Home
ಸುದ್ದಿಜಾಲ

ನೀವು BSNL ಟೆಲಿಕಾಂಗೆ PORT ಆಗ್ತೀರಾ?..ಹಾಗಿದ್ರೆ, ಈ ಪ್ಲ್ಯಾನ್‌ಗಳನ್ನು ಗಮನಿಸಿ!

ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳು ಇತ್ತೀಚಿಗೆ ಬೆಲೆ ಏರಿಕೆ ಮಾಡಿದ್ದು, ಇದರ ಪರಿಣಾಮ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ (BSNL) ಟೆಲಿಕಾಂಗೆ ಆಗಿದೆ. ಅಷ್ಟಕ್ಕೂ ಬಿಎಸ್‌ಎನ್‌ಎಲ್‌ ಸಂಸ್ಥೆ ಕೂಡಾ ಕೆಲವು ಆಕರ್ಷಕ ಪ್ಲ್ಯಾನ್‌ಗಳ ಮೂಲಕ ಖಾಸಗಿ ದರ್ಬಾರಗೆ ಸೆಡ್ಡು ಹೊಡೆಯುವ ಪ್ರಯತ್ನ ಮಾಡುತ್ತಲೆ ಬಂದಿದೆ. ಸದ್ಯ ಟೆಲಿಕಾಂ ಮಾರುಕಟ್ಟೆಯಲ್ಲಿ ಬಿಎಸ್‌ಎನ್‌ಎಸಲ್‌ ಮಿನುಗುವ ನಕ್ಷತ್ರದಂತೆ ಇದೆ. ಅನೇಕ ಬಳಕೆದಾರರು ಖಾಸಗಿ ಸಂಸ್ಥೆಗಳಿಂದ ಬಿಎಸ್‌ಎನ್‌ಎಲ್‌ಗೆ ಪೋರ್ಟ್‌ (PORT) ಆಗುತ್ತಿದ್ದಾರೆ. ಸಂಸ್ಥೆಯ ಕೆಲವು ಪ್ಲ್ಯಾನ್‌ಗಳು ಆಕರ್ಷಕ ಎನಿಸಿವೆ.

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ಸಹ ಭಿನ್ನ ಶ್ರೇಣಿಯ ಯೋಜನೆಗಳ ಆಯ್ಕೆ ಒಳಗೊಂಡಿದೆ. ಅವುಗಳಲ್ಲಿ ದೀರ್ಘಾವಧಿ ಪ್ರಿಪೇಯ್ಡ್‌ ಯೋಜನೆಗಳು, ಅಲ್ಪಾವಧಿಯ ರೀಚಾರ್ಜ್‌ ಪ್ಲ್ಯಾನ್‌ಗಳು ಸಹ ಸೇರಿವೆ. ಬಜೆಟ್‌ ಬೆಲೆಯಿಂದ ದುಬಾರಿ ರೇಂಜ್‌ನ ವರೆಗೂ ಹಲವು ಅನುಕೂಲಕರ ರೀಚಾರ್ಜ್‌ ಯೋಜನೆಗಳು ಗ್ರಾಹಕರಿಗೆ ಲಭ್ಯ ಇವೆ. ಹಾಗಾದರೇ BSNL ಸಂಸ್ಥೆಯ ಕೆಲವು ಬೆಸ್ಟ್‌ ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನೀವು BSNL ಟೆಲಿಕಾಂಗೆ PORT ಆಗ್ತೀರಾ?..ಹಾಗಿದ್ರೆ, ಈ ಪ್ಲ್ಯಾನ್‌ಗಳನ್ನು ಗಮನಿಸಿ!

ಬಿಎಸ್‌ಎನ್‌ಎಲ್‌ ಟೆಲಿಕಾಂನ 666ರೂ. ಯೋಜನೆ

ಬಿಎಸ್‌ಎನ್‌ಎಲ್‌ 666ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 105 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 0.5GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಅಧಿಕ ಡೇಟಾ ಅಗತ್ಯ ಇರದ ಗ್ರಾಹಕರಿಗೆ ಇದು ಅತ್ಯುತ್ತಮ ಪ್ಲ್ಯಾನ್‌ ಎನಿಸಲಿದೆ.

ಬಿಎಸ್‌ಎನ್‌ಎಲ್‌ ಟೆಲಿಕಾಂನ 797ರೂ. ಯೋಜನೆ

ಬಿಎಸ್‌ಎನ್‌ಎಲ್‌ 797ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 300 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳಿಗೆ 3 GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಬಿಗ್‌ ವ್ಯಾಲಿಡಿಟಿ ಅಗತ್ಯ ಇರುವ ಗ್ರಾಹಕರಿಗೆ ಈ ಯೋಜನೆಯು ಸೂಕ್ತ.

ಬಿಎಸ್‌ಎನ್‌ಎಲ್‌ ಟೆಲಿಕಾಂನ 999ರೂ. ಯೋಜನೆ

ಬಿಎಸ್‌ಎನ್‌ಎಲ್‌ 999ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 200 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 3 GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಯೋಜನೆಯು ಸೂಕ್ತ.

ಬಿಎಸ್‌ಎನ್‌ಎಲ್‌ ಟೆಲಿಕಾಂನ 1198ರೂ. ಯೋಜನೆ

ಬಿಎಸ್‌ಎನ್‌ಎಲ್‌ 1198ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳಿಗೆ 3 GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಬಜೆಟ್‌ ದರದಲ್ಲಿ ವಾರ್ಷಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಇದು ಬೊಂಬಾಟ್‌ ಪ್ಲ್ಯಾನ್‌.

ಬಿಎಸ್‌ಎನ್‌ಎಲ್‌ ಟೆಲಿಕಾಂನ 1999ರೂ. ಯೋಜನೆ

ಬಿಎಸ್‌ಎನ್‌ಎಲ್‌ (BSNL) 1999ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಹಾಗೆಯೇ ಇದರೊಂದಿಗೆ ನಿತ್ಯ 100 ಎಸ್‌ಎಮ್‌ಎಸ್‌ ಪ್ರಯೋಜನ ಕೂಡಾ ಲಭ್ಯ ಆಗಲಿದೆ.

ಬಿಎಸ್‌ಎನ್‌ಎಲ್‌ ಟೆಲಿಕಾಂನ 2999ರೂ. ಯೋಜನೆ

ಬಿಎಸ್‌ಎನ್‌ಎಲ್‌ (BSNL) 2999ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಹಾಗೆಯೇ ಇದರೊಂದಿಗೆ ನಿತ್ಯ 3GB ಡೇಟಾ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಕೂಡಾ ಲಭ್ಯ ಆಗಲಿದೆ.

Best Mobiles in India

English summary
Best BSNL Prepaid Recharge Plans for August 2024. Check benefits and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+