Subscribe to Gizbot

ದೇಶಕ್ಕೆ ವಿಶ್ವ ಮಾನ್ಯತೆ ತಂದುಕೊಟ್ಟ ಟಾಪ್ ಅನ್ವೇಷಣೆಗಳು

Written By:

ಅನ್ವೇಷಣೆಗಳನ್ನು ಯಾರು ಬೇಕಾದರೂ ಮಾಡಬಹುದು. ವಯಸ್ಸಿನ ಹಂಗಿಲ್ಲದೆ ವಿಷಯವನ್ನು ಅರಸುತ್ತಾ ಅದರಲ್ಲಿ ಸಫಲತೆಯನ್ನು ಪಡೆದುಕೊಳ್ಳುವುದಕ್ಕೆ ಪ್ರತ್ಯೇಕತೆ ಇರಬೇಕು.

ಓದಿರಿ: ಕೈತುಂಬಾ ಸಂಬಳ, ಆರಾಮ ಉದ್ಯೋಗಕ್ಕಾಗಿ 10 ಟೆಕ್‌ ಕಂಪನಿಗಳು

ಸೂಕ್ಷ್ಮ ಜ್ಞಾನದ ಜೊತೆಗೆ ಅವಿರತ ಶ್ರಮ ಇಂತಹ ಸಾಧನೆಗೆ ಪೂರಕವಾಗಿ ನಿಲ್ಲುತ್ತದೆ. ಅಂತಹ ಅಂಶಗಳನ್ನೇ ಇಂದಿನ ನಮ್ಮ ಲೇಖನದಲ್ಲಿ ನಾವು ನಿಮ್ಮ ಮುಂದಿಡುತ್ತಿದ್ದೇವೆ. ಇಂತಹ ಯೋಚನೆಗಳ ಸಫಲತೆಯ ಪರಿಣಾಮವೇ ಇಂದು ಸಾಮಾನ್ಯರೂ ಅಸಮಾನ್ಯರು ವಿಶ್ವ ಮಾನ್ಯತೆಯನ್ನು ಪಡೆದುಕೊಂಡಿದ್ದಾರೆ.

ಓದಿರಿ: ಜಾಲತಾಣದಲ್ಲಿ ಸುಂಟರಗಾಳಿಯ ಎಬ್ಬಿಸಿದ ಸುಂದರಿ ಸಾಯಾ

ಇಂದಿನ ಲೇಖನದಲ್ಲಿ ಅಂತಹ ಸ್ಫೂರ್ತಿ ಸೆಲೆಯಾದ ಹೊಸ ಪ್ರತಿಭೆಗಳ ಪರಿಚಯವನ್ನು ನಾವಿಂದು ನಿಮಗೆ ಮಾಡಿಕೊಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅನಿರುದ್ ಶರ್ಮ

ಅಂಧರಿಗಾಗಿ ವಿಶೇಷವಾದ ಶೂ

27 ವರ್ಷದ ಅನಿರುದ್ ಶರ್ಮ ಅಂಧರಿಗಾಗಿ ವಿಶೇಷವಾದ ಶೂವನ್ನು ಸಿದ್ಧಪಡಿಸಿದ್ದು 2012 ರ ಇನೋವೇಟರ್ ಆಫ್ ದ ಇಯರ್' ಪ್ರಶಸ್ತಿಯನ್ನು ತಂದುಕೊಟ್ಟಿದೆ. ಅಂದರಿಗೆ ಸರಿಯಾದ ಮಾರ್ಗದ ಅರಿವನ್ನು ಈ ಶೂ ಮಾಡಿಕೊಡುತ್ತದೆ. ಶೂನಲ್ಲಿರುವ ವೈಬ್ರೇಶನ್ ಅಂಧರಿಗೆ ದಾರಿ ತೋರಿಸಲು ನೆರವನ್ನು ನೀಡುತ್ತದೆ.

ಶುಭಮ್ ಬ್ಯಾನರ್ಜಿ

ಕಡಿಮೆ ವೆಚ್ಚದ ಬ್ರೈಲ್ ಪ್ರಿಂಟರ್

12 ವರ್ಷದ ಶುಭಮ್ ಬ್ಯಾನರ್ಜಿ ಕಡಿಮೆ ವೆಚ್ಚದ ಬ್ರೈಲ್ ಪ್ರಿಂಟರ್ ಅನ್ನು ಸಿದ್ಧಪಡಿಸಿದ್ದು ಬ್ರೈಗೊ ಎಂಬ ಹೆಸರನ್ನು ಶುಭಮ್‌ಗೆ ಇದು ತಂದುಕೊಟ್ಟಿದೆ.

ಶೇರನ್ ಬೈಸಿಲ್

ಅಪ್ಲಿಕೇಶನ್ ಅಭಿವೃದ್ಧಿ

ಇವರು ಒಂದು ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು ಕಿವುಡರು ಈ ಅಪ್ಲಿಕೇಶನ್ ಬಳಸಿ ಮತ್ತೊಬ್ಬರೊಂದಿಗೆ ಸುಲಭ ಸಂವಹನವನ್ನು ಮಾಡಬಹುದಾಗಿದೆ. 'ಆಪ್ ಆಫ್ ದ ಮಂತ್' ಪ್ರಶಸ್ತಿಯನ್ನು ಇದು ಅವರಿಗೆ ತಂದುಕೊಟ್ಟಿದೆ.

