ಬೆಂಗಳೂರಿನ ವಾಹನ ಸವಾರರೇ ಗಮನಿಸಿ!..ನಿಮ್ಮ ಮೇಲಿದೆ ಕ್ಯಾಮೆರಾ ಕಣ್ಣು!

|

ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರನ್ನು ಟ್ರ್ಯಾಕ್ ಮಾಡಲು ಬೆಂಗಳೂರಿನ ಟ್ರಾಫಿಕ್ ಪೊಲೀಸರು ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್‌ (ANPR) ಕ್ಯಾಮೆರಾಗಳನ್ನ ಅಳವಡಿಕೆ ಮಾಡಲಾಗಿದೆ. ಈ ಕ್ಯಾಮೆರಾಗಳ ಅಳವಡಿಕೆಯಿಂದಾಗಿ ವಾಹನ ದಟ್ಟಣೆ ಅತಿಯಾಗಿರುವಂತಹ ಟ್ರಾಫಿಕ್ ಜಂಕ್ಷನ್‌ ರಸ್ತೆಗಳಲ್ಲಿಯೂ ಸಹ, ಈ ಹಿಂದೆ ದಂಡ ಬಾಕಿ ಉಳಿಸಿಕೊಂಡಿರುವ ವಾಹನಗಳನ್ನು ಪತ್ತೆ ಹಚ್ಚುವುದು ಇದೀಗ ಸುಲಭವಾಗಿದೆ.

ಬೆಂಗಳೂರಿನ ವಾಹನ ಸವಾರರೇ ಗಮನಿಸಿ!..ನಿಮ್ಮ ಮೇಲಿದೆ ಕ್ಯಾಮೆರಾ ಕಣ್ಣು!

ಈ ಕ್ಯಾಮೆರಗಳು ಬೆಂಗಳೂರು ಸಂಚಾರಿ ಪೊಲೀಸರಿಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ಹಿಡಿಯುವಲ್ಲಿ ಬಹಳ ಸಹಾಯವಾಗಿದೆ. ಈ ANPR ಗಳು, ದಂಡ ಬಾಕಿ ಉಳಿಸಿಕೊಂಡಿರುವ ಸುಮಾರು ಒಂದು ಲಕ್ಷ ವಾಹನಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವನ್ನು ಹೊಂದಿವೆ. ಬೆಂಗಳೂರು ಪೂರ್ವ ವಿಭಾಗದ ಸಂಚಾರಿ ಪೋಲಿಸರು 12 ANPR ಕ್ಯಾಮೆರಾಗಳನ್ನು ಬಳಸುತ್ತಿದ್ದು, ಪಶ್ಚಿಮ ವಿಭಾಗದ ಸಂಚಾರ ಪೋಲಿಸ ಇಲಾಖೆ 8 ಕ್ಯಾಮರಾಗಳನ್ನು ಬಳಸುತ್ತಿದೆ.

ANPR ಕ್ಯಾಮೆರಾಗಳು ಹೇಗೆ ಕಾರ್ಯನಿರ್ವಹಿಸುತ್ತವೆ?
ANPR ಎನ್ನುವುದು ವಾಹನ ಪರವಾನಗಿ/ನಂಬರ್ ಪ್ಲೇಟ್ ಅನ್ನು ಕಂಡುಹಿಡಿಯಲು ಬಳಸುವ ಆಧಾರವಾಗಿರುವ ತಂತ್ರಜ್ಞಾನವಾಗಿದೆ. ಇದು ಮುಂದಿನ ಹಂತದ ಕಂಪ್ಯೂಟರ್ ಪ್ರಕ್ರಿಯೆಗೆ ಈ ಮಾಹಿತಿಯನ್ನು ಒದಗಿಸುತ್ತದೆ. ಇದು ದಂಡ ಬಾಕಿ ಇರುವ ಪ್ರಕರಣಗಳಿರುವ ವಾಹನವನ್ನು ಗುರುತಿಸಿದ ತಕ್ಷಣ ಕ್ಯಾಮೆರಾ ಸಾಫ್ಟ್ ವೇರ್ ಒಂದನ್ನು ಬಳಸುವ ಮೂಲಕ ಆ ವಾಹನ ಮಾಲೀಕನ ವಿವರಗಳನ್ನು ಹತ್ತಿರದಲ್ಲಿರುವ ಸಂಚಾರಿ ಪೋಲಿಸರಿಗೆ ರವಾನಿಸುತ್ತದೆ. ಆಗ ಅಧಿಕಾರಿ ಆ ವಾಹನವನ್ನು ನಿಲ್ಲಿಸಿ ದಂಡವನ್ನು ವಸೂಲಿ ಮಾಡುತ್ತಾರೆ.

