ದೀಪಾವಳಿಗೆ ಉಡುಗೊರೆ ನೀಡಬೇಕೆ?...ಇಲ್ಲಿವೆ ನೋಡಿ ಕೆಲವು ಸ್ಮಾರ್ಟ್ ಗಿಫ್ಟ್ ಐಡಿಯಾ!
ದೀಪಾವಳಿ ಸಂಭ್ರಮ ಇನ್ನೇನು ಹತ್ತಿರದಲ್ಲಿದೆ. ಈಗಾಗಲೇ ಹಲವರು ತಮ್ಮ ನೆಚ್ಚಿನವರಿಗೆ ಮೆಚ್ಚಿನ ಉಡುಗೊರೆ ನೀಡಲು ಮುಂದಾಗಿದ್ದಾರೆ. ಇದಕ್ಕಾಗಿಯೇ ಕೆಲವರು ಇ-ಕಾಮರ್ಸ್ ತಾಣಗಳತ್ತ ಮುಖ ಮಾಡಿದರೆ ಇನ್ನೂ ಕೆಲವರು ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಗೆ ಮುಂದಾಗುತ್ತಾರೆ. ಆದರೂ ಏನಾದರೂ ಹೊಸತನದಿಂದ ಕೂಡಿರುವ ಉಡುಗೊರೆ ಕೊಡಬೇಕು ಎಂದುಕೊಂಡಿದ್ದರೆ ಆ ಗಿಫ್ಟ್‌ಗಳ ವಿವರವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ ಗಮನಿಸಿ.

ಹೌದು, ದೀಪಾವಳಿ ಹಿನ್ನೆಲೆ ಸಾಮಾನ್ಯವಾಗಿ 2,000ರೂ. ಗಳಿಂದ 10,000ರೂ. ಗಳ ವರೆಗಿನ ಬೆಲೆಯಲ್ಲಿಆತ್ಮೀಯರಿಗಾಗಿ ಉಡುಗೊರೆ ನೀಡಲು ಬಹುಪಾಲು ಜನರು ಮುಂದಾಗುತ್ತಾರೆ. ಈ ಕಾರಣಕ್ಕಾಗಿಯೇ 10,000ರೂ. ಗಳ ಒಳಗೆ ಲಭ್ಯವಾಗುವ ಗಿಫ್ಟ್‌ಗಳ ಬಗ್ಗೆ ಹಾಗೂ ಅವುಗಳ ಬೆಲೆ ಮತ್ತು ಎಲ್ಲಿ ಸಿಗಲಿವೆ ಎಂಬ ಮಾಹಿತಿ ನೀಡಲಾಗಿದೆ ಓದಿರಿ.

ಕೊಡಕ್ HD LED ಟಿವಿ
ಕೊಡಕ್ HD LED ಟಿವಿಗೆ ಫ್ಲಿಪ್‌ಕಾರ್ಟ್ 5,999ರೂ. ಗಳ ಆಫರ್ ಬೆಲೆ ನಿಗದಿ ಮಾಡಿದೆ. ಈ ಟಿವಿ ಜೊತೆಗೆ ಅಂಡ್ರಾಯ್ಡ್ ಕೊಡಕ್ CA ಪ್ರೊ ಮತ್ತು 7Xಪ್ರೊ, QLED ಸರಣಿಗಳನ್ನು ಸಹ ನೀಡಲಾಗುತ್ತಿದೆ. ಈ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ ನಾಳೆಯಿಂದ (19ನೇ ಅಕ್ಟೋಬರ್) ಪ್ರಾರಂಭವಾಗಲಿದೆ.

ಎಕೋ ಡಾಟ್ (4ನೇ ಜನ್)
ಎಕೋ ಡಾಟ್ ಡಿವೈಸ್ ಅನ್ನು ಅಮೆಜಾನ್‌ನಲ್ಲಿ 2,249ರೂ. ಗಳಿಗೆ ಖರೀದಿ ಮಾಡಬಹುದು. ಇದರ ಮೂಲ ದರ 4,499ರೂ. ಗಳಾಗಿದೆ. ಈ ಡಿವೈಸ್ ಅಲೆಕ್ಸಾ ವಾಯ್ಸ್ ಕಂಟ್ರೋಪ್ ಫೀಚರ್ಸ್ ಆಯ್ಕೆ ಪಡೆದಿದ್ದು, ಇನ್‌ಬಿಲ್ಟ್ ಸ್ಪೀಕರ್‌ಗಳೊಂದಿಗೆ ಪ್ಯಾಕ್ ಆಗಿದೆ.

ಕಿಂಡಲ್ (10ನೇ ಜನ್)
ಕಿಂಡಲ್ ಡಿವೈಸ್ 7,999ರೂ. ಗಳ ಸಾಮಾನ್ಯ ದರ ಹೊಂದಿದ್ದು, 6,499ರೂ. ಗಳಿಗೆ ಅಮೆಜಾನ್‌ನಲ್ಲಿ ಖರೀದಿ ಮಾಡಬಹುದು. ಈ ಡಿವೈಸ್ ಪುಸ್ತಕದ ಉತ್ಸಾಹಿಗಳಿಗೆ ಹೆಚ್ಚಿಗೆ ಇಷ್ಟವಾಗಲಿದೆ. ಇನ್‌ಬಿಲ್ಟ್ ಕಸ್ಟಮೈಸ್ ಬ್ರೈಟ್‌ನೆಸ್ ಹೊಂದಿದ್ದು, ಕೋಣೆಯಲ್ಲಿ ಅಥವಾ ಹೊರಾಂಗಣದಲ್ಲಿ ಸುಲಭವಾಗಿ ಓದಬಹುದು.

ಬೋಟ್ ಎಕ್ಸ್ ಟೆಂಡ್ ಸ್ಮಾರ್ಟ್ ವಾಚ್
ಅಲೆಕ್ಸಾ ಆಯ್ಕೆ ಇರುವ ಬೋಟ್ ಎಕ್ಸ್ ಟೆಂಡ್ ಸ್ಮಾರ್ಟ್ ವಾಚ್ 7,990ರೂ. ಗಳ ಸಾಮಾನ್ಯ ದರ ಹೊಂದಿದ್ದು, ಕೇವಲ 1,999ರೂ. ಗಳಿಗೆ ಇದನ್ನು ನೀವು ಖರೀದಿ ಮಾಡಬಹುದು. ಈ ಸ್ಮಾರ್ಟ್‌ವಾಚ್ ನಿದ್ರೆಯ ಟ್ರ್ಯಾಕಿಂಗ್, ಒತ್ತಡ ಮಟ್ಟದ ಮಾಹಿತಿ ಸೇರಿದಂತೆ ಇನ್ನಿತರೆ ಮಾಹಿತಿಯನ್ನು ನೀಡುವ ಫೀಚರ್ಸ್ ಆಯ್ಕೆ ಪಡೆದಿದೆ.

ಲೆನೊವೊ ಸ್ಮಾರ್ಟ್ ಕ್ಲಾಕ್
ಅಲೆಕ್ಸಾ ಆಯ್ಕೆ ಇರುವ ಲೆನೊವೊ ಸ್ಮಾರ್ಟ್ ಕ್ಲಾಕ್ ಅಮೆಜಾನ್‌ನಲ್ಲಿ 4,999ರೂ. ಗಳಿಗೆ ಲಭ್ಯವಿದೆ. ಈ ಡಿವೈಸ್ ಅನ್ನು ಬೆಡ್‌ರೂಮ್, ಕಿಚನ್ ಅಥವಾ ಸ್ಟಡಿ ರೂಂ ಸೇರಿದಂತೆ ಎಲ್ಲಾ ಕಡೆ ಇರಿಸಬಹುದಾಗಿದೆ. ಹಾಗೆಯೇ ಅಮೆಜಾನ್ ಮ್ಯೂಸಿಕ್, ಗಾನ, ಜಿಯೋ ಸಾವನ್, ಸ್ಫೋಟಿಫೈ ಹಾಗೂ ಇನ್ನಿತರೆ ಆಪ್‌ಗಳಿಂದ ಹಾಡುಗಳನ್ನು ಸ್ಟ್ರೀಮ್ ಮಾಡಬಹುದು.

ಕಿಕೊ ಮಿಲಾನೊ ಫೆಸ್ಟಿವಲ್ ಗ್ಲೋ ಕಲೆಕ್ಷನ್
ಕಿಕೊ ಮಿಲಾನೊ ಫೆಸ್ಟಿವಲ್ ಗ್ಲೋ ಕಲೆಕ್ಷನ್‌ನಲ್ಲಿ ಬ್ಯಾಕ್ ಆನ್ ಸ್ಟೇಜ್ ಐಶ್ಯಾಡೋ ಪ್ಯಾಲೆಟ್‌ಗೆ 2,150ರೂ., ಮೆಟಾಲಿಕ್ ಲೂಸ್ ಐಶ್ಯಾಡೋಗೆ 1,190ರೂ.,ವಾಲ್ಯೂಮ್ ಹಾಗೂ ಕೇರ್ ಮಸ್ಕರಾಗೆ 1,550ರೂ., ಸೇರಿದಂತೆ ವಿವಿಧ ಮೇಕಪ್ ಕಿಟ್‌ಗಳು ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿವೆ.

ಏರ್‌ಟೆಲ್ ಎಕ್ಸ್‌ಸೇಪ್
ಏರ್‌ಟೆಲ್ ಎಕ್ಸ್‌ಸೇಪ್ ಬೆಲೆ 2.499ರೂ. ಗಳಿಂದ ಪ್ರಾರಂಭ ಆಗುತ್ತದೆ. ಅದರಲ್ಲೂ ಪ್ರಮುಖವಾಗಿ ಸ್ಟಿಕ್ಕಿ ಕ್ಯಾಮ್ ಬೆಲೆ 2,499ರೂ., 360° ಕ್ಯಾಮ್ 2,999ರೂ., ಆಕ್ಟಿವ್ ಡಿಫೆನ್ಸ್ ಕ್ಯಾಮ್ 4,499ರೂ.,ಗಳ ಬೆಲೆ ಹೊಂದಿದೆ. ಇವುಗಳಿಗೆ ನೀವು ವಾರ್ಷಿಕವಾಗಿ 999ರೂ. ಗಳನ್ನು ಪಾವತಿಸಬೇಕಿದೆ. ಇವುಗಳನ್ನು ಏರ್‌ಟೆಲ್ ಸೈಟ್‌ನಿಂದ ಹಾಗೂ ಸ್ಟೋರ್‌ಗಳಿಂದ ಖರೀದಿ ಮಾಡಬಹುದಾಗಿದೆ.

Bosch ಟ್ರ್ಯೂ ಮಿಕ್ಸ್ ಮಿಕ್ಸರ್ ಗ್ರೈಂಡರ್
ಈ ಗ್ರೈಂಡರ್ ಅನ್ನು ನೀವು ಕೇವಲ 6,999ರೂ. ಗಳಿಗೆ ಅಧಿಕೃತ ಸೈಟ್‌ನಿಂದ ಖರೀದಿ ಮಾಡಬಹುದು. ಈ ಮಿಕ್ಸರ್ ಗ್ರೈಂಡರ್ ಸಾಂಬಾರ್ ಮಸಾಲಾ, ರಸಂ ಪುಡಿ, ಗರಂ ಮಸಾಲಾವನ್ನು ಅರೆಯುತ್ತದೆ.

ಫೈರ್ ಟಿವಿ ಸ್ಟಿಕ್ (3ನೇ ಜನ್)
ಫೈರ್ ಟಿವಿ ಸ್ಟಿಕ್ (3ನೇ ಜನ್) ಡಿವೈಸ್ 4,499ರೂ. ಗಳ ಮೂಲ ದರ ಹೊಂದಿದ್ದು, 1,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಫೈರ್ ಟಿವಿ ಸ್ಟಿಕ್‌ನೊಂದಿಗೆ ಥಿಯೇಟರ್ ತರಹದ ಅನುಭವವನ್ನು ಮನೆಯಲ್ಲೇ ಪಡೆಯಬಹುದಾಗಿದೆ. ಇದರಲ್ಲಿ ಅಲೆಕ್ಸಾ ಆಯ್ಕೆಯೂ ಇದೆ.


Click it and Unblock the Notifications








