19 ಸಾವಿರದೊಳಗೆ ಅತ್ಯುತ್ತಮ ಕ್ಯಾಮೆರಾ ಫೋನ್ ಬೇಕೆ? ಈ ಲಿಸ್ಟ್ ಒಮ್ಮೆ ನೋಡಿ!
ಅಮೆಜಾನ್ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Amazon Great Indian Festival Sale) ನಾಳೆಯಿಂದ (ಅ. 8) ಆರಂಭ ಆಗಲಿದ್ದು, ಈ ಸೇಲ್‌ನಲ್ಲಿ ಸಾಕಷ್ಟು ದುಬಾರಿ ಫೋನ್‌ಗಳು ಅಗ್ಗದರ ದರದಲ್ಲಿ ಲಭ್ಯ ಆಗಲಿವೆ. ಈ ಮೂಲಕ ಗ್ರಾಹಕರು ಅವರ ಅನುಕೂಲತೆಗೆ ತಕ್ಕ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಈ ನಡುವೆ ಅತ್ಯುತ್ತಮ ಕ್ಯಾಮೆರಾ ಆಯ್ಕೆಯ ಫೋನ್‌ಗಳು ಈಗ ಬಹಳ ಜನಪ್ರಿಯತೆ ಪಡೆದಿವೆ.
ಹೌದು, ರಿಯಲ್‌ಮಿ, ಒನ್‌ಪ್ಲಸ್, ಸ್ಯಾಮ್‌ಸಂಗ್, ರೆಡ್‌ಮಿ (Realme, OnePlus, Samsung, Redmi) ಸೇರಿದಂತೆ ಇನ್ನೂ ಅನೇಕ ಬ್ರ್ಯಾಂಡ್‌ಗಳು ಅತ್ಯುತ್ತಮ ಕ್ಯಾಮೆರಾ ಫಿಚರ್ಸ್ ಇರುವ ಫೋನ್‌ಗಳನ್ನು ಈಗಾಗಲೇ ಲಾಂಚ್ ಮಾಡಿವೆ. ಈ ನಡುವೆ ನೀವೇನಾದರೂ 19,000 ರೂ. ಒಳಗಿನ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್ ಇರುವ ಫೋನ್ ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ವಿವರ. ಯಾವ ಫೋನ್‌ಗೆ ಎಷ್ಟು ಬೆಲೆ?, ಫೀಚರ್ಸ್ ಏನು ಎಂಬ ಮಾಹಿತಿ ಗಮನಿಸಿ.

ಒನ್‌ಪ್ಲಸ್ ನಾರ್ಡ್ CE Lite 5G : ಈ ಫೋನ್ (OnePlus Nord CE 3 Lite 5G) ಅನ್ನು ನೀವು ಈಗ 19,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 5G ಪ್ರೊಸೆಸರ್ ಬಲ ಹೊಂದಿದ್ದು, 8GB RAM ಜೊತೆಗೆ 128 GB ಸಂಗ್ರಹಣೆ ಮತ್ತು 8GB RAM ಜೊತೆಗೆ 256 GB ಸ್ಟೋರೇಜ್ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಅದರಂತೆ 108 MP ಮುಖ್ಯ ಕ್ಯಾಮೆರಾ, 2MP ಡೆಪ್ತ ಲೆನ್ಸ್ ಮತ್ತು 2MP ಮ್ಯಾಕ್ರೋ ಲೆನ್ಸ್ ಕ್ಯಾಮೆರಾವನ್ನು ಹೊಂದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G : ಈ ಸ್ಯಾಮ್‌ಸಂಗ್‌ನ (Samsung Galaxy M34 5G) ಫೋನ್ ಅನ್ನು ಈ ವಿಶೇಷ ಸೇಲ್‌ನಲ್ಲಿ 16,499ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು ಎನ್ಸಿನೋಸ್ 1280 ಅಕ್ಟಾ ಕೋರ್ 2.4GHz ಪ್ರೊಸೆಸರ್ ಬಲ ಹೊಂದಿದ್ದು, 6GB, 128GB ವೇರಿಯಂಟ್ ನಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ 50MP+8MP+2MP ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹಾಗೂ 13MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ರೆಡ್ಮಿ 12 5G : ಈ ಫೋನ್ (Redmi 12 5G) ಅಮೆಜಾನ್‌ನಲ್ಲಿ ಭಾರೀ ಆಫರ್ ಪಡೆದಿದೆ. ಅಂದರೆ ನೀವು ಇದನ್ನು 11,498 ರೂ.ಗಳಿಗೆ ಕೊಂಡುಕೊಳ್ಳಬಹುದು. ಇದು ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್ ಬಲದೊಂದಿಗೆ ಕಾಣಿಸಿಕೊಂಡಿದ್ದು, 4 GB RAM ಜೊತೆಗೆ 128 GB ಇಂಟರ್ ಸ್ಟೋರೇಜ್ ಹೊಂದಿದೆ. ಇನ್ನು ವಿಂಟೇಜ್ ಫಿಲ್ಮ್ ಫಿಲ್ಟರ್‌ಗಳು, ಫಿಲ್ಮ್ ಫ್ರೇಮ್, ಪೋರ್ಟ್ರೇಟ್, ನೈಟ್ ಮೋಡ್ ಸೌಲಭ್ಯದೊಂದಿಗೆ 8MP ಸೆಲ್ಫಿ ಕ್ಯಾಮೆರಾ, 50MP ಎಐ ಡ್ಯುಯಲ್ ಕ್ಯಾಮೆರಾ ಆಯ್ಕೆ ಈ ಫೋನ್‌ನಲ್ಲಿದೆ.
ರಿಯಲ್‌ಮಿ ನಾರ್ಜೋ 60 5G: ಈ ಫೋನ್ (Realme Narzo 60 5G) ಸಹ ನಿಮಗೆ ಈಗ ವಿಶೇಷ ಸೇಲ್‌ನಲ್ಲಿ 16,499 ರೂ.ಗಳಿಗೆ ಸಿಗಲಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್ ಅನ್ನು ಹೊಂದಿದ್ದು, ಬಹು-ಕಾರ್ಯವನ್ನು ಸುಲಭವಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 8GB RAM ಹಾಗೂ 128GB ಇಂಟರ್ ಸ್ಟೋರೇಜ್‌ನ ಬೇಸ್ ಮಾಡೆಲ್‌ನಲ್ಲಿ ಇದು ಕಾಣಿಸಿಕೊಂಡಿದ್ದು, 64 MP ಮುಖ್ಯ ಕ್ಯಾಮೆರಾದೊಂದಿಗೆ ವಿಶೇಷ ಎನಿಸಿದೆ.

ಐಕ್ಯೂ Z7s 5G : ಈ ಫೋನ್ (iQOO Z7s 5G) ನಿಮಗೆ 17,999 ರೂ.ಗಳಿಗೆ ದೊರೆಯಲಿದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 695 5G ಪ್ರೊಸೆಸರ್ ಬಲ ಹೊಂದಿದ್ದು, 6.38 ಇಂಚಿನ ಫುಲ್ ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಮೂಲಕ ಪ್ರೀಮಿಯಂ ನೋಟ ಪಡೆದಿದೆ. ಇನ್ನು 64MP ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು ಅಲ್ಟ್ರಾ-ಸ್ಟೇಬಲ್ ಕ್ಯಾಮೆರಾ ಹಾಗೂ 2MP ಬೊಕೆ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾ ಆಯ್ಕೆ ಈ ಫೋನ್‌ನಲ್ಲಿದೆ.


Click it and Unblock the Notifications








