Home
ಸುದ್ದಿಜಾಲ

5G Smartphone: 15 ಸಾವಿರದೊಳಗೆ ಲಭ್ಯ ಅತ್ಯುತ್ತಮವಾದ 5G ಸ್ಮಾರ್ಟ್‌ಫೋನ್‌‌ಗಳು: ಆಕರ್ಷಕ ಫೀಚರ್ಸ್‌

ಈಗಂತೂ ಸ್ಮಾರ್ಟ್‌ಫೋನ್‌ಗಳಿಗೆ ಬಹು ಬೇಡಿಕೆ ಇದೆ. ಅದರಲ್ಲೂ 5G ಸ್ಮಾರ್ಟ್‌ಫೋನ್‌ಗಳಿಗೆ (5G Smartphone) ಭರ್ಜರಿ ಬೇಡಿಕೆ ಇದ್ದು, ಬಜೆಟ್ ದರದಲ್ಲೇ ಈ ಫೋನ್‌ಗಳು ಲಭ್ಯ ಆಗುತ್ತಿರುವುದು ಸಂತಸಕರ ಸಂಗತಿ. ಅದರಲ್ಲೂ ಹದಿನೈದು ಸಾವಿರದ ಒಳಗೆ ಲಭ್ಯ ಇರುವ ಫೋನ್‌ಗಳನ್ನು ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ವಿಭಾಗದಲ್ಲಿ ವಿವೋ, ಐಕ್ಯೂ, ಸ್ಯಾಮ್‌ಸಂಗ್‌, ಶಿಯೋಮಿ ಸೇರಿದಂತೆ ಅನೇಕ ಕಂಪೆನಿಯ ಫೋನ್‌ಗಳನ್ನು ಕಾಣಬಹುದಾಗಿದೆ. ಈ ಫೋನ್‌ಗಳು ಭಿನ್ನ ಫೀಚರ್ಸ್‌ನೊಂದಿಗೆ ಆಕರ್ಷಕ ಶೈಲಿಯಲ್ಲಿ ಲಭ್ಯ ಇವೆ. ಹಾಗಿದ್ರೆ ಬನ್ನಿ ಈ ಬೆಲೆಯೊಳಗೆ ಯಾವೆಲ್ಲಾ ಫೋನ್‌ಗಳನ್ನು ಖರೀದಿ ಮಾಡಬಹುದು, ಫೀಚರ್ಸ್‌ ಏನಿವೆ ಅನ್ನೋದನ್ನು ನೋಡೋಣ.

ವಿವೋ T3x ಸ್ಮಾರ್ಟ್‌ಫೋನ್‌: ಈ ಸ್ಮಾರ್ಟ್‌ಫೋನ್‌ (Vivo T3x smartphone) ಅನ್ನು ನೀವು 13,499 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು ಆಕ್ಟಾ ಕೋರ್ (2.2 GHz, ಕ್ವಾಡ್ ಕೋರ್ + 1.8 GHz, ಕ್ವಾಡ್ ಕೋರ್) ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 4 GB RAM ಹಾಗೂ 6.72 ಇಂಚಿನ (17.07 ಸೆಂ) FHD+, LCD ಡಿಸ್ಪ್ಲೇ ಜೊತೆಗೆ 120 Hz ರಿಫ್ರೆಶ್ ರೇಟ್‌ ಆಯ್ಕೆಯನ್ನು ಕಾಣಬಹುದಾಗಿದೆ. ಇದರೊಂದಿಗೆ 50 MP + 2 MP ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಉಳಿದಂತೆ ಈ ಫೋನ್ 6000 mAh ಸಾಮರ್ಥ್ಯದ ಬ್ಯಾಟರಿ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ.

15 ಸಾವಿರದೊಳಗೆ ಲಭ್ಯ ಅತ್ಯುತ್ತಮವಾದ  5G ಸ್ಮಾರ್ಟ್‌ಫೋನ್‌‌ಗಳು..

ಐಕ್ಯೂ Z9x : ಈ ಸ್ಮಾರ್ಟ್‌ಫೋನ್ (IQOO Z9x) 12,999 ರೂ.ಗಳ ಬೆಲೆಗೆ ಲಭ್ಯ ಇದೆ. ಇದು ಆಕ್ಟಾ ಕೋರ್ (2.2 GHz, ಕ್ವಾಡ್ ಕೋರ್ + 1.8 GHz, ಕ್ವಾಡ್ ಕೋರ್)ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸೆರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 4 GB RAM ಹಾಗೂ 6.72 ಇಂಚಿನ (17.07 ಸೆಂ) FHD+, LCD ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೇಟ್‌ನೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ. ಇನ್ನು 50 MP + 2 MP ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ, 8 MP ಸೆಲ್ಫಿ ಕ್ಯಾಮರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ಮೊಟೊ G64: ಈ ಸ್ಮಾರ್ಟ್‌ಫೋನ್ (Moto G64) 14,380 ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ. ಇದು ಆಕ್ಟಾ ಕೋರ್ (2.5 GHz, ಡ್ಯುಯಲ್ ಕೋರ್ + 2 GHz, ಹೆಕ್ಸಾ ಕೋರ್) ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8 GB RAM ನೊಂದಿಗೆ ಪ್ಯಾಕ್‌ ಆಗಿದೆ. ಹಾಗೆಯೇ 6.5 ಇಂಚಿನ (16.51 ಸೆಂ) FHD+, IPS LCD ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೇಟ್‌ ಮೂಲಕ ಉತ್ತಮ ಎನಿಸಿದೆ. ಇದರೊಂದಿಗೆ 50 MP + 8 MP ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ, ಎಲ್ಇಡಿ ಫ್ಲ್ಯಾಶ್
16 MP ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ನೀಡಲಾಗಿದೆ.

15 ಸಾವಿರದೊಳಗೆ ಲಭ್ಯ ಅತ್ಯುತ್ತಮವಾದ  5G ಸ್ಮಾರ್ಟ್‌ಫೋನ್‌‌ಗಳು..

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 : ಈ ಫೋನ್ (Samsung Galaxy M34) 12,999 ರೂ.ಗಳ ಬೆಲೆ ಲಭ್ಯ ಇದೆ. ಇದು ಆಕ್ಟಾ ಕೋರ್ (2.4 GHz, ಡ್ಯುಯಲ್ ಕೋರ್ + 2 GHz, ಹೆಕ್ಸಾ ಕೋರ್) ಎಕ್ಸಿನೋಸ್‌ 1280 ಪ್ರೊಸೆಸರ್‌ ಬಲದೊಂದಿಗೆ 6GB RAM ಅನ್ನು ಕಾಣಬಹುದು. ಜೊತೆಗೆ 6.5 ಇಂಚಿನ (16.42 ಸೆಂ) FHD+, ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್‌, 50MP + 8MP + 2MP ಟ್ರಿಪಲ್ ಪ್ರಾಥಮಿಕ ಕ್ಯಾಮೆರಾ, 13MP ಸೆಲ್ಫಿ ಕ್ಯಾಮೆರಾ ಹೊಂದಿದ್ದು, 6000mAh ಸಾಮರ್ಥ್ಯದ ಬ್ಯಾಟರಿ ಈ ಫೋನ್‌ನಲ್ಲಿ ಇದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F15 : ಈ ಫೋನ್‌ (Samsung Galaxy F15) 11,999 ರೂ.ಗಳಲ್ಲಿ ಲಭ್ಯ ಇದೆ. ಇದು ಆಕ್ಟಾ ಕೋರ್ (2.2 GHz, ಡ್ಯುಯಲ್ ಕೋರ್ + 2 GHz, ಹೆಕ್ಸಾ ಕೋರ್) ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 4 GB RAM ಹಾಗೂ 6.5 ಇಂಚಿನ (16.51 ಸೆಂ) FHD+, ಸೂಪರ್ ಅಮೋಲೆಡ್ ಡಿಸ್‌ಪ್ಲೇ ಜೊತೆಗೆ 90 Hz ರಿಫ್ರೆಶ್ ರೇಟ್‌ ಅನ್ನು ಕಾಣಬಹುದಾಗಿದೆ. ಇನ್ನು 50 MP + 5 MP + 2 MP ಟ್ರಿಪಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 13 MP ಸೆಲ್ಫಿ ಕ್ಯಾಮೆರಾ ಈ ಫೋನ್‌ನಲ್ಲಿ ಇದೆ.

15 ಸಾವಿರದೊಳಗೆ ಲಭ್ಯ ಅತ್ಯುತ್ತಮವಾದ  5G ಸ್ಮಾರ್ಟ್‌ಫೋನ್‌‌ಗಳು..

ಶಿಯೋಮಿ ರೆಡ್ಮಿ 12 5G: ಈ ಫೋನ್‌ (Xiaomi Redmi 12 5G) ಅನ್ನು ನೀವು 11,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು ಆಕ್ಟಾ ಕೋರ್ (2.2 GHz, ಡ್ಯುಯಲ್ ಕೋರ್ + 1.8 GHz, ಹೆಕ್ಸಾ ಕೋರ್) ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 4 GB RAM, 6.79 ಇಂಚಿನ (17.25 ಸೆಂ) FHD+, IPS LCD ಡಿಸ್‌ಪ್ಲೇ, 90 Hz ರಿಫ್ರೆಶ್ ರೇಟ್‌ ಹೊಂದಿದೆ. ಅಲ್ಲದೆ 50 MP + 2 MP ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ, 8 MP ಸೆಲ್ಫಿ ಕ್ಯಾಮರಾವನ್ನು ಈ ಫೋನ್‌ ಪಡೆದಿದೆ.

Best Mobiles in India

English summary
Many 5G smartphones including Vivo T3x smartphone, IQOO Z9x, Moto G64, Samsung Galaxy M34, Samsung Galaxy F15, Xiaomi Redmi 12 5G are available at budget prices
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+