ಬೆಂಗಳೂರಿನ ವಾಹನ ಸವಾರರೇ ಗಮನಿಸಿ!..ನಿಮ್ಮ ಮೇಲಿದೆ ಕ್ಯಾಮೆರಾ ಕಣ್ಣು!

ಪಶ್ಚಿಮ ವಿಭಾಗದಲ್ಲಿ ಮಲ್ಲೇಶ್ವರಂ, ರಾಜಾಜಿನಗರ ಹಾಗೂ ವಿವಿಪುರಂಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿವೆ. 'ಈ ಪ್ರಕ್ರಿಯೆಗೂ ಈಗಿರುವಷ್ಟೇ ಮಾನವ ಸಂಪನ್ಮೂಲದ ಅಗತ್ಯವಿದೆ. ಆದರೆ ಈ ಕ್ಯಾಮೆರಾಗಲು ಬಹಳ ಸಮರ್ಥವಾಗಿವೆ. ಒಂದೇ ಬಾರಿಗೆ ೨೫ ವಾಹನಗಳು ಕಂಡು ಬಂದರೂ ಸಹ ಸಂಚಾರ ಉಲ್ಲಂಘನೆ ಮಾಡಿರುವ ವಾಹನಗಳನ್ನು ಅತ್ಯಂತ ನಿಖರವಾಗಿ ಪತ್ತೆ ಹಚ್ಚುತ್ತದೆ,' ಎಂದು ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿ ಕುಲದೀಪ್ ಜೈನ್ ಅವರು ತಿಳಿಸಿದರು.

ಹಿರಿಯ ಬಿಟಿಪಿ ಅಧಿಕಾರಿಯೊಬ್ಬರ ಪ್ರಕಾರ ಈ ಕ್ಯಾಮೆರಾವನ್ನು ನಿರ್ಧಿಷ್ಟವಾದ ಸಂಖ್ಯೆಗಳನ್ನು ಗುರುತಿಸುವಂತೆ ಫೈನ್ ಟ್ಯೂನ್ ಮಾಡಬಹುದು. 'ಒಂದು ವೇಳೆ ನಾವು ದ್ವಿಚಕ್ರವಾಹನಗಳ ಸಂಚಾರ ಉಲ್ಲಂಘನೆಗಳ ವಿರುದ್ಧ ಅಭಿಯಾನವನ್ನು ಕೈಗೊಂಡರೆ, ಈ ಕ್ಯಾಮೆರಾದಲ್ಲಿ ಕೇವಲ ದ್ವಿಚಕ್ರವಾಹನಗಳ ನಂಬರ್ ಪ್ಲೇಟ್‌ ಗಳನ್ನು ಮಾತ್ರ ಪತ್ತೆ ಹಚ್ಚುವಂತೆ ಸೆಟ್ಟಿಂಗ್ ಮಾಡಬಹುದು. ಅದೇ ರೀತಿ ಕಾರುಗಳಿಗೆ ಮಾತ್ರವೇ ಪ್ರತ್ಯೇಕ ಸೆಟ್ಟಿಂಗ್ ಮಾಡಬಹುದು,'ಎಂದು ಅಧಿಕಾರಿಯೊಬ್ಬರು ವಿವರಿಸಿದರು.

Most Read Articles
Best Mobiles in India

English summary
Bengaluru Traffic Police deploys Automatic Number Plate Recognition cameras

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X