ನಿಮಗೆ ಸಿಸಿಟಿವಿ ಕ್ಯಾಮೆರಾ ಬೇಕೆ?..ಹಾಗಿದ್ರೆ ಶಿಯೋಮಿಯ ಈ ಆಫರ್ ಬೆಸ್ಟ್!
ಜನಪ್ರಿಯ ಇ ಕಾಮರ್ಸ್ ತಾಣಗಳಾದ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ಗಳು ಹಬ್ಬಗಳು ಬಂದರೆ ಸ್ಪೆಷಲ್ ಡಿಸ್ಕೌಂಟ್ ಮೇಳಗಳನ್ನು ಆಯೋಜಿಸುತ್ತವೆ. ಅದೇ ರೀತಿ ಇತ್ತೀಚಿಗೆ ಗ್ಯಾಡ್ಜೆಟ್ಸ್ ತಯಾರಿಕಾ ಸಂಸ್ಥೆಗಳು ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟ ಮೇಳಗಳನ್ನು ಆಯೋಜಿಸಿ ಗ್ರಾಹಕರನ್ನು ಸೆಳೆಯುತ್ತಿವೆ. ಸದ್ಯ ಶಿಯೋಮಿ ಕೂಡಾ 'ದೀಪಾವಳಿ ವಿತ್ ಮಿ' ಸೇಲ್ ಆಯೋಜಿಸಿ ಸದ್ದು ಮಾಡಿದೆ.
ಹೌದು, ಶಿಯೋಮಿ ಸಂಸ್ಥೆಯು ದೀಪಾವಳಿ ಹಬ್ಬದ ಅಂಗವಾಗಿ 'ದೀಪಾವಳಿ ವಿತ್ ಮಿ' ಮಾರಾಟ ಆಯೋಜಿಸಿದೆ. ಈ ಸೇಲ್‌ನಲ್ಲಿ ತನ್ನ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿ, ಲ್ಯಾಪ್‌ಟಾಪ್ ಹಾಗೂ ಇತರೆ ಸ್ಮಾರ್ಟ್ ಗ್ಯಾಡ್ಜೆಟ್ಸ್‌ಗಳಿಗೆ ಭಾರೀ ರಿಯಾಯಿತಿ ಘೋಷಿಸಿದೆ. ಸಂಸ್ಥೆಯು ಘೋಷಿಸಿದ ಆಫರ್‌ಗಳಲ್ಲಿ ಸಂಸ್ಥೆಯ ಸಿಸಿಟಿವಿ ಕ್ಯಾಮೆರಾ ಸಹ ಆಕರ್ಷಕ ಡಿಸ್ಕೌಂಟ್ ಪಡೆದಿದ್ದು, ಹೆಚ್ಚಿನ ಗಮನ ಸೆಳೆದಿದೆ.

ಸಂಸ್ಥೆಯ 360 ಡಿಗ್ರಿ ಹೋಮ್ ಸೆಕ್ಯುರಿಟಿ ಕ್ಯಾಮೆರಾ 1080p 2i (Xiaomi 360 home Security Camera 1080p 2i) ಡಿವೈಸ್ ಜಬರ್ದಸ್ತ್ ಆಫರ್ ಪಡೆದಿದೆ. ಈ ಡಿವೈಸ್ ಬೆಲೆಯು 4,499ರೂ. ಆಗಿದ್ದು, ಹಬ್ಬದ ಆಫರ್‌ನಲ್ಲಿ 1,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಹಾಗಾದರೆ ಈ ಸೆಕ್ಯುರಿಟಿ ಕ್ಯಾಮೆರಾದ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರಚನೆ ಹಾಗೂ ವಿನ್ಯಾಸ
ಈ ಮಿ ಹೋಮ್ ಸೆಕ್ಯುರಿಟಿ ಕ್ಯಾಮೆರಾವು ರೋಬೋ ಮಾದರಿಯಂತೆ ಕಾಣುತ್ತದೆ. ಅದರ ಕೆಳಗಡೆ ಅರ್ಧ ಭಾಗ ಬೇಸ್ ಅನ್ನು ಹೊಂದಿದ್ದು, ಉಳಿದ ಮೇಲ್ಭಾಗವು ವೃತ್ತಾಕಾರವಾಗಿದೆ. ಮೇಲ್ಭಾಗದಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಕ್ಯಾಮೆರಾದ ಮೇಲ್ಭಾಗ 360 ಡಿಗ್ರಿ ತಿರಗುವಂತ ರಚನೆ ಪಡೆದಿದೆ. ಈ ಸಿಸಿಟಿವಿ ಕ್ಯಾಮೆರಾದ ಎತ್ತರ 108mm ಮತ್ತು ಅಗಲವು 75mm ಆಗಿದೆ.
ಹಾಗೆಯೇ ಈ ಕ್ಯಾಮೆರಾವು 1080p ಪಿಕ್ಸಲ್ ರೆಸಲ್ಯೂಶನ್ ಪಡೆದಿದ್ದು, 254 ಗ್ರಾಂ ತೂಕವನ್ನು ಇದು ಪಡೆದುಕೊಂಡಿದೆ. ಹಾಗೆಯೇ ಈ ಡಿವೈಸ್ ಆಂಡ್ರಾಯ್ಡ್ 4.4 ಓಎಸ್ ಹಾಗೂ ios 9.0 ಸಪೋರ್ಟ್ ಪಡೆದುಕೊಂಡಿದೆ. ಇನ್ನು ಈ ಸಾಧನವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 32 GB ವರೆಗೆ ಸ್ಟೋರೇಜ್ ವಿಸ್ತರಿಸುವ ಅವಕಾಶ ಪಡೆದುಕೊಂಡಿದೆ.

