ಉಬರ್ ಹೇಳುತ್ತಿದೆ ಬೆಂಗಳೂರಿಗರು ಮರೆಗುಳಿಗಳೆಂದು..!!!!

Written By:

ದೇಶ-ವಿದೇಶದ ಹಲವಾರು ಪ್ರಮುಖ ನಗರಗಳಲ್ಲಿ ಆಪ್ ಆಧಾರಿತ ಕ್ಯಾಬ್ ಸೇವೆಯನ್ನು ನೀಡುತ್ತಿರುವ ಉಬರ್ ಮಾಹಿತಿಯೊಂದನ್ನು ಹೊರ ಹಾಕಿದ್ದು, ಭಾರತೀಯರು ಕ್ಯಾಬ್‌ಗಳಲ್ಲಿ ತಮ್ಮ ವಸ್ತುಗಳನ್ನು ಮರೆತು ಬಿಟ್ಟು ಹೊಗುವುದರಲ್ಲಿ ಜಗತ್ತಿನಲ್ಲಿ ಮೊದಲಿಗರಾಗಿದ್ದಾರೆ, ಅದರಲ್ಲೂ ಬೆಂಗಳೂರಿಗರು ಕ್ಯಾಬ್‌ನಲ್ಲಿ ತಮ್ಮ ವಸ್ತುಗಳನ್ನು ಮರೆತು ಹೋಗುವುದರಲ್ಲಿ ಮುಂದಿದ್ದಾರೆ ಎಂದು ತಿಳಿಸಿದೆ.

ಉಬರ್ ಹೇಳುತ್ತಿದೆ ಬೆಂಗಳೂರಿಗರು ಮರೆಗುಳಿಗಳೆಂದು..!!!!

ಓದಿರಿ: ಪ್ರೈಮ್ ಸದಸ್ಯತ್ವಕ್ಕೆ ನಾಳೆ ಕೊನೆದಿನ: ಯಾಕೆ ಪ್ರೈಮ್ ಸದಸ್ಯತ್ವ ಬೇಕು...? ಜಿಯೋ ಯಾಕೆ ಬೆಸ್ಟ್‌..?

ಉಬರ್ ಲಾಸ್ಟ್ ಅಂಡ್ ಫೌಂಡ್ ಸೇವೆಯನ್ನು ನೀಡುತ್ತಿದ್ದು, ಲಾಸ್ಟ್ ಅಂಡ್ ಫೌಂಡ್ ಅಂಕಿ-ಅಂಶಗಳ ತುಲನೆ ಮಾಡಿ ಮಾಹಿತಿಯನ್ನು ನೀಡಿರುವ ಉಬರ್, ಭಾರತೀಯರು ಶುಕ್ರವಾರ, ಶನಿವಾರ ಮತ್ತು ಭಾನುವಾರ ಕ್ಯಾಬ್‌ಗಳಲ್ಲಿ ಪ್ರಯಾಣ ಮಾಡುವಾಗ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ವಸ್ತುಗಳನ್ನು ಕ್ಯಾಬ್‌ನಲ್ಲಿ ಮರೆತು ಹೋಗುತ್ತಾರೆ ಎಂದು ತಿಳಿಸಿದೆ.

ಕ್ಯಾಬ್‌ಗಳಲ್ಲಿ ಮರೆತು ಹೋಗುವ ವಸ್ತುಗಳಲ್ಲಿ ಕೀಬೋರ್ಡ್, ನಾಯಿಮರಿಗಳು, ವಾಚ್, ಶೂ, ಚಪ್ಪಲಿಗಳು, ಮದ್ಯದ ಬಾಟಲಿಗಳು, ತರಕಾರಿ ಬ್ಯಾಗ್, ದಿನಸಿ ಬ್ಯಾಗ್‌ಗಳು, ಕ್ರಿಕೆಟ್ ಬ್ಯಾಡ್‌ಗಳು, ಮೊಬೈಲ್‌ಗಳು, ಪೆನ್‌ಗಳು ಹೀಗೇ ಎಲ್ಲಾ ಮಾದರಿಯ ವಸ್ತುಗಳನ್ನು ಬಿಟ್ಟುಹೋಗುತ್ತಾರೆ ಎಂದು ಹೇಳಿದೆ. ಅಲ್ಲದೇ ಬೆಂಗಳೂರಿನ ವ್ಯಕ್ತಿಯೊಬ್ಬರು ಊಬರ್‌ನಲ್ಲಿ 15 ಲಕ್ಷ ಚೆಕ್‌ಅನ್ನು ಬಿಟ್ಟು ಹೋಗಿದ್ದರಂತೆ.

ಉಬರ್ ಹೇಳುತ್ತಿದೆ ಬೆಂಗಳೂರಿಗರು ಮರೆಗುಳಿಗಳೆಂದು..!!!!

ಓದಿರಿ: ಮೈಕ್ರೋಮ್ಯಾಕ್ಸ್ ಡ್ಯುಯಲ್ 5 ಫೋನಿನಲ್ಲಿದೆ ಮೂರು 13 MP ಕ್ಯಾಮೆರಾಗಳು..!!

ಇದಲ್ಲದೇ ಇನ್ನು ಅನೇಕ ವಸ್ತುಗಳನ್ನು ಮರೆತು ಹೋಗುತ್ತಾರೆ ಎಂದು ತಿಳಿಸಿದೆ. ಏರ್‌ ಟಿಕೇಟ್‌ಅನ್ನು ಕ್ಯಾಬ್‌ನಲ್ಲೇ ಬಿಟ್ಟು ಹೊದವರು ಇದ್ದಾರೆ. ಹೊಸದಾಗಿ ಖರೀದಿಸಿದ ಬಟ್ಟೆಯನ್ನು ಬಿಟ್ಟು ಹೋಗಿದ್ದಾರೆ. ಹೀಗೆ ಪ್ರಯಾಣಕರು ಬಿಟ್ಟು ಹೋದ ಅವರ ವಸ್ತುಗಳನ್ನು ಮತ್ತೆ ಹಿಂದಿರುಗಿಸುವ ಸಲುವಾಗಿಯೇ ಉಬರ್ ಲಾಸ್ಟ್ ಅಂಡ್ ಫೌಂಡ್ ಸೇವೆಯನ್ನು ನೀಡುತ್ತಿದೆ ಎನ್ನಲಾಗಿದೆ.

Read more about:
English summary
According to Uber, out of all the cities where its services are available in India, Bengaluru is the most forgetful city.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot