Just In
Don't Miss
- Finance
ಚಿನ್ನದ ಬೆಲೆ ಇಳಿಕೆ: ಏಪ್ರಿಲ್ 15ರ ಬೆಲೆ ಹೀಗಿದೆ
- Automobiles
ಬಿಎಂಡಬ್ಲ್ಯು ಐಷಾರಾಮಿ ಕಾರು ಖರೀದಿಸಿದ ಜೋಕರ್ ಚಿತ್ರದ ನಟಿ
- Movies
ರಾಕಿ ಭಾಯ್ ತಾಯಿ ಈಗ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ನಾಯಕಿ
- Sports
ಆರೆಂಜ್ ಕ್ಯಾಪ್ ಬಗ್ಗೆ ಕೊಹ್ಲಿ ನೀಡಿದ್ದ ಎಚ್ಚರಿಕೆಯನ್ನು ಬಿಚ್ಚಿಟ್ಟ ರಿಯಾನ್ ಪರಾಗ್
- News
ಕೇಂದ್ರದಿಂದ ಮತ್ತೊಂದು ಉತ್ತೇಜನ ಪ್ಯಾಕೇಜ್ ಘೋಷಣೆ ಸಾಧ್ಯತೆ
- Lifestyle
ರಾಮನವಮಿ 2021: ದಿನಾಂಕ, ಇತಿಹಾಸ ಹಾಗೂ ಮಹತ್ವ ಇಲ್ಲಿದೆ
- Education
Kalaburagi Mahanagara Palike Recruitment 2021: 219 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟಿಕ್‌ಟಾಕ್ ಖಾತೆ ತೆರೆದ ಬೆಂಗಳೂರು ಪೋಲಿಸ್ ಇಲಾಖೆ!
ಚೀನಾ ಮೂಲದ ಟಿಕ್‌ಟಾಕ್ ಸದ್ಯ ಅತೀ ವೇಗವಾಗಿ ಮುನ್ನುಗುತ್ತಿರುವ ಸಾಮಾಜಿಕ ಜಾಲತಾಣವಾಗಿದೆ. ಈ ಟಿಕ್‌ಟಾಕ್ ಅಪ್ಲಿಕೇಶನ್ ಶಾರ್ಟ್ ವಿಡಿಯೊ ಮೇಕಿಂಗ್ ಪ್ಲಾಟ್‌ಫಾರ್ಮ್ ಆಗಿದ್ದು, ಅತೀ ಹೆಚ್ಚಿನ ಬಳಕೆದಾರರು ಟಿಕ್‌ಟಾಕ್ ಸೆಳೆದಿದೆ. ಎಲ್ಲ ವಯೋಮಾನದವರನ್ನು ಆಕರ್ಷಿಸಿರುವ ಈ ಕಿರು ವಿಡಿಯೊ ಅಪ್ಲಿಕೇಶನ್ ಟಿಕ್‌ಟಾಕ್‌ನಲ್ಲಿ ಬೆಂಗಳೂರಿನ ಪೋಲಿಸರು ಸಹ ಅಧಿಕೃತವಾಗಿ ಅಕೌಂಟ್ ತೆರೆದಿದ್ದಾರೆ.

ಹೌದು, ಇತ್ತೀಚಿಗೆ ಬೆಂಗಳೂರು ಪೋಲಿಸ್ ಇಲಾಖೆ ಟಿಕ್‌ಟಾಕ್‌ನಲ್ಲಿ ಖಾತೆಯನ್ನು ತೆರೆದಿದ್ದು, ಆ ಬಗ್ಗೆ ಶುಕ್ರವಾರ (ಫೆ.7) ಅಧಿಕೃತವಾಗಿ ಘೋಷಿಸಿದೆ. ಟಿಕ್‌ಟಾಕ್ ಆಪ್‌ನ ಹೆಚ್ಚಿನ ಬಳಕೆದಾರರನ್ನು ಹೊಂದಿದ್ದು, ಅತೀ ಹೆಚ್ಚಿನ ಬಳಕೆದಾರರು ಟಿಕ್‌ಟಾಕ್ ವಿಡಿಯೊ ವೀಕ್ಷಣೆಯಲ್ಲಿ ಬ್ಯುಸಿ ಆಗಿರುತ್ತದೆ. ಈ ನಿಟ್ಟಿನಲ್ಲಿ ಟಿಕ್‌ಟಾಕ್ ಮೂಲಕ ಹೆಚ್ಚಿನ ಸ್ಥಳಿಯ ಜನರನ್ನು ತಲುಪುವ ಉದ್ದೇಶವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