360 ಡಿಗ್ರಿ ಕವರೇಜ್
ಮಿ ಸಂಸ್ಥೆಯ ಈ ಸಿಸಿಟಿವಿ ಕ್ಯಾಮೆರಾ 360 ಡಿಗ್ರಿ ಕವರೇಜ್ ಹೊಂದಿದ್ದು, 108 ಡಿಗ್ರಿ ಲಂಬ ವೀಕ್ಷಣೆ ಪಡೆದುಕೊಂಡಿದೆ. ಅಲ್ಲದೇ ಇದು ಡ್ಯುಯಲ್ ಮೋಟಾರ್ ಹೆಡ್ ಕ್ಯಾಮೆರಾವನ್ನು ತಿರುಗಿಸಲು ಶಕ್ತಗೊಳಿಸುತ್ತದೆ. ಈ ಕ್ಯಾಮರಾ ಶಾರ್ಪ ವೀಡಿಯೊ ಕ್ಲಿಪ್‌ಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಪಡೆದಿದ್ದು, ಇದು ವೈಡ್ ಡೈನಾಮಿಕ್ ರೇಂಜ್ ಟೆಕ್ನಾಲಜಿ ತಂತ್ರಜ್ಞಾನವನ್ನು ಸಹ ಬೆಂಬಲಿಸುತ್ತದೆ.
ಅಲ್ಲದೇ ಈ ಕ್ಯಾಮೆರಾವು ಸ್ಮಾರ್ಟ್ ಕಂಟ್ರೋಲ್ ಆಯ್ಕೆಗಳನ್ನು ಪಡೆದಿದ್ದು, ಗೂಗಲ್ ಅಸಿಸ್ಟಂಟ್ ಹಾಗೂ ಅಲೆಕ್ಸಾ ವಾಯಿಸ್ ಕಮಾಂಡ್ ಸೇವೆಯನ್ನು ಪಡೆದಿದೆ. ಇದಲ್ಲದೇ AI ಮೂಲಕ ವ್ಯಕ್ತಿಗಳ ಚಲನವಲನಗಳನ್ನು ಪತ್ತೆ ಮಾಡುತ್ತದೆ. 940nm ಅತಿಗೆಂಪು ಎಲ್ಇಡಿಗಳು ಇದ್ದು, ಮಂದ ಬೆಳಕಿನಲ್ಲಿ ಅಥವಾ ರಾತ್ರಿ ಸಮಯದಲ್ಲಿ ಸ್ಪಷ್ಟತೆ ಇರುವಂತಹ ವಿಡಿಯೋ ಕ್ಲಿಪ್ ಸೆರೆಹಿಡುವ ಸೌಲಭ್ಯ ಪಡೆದಿದೆ.
ಈ ಸಿಸಿಟಿವಿ ಕ್ಯಾಮೆರಾ ಅನ್ನು ಸುಲಭವಾಗಿ ಇನ್‌ಸ್ಟಾಲ್ ಮಾಡಬಹುದಾಗಿದೆ. ಗ್ರಾಹಕರು ಟೇಬಲ್ ಮೇಲೆ ಅಥವಾ ಕಿಡಕಿ ಅಥವಾ ಗೋಡೆಯ ಮೇಲೆ ಅಥವಾ ಸಿಲಿಂಗ್ ವಾಲ್‌ನಲ್ಲಿಯೂ ಕೂಡಾ ಇದನ್ನು ಫಿಕ್ಸ್ ಮಾಡಬಹುದಾಗಿದೆ. ಇದು ಮಿ ಹೋಮ್ ಆಪ್ ಮೂಲಕ ಫೋನಿಗೆ ಕನೆಕ್ಟ್ ಮಾಡುವ ಸೌಲಭ್ಯ ಸಹ ಪಡೆದಿದೆ.


Click it and Unblock the Notifications








