India

ಪಾರ್ಟಿಗಾಗಿ ಆನ್‌ಲೈನ್‌ನಲ್ಲಿ ಎಣ್ಣೆ ಆರ್ಡರ್ ಮಾಡಿ 1.27 ಲಕ್ಷ ಕಳೆದುಕೊಂಡ ಟೆಕ್ಕಿ!

|

ಪ್ರಸ್ತುತ ಆನ್‌ಲೈನ್ ವಂಚನೆಯ ಘಟನೆಗಳ ಸಂಖ್ಯೆ ಹೆಚ್ಚತ್ತಲೇ ಇವೆ. ವಂಚನೆಗೆ ಒಳಾಗಾಗುವವರಲ್ಲಿ ಬಹುತೇಕರು ವಿದ್ಯಾವಂತರೇ ಅನ್ನೊದು ಅಚ್ಚರಿ ಅನಿಸುತ್ತದೆ. ಯಾರಿಗೂ ಓಟಿಪಿ, ಪಾಸ್‌ವರ್ಡ, ಯುಪಿಐ ಪಿನ್ ಮಾಹಿತಿಗಳನ್ನು ಶೇರ್ ಮಾಡಬೇಡಿ ಎನ್ನುವ ಮೆಸೆಜ್‌ಅನ್ನು ಬ್ಯಾಂಕ್‌ಗಳು ತಿಳಿಸಿದರೂ ಸಹ ಡೆಬಿಟ್/ಕ್ರೆಡಿಟ್ ಕಾರ್ಡ್‌, ಓಟಿಪಿ ಮತ್ತು ಪಿನ್‌ ಮಾಹಿತಿ ನೀಡಿ ಆನ್‌ಲೈನ್ ವಂಚಕರ ಬಲೆಗೆ ಸಿಕ್ಕಿಬಿಳುತ್ತಾರೆ.

ಬೆಂಗಳೂರಿನ ವ್ಯಕ್ತಿ

ಇದೇ ರೀತಿ ಬೆಂಗಳೂರಿನ ವ್ಯಕ್ತಿಯೊಬ್ಬರು ಗೇಟ್‌ ಟು ಗೇದರ್ ಪಾರ್ಟಿಗಾಗಿ ಆನ್‌ಲೈನ್‌ನಲ್ಲಿ ಲಿಕ್ಕರ್ ತರಿಸಲು ಹೋಗಿ ಸೈಬರ್ ವಂಚಕರಿಗೆ ಜಾಲಕ್ಕೆ ಸಿಕ್ಕು ಬರೋಬ್ಬರಿ 1.27 ಲಕ್ಷ ಕಳೆದುಕೊಂಡಿರುವ ಘಟನೆ ಜ19.ರಂದು ನಡೆದಿದೆ. ಹೌದು, ಬೆಂಗಳೂರಿನ ಯಲೆನ್‌ಹಳ್ಳಿ ನಿವಾಸಿ ಅರ್ಜುನ್ ಜಗನ್ನಾಥನ್ ಎಂಬುವರೇ ಹಣ ಕಳೆದುಕೊಂಡವರು. 40 ವರ್ಷ ವಯಸ್ಸಿನ ಅರ್ಜುನ್ ಅವರು ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜನಿಯರ್ ಆಗಿದ್ದಾರೆ.

ಗೇಟ್‌ ಟು ಗೇದರ್

ಅರ್ಜುನ್ ಅವರು ಜ.19 ರಂದು ಅವರ ತಾಯಿ ಮನೆಯಲ್ಲಿ ಗೇಟ್‌ ಟು ಗೇದರ್ ಪಾರ್ಟಿ ವ್ಯವಸ್ಥೆ ಮಾಡಿದ್ದಾರೆ. ಪಾರ್ಟಿಗೆ ಆನ್‌ಲೈನ್‌ನಲ್ಲಿಯೇ ಲಿಕ್ಕರ್ ತರಿಸಲು ಮುಂದಾದ ಅವರು, ಆನ್‌ಲೈನ್‌ನಲ್ಲಿ ಲಿಕ್ಕರ್ ಹೋಮ್‌ ಡೆಲಿವರಿ ಮಾಡುವ ಔಟ್‌ಲೆಟ್‌ ಹುಡುಕಿದ್ದಾರೆ. ಆಗ ಕೊತ್ನೂರ್‌ ದಿಣ್ಣೆಯ ಹತ್ತಿರ ಲಿಕ್ಕರ್ ಶಾಪ್‌ವೊಂದರ ನಂಬರ್ ಕಾಣಿಸಿದೆ. ಆ ನಂಬರ್‌ಗೆ ಕರೆ ಮಾಡಿ ಸುಮಾರು 1,500ರೂ. ಎಣ್ಣೆ ಆರ್ಡರ್ ಮಾಡಿದ್ದಾರೆ. ಕರೆಯಲ್ಲಿ ಮಾತನಾಡಿದ ಆ ವ್ಯಕ್ತಿ ಕ್ಯಾಶ್‌ಆನ್‌ ಡೆಲಿವರಿ ಆಯ್ಕೆ ಇಲ್ಲ, ಆನ್‌ಲೈನ್ ಪೇಮೆಂಟ್ ಮಾಡಬೇಕು ಎಂದಿದ್ದಾನೆ.

