BenQ ಸಂಸ್ಥೆಯಿಂದ ಹೊಸ ಪ್ರೊಜೆಕ್ಟರ್ ಲಾಂಚ್!..ಸೂಪರ್ ಫೀಚರ್ಸ್, ಅಚ್ಚರಿಯ ಬೆಲೆ!
ಮಾರುಕಟ್ಟೆಯಲ್ಲಿ ಸ್ಮಾರ್ಟ್ ಉತ್ಪನ್ನಗಳ ಮೂಲಕ ಗುರುತಿಸಿಕೊಂಡಿರುವ BenQ ಸಂಸ್ಥೆಯ ಪ್ರೊಜೆಕ್ಟರ್‌ಗಳು ಹೆಚ್ಚು ಗಮನ ಸೆಳೆದಿವೆ. BenQ ಸಂಸ್ಥೆಯು ಇದೀಗ ಮಾರುಕಟ್ಟೆಗೆ ಹೊಸದಾಗಿ X300G ಸ್ಮಾರ್ಟ್ LED ಗೇಮಿಂಗ್ ಪ್ರೊಜೆಕ್ಟರ್ ಬಿಡುಗಡೆ ಮಾಡಿದೆ. ಈ ಪ್ರೊಜೆಕ್ಟರ್ 4K HDR ದೃಶ್ಯ ಹಾಗೂ ಪೋರ್ಟಬಲ್ ವಿನ್ಯಾಸ ಪಡೆದಿದೆ. ಅಲ್ಲದೇ ಗೇಮಿಂಗ್ ಅನುಭವವನ್ನು ಹೆಚ್ಚಿಸಲು ಪೂರಕವಾಗಿದೆ.
ಹೌದು, BenQ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ X300G ಸ್ಮಾರ್ಟ್ ಎಲ್ಇಡಿ ಪೋರ್ಟಬಲ್ ಗೇಮಿಂಗ್ ಪ್ರೊಜೆಕ್ಟರ್ ಮುಖ್ಯವಾಗಿ ಗೇಮಿಂಗ್ ಕಮ್ಯೂನಿಟಿಯನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಲಾಗಿದೆ. ಇದು 2000 ANSI ಲುಮೆನ್ಸ್ ಬ್ರೈಟ್‌ನೆಸ್ ಪಡೆದಿದ್ದು, RPG, FPS ಮತ್ತು SPG ಪ್ರಕಾರಗಳಿಗೆ ಗೇಮಿಂಗ್ ಮೋಡ್ ಆಯ್ಕೆ ಪಡೆದುಕೊಂಡಿದೆ.

ಹಾಗೆಯೇ ಈ ಪ್ರೊಜೆಕ್ಟರ್ ಸಾಧನವು 16W ಟ್ರೆವೊಲೊ ಸ್ಪೀಕರ್‌ಗಳ ಸೌಲಭ್ಯ ಹೊಂದಿದ್ದು, ಹಾಗೆಯೇ ಇದು ನಿಜವಾದ ಸಿನಿಮೀಯ ಬಣ್ಣಗಳು, 4.1 ms ನ ಕಡಿಮೆ ಇನ್‌ಪುಟ್ ಲ್ಯಾಗ್ ಆಯ್ಕೆಗಳನ್ನು ಕೂಡಾ ಪಡೆದುಕೊಂಡಿದೆ. ಹಾಗಾದರೇ BenQ ಸಂಸ್ಥೆ X300G ಸ್ಮಾರ್ಟ್-ಎಲ್ಇಡಿ ಪೋರ್ಟಬಲ್ ಗೇಮಿಂಗ್ ಪ್ರೊಜೆಕ್ಟರ್ ಇತರೆ ವೈಶಿಷ್ಟ್ಯಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
X300G ಗೇಮಿಂಗ್ ಪ್ರೊಜೆಕ್ಟರ್ - ಫೀಚರ್ಸ್
X300G ಸ್ಮಾರ್ಟ್ ಎಲ್ಇಡಿ ಪೋರ್ಟಬಲ್ ಗೇಮಿಂಗ್ ಪ್ರೊಜೆಕ್ಟರ್ ಬೊಂಗಿಯೊವಿ DSP ಚಿಪ್‌ನೊಂದಿಗೆ ಸಾಟಿಯಿಲ್ಲದ 4K HDR ದೃಶ್ಯಗಳನ್ನು ಒದಗಿಸುತ್ತದೆ. ಹಾಗೆಯೇ ಇದು ಅತ್ಯಂತ ಸ್ಪಷ್ಟ ಹಾಗೂ ಗುಣಮಟ್ಟದ ವಿಡಿಯೋ/ ದೃಶ್ಯ ವ್ಯವಸ್ಥೆಗೆ ಪೂರಕವಾಗಿದೆ. ಇದು 4.1ms ನಲ್ಲಿ ಮಿಂಚಿನ ವೇಗದ ಪ್ರತಿಕ್ರಿಯೆ ಸಮಯವನ್ನು ಖಾತ್ರಿಪಡಿಸುತ್ತದೆ (@1080p 240Hz).