ಸಾರ್ಜಜನಿಕರೊಂದಿಗೆ ಸಂಪರ್ಕ ಸಾಧಿಸಲು ಸಾಮಾಜಿಕ ಜಾಲತಾಣಗಳು ಅತ್ಯಂತ ಪ್ರಭಾವಶಾಲಿ ತಾಣಗಳು ಆಗಿವೆ. ಅದಕ್ಕಾಗಿ ಬೆಂಗಳೂರು ನಗರ ಪೋಲಿಸ್ ಇಲಾಖೆ ಟಿಕ್‌ಟಾಕ್ ಆಪ್‌ನಲ್ಲಿ ಅಧಿಕೃತವಾಗಿ ಖಾತೆ ತೆರೆದಿದೆ. ಮನರಂಜನೆಯೊಂದಿಗೆ ಮಾಹಿತಿ ಪೂರ್ಣ ವಿಡಿಯೊ ಕಂಟೆಂಟ್ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಇದೆ ಎಂದು ಬೆಂಗಳೂರು ಪೋಲಿಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದ್ದಾರೆ.

ಟ್ರಾಫಿಕ್ ಸಿಗ್ನಲ್ ಸೇರಿದಂತೆ ಸ್ಥಳಿಯ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೊ ಕಂಟೆಂಟ್‌ಗಳನ್ನು ಮಾಡಿ ಪೋಸ್ಟ್ ಮಾಡಲಿದೆ. ಈಗಾಗಲೇ ಟಿಕ್‌ಟಾಕ್ ಆಪ್‌ನಲ್ಲಿ ಕೇರಳ ಪೋಲಿಸ್ ಇಲಾಖೆ ಮತ್ತು ಉತ್ತರಖಂಡ್ ಪೋಲಿಸ್ ಇಲಾಖೆಗಳು ಅಧಿಕೃತವಾಗಿ ಖಾತೆಯನ್ನು ಹೊಂದಿವೆ. ಅದೇ ರೀತಿ ಈಗ ಬೆಂಗಳೂರು ನಗರ ಪೋಲಿಸ್ ಇಲಾಖೆಯು ಸಹ ಟಿಕ್‌ಟಾಕ್ ವಿಡಿಯೊ ಕಂಟೆಂಟ್ ಪ್ಲಾಟ್‌ಫಾರ್ಮ್‌ನಲ್ಲಿ ಅಕೌಂಟ್ ಓಪೆನ್ ಮಾಡಿದೆ.

ಚೀನಾ ಮೂಲದ ಬೈಟ್‌ಡ್ಯಾನ್ಸ್ ಸಂಸ್ಥೆಯ ಒಡೆತನದ ಟಿಕ್‌ಟಾಕ್ ಆಪ್ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಸಾಧಿಸಿದ ಸೋಶಿಯಲ್ ಅಪ್ಲಿಕೇಶನ್ ಆಗಿದೆ. ಹಾಗೆಯೇ ಈ ಆಪ್ ಇತ್ತೀಚಿಗೆ ಅತೀ ಹೆಚ್ಚು ಡೌನ್‌ಲೋಡ್ ಕಂಡಿದ್ದು, ನೂತನ ಅಪ್‌ಡೇಟ್‌ಗಳನ್ನು ಅಳವಡಿಸಿಕೊಂಡಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999