ಉಚಿತ ಡಿಮ್ಯಾಟ್ ಖಾತೆ ತೆರೆಯಬೇಕೆ?..ಹಾಗಿದ್ರೆ, ಇಲ್ಲಿವೆ ನೋಡಿ ಬೆಸ್ಟ್ ಆಪ್ಸ್!
ಸ್ಟಾಕ್ ಮಾರುಕಟ್ಟೆಯಲ್ಲಿ ವ್ಯವಹರಿಸಲು ಬಳಕೆದಾರರಿಗೆ ಡಿಮ್ಯಾಟ್ ಖಾತೆಯು (Demat account) ಅಗತ್ಯ ಆಗಿದೆ. ಸದ್ಯ ಹಲವು ಅಪ್ಲಿಕೇಶನ್ ಗಳು, ವೆಬ್‌ಸೈಟ್‌ಗಳು ಹಾಗೂ ಬ್ಯಾಂಕ್‌ಗಳು ಡಿಮ್ಯಾಟ್ ಖಾತೆ ರಚಿಸಲು ಅವಕಾಶ ನೀಡಿವೆ. ಬಹುತೇಕ ಸಂಸ್ಥೆಗಳು ಉಚಿತ ಚಾರ್ಷಿಕ ಶುಲ್ಕದ ಸೌಲಭ್ಯ ಕೂಡಾ ಒದಗಿಸುತ್ತಿವೆ.
ಹೌದು, ಸ್ಟಾಕ್‌ಗಳು, ಬಾಂಡ್‌ಗಳು, ಮ್ಯೂಚುಯಲ್ ಫಂಡ್‌ಗಳು, ಎಕ್ಸ್‌ಚೇಂಜ್-ಟ್ರೇಡೆಡ್ ಫಂಡ್‌ಗಳು ಸೇರಿದಂತೆ ಇತರೆ ಕೆಲವು ಹೂಡಿಕೆಗಳಿಗೆ ಡಿಮ್ಯಾಟ್ ಖಾತೆಯು (Demat account) ಹೊಂದಿರುವುದು ಅಗತ್ಯ ಆಗಿದೆ. ಪ್ರಸ್ತುತ ಡಿಮ್ಯಾಟ್ ಖಾತೆ ತೆರೆಯುವುದು ತುಂಬಾ ಸುಲಭ ಹಾಗೂ ತ್ವರಿತವಾಗಿದೆ. ಹಾಗಾದರೆ ಡಿಮ್ಯಾಟ್ ಖಾತೆ ತೆರೆಯಲು ಅನುಕೂಲವಾಗಿರುವ ಕೆಲವು ಜನಪ್ರಿಯ ಅಪ್ಲಿಕೇಶನ್‌ಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ICICI ಡೈರೆಕ್ಟ್
ಐಸಿಐಸಿಐ (ICICI) ಡೈರೆಕ್ಟ್ ಭಾರತದಲ್ಲಿನ ಪ್ರಮುಖ ಬ್ರೋಕರೇಜ್ ಸಂಸ್ಥೆಗಳಲ್ಲಿ ಒಂದಾಗಿದ್ದು ಇದು ಡಿಮ್ಯಾಟ್ ಖಾತೆ ಸೇವೆಗಳನ್ನು ಒದಗಿಸುತ್ತದೆ. ಖಾತೆ ತೆರೆಯುವಿಕೆ ಮತ್ತು ನಿರ್ವಹಣೆಗಾಗಿ ಐಸಿಐಸಿಐ ಮೊಬೈಲ್ ಅಪ್ಲಿಕೇಶನ್ ಅನ್ನು ಕೂಡಾ ಹೊಂದಿದೆ.
