಕೊಳ್ಳುತ್ತಿದೆ. ಇನ್ನು ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್, ಚಾಟ್ ವಿಶೇಷತೆ ಮೊದಲಾದ ಅಂಶಗಳನ್ನು ಸೇರಿಸಿಕೊಳ್ಳುವ ಮೂಲಕ ಇಂದು ಅತ್ಯುನ್ನತವಾಗಿ ಬೆಳೆಯುತ್ತಿದೆ.

ಓದಿರಿ: ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ಸ್: ಹೀಗೆ ಮಾಡಿ! ಎಂಜಾಯ್ ಮಾಡಿ!

ವಾಟ್ಸಪ್‌ನಲ್ಲಿ ಸಂಪರ್ಕಗಳನ್ನು ನಿರ್ಬಂಧಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿದ್ದು ನಿಮಗೆ ಬೇಡದೇ ಇರುವ ಸಂಪರ್ಕಗಳನ್ನು ನಿರ್ಬಂಧಿಸುವ ಮೂಲಕ ಇನ್ನಷ್ಟು ಆನಂದಮಯವಾಗಿ ವಾಟ್ಸಾಪ್ ಅನ್ನು ನಿಮಗೆ ಬಳಸಬಹುದಾಗಿದೆ.

ಓದಿರಿ: ನಿಮ್ಮನ್ನೇ ಖೈದಿಯನ್ನಾಗಿಸುವ ವಿಚಿತ್ರ ವಾಟ್ಸಾಪ್ ತಂತ್ರ

ಹಾಗಿದ್ದರೆ ಇಂದಿನ ಲೇಖನಲ್ಲಿ ವಾಟ್ಸಾಪ್‌ನಲ್ಲಿರುವ ಸಂಪರ್ಕಗಳನ್ನು ನಿರ್ಬಂಧಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ಅತಿ ಸರಳವಾಗಿರುವ ಈ 10 ವಿಧಾನಗಳು ನಿಮಗೆ ತುಂಬಾ ಸಹಕಾರಿ ಎಂದೆನಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೂರು ಬಟನ್‌ಗಳ ಮೆನು ಬಟನ್

3 ಡಾಟ್ ಸಿಂಬಲ್‌

ಮೊದಲಿಗೆ ವಾಟ್ಸಾಪ್ ಲಾಂಚ್ ಮಾಡಿಕೊಳ್ಳಿ ನಂತರ ಅದರಲ್ಲಿರುವ ಮೆನು ಕ್ಲಿಕ್ ಮಾಡಿ. ಸಾಮಾನ್ಯವಾಗಿ ಇದು 3 ಡಾಟ್ ಸಿಂಬಲ್‌ಗಳನ್ನು ಬಲ ಮೇಲ್ಭಾಗದಲ್ಲಿ ಹೊಂದಿರುತ್ತದೆ ಮತ್ತು ಕೆಳಭಾಗದಲ್ಲಿ ಮೂರು ಬಟನ್‌ಗಳ ಮೆನು ಬಟನ್ ಹೊಂದಿರುವವರಿಗೆ ಅಲ್ಲಿಂದ ಇದನ್ನು ಪ್ರವೇಶಿಸಬಹುದಾಗಿದೆ.

ಬಳಕೆದಾರ ಸೆಟ್ಟಿಂಗ್‌

ಸಲಹೆ: 2

ಮೆನು ಅಡಿಯಲ್ಲಿ ಬಳಕೆದಾರ ಸೆಟ್ಟಿಂಗ್‌ಗಳನ್ನು ಕಾಣಬಹುದಾಗಿದೆ.

ಪ್ರೈವಸಿ

ಸಲಹೆ: 3

ಸೆಟ್ಟಿಂಗ್ಸ್ ತಟ್ಟಿರಿ ಮತ್ತು ಪ್ರೈವಸಿ ಆಯ್ಕೆ ಕಂಡುಕೊಳ್ಳಿ ಹಾಗೂ ಆಯ್ಕೆಮಾಡಿ.

ಸಂಪರ್ಕಗಳ ಎಣಿಕೆ

ಸಲಹೆ: 4

ಪ್ರೈವಸಿ ಅಡಿಯಲ್ಲಿ ಒಮ್ಮೆ ಬಳಕೆದಾರ ಬಂದ ನಂತರ, ಈಗಾಗಲೇ ಬ್ಲಾಕ್ ಮಾಡಿರುವ ಸಂಪರ್ಕಗಳ ಎಣಿಕೆಯೊಂದಿಗೆ ಕೊನೆಯ ಆಯ್ಕೆ ಬ್ಲಾಕ್ ಮಾಡಿದ ಸಂಪರ್ಕಗಳಾಗಿರುತ್ತವೆ.

ಬ್ಲಾಕ್‌ಡ್ ಕಾಂಟ್ಯಾಕ್ಟ್

ಸಲಹೆ: 5

ಬ್ಲಾಕ್‌ಡ್ ಕಾಂಟ್ಯಾಕ್ಟ್ ಮೇಲೆ ಸ್ಪರ್ಶಿಸಿ.

ಬ್ಲಾಕ್ ಮಾಡಲು ಬಯಸಿರುವ ಸಂಪರ್ಕಗಳು

ಸಲಹೆ: 6

ನೀವು ಬ್ಲಾಕ್ ಮಾಡಲು ಬಯಸಿರುವ ಸಂಪರ್ಕಗಳನ್ನು ಇಲ್ಲಿ ಸೇರಿಸಿ.

ಲಾಸ್ಟ್ ಸೀನ್

ಸಲಹೆ: 7

ನೀವು ಬ್ಲಾಕ್‌ ಮಾಡಿದ ಬಳಕೆದಾರರು ನಂತರ ಸಂದೇಶ ಅಥವಾ ಪ್ರೊಫೈಲ್ ಫೋಟೋ ಇಲ್ಲವೇ ಲಾಸ್ಟ್ ಸೀನ್ ಅನ್ನು ನೋಡಲು ಸಾಧ್ಯವಿಲ್ಲ.

ಕಡೆಯ ಆಯ್ಕೆ

ಸಲಹೆ: 8

ಬಳಕೆದಾರರು, ನಿರ್ದಿಷ್ಟ ಸಂಪರ್ಕವನ್ನು ಆ ಸಂಪರ್ಕವನ್ನು ಸ್ಪರ್ಶಿಸುವ ಮೂಲಕ ಮತ್ತು ಮೆನುವನ್ನು ಕ್ಲಿಕ್ ಮಾಡುವ ಮೂಲಕ, ಮೋರ್ ಎಂದು ಹೇಳುವ ಕಡೆಯ ಆಯ್ಕೆಯನ್ನು ಆರಿಸುವ ಮೂಲಕ ತದನಂತರ ಪ್ರಥಮ ಆಯ್ಕೆ ಬ್ಲಾಕ್ ಎಂದಾಗಿರುತ್ತದೆ.

ಅನ್‌ಬ್ಲಾಕ್

ಸಲಹೆ: 9

ಇನ್ನು ಅನ್‌ಬ್ಲಾಕ್ ಮಾಡಲು ಸಂಪರ್ಕವನ್ನು ತಟ್ಟಿರಿ, ಮೆನು ಕ್ಲಿಕ್ ಮಾಡಿ ಮತ್ತು ಅನ್‌ಬ್ಲಾಕಿಂಗ್ ಆರಿಸಿ.

ಸಂಪರ್ಕ ಬ್ಲಾಕ್

ಸಲಹೆ: 10

ಈ ಸರಳ ವಿಧಾನಗಳ ಮೂಲಕ ವಾಟ್ಸಾಪ್‌ನಲ್ಲಿ ಸಂಪರ್ಕಗಳನ್ನು ನಿಮಗೆ ಬ್ಲಾಕ್ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
In this article we can see how to block whatsapp contacts in a simple manner. These tricks helps you to block your contacts in a easy manner without any disturbance.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot