Home
ಸುದ್ದಿಜಾಲ

ಜಸ್ಟ್‌ 1000ರೂ. ಒಳಗೆ ಲಭ್ಯವಿರುವ ಉತ್ತಮ ಬ್ರಾಡ್‌ಬ್ಯಾಂಡ್‌ ಯೋಜನೆಗಳು!

ದೇಶದಲ್ಲಿ ಬ್ರಾಡ್‌ಬ್ಯಾಂಡ್‌ ವಲಯವು ಹೆಚ್ಚು ಚುರುಕುಗೊಳ್ಳುತ್ತಿದ್ದು, ಪ್ರಮುಖ ಪೂರೈಕೆದಾರ ಕಂಪನಿಗಳು ಆಕರ್ಷಕ ಯೋಜನೆಗಳನ್ನು ಗ್ರಾಹಕರಿಗೆ ನೀಡುತ್ತಿವೆ. ಈ ಪೈಕಿ ರಿಲಾಯನ್ಸ್‌ ಜಿಯೋ, ಏರ್‌ಟೆಲ್‌ ಹಾಗೂ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂಗಳು ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಈ ಮೂರು ಟೆಲಿಕಾಂಗಳು ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಭಿನ್ನ ಡೇಟಾ ಪ್ರಯೋಜನದ ಯೋಜನೆಗಳನ್ನು ಹೊಂದಿವೆ.

ಬ್ರಾಡ್‌ಬ್ಯಾಂಡ್‌

ಹೌದು, ಪ್ರಸ್ತುತ ಬ್ರಾಡ್‌ಬ್ಯಾಂಡ್‌ ವಲಯದಲ್ಲಿ ಪೈಪೋಟಿ ಏರುಗತಿಯಲ್ಲಿ ಸಾಗಿದೆ. ಈ ನಿಟ್ಟಿನಲ್ಲಿ ಪ್ರಮುಖ ಸಂಸ್ಥೆಗಳು ಅಗ್ಗದ ದರದಲ್ಲಿ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸುತ್ತ ಸಾಗಿವೆ. ಅವುಗಳಲ್ಲಿ ಜಿಯೋ, ಏರ್‌ಟೆಲ್‌, ಬಿಎಸ್‌ಎನ್‌ಎಲ್‌ ಸಂಸ್ಥೆಗಳು ಜಸ್ಟ್‌ 1000ರೂ. ಪ್ರೈಸ್‌ಟ್ಯಾಗ್‌ನಲ್ಲಿ ಎಂಟ್ರಿ ಲೆವೆಲ್‌ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಆಯ್ಕೆಯನ್ನು ಹೊಂದಿವೆ. ಇವು ಬಹುತೇಕ ಗ್ರಾಹಕರಿಗೆ ಅನುಕೂಲಕರ ಅನಿಸಿವೆ. ಹಾಗಾದರೇ ಜಿಯೋ, ಏರ್‌ಟೆಲ್‌, ಬಿಎಸ್‌ಎನ್‌ಎಲ್‌ ಟೆಲಿಕಾಂಗಳ 1000ರೂ. ಒಳಗಿನ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್‌ಎಲ್‌- 777ರೂ. ಯೋಜನೆ

ಬಿಎಸ್‌ಎನ್‌ಎಲ್‌- 777ರೂ. ಯೋಜನೆ

ಬಿಎಸ್‌ಎನ್‌ಎಲ್‌ ಸಂಸ್ಥೆಯ ಈ 777ರೂ.ಪ್ಲ್ಯಾನ್‌ ಒಂದು ತಿಂಗಳಿನಲ್ಲಿ 500GB ಡೇಟಾ ಸಿಗಲಿದೆ. ಡೇಟಾ ವೇಗದ ಮಿತಿಯು 50 Mbps ಸಾಮರ್ಥ್ಯದಲ್ಲಿರಲಿದ್ದು, ತಿಂಗಳ ನಿಗದಿತ ಡೇಟಾ ಬಳಕೆ ಮುಗಿದ ಬಳಿಕ 2Mbps ವೇಗದಲ್ಲಿ ಡೇಟಾ ಸೌಲಭ್ಯ ಮುಂದವರೆಯಲಿದೆ.

ಬಿಎಸ್‌ಎನ್‌ಎಲ್‌-849ರೂ. ಯೋಜನೆ

ಬಿಎಸ್‌ಎನ್‌ಎಲ್‌-849ರೂ. ಯೋಜನೆ

ಬಿಎಸ್‌ಎನ್‌ಎಲ್‌ನ ಈ ಬ್ರಾಡ್‌ಬಾಂಡ್‌ ಪ್ಲ್ಯಾನಿನಲ್ಲಿ ಒಂದು ತಿಂಗಳಿಗೆ ಒಟ್ಟು 600GB ಡೇಟಾ ಮಿತಿಯನ್ನು ನೀಡಲಾಗಿದ್ದು, ಯಾವುದೇ ದೈನಂದಿನ FUP ಮಿತಿ ಇರುವುದಿಲ್ಲ. ಈ ಪ್ಲ್ಯಾನ್‌ನಲ್ಲಿ ಡೇಟಾ ವೇಗವು 50 Mbps ಸಾಮರ್ಥ್ಯದಲ್ಲಿರಲಿದ್ದು, ಇತರೆ ನೆಟವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆಗಳ ಸೌಲಭ್ಯವನ್ನು ಪಡೆದಿದೆ.

ಏರ್‌ಟೆಲ್‌ 999ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಏರ್‌ಟೆಲ್‌ 999ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಏರ್‌ಟೆಲ್‌ ಈ ಬ್ರಾಡ್‌ಬ್ಯಾಂಡ್‌ ಯೋಜನೆಯು 999ರೂ. ಪ್ರೈಸ್‌ ಹೊಂದಿದೆ. ಇನ್ನು ಈ ಯೋಜನೆಯು 200 Mbps ವೇಗದಲ್ಲಿ ಸೇವೆ ಒದಗಿಸಲಿದೆ. ಇನ್ನು 30 ದಿನಗಳ ವ್ಯಾಲಿಡಿಟಿಯ ಈ ಯೋಜನೆಯಲ್ಲಿ 300GB ಡೇಟಾ ಪ್ರಯೋಜನ ದೊರೆಯುತ್ತದೆ.

ಜಿಯೋ ಫೈಬರ್ 399ರೂ. ಪ್ಲ್ಯಾನ್‌

ಜಿಯೋ ಫೈಬರ್ 399ರೂ. ಪ್ಲ್ಯಾನ್‌

ಜಿಯೋ ಫೈಬರ್‌ನ ಹೊಸ ಯೋಜನೆಯನ್ನು 399 ರೂಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯು 10 Mbps ಕಡಿಮೆ ಇಂಟರ್ನೆಟ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ನೀಡುತ್ತದೆ. ಜಿಯೋ ಫೈಬರ್ ರೂ 399 ಯೋಜನೆಯು ತಿಂಗಳ ಅನಿಯಮಿತ ಡೇಟಾದೊಂದಿಗೆ ಬರುತ್ತದೆ. ಅನಿಯಮಿಯ ವಾಯಿಸ್ ಕರೆ ಸೌಲಭ್ಯಗಳು ಸೇರಿವೆ. ಜಿಯೋದ ಹೆಚ್ಚಿನ ಬೆಲೆಯ ಯೋಜನೆಗಳಲ್ಲಿ ಓಟಿಟಿ ಚಂದಾದಾರಿಕೆ ಲಭ್ಯ.

ಜಿಯೋ 999ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಜಿಯೋ 999ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಜಿಯೋ ಫೈಬರ್ 999ರೂ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ 150 Mbps ಇಂಟರ್ನೆಟ್ ವೇಗವನ್ನು ಹೊಂದಿದೆ. ಇನ್ನು ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಪಡೆದಿದೆ. ಗ್ರಾಹಕರು ಅನಿಯಮಿತ ಡೇಟಾವನ್ನು ಪಡೆಯುತ್ತಾರೆ. ಆದರೆ ನಾವು ಮೊದಲೇ ವರದಿ ಮಾಡಿದಂತೆ, ಜಿಯೋ ಫೈಬರ್‌ನಿಂದ ಅನಿಯಮಿತ ಡೇಟಾವು ಇನ್ನೂ ತಿಂಗಳಿಗೆ 3.3 ಟಿಬಿ ಡೇಟಾದ ಎಫ್‌ಯುಪಿ ಮಿತಿಯನ್ನು ಹೊಂದಿದೆ.

Best Mobiles in India

English summary
Best Broadband Plans From Jio, Airtel And Bsnl Under Rs 1,000. Here we listed some best plans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+