ಕ್ರೆಡಿಟ್ ಕಾರ್ಡ್

ಅದರಂತೆ ಅರ್ಜುನ್ ಅವರು ಕ್ರೆಡಿಟ್ ಕಾರ್ಡ್ ಮಾಹಿತಿ ಹೇಳಿದ್ದಾರೆ, ನಂತರ ಆ ವ್ಯಕ್ತಿ ಪೇಮೆಂಟ್ ಪೂರ್ಣಗೊಳಿಸಲು ಓಟಿಪಿ ನಂಬರ್ ತಿಳಿಸಿ ಅಂತಾ ಕೇಳಿದ್ದಾರೆ. ಓಟಿಪಿ ತಿಳಿಸಿದ ನಂತರ ಅರ್ಜುನ್ ಖಾತೆಯಿಂದ 1,500ರೂ ಕಡಿತವಾಗಿದೆ. ಆಗ ಚಾಲಾಕಿ ಬುದ್ಧಿ ತೋರಿದ ಆ ವ್ಯಕ್ತಿ ಓಟಿಪಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಇನ್ನೊಮ್ಮೆ ಓಟಿಪಿ ತಿಳಿಸಿ ಎಂದಿದ್ದಾನೆ. ಅದರಂತೆ ಮತ್ತೊಮ್ಮೆ ಶೇರ್ ಮಾಡಿದಾಗ 6000ರೂ ಡೆಬಿಟ್ ಆಗಿದೆ.

QR ಕೋಡ್ ಸ್ಕ್ಯಾನ್

ಹೆಚ್ಚುವರಿ ಡೆಬಿಟ್ ಆದ ಹಣವನ್ನು ಮರಳಿ ಟ್ರಾನ್ಸ್‌ಫರ್ ಮಾಡುವುದಾಗಿ ಹೇಳಿದ ಆ ವ್ಯಕ್ತಿ ಓಟಿಪಿ ನಂಬರ್ ತಿಳಿಸುವಂತೆ ಕೇಳಿದ್ದಾನೆ. ಅವನ ಮಾತಂತೆ ಅರ್ಜುನ್ ಓಟಿಪಿ ಶೇರ್ ಮಾಡುತ್ತಾ ಹೋಗಿದ್ದಾರೆ. ವಂಚಕರು ಹಂತ ಹಂತವಾಗಿ ಹಣ ದೋಚಿದ್ದಾರೆ ಅಲ್ಲದೇ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಯುಪಿಐ ಲಿಂಕ್ ಹೊಂದಿರುವ ಸೇವಿಂಗ್ ಬ್ಯಾಂಕ್ ಖಾತೆಯಿಂದಲು 49,001ರೂ ದೋಚಿದ್ದಾರೆ. ಹೀಗೆ ಒಟ್ಟು 1.27 ಲಕ್ಷ ವಂಚನೆ ನಡೆಸಿದ್ದಾರೆ.

ಕ್ರೆಡಿಟ್ ಕಾರ್ಡ್‌ ಬ್ಲಾಕ್

ಮೋಸ ಹೋಗಿರುವುದು ಗೊತ್ತಾದ ತಕ್ಷಣಕ್ಕೆ ಕ್ರೆಡಿಟ್ ಕಾರ್ಡ್‌ ಬ್ಲಾಕ್ ಮಾಡಿಸಲು ಬ್ಯಾಂಕ್‌ಗೆ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಆದರೆ ಕ್ರೆಡಿಟ್ ಕಾರ್ಡ್‌ ಮತ್ತು ಯುಪಿಐ ಟ್ರಾನ್ಸಾಕ್ಶನ್ ತಡೆಹಿಡಿಯಲು ಬರೊದಿಲ್ಲ ಎಂದಿದ್ದಾರೆ. ಆಗ ಅರ್ಜುನ್ ಅವರು ಘಟನೆಯ ಬಗ್ಗೆ ಪೋಲಿಸರಿಗೆ ದೂರು ನೀಡಿದ್ದಾರೆ.

Most Read Articles
Best Mobiles in India

English summary
Arjun Jagannathan, a resident of Yelenahalli, stated in a police complaint that he had been at his mother’s house for a get-together on January 19 and wanted to buy liquor online. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X