Home
ಸುದ್ದಿಜಾಲ

BenQ ಸಂಸ್ಥೆಯಿಂದ 32 ಇಂಚಿನ ಸ್ಮಾರ್ಟ್‌ ಮಾನಿಟರ್ ಲಾಂಚ್‌; ಅಚ್ಚರಿಯ ಬೆಲೆ!

ಜನಪ್ರಿಯ ಬೆನ್‌ಕ್ಯೂ (BenQ) ಕಂಪೆನಿಯ ಸ್ಮಾರ್ಟ್‌ ಮಾನಿಟರ್‌ಗಳಿಗೆ ಭಾರತದಲ್ಲಿ ಅತ್ಯುತ್ತಮ ಬೇಡಿಕೆಯಿದೆ. ಸಂಸ್ಥೆಯು ತನ್ನ ವಿಭಿನ್ನ ಕಾರ್ಯಶೈಲಿಯ ಸ್ಮಾರ್ಟ್‌ ಮಾನಿಟರ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಸಂಸ್ಥೆಯು ಇದೀಗ ಭಾರತದಲ್ಲಿ ಹೊಸದಾಗಿ BenQ PD3225U ಸ್ಮಾರ್ಟ್‌ ಮಾನಿಟರ್‌ ಡಿವೈಸ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಮಾನಿಟರ್‌ AQCOLOR ತಂತ್ರಜ್ಞಾನವನ್ನು ಪಡೆದಿದೆ.

ಹೌದು, BenQ ಸಂಸ್ಥೆಯು ನೂತನ BenQ PD3225U ಸ್ಮಾರ್ಟ್‌ ಮಾನಿಟರ್‌ ಭಾರತದಲ್ಲಿ ಲಾಂಚ್‌ ಮಾಡಲಾಗಿದೆ. ಈ ಮಾನಿಟರ್‌ 4K UHD ರೆಸಲ್ಯೂಶನ್ ಸೌಲಭ್ಯ ಪಡೆದಿದ್ದು, ಸಿಂಗಲ್-ಕೇಬಲ್ ವೀಡಿಯೊ, ಡೇಟಾ, ಆಡಿಯೊ ಆಯ್ಕೆಗಳು ಇವೆ. ಅಲ್ಲದೇ 85W ಲ್ಯಾಪ್‌ಟಾಪ್ ಚಾರ್ಜಿಂಗ್‌ಗಾಗಿ Thunderbolt 3 ಕನೆಕ್ಷನ್‌ ಅನ್ನು ಹೊಂದಿದೆ. ಈ ಮಾನಿಟರ್‌ನ ಬೆಲೆಯು 99,990ರೂ. ಪ್ರೈಸ್‌ಟ್ಯಾಗ್‌ ಅನ್ನು ಪಡೆದಿದೆ.

BenQ ಸಂಸ್ಥೆಯಿಂದ 32 ಇಂಚಿನ ಸ್ಮಾರ್ಟ್‌ ಮಾನಿಟರ್ ಲಾಂಚ್‌; ಅಚ್ಚರಿಯ ಬೆಲೆ!

ಅಲ್ಲದೇ ಈ ಮಾನಿಟರ್‌ Calibration ರಿಪೋರ್ಟ್‌, Hotkey Puck G2, IO ಕವರ್‌, QSG ನಂತಹ ಆಕ್ಸಸರಿಸ್‌ ಗಳನ್ನು ಸಹ ಪಡೆದುಕೊಂಡಿದೆ. ಇದನ್ನು Calman, Pantone ಮತ್ತು Pantone ಸ್ಕಿನ್ ಟೋನ್ ಪ್ರಮಾಣೀಕರಣಗಳಿಂದ ಪರಿಶೀಲಿಸಲಾಗಿದೆ. ಹಾಗಾದರೇ ಈ ಸ್ಮಾರ್ಟ್‌ ಮಾನಿಟರ್‌ನ ಇತರೆ ಫೀಚರ್ಸ್ ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಈ ಮಾನಟಿರ್‌ 31.5 ಇಂಚಿನ ಡಿಸ್‌ಪ್ಲೇ ಪಡೆದಿದ್ದು, ಈ ಡಿಸ್‌ಪ್ಲೇಯು 4K ಸೌಲಭ್ಯ ಸಹ ಪಡೆದಿದೆ. ಹಾಗೆಯೇ ಇದು 60Hz ಡಿಸ್ಪ್ಲೇ ಆಗಿದ್ದು, AQCOLOR ತಂತ್ರಜ್ಞಾನ ಪಡೆದಿದೆ. ಇದರ ಜೊತೆಗೆ IPS ಬ್ಲ್ಯಾಕ್‌ ತಂತ್ರಜ್ಞಾನಹೊಂದಿದ್ದು, ಇದು 3840 x 2160 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದುಕೊಂಡಿದೆ.

