ಲೈಂಗಿಕ ಕಿರುಕುಳ ವಲಯ ಪತ್ತೆಗೆ ಮ್ಯಾಪ್‌ ರೂಪಿಸಿದ ಬೆಂಗಳೂರಿನ ವಿದ್ಯಾರ್ಥಿನಿ!

|

ಸದ್ಯ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು, ಮಹಿಳೆಯೊಂದಿಗೆ ಅನುಚಿತ ವರ್ತನೆಯ ಘಟನೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಇಂತಹ ಕೆಲವು ಪ್ರಕರಣಗಳ ವಿರುದ್ಧ ಸಾರ್ವಜನಿಕರೆಲ್ಲರೂ ಧ್ವನಿ ಎತ್ತಿರುವ ಘಟನೆಗಳು ನಡೆದಿವೆ. ಕೆಲವೊಮ್ಮೆ ಕೆಲವು ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಆದ್ರೆ ಇದೀಗ ಬೆಂಗಳೂರಿನ ವಿದ್ಯಾರ್ಥಿಯೊಬ್ಬಳು ಲೈಂಗಿಕ ಕಿರುಕುಳ ಘಟನೆಗಳನ್ನು ತಡೆಯಲು ಮುಂದಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ಸೃಷ್ಠಿ ಇನ್ಸ್ಟಿಟ್ಯೂಟ್‌ನಲ್ಲಿ

ಹೌದು, ಬೆಂಗಳೂರಿನ ಸೃಷ್ಠಿ ಇನ್ಸ್ಟಿಟ್ಯೂಟ್‌ನಲ್ಲಿ ಆರ್ಟ್‌, ಡಿಸೈನ್ ಮತ್ತ ಟೆಕ್ನಾಲಜೀಸ್ ವಿಭಾಗದ ನಾಲ್ಕನೇ ವರ್ಷದ ವಿದ್ಯಾರ್ಥಿನಿ 'ನೂಪುರ್ ಪಾಟ್ನಿ' ಮಹಿಳೆಯರ ಲೈಂಗಿಕ ಕಿರುಕುಳ ತಡೆಗೆ ಹೊಸ ಪ್ರಯತ್ನ ಮಾಡಿದ್ದಾಳೆ. ವಿದ್ಯಾರ್ಥಿನಿ ನೂಪುರ್‌ ಪಾಟ್ನಿ ಬೆಂಗಳೂರು ನಗರದಲ್ಲಿ ಲೈಂಗಿಕ ಕಿರುಕುಳ ಘಟನೆಗಳನ್ನು ತಡೆಯಲು ಯೋಜನೆವೊಂದನ್ನು ರೂಪಿಸಿದ್ದು, ಅದಕ್ಕೆ 'It's Not My Fault' ಹೆಸರನ್ನು ಇಟ್ಟಿದ್ದಾಳೆ.

ಲೈಂಗಿಕ ಕಿರುಕುಳ

ಈ ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ವಲಯಗಳನ್ನು ಗುರುತಿಸಿಲು ಮ್ಯಾಪ್‌ ಯೋಜನೆಯನ್ನು ಮಾಡುತ್ತಿದ್ದು, ನಗರದಲ್ಲಿ ಲೈಂಗಿಕ ಕಿರುಕುಳ ವಲಯಗಳ ಬಗ್ಗೆ ಮಾಹಿತಿ ಪಿನ್ (ಗುರುತುಮಾಡು) ಮಾಡುವ ಯೋಜನೆ ಇದಾಗಿದೆ. ಈ ಯೋಜನೆಯಲ್ಲಿ ನಗರದಲ್ಲಿನ ಲೈಂಗಿಕ ಶೋಷಣೆಯ ಮಾಹಿತಿ ಸಹ ಸಿಗಲಿದೆ. ನಗರದ ಯಾವುದೇ ಸ್ಥಳದಲ್ಲಿ ಯಾವುದೇ ರೀತಿಯ ಲೈಂಗಿಕ ಕಿರುಕುಳ ನಡೆದಿದ್ದರು ಆ ಬಗ್ಗೆ ಮಹಿಳೆಯರು ಮಾಹಿತಿ ನೀಡಬಹುದಾಗಿದೆ.

ಇಟ್ಸ್ ನಾಟ್ ಮೈ ಫಾಲ್ಟ್

ನಗರದ ವಿವಿಧ ಸ್ಥಳಗಳಲ್ಲಿ ನಡೆದ ಲೈಂಗಿಕ ಕಿರುಕುಳ ಘಟನೆಗಳ ಬಗ್ಗೆ ಸಂತ್ರಸ್ಥ ಮಹಿಳೆಯರು ನೂಪುರ್‌ ಪಾಟ್ನಿ ಯೋಜನೆಯ ಮ್ಯಾಪ್‌ನಲ್ಲಿ ಮಾಹಿತಿ ಶೇರ್ ಮಾಡಬಹುದಾಗಿದೆ. ಇದೊಂದು ಉಚಿತ ಸೇವೆಯಾಗಿದ್ದು, ಸಲಹೆಗಳನ್ನು ಸಹ ನೀಡಬಹುದಾಗಿದೆ. ಹಾಗೂ ಸಂತ್ರಸ್ಥ ಮಹಿಳೆಯರು ಗುರುತಿಸಿದ ಸ್ಥಳಗಳ ಬಗ್ಗೆ ಮುಂಜಾಗ್ರತೆ ವಹಿಸಲು ಪೋಲಿಸರಿಗೂ ಸಹ ಅನುಕೂಲವಾಗಲಿದೆ ಎಂದು ನೂಪುರ್‌ ಪಾಟ್ನಿ ಹೇಳಿದ್ದಾಳೆ.

ಇಟ್ಸ್ ನಾಟ್ ಮೈ ಫಾಲ್ಟ್ ಹೆಸರಿನ ಈ ಯೋಜನೆಯು ಲೈಂಗಿಕ ಕಿರುಕುಳ ಸಂತ್ರಸ್ತರಿಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಆದಂತೆ. ಮುಂದಿನ ದಿನಗಳಲ್ಲಿ ಈ ಮ್ಯಾಪ್‌ ಆಪ್‌ ಅನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯ ಮಾಡುವ ಯೋಜನೆ ಇದೆ ಹಾಗೂ ಇದರಿಂದ ಸುರಕ್ಷತವಲ್ಲದ ಸ್ಥಳಗಳ ಬಗ್ಗೆ ಮಹಿಳೆಯರಿಗೆ ಮಾಹಿತಿ ಲಭ್ಯವಾಗಲಿದೆ. ಎಂದು ಪಾಟ್ನಿ ಹೇಳಿದ್ದಾಳೆ.

Most Read Articles
Best Mobiles in India

English summary
The map identifies sexual harassment zones in Bengaluru and can assist women in city to evade trouble. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X