Home
ಸುದ್ದಿಜಾಲ

5G Smartphones: ಬಜೆಟ್‌ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳಿವು!

ಸ್ಮಾರ್ಟ್‌ಫೋನ್‌ಗಳು ಇಂದು ವಿವಿಧ ಫೀಚರ್ಸ್‌ ಮೂಲಕ ಬಳಕೆದಾರರಿಗೆ ವಿಶೇಷ ಪ್ರಯೋಜನ ನೀಡುವ ಕೆಲಸ ಮಾಡುತ್ತಿವೆ. ಅದರಲ್ಲೂ ಗ್ರಾಹಕರು 5G ಸ್ಮಾರ್ಟ್‌ಫೋನ್‌ಗಳನ್ನು (5G Smartphones) ಹೆಚ್ಚು ಹೆಚ್ಚಾಗಿ ಖರೀದಿ ಮಾಡುತ್ತಿದ್ದು, ಇನ್ನಷ್ಟು ವೇಗದ ಸೌಲಭ್ಯ ಪಡೆಯುತ್ತಿದ್ದಾರೆ.

ಹೌದು, ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ಗಳಿಗೆ ಬಹು ಬೇಡಿಕೆ ಇದ್ದು, ಅದರಲ್ಲೂ ಕೆಲವು ಬ್ರ್ಯಾಂಡ್‌ಗಳು ಅಗ್ಗದ ದರದಲ್ಲಿ ಈ ಸೌಲಭ್ಯ ಕಲ್ಪಿಸಿಕೊಟ್ಟಿವೆ. ಈ ವಿಭಾಗದಲ್ಲಿ ನಾವು ಶಿಯೋಮಿ, ರಿಯಲ್‌ಮಿ, ಮೊಟೊ, ಪೊಕೊ (Xiaomi, Realme, Moto, Poco) ಸೇರಿದಂತೆ ಅನೇಕ ಕಂಪೆನಿಯ ಫೋನ್‌ಗಳನ್ನು ಕಾಣಬಹುದಾಗಿದೆ. ಹಾಗಿದ್ರೆ, ಯಾವೆಲ್ಲಾ 5G ಫೋನ್‌ಗಳು ಹೆಚ್ಚು ಬೇಡಿಕೆ ಪಡೆದಿವೆ?, ಅವುಗಳ ಫೀಚರ್ಸ್‌ ಏನು ಅನ್ನೊ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬಜೆಟ್‌ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳಿವು! ..

ಶಿಯೋಮಿ ರೆಡ್ಮಿ 5G: ಈ ಸ್ಮಾರ್ಟ್‌ಫೋನ್ (Xiaomi Redmi 5G) ಅನ್ನು ನೀವು ಇ-ಕಾಮರ್ಸ್‌ ಸೈಟ್‌ಗಳಲ್ಲಿ 13,439 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಅದರಂತೆ ಈ ಫೋನ್ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6.79 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಹಾಗೆಯೇ 50 MP + 2 MP ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ, 8 MP ಸೆಲ್ಫಿ ಕ್ಯಾಮೆರಾದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ರಿಯಲ್‌ಮಿ C67 5G : ಈ ಸ್ಮಾರ್ಟ್‌ಫೋನ್ (Realme C67 5G) 11,200 ರೂ.ಗಳ ದರದಲ್ಲಿ ಲಭ್ಯ ಇದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6.72 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 50 MP + 2 MP ಡ್ಯುಯಲ್ ರಿಯರ್‌ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮರಾ ಈ ಫೋನ್‌ನಲ್ಲಿದ್ದು, 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ಬಜೆಟ್‌ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳಿವು! ..

ಮೊಟೊ G34: ಈ ಸ್ಮಾರ್ಟ್‌ಫೋನ್‌ (Moto G34) ಅನ್ನು 12,840 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ರನ್ ಆಗಲಿದ್ದು, 6.5 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಜೊತೆಗೆ 120 Hz ರಿಫ್ರೆಶ್ ರೇಟ್‌ ಹೊಂದಿದೆ. ಇದರ ಜೊತೆಗೆ 50 MP + 2 MP ಡ್ಯುಯಲ್ ರಿಯರ್ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾ ಹೊಂದಿದ್ದು, 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.

ಪೊಕೊ M6 ಪ್ರೊ 5G : ಈ ಫೋನ್ (Poco M6 Pro 5G) 11,099 ರೂ.ಗಳ ಬೆಲೆಯೊಂದಿಗೆ ಕಾಣಿಸಿಕೊಂಡಿದೆ. ಇದು ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, 6.79 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಹಾಗೂ 90 Hz ರಿಫ್ರೆಶ್ ರೇಟ್‌ ಮೂಲಕ ಅತ್ಯುತ್ತಮವಾಗಿ ಕೆಲಸ ಮಾಡಲಿದೆ. ಇದರ ಜೊತೆಗೆ 50 MP + 2 MP ಡ್ಯುಯಲ್ ರಿಯರ್‌ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮರಾ ಹೊಂದಿದ್ದು, 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ಬಜೆಟ್‌ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳಿವು! ..

ಶಿಯೋಮಿ ರೆಡ್ಮಿ 13C 5G : ಈ ಫೋನ್ (Xiaomi Redmi 13C 5G) 10,911 ರೂ.ಗಳಿಗೆ ಲಭ್ಯ ಇದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 6.74 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಇದರೊಂದಿಗೆ 50 MP + 0.08 MP ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 5 MP ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ ಹೊಂದಿದ್ದು, ಇದೂ ಸಹ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.

ಬಜೆಟ್‌ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳಿವು! ..

ರಿಯಲ್‌ಮಿ ನಾರ್ಜೋ 60 5G: ಈ ಫೋನ್ (Realme Narzo 60 5G) 14,999ರೂ.ಗಳ ಬೆಲೆ ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6.43 ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಹಾಗೂ 64 MP + 2 MP ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾದೊಂದಿಗೆ ಉತ್ತಮ ಎನಿಸಿದೆ. ಇದರ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

Best Mobiles in India

English summary
Realme Narzo 60 5G,Realme C67 5G, Moto G34, Poco M6 Pro 5G and many smartphones available budget price in india.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+