ಹಾಗೆಯೇ 3LED ಲೈಟ್ ಸೋರ್ಸ್ ಆಯ್ಕೆ ಪಡೆದಿದ್ದು, ಈ ಸಾಧನವು ವಿಶಾಲವಾದ ಕಲರ್ ಗಮಟ್ ಹಾಗೂ ಸ್ಥಿರ ಬ್ರೈಟ್ನೆಸ್ ನೀಡುತ್ತದೆ. ಇನ್ನು ಇದು ಇಕೋ ಮೋಡ್‌ನಲ್ಲಿ 30,000 ಗಂಟೆಗಳವರೆಗೆ ನಡೆಯುತ್ತದೆ. ಅಲ್ಲದೇ 2000 ANSI ಲುಮೆನ್ಸ್ ಬ್ರೈಟ್‌ನೆಸ್ ಸಪೋರ್ಟ್ ಜೊತೆಗೆ 95% Rec709 ಬಣ್ಣದ ಹರವುಗಳೊಂದಿಗೆ ಗೇಮಿಂಗ್ ಪ್ರಪಂಚದಲ್ಲಿ ತೊಡಗುವಂತೆ ಮಾಡುತ್ತದೆ.
ಇನ್ನು ಈ ಗೇಮಿಂಗ್ ಪ್ರೊಜೆಕ್ಟರ್ RPG, FPS ಮತ್ತು SPG ಗಾಗಿ ಆಪ್ಟಿಮೈಸ್ ಮಾಡಿದ ಸೆಟ್ಟಿಂಗ್‌ಗಳು ಭಿನ್ನ ಗೇಮಿಂಗ್ ಮೋಡ್‌ಗಳ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಪವರ್‌ಫುಲ್ ಬಾಸ್ ಸೌಲಭ್ಯದ ಜೊತೆಗೆ 16 W ಟ್ರೆವೊಲೊ ಸ್ಪೀಕರ್ ವ್ಯವಸ್ಥೆ ಹಾಗೂ BenQ's ಸಿನಿಮ್ಯಾಟಿಕ್ ಸೌಂಡ್ ತಂತ್ರಜ್ಞಾನದ ಬೆಂಬಲದ ಇದೆ. ಇದರ Bongiovi DSP ಚಿಪ್, 8W x 2 ಸ್ಟಿರಿಯೊ ಚೇಂಬರ್ ಸ್ಪೀಕರ್‌ಗಳ ಸೌಲಭ್ಯ ಇದೆ.
ಹಾಗೆಯೇ ಇದು ನೆಟ್‌ಫ್ಲಿಕ್ಸ್‌ನೊಂದಿಗೆ ಆಂಡ್ರಾಯ್ಡ್ TV ಸೌಲಭ್ಯ ಪಡೆದಿದ್ದು, ಅತ್ಯುತ್ತಮ ಮನರಂಜನಾ ಆಯ್ಕೆಗಳ ಸೌಲಭ್ಯ. ಈ ಪ್ರೊಜೆಕ್ಟರ್ 1.2x ಆಪ್ಟಿಕಲ್ ಮೋಟಾರೈಸ್ಡ್ ಜೂಮ್ ಆಯ್ಕೆ ಪಡೆದಿದ್ದು, ಫೋಟೋಗಳ ಗುಣಮಟ್ಟಕ್ಕೆ ಧಕ್ಕೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಇಲ್ಲದೇ ಈ ಸಾಧನದ ಸಂಪರ್ಕ ಸೌಲಭ್ಯಗಳನ್ನು ನೋಡುವುದಾದರೆ, ಇದು USB-A, USB-C, ಮತ್ತು HDMI 2.0 ಪೋರ್ಟ್ ಗಳನ್ನು ಪಡೆದುಕೊಂಡಿದ್ದು, ವಿವಿಧ ಮಲ್ಟಿ ಮೀಡಿಯಾ ಅಗತ್ಯಗಳಿಗೆ ಹಾಗೂ ಗೇಮಿಂಗ್ ಡಿವೈಸ್ ಗಳಿಗೆ ಬಹುಮುಖತೆಯನ್ನು ಇದು ನೀಡುತ್ತದೆ.
ಹಾಗೆಯೇ X300G ಗೇಮಿಂಗ್ ಪ್ರೊಜೆಕ್ಟರ್ ಇದೇ 7 ನೇ ಮಾರ್ಚ್, 2024 ರಿಂದ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಖರೀದಿಗೆ ಲಭ್ಯವಿದ್ದು. ಈ ಸಾಧನದ ಬೆಲೆಯು 1,52,490 ರೂ. ಆಗಿದೆ.


Click it and Unblock the Notifications








