Home
ಸುದ್ದಿಜಾಲ

ಬೆನ್‌ಕ್ಯೂ V5000i 4K RGB ಲೇಸರ್ ಟಿವಿ ಪ್ರೊಜೆಕ್ಟರ್ ಲಾಂಚ್; 'ಮನೆಯಲ್ಲೇ ಸಿನಿಮಾ ಥಿಯೇಟರ್‌'!

ಬೆನ್‌ಕ್ಯೂ (BenQ) ತಂತ್ರಜ್ಞಾನ ಉತ್ಪನ್ನಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್, ಕಂಪ್ಯೂಟಿಂಗ್ ಮತ್ತು ಸಂವಹನ ಡಿವೈಸ್‌ಗಳ ಸೇಲ್‌ನಲ್ಲಿ ತನ್ನದೇ ಆದ ಜನಪ್ರಿಯತೆ ಗಳಿಸಿಕೊಂಡಿದೆ. ಈ ಕಂಪೆನಿಯ ಡಿವೈಸ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದೆ. ಅದರಂತೆ ಈಗ ಬಹು ನಿರೀಕ್ಷಿತ ಟಿವಿ ಪ್ರೊಜೆಕ್ಟರ್ವೊಂದನ್ನು (TV projector) ಅನಾವರಣ ಮಾಡಿದೆ.

ಹೌದು, ಬೆನ್‌ಕ್ಯೂ ಭಾರತದಲ್ಲಿ V5000i 4K RGB ಲೇಸರ್ ಟಿವಿ ಪ್ರೊಜೆಕ್ಟರ್ (BenQ V5000i 4K RGB Laser TV Projector) ಅನ್ನು ಲಾಂಚ್‌ ಮಾಡಲಾಗಿದೆ. ಇದು ಗೂಗಲ್-ಪ್ರಮಾಣೀಕೃತ ಆಂಡ್ರಾಯ್ಡ್ ಟಿವಿಯಾಗಿದ್ದು, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನಂತಹ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬೆನ್‌ಕ್ಯೂ V5000i 4K RGB ಲೇಸರ್ ಟಿವಿ ಪ್ರೊಜೆಕ್ಟರ್ ಲಾಂಚ್...

V5000i 4K RGB ಲೇಸರ್ ಟಿವಿ ಪ್ರೊಜೆಕ್ಟರ್ : ಆರ್‌ಜಿಬಿ ಲೇಸರ್ ಬ್ರೈಟ್‌ನೆಸ್‌ನ 2500 ANSI ಲುಮೆನ್‌ಗಳೊಂದಿಗೆ ಸಜ್ಜುಗೊಂಡಿರುವ ಈ V5000i ಪ್ರೊಜೆಕ್ಟರ್ ಆಕರ್ಷಕ 4K ಅಲ್ಟ್ರಾ ಹೆಚ್‌ಡಿ ರೆಸಲ್ಯೂಶನ್ ಸಾಮರ್ಥ್ಯದ ಕಂಟೆಂಟ್‌ ವೀಕ್ಷಣೆಯನ್ನು ನೀಡುತ್ತದೆ. ಜೊತೆಗೆ ಎದ್ದು ಕಾಣುವ ಮತ್ತು ರೇಜರ್-ಶಾರ್ಪ್ ಚಿತ್ರದ ಗುಣಮಟ್ಟ ಇದರಲ್ಲಿದ್ದು, ಮನೆಯಲ್ಲಿಯೇ ಸಿನಿಮಾ ಥಿಯೇಟರ್‌ ಅನುಭವ ಪಡೆಯಬಹುದಾಗಿದೆ.

ತಲ್ಲೀನಗೊಳಿಸುವ ಸೌಂಡ್‌ ಸಾಮರ್ಥ್ಯ : ಈ V5000i 5Wx2 ಟ್ವೀಟರ್‌ಗಳು ಮತ್ತು 15Wx2 ವೂಫರ್‌ ಆಯ್ಕೆ ಪಡೆದುಕೊಂಡಿದ್ದು, ಈ ಮೂಲಕ 40W ಸೌಂಡ್‌ ಔಟ್‌ಪುಟ್‌ ನೀಡಲಿದೆ. ಜೊತೆಗೆ ಇನ್‌ಬಿಲ್ಟ್‌ ಹೈ-ಫೈ ಆಡಿಯೊ ಸಿಸ್ಟಮ್‌ನೊಂದಿಗೆ ಪ್ಯಾಕ್‌ ಆಗಿದ್ದು, ಇದರಲ್ಲಿನ 2300cc ಚೇಂಬರ್ ವಿನ್ಯಾಸವು ಧ್ವನಿ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಗೆ ಮಾಡುತ್ತದೆ. ಅದರಲ್ಲೂ ಡೀಪ್‌ ಬೇಸ್‌, ಪ್ರತಿಧ್ವನಿಸುವ ಬೇಸ್‌ನೊಂದಿಗೆ ನಿಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ.

