ಬೆಂಗಳೂರಿನ ಚಿಪ್‌ನಿಂದ ಗೂಗಲ್ ಫೇಸ್‌ಬುಕ್‌ಗೆ ಭಾರೀ ಪೈಪೋಟಿ
ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಸಣ್ಣ ಚಿಪ್, ಪೋಸ್ಟೇಜ್ ಗಾತ್ರದಲ್ಲಿರುವ ಈ ಚಿಪ್ ಗ್ರಾಮೀಣ ಭಾಗದಲ್ಲಿ ದೊಡ್ಡ ಸಮಸ್ಯೆ ಎಂದೆನಿಸಿರುವ ಇಂಟರ್ನೆಟ್ ಸಂಪರ್ಕಕ್ಕೆ ಪರಿಹಾರವನ್ನು ಒದಗಿಸಲಿದೆ. ಅದರಲ್ಲೂ ಸಾಮಾಜಿಕ ದೈತ್ಯ ಗೂಗಲ್, ಫೇಸ್‌ಬುಕ್ ಮತ್ತು ಮೈಕ್ರೋಸಾಫ್ಟ್‌ಗೆ ದೊಡ್ಡ ಪೈಪೋಟಿಯನ್ನು ಉಂಟುಮಾಡಲಿದೆ.
ಓದಿರಿ: ದೇಶಕ್ಕೆ ವಿಶ್ವ ಮಾನ್ಯತೆ ತಂದುಕೊಟ್ಟ ಟಾಪ್ ಅನ್ವೇಷಣೆಗಳು
ಈ ಚಿಪ್ ಹೆಸರೇನು ಇದು ಹೇಗೆ ಕೆಲಸ ಮಾಡುತ್ತದೆ? ಅಂತೆಯೇ ಅತಿ ದೊಡ್ಡ ಟೆಕ್ ಕಂಪೆನಿಗಳಿಗೆ ಹೇಗೆ ಪೈಪೋಟಿಯನ್ನು ಒಡ್ಡಲಿದೆ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ಪೃಥ್ವಿ
ಚಿಪ್ ಹೆಸರು ಪೃಥ್ವಿ ಎಂದಾಗಿದ್ದು, ಟೆಲಿವಿಶನ್ ವೈಟ್ ಸ್ಪೇಸ್ ಸಿಸ್ಟಮ್ ಅನ್ನು ಇದು ಬಳಸುತ್ತದೆ ಅಥವಾ ವೇಸ್ಟ್ ಎಂದೆನಿಸಿರುವ ಸ್ಪೆಕ್ಟ್ರಮ್ ಬ್ಯಾಂಡ್ ವಿಡ್ತ್ ಅನ್ನು ಇದು ಬಳಸುತ್ತದೆ.

ಸಾಂಖ್ಯಾ ಲ್ಯಾಬ್ಸ್
ಸಾಂಖ್ಯಾ ಲ್ಯಾಬ್ಸ್ ಈ ಸಂಶೋಧನೆಯನ್ನು ಮಾಡಿದ್ದು, ಹೆಚ್ಚಿನ ಮನೆಗಳಿಗೆ ಇದು ಇಂಟರ್ನೆಟ್ ಕೊರತೆಯನ್ನು ನೀಗಿಸಲಿದೆ.

ಡಿಜಿಟಲ್ ಇಂಡಿಯಾ
ಸರಕಾರದ ಹೆಚ್ಚು ಮಹತ್ವಾಕಾಂಕ್ಷೆಯ 'ಡಿಜಿಟಲ್ ಇಂಡಿಯಾ' ಸಂಘಟನೆಗೆ ಪೂರಕವಾಗಿ ಹೆಚ್ಚಿನ ಸಂಸ್ಥೆಗಳು ತಮ್ಮ ನೆರವನ್ನು ನೀಡುತ್ತಿವೆ. ಇದೇ ಲಕ್ಷ್ಯವನ್ನಿಟ್ಟುಕೊಂಡು ಹೆಚ್ಚಿನ ಕಂಪೆನಿಗಳು ಕೆಲಸ ಮಾಡುತ್ತಿವೆ.

ಕನೆಕ್ಟೆವಿಟಿ ಪ್ರೊಗ್ರಾಮ್
ನಿಯಂತ್ರಕ ಅಧಿಕಾರಿ ವರ್ಗಗಳು ತಮ್ಮ ಕನೆಕ್ಟೆವಿಟಿ ಪ್ರೊಗ್ರಾಮ್‌ಗಳಿಗೆ ಈ ಸ್ಪೆಕ್ಟ್ರಮ್ ಅನ್ನು ಬಳಸಿಕೊಳ್ಳುವ ಯೋಜನೆಯಲ್ಲಿದೆ.