ಗೌತಮ್ ಕುಮಾರ್

ಅಲಾರ್ಮ್

ಗ್ಯಾಸ್‌ನಿಂದ ಲೀಕ್ ಆಗುವ ವಾಸನೆಯನ್ನು ಪತ್ತೆಹಚ್ಚಿ ಎಚ್ಚರಿಕೆಯನ್ನು ರವಾನಿಸುವ ಅಲಾರ್ಮ್ ಅನ್ನು ಇದಕ್ಕೆ ನೋಂದಾವಣೆ ಮಾಡಲಾಗಿರುವ ಐದು ಮೊಬೈಲ್‌ಗಳಿಗೆ ಸಿಮ್ ಕಾರ್ಡ್ ಮೂಲಕ ಕಳುಹಿಸುವ ವ್ಯವಸ್ಥೆಯನ್ನು ಗೌತಮ್ ಕುಮಾರ್ ಕಂಡುಹಿಡಿದಿದ್ದಾರೆ.

ದೀಪಕ್ ರವೀಂದ್ರನ್

ಫೀಚರ್ ಫೋನ್‌ಗಳಿಗೆ ಇಂಟರ್ನೆಟ್ ಶಕ್ತಿ

ದೀಪಕ್ ರವೀಂದ್ರನ್ ಫೀಚರ್ ಫೋನ್‌ಗಳಿಗೆ ಇಂಟರ್ನೆಟ್ ಶಕ್ತಿಯನ್ನು ನೀಡುವ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದಾರೆ.

ಟ್ರೆಕ್ ಟೊ ಸ್ಟಾರ್ಟಪ್

ಸಾಹಸಿಗಳಿಗಾಗಿ ಒನ್ ಸ್ಟೆಪ್ ಡೆಸ್ಟಿನೇಶನ್

ಟ್ರೆಕ್ ಟೊ ಎಂಬ ಸ್ಟಾರ್ಟಪ್ ಅನ್ನು ಆರಂಭಿಸಿದ್ದು ಭಾರತದಲ್ಲಿ ನಡೆಯುವ ಎಲ್ಲಾ ಸಾಹಸಕ್ಕಾಗಿ ಮಾಹಿತಿ ಪೋರ್ಟಲ್ ಇದಾಗಿದೆ.

ಪಿಯೂಶ್

ಎನ್‌ಜಿಒ ಫಂಡಿಂಗ್

ಪಿಯೂಶ್ ಸೃಷ್ಟಿಸಿರುವ ಸಂಸ್ಥೆಯು ಇಂಟರ್ನೆಟ್ ಮೂಲಕ ಎನ್‌ಜಿಒಗಳಿಗೆ ಸಹಾಯ ಹಸ್ತವನ್ನು ನೀಡುತ್ತಿದೆ.

ಹರಿತ್ ಹಾಗೂ ಚಿಂತನ್

ಇಲೆಕ್ಟ್ರಿಸಿಟಿ ಬಳಕೆ

ಹರಿತ್ ಹಾಗೂ ಚಿಂತನ್ ಸಹೋದರರು ತಮ್ಮ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡುತ್ತಿರುವಾಗ ಇಲೆಕ್ಟ್ರಿಕ್ ಶಕ್ತಿಯನ್ನು ಬಳಸಿ ಕೈಗೊಳ್ಳಬಹುದಾದ ಯೋಜನೆಗೆ ತಮ್ಮನ್ನು ತೊಡಗಿಸಿಕೊಂಡರು. ಅದುವೇ ಇಕೊಲಿಬ್ರಿಯಮ್ ಸ್ಥಾಪನೆಗೆ ಪೂರಕವಾಯಿತು.

ಮನ್‌ಸುಕ್ ಭಾಯ್ ಪ್ರಜಾಪತಿ

ಮಿಟ್ಟಿ ಕೂಲ್

ಮನ್‌ಸುಕ್ ಭಾಯ್ ಪ್ರಜಾಪತಿ ಮಿಟ್ಟಿಕೂಲ್ ಮಣ್ಣಿನ ಪ್ರಿಡ್ಜ್ ಅನ್ನು ಅನ್ವೇಷಿಸಿದ್ದು, ಕರೆಂಟ್ ಇಲ್ಲದೆಯೇ ಈ ಫ್ರಿಡ್ಜ್ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ.

ಹರ್ಷಾ ಸೋಂಗ್ರಾ

ಬುದ್ಧಿಮಾಂದ್ಯತೆ ಪತ್ತೆಹಚ್ಚುವ ಅಪ್ಲಿಕೇಶನ್

ಹರ್ಷಾ ಸೋಂಗ್ರಾ ಬಾಲ್ಯದಲ್ಲಿಯೇ ಡೈಸಾಪ್ರಾಕ್ಸಿಯಾಗೆ ಒಳಗಾಗಿದ್ದ ಹರ್ಷಾ ತಮ್ಮ ಹದಿನೆಂಟರ್ ಹರೆಯದಲ್ಲಿಯೇ ಮೈ ಚೈಲ್ಡ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದರು. ಇದೀಗ ಪೋಷಕರಿಗೆ ತಮ್ಮ ಮಕ್ಕಳಲ್ಲಿರುವ ಬುದ್ಧಿಮಾಂದ್ಯತೆಯನ್ನು ಪತ್ತೆಹಚ್ಚುವ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Let's face it. To a certain extent, we all shy away from applying a new thought process to a problem at hand. In our search for effectiveness, we think that the solution should must definitely be something that has already been tried and tested before.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot