Home
ಸುದ್ದಿಜಾಲ

Smartphones: ಈ ವರ್ಷ ಲಾಂಚ್‌ ಆದ 25 ಸಾವಿರದೊಳಗಿರುವ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಿವು! ಸಖತ್‌ ಫೀಚರ್ಸ್‌

ಸ್ಮಾರ್ಟ್‌ಫೋನ್‌ಗಳು (Smartphones) ವಿವಿಧ ವಿಷಯಗಳ ಆಧಾರದ ಮೇಲೆ ಹೆಚ್ಚು ಜನಪ್ರಿಯತೆ ಪಡೆಯುತ್ತವೆ. ಅಂದರೆ ಬ್ಯಾಟರಿ, ಪ್ರೊಸೆಸರ್‌, ಬೆಲೆ, ಫಾಸ್ಟ್‌ ಚಾರ್ಜಿಂಗ್‌ ಸೇರಿದಂತೆ ಅನೇಕ ವಿಷಯಗಳನ್ನು ಈ ವೇಳೆ ಗಣನೆಗೆ ತೆಗೆದುಕೊಳ್ಳಬಹುದು. ಅದರಂತೆ ಕ್ಯಾಮೆರಾ ಪ್ರಮುಖ ವಿಷಯವಾಗಿದೆ.

ಹೌದು, ಕ್ಯಾಮೆರಾ ಆಧಾರಿತ ಫೋನ್‌ಗಳನ್ನು ಭಾರತದಲ್ಲಿ ಹೆಚ್ಚು ಹೆಚ್ಚಾಗಿ ಖರೀದಿ ಮಾಡಲಾಗುತ್ತದೆ. ಅದರಲ್ಲೂ ಮಿಡ್‌ರೇಂಜ್‌ ಅಥವಾ ಬಜೆಟ್‌ ಬೆಲೆಯಲ್ಲಿ ಈ ಫೋನ್‌ ಗಳು ಲಭ್ಯವಾದರಂತೂ ಕ್ಯೂ ನಿಂತು ಖರೀದಿ ಮಾಡುವ ಗ್ರಾಹಕರು ನಮ್ಮಲ್ಲಿ ಇದ್ದಾರೆ. ಈ ನಡುವೆ ನೀವು ಏನಾದರೂ ಈ ವರ್ಷ ಲಾಂಚ್‌ ಆಗಿರುವ ಜೊತೆಗೆ 25 ಸಾವಿರದ ಒಳಗಿರುವ ಲಭ್ಯ ಇರುವ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಲು ಮುಂದಾಗಿದ್ದರೆ ಇಲ್ಲಿವೆ ನೋಡಿ ಬೆಸ್ಟ್‌ ಫೋನ್‌ಗಳು.

ಈ ವರ್ಷ ಲಾಂಚ್‌ ಆದ 25 ಸಾವಿರದೊಳಗಿರುವ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಿವು!

ಒಪ್ಪೋ F25 ಪ್ರೊ 5G: ಈ ಸ್ಮಾರ್ಟ್‌ಫೋನ್‌ (Oppo F25 Pro 5G) ಸಹ ವಿಶೇಷವಾದ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅಂದರೆ 64 ಮೆಗಾಪಿಕ್ಸೆಲ್‌ನ OV64B 1/2" ಸೆನ್ಸರ್‌ನೊಂದಿಗೆ ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅಂದರೆ 8 ಮೆಗಾಪಿಕ್ಸೆಲ್‌ನ ಸೋನಿ IMX355 112° ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್‌ನ OV02B10 ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದ್ದು, 21mm ಫೋಕಲ್ ಲೆಂತ್ ಜೊತೆಗೆ 32 ಮೆಗಾಪಿಕ್ಸೆಲ್‌ನ IMX615 ಕ್ಯಾಮೆರಾ ಸೆನ್ಸಾರ್ ಆಯ್ಕೆ ಪಡೆದುಕೊಂಡಿದೆ. ಈ ಫೋನ್ 128GB ಮತ್ತು 256GB ನ ಸ್ಟೋರೇಜ್‌ನಲ್ಲಿ ಕಾಣಿಸಿಕೊಂಡಿದ್ದು, ಕ್ರಮವಾಗಿ 23,999ರೂ.ಗಳು ಮತ್ತು 25,999 ರೂ.ಗಳ ಬೆಲೆ ಪಡೆದಿದೆ.

