Subscribe to Gizbot

ವೇಗವಾಗಿ ಬೆಳೆಯುತ್ತಿರುವ ಟೆಕ್ ನಗರ: ಬೆಂಗಳೂರಿಗೆ 2 ನೇ ಸ್ಥಾನ

Written By:

ಭಾರತದಲ್ಲಿ ಸಿಲಿಕಾನ್ ನಗರಿ ಬೆಂಗಳೂರನ್ನು ಸ್ಟಾರ್ಟಪ್‌ಗಳ ಹರಿಕಾರ ಎಂದೇ ಗುರುತಿಸಿದೆ. ಎರಡು ವರ್ಷಗಳಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಮಹತ್ತರ ಅಭಿವೃದ್ಧಿಯನ್ನು ಕಂಡುಕೊಂಡಿರುವ ಉದ್ಯಾನ ನಗರಿ ತಾಂತ್ರಜ್ಞರಿಗೆ ಉತ್ತಮ ಭವಿಷ್ಯವನ್ನು ಒದಗಿಸುತ್ತಿದೆ.

ಓದಿರಿ: ನಮ್ಮ ಊರು ಬೆಂಗಳೂರಿಗೆ ವಿಶ್ವದಲ್ಲೇ ಮಾನ್ಯತೆ

ಇಲ್ಲಿ ಸರಿಸುಮಾರು 14,000 ದಿಂದ 19,000 ದಷ್ಟು ಟೆಕ್ ಕಚೇರಿಗಳಿದ್ದು, 1.7 ರಿಂದ 2.2 ಮಿಲಿಯನ್‌ನಷ್ಟು ತಂತ್ರಜ್ಞಾನ ಕೆಲಸಗಾರರನ್ನು ಹೊಂದಿ ನ್ಯೂಯಾರ್ಕ್ ನಗರ, ಲಾಸ್ ಏಂಜಲೀಸ್, ಬೋಸ್ಟನ್‌ನಂತಹ ಪ್ರಮುಖ ಟೆಕ್ ತಾವಳಗಳ ಸಾಲನ್ನು ಸೇರುತ್ತಿದೆ. ಇಂದಿನ ಲೇಖನದಲ್ಲಿ ಈ ಅದ್ವಿತೀಯ ಬೆಳವಣಿಗೆಯನ್ನು ಕಾಣಲು ಬೆಂಗಳೂರಿಗೆ ಹೇಗೆ ಸಾಧ್ಯವಾಗಿದೆ ಎಂಬ ಅಂಶಗಳನ್ನು ನಾವು ಚರ್ಚಿಸಲಿರುವೆವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿಂಗಪೂರಿಗೆ ಸಮನಾಗಿ
  

ದಕ್ಷಿಣ ಪೂರ್ವ ಏಷ್ಯಾದ ನಗರಗಳಲ್ಲೇ ಅಂದರೆ ಸಿಂಗಪೂರಿಗೆ ಸಮನಾಗಿ ನಮ್ಮ ಬೆಂಗಳೂರು ಬಂದು ನಿಂತಿದೆ

15 ನೇ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ
  

ಸ್ಟಾರ್ಟಪ್ ಅನುಭವ, ಕಾರ್ಯಕ್ಷಮತೆ, ಮಾರುಕಟ್ಟೆ ತಲುಪುವಿಕೆ, ಬುದ್ಧಿವಂತಿಕೆ ಈ ಎಲ್ಲಾ ಅಂಶಗಳನ್ನು ಗಮನಿಸಿಕೊಂಡು ಬೆಂಗಳೂರು ವಿಶ್ವದ ಟೆಕ್ ನಗರಗಳಲ್ಲಿ 15 ನೇ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ.

ಅತಿ ವೇಗವಾಗಿ ಬೆಳೆಯುತ್ತಿರುವ ನಗರ
  

ಇನ್ನು 2013-2014 ರ ಒಂದು ವಿಶ್ಲೇಷಣೆಯ ಪ್ರಕಾರ ಬರ್ಲಿನ್, ಬೆಂಗಳೂರು, ಬೋಸ್ಟನ್ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳು ಎಂಬ ಕೀರ್ತಿಗೆ ಪಾತ್ರವಾಗಿವೆ.