ಅಲ್ಲದೇ BenQ PD3225U ಸ್ಮಾರ್ಟ್‌ ಮಾನಿಟರ್‌ 16:9 ಆಕಾರ ಅನುಪಾತ ಹೊಂದಿದ್ದು, 400 nits ಬ್ರೈಟ್ನೆಸ್‌ ಸಪೋರ್ಟ್‌ ಒಳಗೊಂಡಿದೆ. 1.07 ಶತಕೋಟಿ ಬಣ್ಣಗಳು, 2000:1 ಕಾಂಟ್ರಾಸ್ಟ್ ಅನುಪಾತ, 178 ಡಿಗ್ರಿ ವೀಕ್ಷಣೆ ಆಯ್ಕೆ ಹೊಂದಿದೆ. 98% ಕಲರ್ ಗ್ಯಾಮಟ್, 140 PPI, ಆಂಟಿ-ಗ್ಲೇರ್, AMA, ಫ್ಲಿಕರ್-ಫ್ರೀ, ಲೋ ಬ್ಲೂ ಲೈಟ್ ಆಯ್ಕೆ ಸಹ ಇವೆ.

ಈ ಮಾನಟಿರ್ HDR10, VESA ಡಿಸ್ಪ್ಲೇ HDR 400 ಸೌಲಭ್ಯ ಪಡೆದುಕೊಂಡಿದೆ. ಇದರ ಜೊತೆಗೆ ಬಿಲ್ಟ್-ಇನ್ ಸ್ಪೀಕರ್ 2.5W x2; ಹೆಡ್‌ಫೋನ್ ಜ್ಯಾಕ್ ಆಯ್ಕೆಗಳು ಇವೆ. ಅಲ್ಲದೇ ಇದರೊಂದಿಗೆ KVM ಸ್ವಿಚ್, ಡ್ಯುಯಲ್ ವ್ಯೂ, ಡೆಲ್ಟಾ E(ಸರಾಸರಿ) ≤2, ಹಾಟ್‌ಕೀ ಪಕ್ G2, PIP/PBP, ICCsync ಆಯ್ಕೆಗಳು ಇವೆ.

ಇನ್‌ಪುಟ್/ಔಟ್‌ಪುಟ್ ಕನೆಕ್ಟರ್ ವಿಭಾಗದಲ್ಲಿ HDMI 2.0 x2, Thunderbolt 3, DP 1.4, ಹೆಡ್‌ಫೋನ್ ಜ್ಯಾಕ್, ಯುಎಸ್‌ಬಿ ಟೈಪ್ B / ಯುಎಸ್‌ಬಿ C / ಯುಎಸ್‌ಬಿ 3.2 x3 ಸಹ ಇವೆ ಜೊತೆಗೆ ಪ್ರಮಾಣೀಕರಣ TUV ಪ್ರಮಾಣಪತ್ರ, ಸಾಲಿಡ್‌ವರ್ಕ್ಸ್, ಶಾಂತ, ಪ್ಯಾಂಟೋನ್, ಪ್ಯಾಂಟೋನ್ ಸ್ಕಿನ್‌ಟೋನ್ ಪಡೆದಿದೆ. ಡಿಸ್‌ಪ್ಲೇ ಪೈಲಟ್ 2, ಡಿಸ್‌ಪ್ಲೇ ಕಲರ್ ಟಾಕ್ ಸಾಫ್ಟ್‌ವೇರ್ ಆಯ್ಕೆ ಇದೆ. ಬೇಸ್‌ ಹೊರತುಪಡಿಸಿ ಇದರ ತೂಕ 6.6ಕೆ.ಜಿ ಆಗಿದೆ.

ಬೆಲೆ ಮತ್ತು ಲಭ್ಯತೆ

ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಿರುವ 32 ಇಂಚಿನ BenQ PD3225U ಸ್ಮಾರ್ಟ್‌ 4K ಮಾನಿಟರ್ ಬೆಲೆಯು 99,990ರೂ. ಗಳು ಆಗಿದೆ. ಇನ್ನು ಖರೀದಿದಾರರು ಈ ಮಾನಿಟರ್‌ ಅನ್ನು ಅಧಿಕೃತ BenQ ಇಂಡಿಯಾದ ಇ-ಸ್ಟೋರ್, ಅಮೆಜಾನ್‌.ಇನ್‌ ಮತ್ತು ದೇಶದಾದ್ಯಂತ ಪ್ರಮುಖ ಫೋಟೋಗ್ರಫಿ ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದು.

Best Mobiles in India

English summary
BenQ PD3225U 4K Designer Monitor Launched in India. Check Price, Offer and Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+