ರೆಡ್ಮಿ ನೋಟ್‌13 5G: ಈ ಸ್ಮಾರ್ಟ್‌ಫೋನ್ (Redmi Note13 5G) ಬರೋಬ್ಬರಿ 108 ಮೆಗಾಪಿಕ್ಸೆಲ್‌ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಕ್ಯಾಮೆರಾ ಹೊಂದಿದ್ದು, 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಈ ಫೋನ್‌ ಮೂರು ಸ್ಟೋರೇಜ್‌ ವೇರಿಯಂಟ್‌ನಲ್ಲಿ ಲಭ್ಯ ಇದ್ದು, 6GB + 128GB, 8GB + 256GB ಮತ್ತು 12GB + 256GB ಇಂಟರ್‌ ಸ್ಟೋರೇಜ್‌ ಗಳು ಕ್ರಮವಾಗಿ 17,999ರೂ.ಗಳು, 19,999ರೂ.ಗಳು ಮತ್ತು 21,999 ರೂ.ಗಳಲ್ಲಿ ಲಭ್ಯ ಇದೆ.

ನಥಿಂಗ್ ಫೋನ್ (2a): ನಥಿಂಗ್ ಫೋನ್ (2a) (Nothing Phone 2a)ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್‌ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಮೂಲಕ ಸೆಲ್ಫಿ ಪ್ರಿಯರಿಗೆ ನೆಚ್ಚಿನ ಫೋನ್ ಆಗಿದೆ. ಇದು ಮೂರು ಸ್ಟೋರೇಜ್‌ ವೇರಿಯಂಟ್‌ನಲ್ಲಿ ಲಭ್ಯ ಇದ್ದು, 8GB + 128GB, 8GB + 256GB ಹಾಗೂ 12 + 256GB ಇಂಟರ್‌ ಸ್ಟೋರೇಜ್‌ ಫೋನ್ ಅನ್ನು ಕಾಣಬಹುದು. ಈ ಫೋನ್‌ಗಳು ಕ್ರಮವಾಗಿ 23,999ರೂ.ಗಳು, 25,999ರೂ.ಗಳು ಹಾಗೂ 27,999ರೂ.ಗಳ ಬೆಲೆಗೆ ಲಭ್ಯ ಇದೆ.

ಈ ವರ್ಷ ಲಾಂಚ್‌ ಆದ 25 ಸಾವಿರದೊಳಗಿರುವ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಿವು!

ರಿಯಲ್‌ಮಿ 12+ 5G: ಈ ಸ್ಮಾರ್ಟ್‌ಫೋನ್ (Realme 12+ 5G) ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾದೊಂದಿಗೆ ಮೊದಲ ಸೋನಿ LYT-600 ಸೆನ್ಸರ್‌ ಹೊಂದಿರುವ ಫೋನ್‌ ಆಗಿ ಗುರುತಿಸಿಕೊಂಡಿದೆ. ಹಾಗೆಯೇ 8 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್‌ಮ್ಯಾಕ್ರೋ ಕ್ಯಾಮೆರಾ ಆಯ್ಕೆ ಪಡೆದಿದ್ದು, ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಜೊತೆಗೆ ಈ ಫೋನ್ 8GB + 128GB ಹಾಗೂ 8GB + 256GB ಯ ಎರಡು ಸ್ಟೋರೇಜ್ ವೇರಿಯಂಟ್‌ನಲ್ಲಿ ಇದು ಲಭ್ಯ ಇದ್ದು, ಇದರ ಬೆಲೆ 18,999 ರೂ.ಗಳಿಂದ ಆರಂಭ ಆಗಲಿದೆ.

ಈ ವರ್ಷ ಲಾಂಚ್‌ ಆದ 25 ಸಾವಿರದೊಳಗಿರುವ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಿವು!

ಐಕ್ಯೂ Z9 5G: ಈ ಫೋನ್ (IQOO Z9 5G) 50 ಮೆಗಾಪಿಕ್ಸೆಲ್‌ನ ಸೋನಿ IMX-882 ಕ್ಯಾಮೆರಾ ಜೊತೆಗೆ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 8GB + 128GB ಮತ್ತು 8GB + 256GB ನ ಎರಡು ಸ್ಟೋರೇಜ್ ವೇರಿಯಂಟ್‌ನಲ್ಲಿ ಈ ಫೋನ್‌ ಲಭ್ಯ ಇದ್ದು, ಕ್ರಮವಾಗಿ 19,999ರೂ.ಗಳು ಮತ್ತು 21,999 ರೂ.ಗಳ ಬೆಲೆ ಹೊಂದಿದೆ.

Best Mobiles in India

English summary
Smartphones with good cameras are in great demand in the market. According, here is a list of the best smartphones launched this year and available under 25k.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+