ಬ್ರಾಡ್‌ಬ್ಯಾಂಡ್
ಭಾರತವು ಈ ಕ್ರಾಂತಿಯನ್ನು ಟೆಕ್ನಾಲಜಿ ಮತ್ತು ಮಾರುಕಟ್ಟೆಗಳಲ್ಲಿ ಟಿವಿಗಾಗಿ ವೈಟ್ ಸ್ಪೇಸ್ ಆಧಾರಿತ ಬ್ರಾಡ್‌ಬ್ಯಾಂಡ್ ಡೆಲಿವರಿಗೆ ಬಳಸಿಕೊಳ್ಳಲಿದೆ.

ವೈರ್‌ಲೆಸ್ ಬ್ರಾಡ್‌ಬ್ಯಾಂಡ್
ರಿಮೋಟ್ ಏರಿಯಾಗಳಲ್ಲಿ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಅನ್ನು ಒದಗಿಸುವುದಕ್ಕಾಗಿ ಟಿವಿ ವೈಟ್ ಸ್ಪೇಸ್ ಅನ್ನು ಬಳಸಿ ಈ ಚಿಪ್ ಕೆಲಸ ಮಾಡುತ್ತದೆ.

ಆಂಟೆನಾ
ಟಿವಿ ಸ್ಪೇಸ್ ಎಂದರೆ ಸಕ್ರಿಯ ಟಿವಿ ಚಾನಲ್‌ಗಳಲ್ಲಿ ಬಳಸಲ್ಪಡದ ಸ್ಪೆಕ್ಟ್ರಮ್ ಅನ್ನು ಟಿವಿ ವೈಟ್ ಸ್ಪೇಸ್ ಎಂದು ಇಲ್ಲಿ ಉಲ್ಲೇಖಿಸಲಾಗಿದೆ. ಏರ್ ಟ್ರಾನ್ಸ್‌ಮಿಶನ್‌ನಲ್ಲಿ ಅಂದರೆ ಟಿವಿ ಟವರ್‌ಗಳು ಮತ್ತು ಮಹಡಿಯ ಮೇಲ್ಭಾಗದಲ್ಲಿ ಸ್ಥಾಪಿಸಲಾದ ಆಂಟೆನಾಗಳಲ್ಲಿ ಇದನ್ನು ಬಳಸಲಾಗುತ್ತದೆ.

400 ರಿಂದ 800MHZ
ಟಿವಿ ವೈಟ್ ಸ್ಪೇಸ್ ಸ್ಪೆಕ್ಟ್ರಮ್ ಅನ್ನು 400 ರಿಂದ 800MHZ ವರೆಗೆ ಇದು ಬಳಸಿಕೊಳ್ಳುತ್ತದೆ.

ಹೆಚ್ಚು ದೀರ್ಘ ರೇಂಜ್
ಆಂಟೆನಾದ ಎತ್ತರ ಮತ್ತು ಪವರ್ ಅನ್ನು ಆಧರಿಸಿ 10-15 ಕಿಮೀ ರೇಡಿಯಸ್ ಅನ್ನು ಇದು ಒದಗಿಸುತ್ತದೆ ಆದ್ದರಿಂದ ಇದು ಹೆಚ್ಚು ದೀರ್ಘ ರೇಂಜ್ ಅನ್ನು ಬಳಸಿಕೊಳ್ಳುವುದಿಲ್ಲ. ಇನ್ನು ಹೆಚ್ಚು ಶಕ್ತಿಯುತ ಮತ್ತು ಉದ್ದದ ಆಂಟೆನಾಗಳಿಂದ ಹೆಚ್ಚುವರಿಯಾಗುತ್ತದೆ.

ಯೋಜನೆಯನ್ನು ಕೈಗೆತ್ತಿಕೊಂಡಿದೆ
ಕಂಪೆನಿಯು ಕ್ಷೇತ್ರ ಟ್ರಯಲ್‌ಗಳನ್ನು ದೇಶಾದ್ಯಂತ ಹೊಂದಿಸಿದ್ದು ಐಐಟಿ ಬಾಂಬೆ, ಐಐಟಿ ದೆಹಲಿ ಮತ್ತು ಐಐಟಿ ಹೈದ್ರಾಬಾದ್‌ನ ಸಂಯೋಜನೆಯೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.


Click it and Unblock the Notifications