ಈ ಡಿವೈಸ್‌ ಸಮಗ್ರ ಮನರಂಜನಾ ಕೇಂದ್ರವಾಗಿ ಕೆಲಸ ಮಾಡಲಿದ್ದು, ಗೂಗಲ್‌ ಪ್ರಾಮಾಣೀಕೃತ ಆಂಡ್ರಾಯ್ಡ್‌ ಟಿವಿ ಯೊಂದಿಗೆ ಕಾಣಿಸಿಕೊಂಡಿದೆ. ಇದರೊಂದಿಗೆ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನಂತಹ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ತಡೆಯಿಲ್ಲದ ಪ್ರವೇಶ ನೀಡಲಿದ್ದು, ಈ ಮೂಲಕ ಬಾಹ್ಯ ಡಿವೈಸ್‌ಗಳ ಅಗತ್ಯತೆಯನ್ನು ತೊಡೆದುಹಾಕಲಿದೆ. ಈ ಸ್ಮಾರ್ಟ್ ಪ್ರೊಜೆಕ್ಟರ್ ವಾಯ್ಸ್ ಅಸಿಸ್ಟೆಂಟ್‌, ಮಿರರ್ ಕಾಸ್ಟಿಂಗ್ ಮತ್ತು ವೈ-ಫೈ, ಬ್ಲೂಟೂತ್ ಮೂಲಕ ಸಂಪರ್ಕ ಬೆಂಬಲ ಪಡೆಯಲಿದೆ.

ಎಲ್ಲಾ ಕಡೆ ಹೊಂದಿಕೊಳ್ಳುತ್ತದೆ: ಈ V5000i ನ ಪ್ರಮುಖ ಪ್ರಯೋಜನ ಏನೆಂದರೆ ಇದು ಎಂತಹುದೇ ಸ್ಥಳಕ್ಕಾದರೂ ಹೊಂದಾಣಿಕೆ ಆಗಲಿದೆ ಆಟೋ ಸ್ಕ್ರೀನ್ ಫಿಟ್, ಮ್ಯಾನ್ಯುವಲ್ ಸ್ಕ್ರೀನ್ ಫಿಟ್ ಸೇರಿದಂತೆ ಇತರೆ ಆಯ್ಕೆಗಳೊಂದಿಗೆ ಈ ಪ್ರೊಜೆಕ್ಟರ್‌ ಕಾಣಿಸಿಕೊಂಡಿದ್ದು, ನೀವು ಇದನ್ನು ಅತ್ಯಂತ ಸರಳವಾಗಿ ಎಲ್ಲ ಬೇಕಾದರೂ ಬಳಕೆ ಮಾಡಬಹುದು. ಇದರೊಂದಿಗೆ ಬಾಹ್ಯ 5.1/7.1 ಸ್ಪೀಕರ್‌ಗಳಿಗಾಗಿ ಹೆಚ್‌ಡಿಎಮ್‌ಐ eARC ಆಯ್ಕೆಯೂ ಸಹ ಇದೆ.

V5000i 4K RGB ಲೇಸರ್ ಟಿವಿ ಪ್ರೊಜೆಕ್ಟರ್ ಬೆಲೆ ಹಾಗೂ ಲಭ್ಯತೆ: ಈ ಪ್ರೊಜೆಕ್ಟರ್ ಗೆ ಭಾರತದಲ್ಲಿ 5,49,000 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇದನ್ನು ನೀವು ಎಲ್ಲಾ ಪ್ರಮುಖ ರಿಟೇಲ್ ಹೋಮ್ ಎವಿ ಸಿಸ್ಟಮ್ ಇಂಟಿಗ್ರೇಷನ್ ಪಾಲುದಾರರು ಮತ್ತು ಬೆನ್‌ಕ್ಯೂ ಬ್ರಾಂಡ್ ಆನ್‌ಲೈನ್ ಸ್ಟೋರ್ ಮೂಲಕ ಖರೀದಿ ಮಾಡಬಹುದಾಗಿದೆ.

ಬೆನ್‌ಕ್ಯೂ V5000i 4K RGB ಲೇಸರ್ ಟಿವಿ ಪ್ರೊಜೆಕ್ಟರ್ ಲಾಂಚ್...

ಬೆನ್‌ಕ್ಯೂ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಸಿಂಗ್ ಅವರು ಈ ಬಗ್ಗೆ ಸಂತಸ ಹಂಚಿಕೊಂಡಿದ್ದು, ಮನೆಯಲ್ಲಿನ ಮನರಂಜನಾ ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಮೈಲಿಗಲ್ಲು V5000i ಅನ್ನು ಅನಾವರಣಗೊಳಿಸಲು ನಾವು ರೋಮಾಂಚನಗೊಂಡಿದ್ದೇವೆ. ದೃಶ್ಯ ಶ್ರೇಷ್ಠತೆಯನ್ನು ಮರುವ್ಯಾಖ್ಯಾನಿಸುವ ನಮ್ಮ ಧ್ಯೇಯದಲ್ಲಿ ಬೆನ್‌ಕ್ಯೂ ಅಚಲವಾಗಿದೆ. ಹಾಗೂ V5000i ಸಾಟಿಯಿಲ್ಲದ ಅನುಭವಗಳನ್ನು ನೀಡುವ ನಮ್ಮ ಪಟ್ಟುಬಿಡದ ಅನ್ವೇಷಣೆಯನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.
Best Mobiles in India

English summary
BenQ has launched the V5000i 4K RGB Laser TV Projector in India. It is a Google-certified Android TV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+