ಹೂಡಿಕೆ
  

ವರದಿಯ ಪ್ರಕಾರ, 14,428 ಕೋಟಿಗಳಷ್ಟು ಹೂಡಿಕೆಯನ್ನು ಬೆಂಗಳೂರಿನ ಸ್ಟಾರ್ಟಪ್‌ಗಾಗಿ ನಡೆಸಲಾಗಿದೆ. ಈ ಹೂಡಿಕೆಯೇ ಬೆಂಗಳೂರನ್ನು ಏಳನೇ ಅತಿ ದೊಡ್ಡ ಹೂಡಕೆ ನಗರವನ್ನಾಗಿಸಿದೆ.

ಹೆಚ್ಚಿನ ಅಭಿವೃದ್ಧಿ
  

2012-2014 ರ ನಡುವೆ ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಕಾಣುತ್ತಾ 53 ಶೇಕಡಾದಷ್ಟು ಪ್ರಗತಿಯನ್ನು ಕಂಡುಕೊಂಡು ಬೆಂಗಳೂರು ಹೆಚ್ಚಿನ ಅಭಿವೃದ್ಧಿಯನ್ನು ಪಡೆದುಕೊಂಡಿದೆ.

ಯುವ ಜನಾಂಗ
  

3,100 ರಿಂದ 4,900 ಸಕ್ರಿಯ ಸ್ಟಾರ್ಟಪ್‌ಗಳಿಗೆ ಮುಖ್ಯ ಸ್ಥಾನವಾಗಿರುವ ಬೆಂಗಳೂರು ಯುವ ಜನಾಂಗ ಆರಂಭಿಸಿರುವ ಸ್ಟಾರ್ಟಪ್‌ಗಳ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಸಮಾನತೆ
  

ಬೆಂಗಳೂರು ಆಧಾರಿತ ಸ್ಟಾರ್ಟಪ್‌ಗಳು ಏಳು ಶೇಕಡಾ ಸಮಾನತೆಯನ್ನು ಉದ್ಯೋಗಿಗಳಿಗೆ ನೀಡುತ್ತಿದೆ.

15 ಲಕ್ಷ ಆದಾಯ
  

ಬೆಂಗಳೂರಿನ ಸರಾಸರಿ ಸಾಫ್ಟ್‌ವೇರ್ ಇಂಜಿನಿಯರ್ ವರ್ಷಕ್ಕೆ 15 ಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ.

ಅಗ್ಗ
  

ಇನ್ನು ಸಿಲಿಕಾನ್ ವಾಲ್ಲಿಯಂತಹ ಮಹಾ ನಗರಗಳಿಗೆ ಹೋಲಿಸಿದಾಗ ಸೇರ್ಪಡೆಯಾದವರಿಗೆ 64 ಶೇಕಡಾ ಅಗ್ಗವಾಗಿದೆ.

ಬಲಿಷ್ಟ ಗ್ರಾಹಕ ಶಕ್ತಿ
  

ಯಶಸ್ವಿ ಸ್ಟಾರ್ಟಪ್‌ಗಳಾದ ಫ್ಲಿಪ್‌ಕಾರ್ಟ್, ಇನ್‌ಮೊಬಿ ಪ್ರಕಾರ ಉದ್ಯಾನ ನಗರಿ ಮಾರುಕಟ್ಟೆ ಅಭಿವೃದ್ಧಿಗೆ ಪೂರಕವಾಗಿದ್ದು ಬಲಿಷ್ಟ ಗ್ರಾಹಕ ಶಕ್ತಿಯನ್ನು ಪಡೆದುಕೊಂಡಿದೆ ಎಂಬುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Bengaluru is the only Indian city to be ranked in a top 20 global startup index by Compass, a global provider of automated reporting and benchmarking tools for startups and tech companies.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot