World Photography Day 2023: ಈ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ ಆಯ್ಕೆಗೆ ಫೇಮಸ್ಸು! 20 ಸಾವಿರದೊಳಗೆ ಲಭ್ಯ
ಸ್ಮಾರ್ಟ್‌ಫೋನ್‌ಗಳು ಇತ್ತೀಚಿಗೆ ಕ್ಯಾಮೆರಾ ಸೌಲಭ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತವೆ. ಅದರಲ್ಲೂ ಸ್ಯಾಮ್‌ಸಂಗ್ ಇದೀಗ 400 ಕ್ಕೂ ಹೆಚ್ಚಿನ ಮೆಗಾಪಿಕ್ಸೆಲ್ ಆಯ್ಕೆ ಇರುವ ಸೆನ್ಸರ್ ಅನ್ನು ಪರಿಚಯಿಸಲು ಮುಂದಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು, ಮಾರುಕಟ್ಟೆಯಲ್ಲಿ ದೊಡ್ಡ ಅಲೆಯನ್ನೇ ಉಂಟು ಮಾಡಿದೆ.
ಹೌದು, ಈಗಂತೂ ಬಹುಪಾಲು ಮಂದಿ ಕ್ಯಾಮೆರಾ ಸೌಲಭ್ಯ ನೋಡಿಯೇ ಫೋನ್‌ಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಅದರಲ್ಲೂ ಬಹುಪಾಲು ಜನರು ಈಗ ವಿಶ್ವ ಛಾಯಾಗ್ರಹಣ ದಿನದ (world photography day) ಸಂಭ್ರಮದಲ್ಲಿದ್ದಾರೆ. ಈ ಕಾರಣಕ್ಕೆ ನಾವಿಲ್ಲಿ ಕೇವಲ 20 ಸಾವಿರದ ಒಳಗಿನ ಬೆಲೆ ಹೊಂದಿರುವ ಹಾಗೂ ಅತ್ಯುತ್ತಮ ಕ್ಯಾಮೆರಾ(camera) ಸೌಲಭ್ಯ ಇರುವ ಟಾಪ್ ಬ್ರ್ಯಾಂಡ್‌ನ ಫೋನ್‌ಗಳ ವಿವರವನ್ನು ತಿಳಿಸಿಕೊಟ್ಟಿದ್ದೇವೆ ಗಮನಿಸಿ.

ಇನ್ಫಿನಿಕ್ಸ್ ಝೀರೋ : ಈ ಫೋನ್ ಅನ್ನು ನೀವು 15,499ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದು. ಇದು 6.7 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 90 Hz ರಿಫ್ರೆಶ್ ರೇಟ್ ಆಯ್ಕೆ ಮೂಲಕ ಅತ್ಯುತ್ತಮವಾಗಿದೆ. ಜೊತೆಗೆ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G99 ಪ್ರೊಸೆಸರ್ ಬಲ ಹೊಂದಿದ್ದು, 8 GB RAM ಆಯ್ಕೆ ಮೂಲಕ ಉತ್ತಮ ಕಾರ್ಯಕ್ಷಮತೆ ಹೊಂದಿದೆ. ಉಳಿದಂತೆ 108MP+13MP+2MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 60MP ಸೆಲ್ಫಿ ಕ್ಯಾಮೆರಾದ ಆಯ್ಕೆ ಹೊಂದಿದೆ.
ಟೆಕ್ನೋ ಕ್ಯಾಮನ್ 16: ಈ ಫೋನ್ ಅನ್ನು ನೀವು 19,999ರೂ.ಗಳಿಗೆ ಕೊಂಡುಕೊಳ್ಳಬಹುದು. ಇದು 6.85 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 90 Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಮೀಡಿಯಾ ಟೆಕ್ ಹೆಲಿಯೊ G90T ಪ್ರೊಸೆಸರ್ ಬೆಂಬಲ ಮತ್ತು 8 GB RAM ಆಯ್ಕೆ ಮೂಲಕ ಅತ್ಯುತ್ತಮ ಎನಿಸಿದ್ದು, 64+8+2+2MP ಕ್ವಾಡ್ ರಿಯರ್ ಕ್ಯಾಮೆರಾ ಹಾಗೂ 48MP+8MP ಡ್ಯುಯಲ್ ಫ್ರಂಟ್ ಕ್ಯಾಮೆರಾ ಆಯ್ಕೆ ಈ ಫೋನ್‌ನಲ್ಲಿದೆ.
ಟೆಕ್ನೋ ಕ್ಯಾಮನ್ 20: ಈ ಫೋನ್ ನಿಮಗೆ 14,999 ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. ಈ ಫೋನ್ 6.67 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 60Hz ರಿಫ್ರೆಶ್ ರೇಟ್ ಆಯ್ಕೆ ಹೊಂದಿದೆ. ಜೊತೆಗೆ ಮೀಡಿಯಾ ಟೆಕ್ ಹಿಲಿಯೊ G85 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುವ ಈ ಫೋನ್ 64MP+2MP+0.08MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 32MP ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದೆ.
ಮೋಟೊ G60 : ಈ ವಿಶೇಷ ಫೋನ್ ಸಹ ನಿಮಗೆ 14,999ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. ಇದು 6.8 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 120 Hz ರಿಫ್ರೆಶ್ ರೇಟ್ ಮೂಲಕ ಉತ್ತಮ ಫೋನ್‌ಗಳ ಸಾಲಿನಲ್ಲಿದೆ. ಜೊತೆಗೆ ಸ್ನಾಪ್‌ಡ್ರಾಗನ್ 732G ಪ್ರೊಸೆಸರ್ ಸಾಮರ್ಥ್ಯ ಹಾಗೂ 6GB RAM ಮೂಲಕ ಉತ್ತಮ ಕಾರ್ಯಕ್ಷಮತೆ ನೀಡಲಿದ್ದು, 108MP+8MP+2MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 32MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F41: ಈ ಫೋನ್ ಅನ್ನು 16,999ರೂ.ಗಳಿಗೆ ಖರೀದಿ ಮಾಡಬಹುದು. ಇದು 6.4 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 60Hz ರಿಫ್ರೆಶ್ ರೇಟ್ ಆಯ್ಕೆ ಮೂಲಕ ಕಾಣಿಸಿಕೊಂಡಿದೆ. ಇದರೊಂದಿಗೆ ಸ್ಯಾಮ್‌ಸಂಗ್ ಎಕ್ಸಿನೋಸ್ 9 ಅಕ್ಟಾ 9611 ಪ್ರೊಸೆಸರ್ ಬಲದೊಂದಿಗೆ 6 GB RAM ಆಯ್ಕೆ ಪಡೆದಿದೆ. ಈ ಫೋನ್ ಸಹ 64MP+8MP+5MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 32MP ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದೆ.

ರಿಯಲ್‌ಮಿ X2: ಈ ಫೋನ್ ಅನ್ನು ಸಹ ನೀವು 16,999ರೂ.ಗಳಿಗೆ ಖರೀದಿ ಮಾಡಬಹುದು. ಇದು 6.4 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಸ್ನಾಪ್‌ಡ್ರಾಗನ್ 730G ಪ್ರೊಸೆಸರ್ ಬಲ ಹಾಗೂ 4 GB RAM ಆಯ್ಕೆ ಮೂಲಕ ಉತ್ತಮ ಅನುಭವ ನೀಡಲಿದೆ. ಇದರೊಂದಿಗೆ 64+8+2+2MP ಕ್ವಾಡ್ ರಿಯರ್ ಕ್ಯಾಮೆರಾ ಹಾಗೂ 32MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.


Click it and Unblock the Notifications








