BenQ ಸಂಸ್ಥೆಯಿಂದ 27 ಇಂಚಿನ ಮಾನಿಟರ್ ಬಿಡುಗಡೆ; ಇದರ ವಿಶೇಷತೆ ಏನು?
ಪ್ರೊಜೆಕ್ಟರ್ ಹಾಗೂ ಮಾನಿಟರ್ ಡಿವೈಸ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಬೆನ್‌ಕ್ಯೂ (BenQ) ಸಂಸ್ಥೆಯು ಈಗ ನೂತನವಾಗಿ GW2790Q ಮಾನಿಟರ್ (GW2790Q monitor) ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಂದಹಾಗೆ ಈ ಹೊಸ ಮಾನಿಟರ್ 27 ಇಂಚಿನ ಗಾತ್ರವನ್ನು ಪಡೆದಿದ್ದು, ಮನರಂಜನೆಯ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸ ಮಾಡಲಾಗಿದೆ.
ಹೌದು, ಬೆನ್‌ಕ್ಯೂ (BenQ) ಕಂಪೆನಿಯು GW2790Q (GW2790Q monitor) ಮಾನಿಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಮಾನಿಟರ್ ಕೆಲಸ ಮತ್ತು ಮನರಂಜನೆ ಎರಡಕ್ಕೂ ಸೂಕ್ತವಾದ ವಿನ್ಯಾಸವನ್ನು ಹೊಂದಿದೆ. ಇದು 2K QHD ಮಾದರಿಯ ರಚನೆ ಪಡೆದಿದ್ದು, 100Hz ರಿಫ್ರೆಶ್ ರೇಟ್ ಅನ್ನು ಪಡೆದುಕೊಂಡಿದೆ. ಇನ್ನುಳಿದಂತೆ BenQ ಸಂಸ್ಥೆಯ ಈ ಹೊಸ ಮಾನಿಟರ್ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

BenQ GW2790Q ಮಾನಿಟರ್ ಫೀಚರ್ಸ್
ಈ ಹೊಸ ಮಾನಿಟರ್ 27 ಇಂಚಿನ QHD 2K IPS ಪ್ಯಾನೆಲ್ ಅನ್ನು ಹೊಂದಿದ್ದು, ಇದು 2560 x 1440 ಪಿಕ್ಸಲ್ ರೆಸಲ್ಯೂಶನ್ ಸಪೋರ್ಟ್ ಅನ್ನು ಹೊಂದಿದೆ. ಹಾಗೆಯೇ ಈ ಮಾನಿಟರ್ ಸುಗಮ ಕಾರ್ಯಕ್ಷಮತೆಗಾಗಿ 100Hz ರಿಫ್ರೆಶ್ ರೇಟ್ ಆಯ್ಕೆ ಅನ್ನು ಪಡೆದುಕೊಂಡಿದೆ. ಅಲ್ಲದೇ ಈ ಮಾನಿಟರ್ 99% sRGB ಬಣ್ಣದ ಕವರೇಜ್ ಹಾಗೂ 1500:1 ಲೋಕಲ್ ಕಾಂಟ್ರಾಸ್ಟ್ ಅನುಪಾತವನ್ನು ಪಡೆದಿದೆ.
ಅಂದಹಾಗೆ ಇದು ಸ್ಲಿಮ್ ಅಂಚಿನ ರಚನೆ ಹೊಂದಿದ್ದು, VESA ಗೋಡೆಯ ಮೌಂಟ್ ವಿನ್ಯಾಸ ಹೊಂದಿದೆ. ಹಾಗೆಯೇ ಇದು 178 ಡಿಗ್ರಿ ವೀಕ್ಷಣೆಯ ನೋಟ ಪಡೆದಿದ್ದು, ಪ್ರತಿ ಇಂಚಿನ ಪಿಕ್ಸಲ್ 109 PPI ಪಡೆದಿದೆ. ಇದರೊಂದಿಗೆ ಇದು ಆಂಟಿ-ಗ್ಲೇರ್ ಸೌಲಭ್ಯ ಸಹ ಪಡೆದುಕೊಂಡಿದೆ.
ಅಲ್ಲದೇ ಈ ಮಾನಿಟರ್ ಫ್ಲಿಕರ್-ಫ್ರೀ, ಬ್ರೈಟ್‌ನೆಸ್ ಇಂಟೆಲಿಜೆನ್ಸ್ ಜನ್ 2 ಆಯ್ಕೆಗಳ ಜೊತೆಗೆ ಲೋ ಬ್ಲೂ ಲೈಟ್ ಪ್ಲಸ್, ಕಲರ್ ವೀಕ್‌ನೆಸ್, ಇ - ಪೇಪರ್, ಐ ರಿಮೈಂಡರ್ ನಂತಹ ಆಯ್ಕೆಗಳನ್ನು ಕೂಡಾ ಪಡೆದಿದೆ. ಇನ್ನು ಇದರ ಆಡಿಯೋ ನೋಡುವುದಾದರೇ ಇದು 2 x 2W ಸ್ಪೀಕರ್‌ಗಳ ವ್ಯವಸ್ಥೆ ಪಡೆದಿದೆ. ಹಾಗೆಯೇ ಹೆಡ್‌ಫೋನ್ ಜ್ಯಾಕ್ ಸಹ ಪಡೆದಿದೆ.
ಮಾನಿಟರ್ ಲಭ್ಯತೆ ಹಾಗೂ ಬೆಲೆ
BenQ ಸಂಸ್ಥೆಯ ನೂತನ GW2790Q ಮಾನಿಟರ್‌ನ ಆರಂಭಿಕ ಬೆಲೆ 14,990ರೂ. ಗಳು ಆಗಿದೆ. ಆಸಕ್ತ ಖರೀದಿದಾರರು ಈ ಮಾನಿಟರ್ ಅನ್ನು BenQ ಇ - ಸ್ಟೋರ್, ಅಮೆಜಾನ್.ಇನ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿ ಮಾಡಬಹುದು. ಅಂದಹಾಗೆ ಕೆಲವು ಆಯ್ದ IT ರಿಟೇಲ್ ಸ್ಟೋರ್‌ಗಳನ್ನು ಕೂಡಾ ಈ ಮಾನಿಟರ್ ಲಭ್ಯವಿದೆ.


Click it and Unblock the Notifications








