Electricity Bill Increase: ವಿದ್ಯುತ್ ಬಿಲ್ ಹೆಚ್ಚಳ? ಗ್ರಾಹಕರಿಗೆ ಎಚ್ಚರಿಕೆ ನೀಡಿದ ಬೆಸ್ಕಾಂ!
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯನ್ನು ಘೋಷಣೆ ಮಾಡಿದ ಬಳಿಕ ರಾಜ್ಯದಲ್ಲಿ ವಿದ್ಯುತ್ ದರದ ಸಂಬಂಧ ಭಾರೀ ಕೋಲಾಹಲದ ಚರ್ಚೆಗಳು ನಡೆಯುತ್ತಿವೆ. ಈ ನಡುವೆಯೇ ಬೆಸ್ಕಾಂ (BESCOM) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದು, ಈ ಮೂಲಕ ಜನರಲ್ಲಿದ್ದ ಆತಂಕಕ್ಕೆ ತೆರೆ ಎಳೆದಿದೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ವಿದ್ಯುತ್ ಬಿಲ್ (electricity bills) ಸಂಬಂಧ ಭಾರೀ ವರದಿಗಳು ಹರಿದಾಡುತ್ತವೆ. ಈ ವರದಿಗಳನ್ನು ನೋಡಿ ಕೆಲವರು ಸರ್ಕಾರದ ವಿರುದ್ಧ ಹರಿಹಾಯ್ದರೆ, ವಿರೋಧ ಪಕ್ಷಗಳಿಗೆ ಇದು ಅಸ್ತ್ರವಾಗಿ ಪರಿಣಮಿಸಿತ್ತು. ಇದೆಲ್ಲದಕ್ಕೂ ಕಾರಣವಾದದ್ದು ನಕಲಿ ಬಿಲ್. ಹಾಗಿದ್ರೆ, ಏನಿದು ನಕಲಿ ಬಿಲ್ ವಿಚಾರ, ಬೆಸ್ಕಾಂ ತನ್ನ ಗ್ರಾಹಕರಿಗೆ ನೀಡಿದೆ ಎಚ್ಚರಿಕೆ ಏನು?, ನಿಜಕ್ಕೂ ವಿದ್ಯುತ್ ದರದಲ್ಲಿ ಹೆಚ್ಚಳ ಆಗಿದೆಯಾ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ನಕಲಿ ಸುಂಕ ಹೆಚ್ಚಳ ವಿಚಾರ: 50% ಸುಂಕ ಹೆಚ್ಚಳ ಇರುವ ಫ್ಯಾಬ್ರಿಕೇಟೆಡ್ ಬಿಲ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದ್ದು, ಇದು ಜನರಲ್ಲಿ ಭಾರೀ ಆತಂಕ ನಿರ್ಮಾಣ ಮಾಡಿತ್ತು. ಮಿತಿಮೀರಿದ ವಿದ್ಯುತ್ ಬಿಲ್ ಹೆಚ್ಚಳಕ್ಕೆ ಜನರು ಕಂಗಾಲಾಗಿ ಏನಪ್ಪಾ ಹೀಗಾಯಿತು ಎಂದು ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಿಲ್‌ಗಳು ನಕಲಿ ಎಂದು ತಿಳಿದುಬಂದಿದೆ.
ಅದರಲ್ಲೂ ಪ್ರಮುಖವಾಗಿ ಮೇ ನಲ್ಲಿ ಬಂದ ಬಿಲ್ ಹಾಗೂ ಜೂನ್ ತಿಂಗಳಲ್ಲಿ ಬಂದ ಬಿಲ್ ಅನ್ನು ಹೋಲಿಕೆ ಮಾಡುವ ಫೋಟೋಗಳು ಇವಾಗಿದ್ದು, ಇವನ್ನು ನೋಡಿದಾಕ್ಷಣ ನಿಜವಾಗಿಯೂ ಇಷ್ಟೇ ವಿದ್ಯುತ್ ಬಿಲ್ ಬಂದಿದೆಯೇನೋ ಅನಿಸುವಂತಿತ್ತು. ಆ ನಕಲಿ ಬಿಲ್‌ನಲ್ಲಿ ಬೆಸ್ಕಾಂ ಶೇ.50 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಿದೆ ಎಂದು ಉಲ್ಲೇಖ ಮಾಡಲಾಗಿತ್ತು. ಆದರೆ, ಇಂತಹ ಬಿಲ್ ಗಳನ್ನು ನಂಬುವುದರಿಂದ ಗ್ರಾಹಕರು ದೂರವಿರಬೇಕು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಈ ನಕಲಿ ಬಿಲ್‌ನಲ್ಲಿ 131 ಯೂನಿಟ್‌ಗಳ ಬಳಕೆಗಾಗಿ ಮೇ 2023 ರ ಬಿಲ್ ಮೊತ್ತ 1,162 ರೂ. ಇದ್ದು, 2023 ರ ಜೂನ್‌ನಲ್ಲಿ 163 ಯೂನಿಟ್ ಬಳಕೆಗೆ 2,166 ರೂ. ಬಿಲ್ ಮೊತ್ತವನ್ನು ಅದರಲ್ಲಿ ಬರೆಯಲಾಗಿದೆ. ಆದರೆ, ಈ ಬಿಲ್‌ಗಳಲ್ಲಿ ಯಾವುದೇ ಇಲ್ಲ ಆರ್‌ಆರ್ ಸಂಖ್ಯೆ, ಖಾತೆ ಸಂಖ್ಯೆ, ಹೆಸರು ಮತ್ತು ಗ್ರಾಹಕರ ವಿಳಾಸ ಸಹ ಇಲ್ಲ. ಇದರಿಂದಾಗಿ ಇದು ಅದು ಅಸಲಿ ಅಲ್ಲ, ನಕಲಿ ಬಿಲ್ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಇದಿಷ್ಟೇ ಅಲ್ಲದೆ ಬೆಸ್ಕಾಂ ಮೇ ಬಿಲ್‌ನಲ್ಲಿ ಪ್ರತಿ ಯೂನಿಟ್‌ಗೆ 55 ಪೈಸೆ ಇಂಧನ ಹೊಂದಾಣಿಕೆ ವೆಚ್ಚವನ್ನು (ಎಫ್‌ಎಸಿ) ವಿಧಿಸಿದೆ ಎಂದು ವೈರಲ್ ಆಗಿರುವ ನಕಲಿ ಬಿಲ್‌ನಲ್ಲಿ ಬರೆಯಲಾಗಿದೆ. ಆದರೆ, ನಂಬುವ ವಿಷಯ ಏನೆಂದರೆ ಬೆಸ್ಕಾಂ ಗ್ರಾಹಕರಿಂದ ಎಫ್‌ಎಸಿ ಶುಲ್ಕವಾಗಿ ಪ್ರತಿ ಯೂನಿಟ್‌ಗೆ ಕೇವಲ 6 ಪೈಸೆ ಮಾತ್ರ ಸಂಗ್ರಹ ಮಾಡುತ್ತಿದೆ. ಈ ಕಾರಣದಿಂದ ಬೆಸ್ಕಾಂ ನೀಡುವ ಯಾವುದೇ ವಿದ್ಯುತ್ ಬಿಲ್‌ನಲ್ಲಿ ಏನೇ ಅನುಮಾನಗಳಿದ್ದಲ್ಲಿ ಬೆಸ್ಕಾಂ ಉಪವಿಭಾಗದ ಕಚೇರಿಗೆ ತೆರಳಿ ಸ್ಪಷ್ಟನೆ ಪಡೆಯಬಹುದು ಎಂದು ಬೆಸ್ಕಾಂ ತಿಳಿಸಿದೆ.
ಗೃಹ ಜ್ಯೋತಿ: ಈ ಎಲ್ಲಾ ಬೆಳವಣಿಗೆ ನಡುವೆ ಕರ್ನಾಟಕದಲ್ಲಿ ಉಚಿತ ವಿದ್ಯುತ್ ಪಡೆಯಲು ಗೃಹ ಜ್ಯೋತಿ ಯೋಜನೆಯ ನೋಂದಣಿಯನ್ನು ಜೂನ್ 18 ರಿಂದ ಮಾಡಿಸಿಕೊಳ್ಳಬಹುದಾಗಿದ್ದು, ಇದನ್ನು ಇದನ್ನು ನಿಮ್ಮ ಮೊಬೈಲ್ ಫೋನ್‌ಗಳು,ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್ ಮೂಲಕವೇ ಮಾಡಬಹುದು. ಫಲಾನುಭವಿಗಳು ತಮ್ಮ ನೋಂದಣಿಗೆ ಆಧಾರ್ ಕಾರ್ಡ್, ಗ್ರಾಹಕರ ಖಾತೆ ಐಡಿಗಳನ್ನು ರೆಡಿ ಮಾಡಿಟ್ಟುಕೊಳ್ಳಿ.
ಈ ಯೋಜನೆಯಲ್ಲಿ ಗೃಹೋಪಯೋಗಿ ಉದ್ದೇಶಗಳಿಗಾಗಿ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು. ಅದರಂತೆ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿ ಯೋಜನೆಗಾಗಿ ವಿಶೇಷ ಕಸ್ಟಮ್-ನಿರ್ಮಿತ ಪುಟದ ಅಡಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ https:evasindhugs.karnataka.gov.in/gruhajyothi ಲಿಂಕ್ ಬಳಕೆ ಮಾಡಿಕೊಳ್ಳಿ. ಇದರೊಂದಿಗೆ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿಯೂ ಸಹ ಈ ಯೋಜನೆಗೆ ಅರ್ಜಿ ಹಾಕಬಹುದು.


Click it and Unblock the Notifications