HDFC ಸೆಕ್ಯುರಿಟೀಸ್
ಹೆಚ್‌ಡಿಎಫ್‌ಸಿ (HDFC) ಸೆಕ್ಯುರಿಟೀಸ್ ಭಾರತೀಯ ಸ್ಟಾಕ್ ಬ್ರೋಕಿಂಗ್ ಉದ್ಯಮದಲ್ಲಿ ಇದು ಕೂಡಾ ಪ್ರಮುಖ ಸ್ಥಾನ ಗಳಿಸಿದೆ. ಈ ಬ್ಯಾಂಕ್ ಡಿಮ್ಯಾಟ್ ಖಾತೆ ಹಾಗೂ ಸ್ಟಾಕ್/ ಶೇರ್ ಸೇವೆಗಳಿಗಾಗಿ ಮೊಬೈಲ್ ಅಪ್ಲಿಕೇಶನ್ ಸಹ ಪಡೆದಿದೆ.
Zerodha ಝೆರೋಧಾ
ಝೆರೋಧಾ (Zerodha) ಕೂಡಾ ಜನಪ್ರಿಯ ರಿಯಾಯಿತಿ ಬ್ರೋಕರೇಜ್ ಸಂಸ್ಥೆ ಆಗಿದ್ದು, ಅದು ಭಾರತದಲ್ಲಿ ತನ್ನದೇ ಆದ ಬಳಕೆದಾರರ ಗಮನ ಸೆಳೆದಿದೆ. ಇದು ಕೂಡಾ ಮೊಬೈಲ್ ಅಪ್ಲಿಕೇಶನ್‌ಗಳು ಸೇರಿದಂತೆ ತಮ್ಮ ಬಳಕೆದಾರ ಸ್ನೇಹಿ ಪ್ಲಾಟ್‌ಫಾರ್ಮ್‌ಗಳಿಗೆ ಹೆಸರುವಾಸಿ ಆಗಿದೆ.
ಏಂಜೆಲ್ ಬ್ರೋಕಿಂಗ್
ಏಂಜೆಲ್ ಬ್ರೋಕಿಂಗ್ ಸಂಸ್ಥೆಯು ಡಿಮ್ಯಾಟ್ ಖಾತೆಯನ್ನು ರಚಿಸಲು ಪೂರಕವಾಗಿದೆ. ಈ ತಾಣವು ಬಳಕೆದಾರರಿಗೆ ಹಣವನ್ನು ಹೂಡಿಕೆ ಮಾಡಲು ಸಂಶೋಧನಾ ಮಾರ್ಗಗಳನ್ನು ಒದಗಿಸುತ್ತದೆ. ಬಳಕೆದಾರರು ಈಕ್ವಿಟಿಗಳು, ಮ್ಯೂಚುವಲ್ ಫಂಡ್‌ಗಳು, ಫ್ಯೂಚರ್‌ಗಳು ಮತ್ತು ಆಯ್ಕೆಗಳು, ಕರೆನ್ಸಿಗಳು, ಸರಕುಗಳು ಮತ್ತು IPO ಗಳಲ್ಲಿ ವ್ಯವಹಾರ ಕೂಡಾ ಮಾಡಬಹುದು.
ಶೇರ್‌ಖಾನ್ ಆಪ್
ಶೇರ್‌ಖಾನ್ ಸಂಸ್ಥೆಯು ಭಾರತದಲ್ಲಿನ ಪ್ರಮುಖ ಬ್ರೋಕರೇಜ್ ಸಂಸ್ಥೆಗಳಲ್ಲಿ ಇದು ಒಂದಾಗಿದೆ. ಈ ಸಂಸ್ಥೆಯು ಡಿಮ್ಯಾಟ್ ಖಾತೆಗಳನ್ನು ನಿರ್ವಹಿಸಲು, ಸ್ಟಾಕ್ ಖರೀದಿಸಲು ಪೂರಕ ಆಗಿದೆ. ಸಂಸ್ಥೆಯು ತನ್ನದೇ ಆದ ಮೊಬೈಲ್ ಅಪ್ಲಿಕೇಶನ್ ಕೂಡಾ ಪಡೆದಿದೆ.
ಅಪ್‌ಸ್ಟಾಕ್ಸ್ ಆಪ್
ಅಪ್‌ಸ್ಟಾಕ್ಸ್ ಸಂಸ್ಥೆಯ ಇತ್ತೀಚಿಗೆ ಹೆಸರುವಾಸಿಯಾದ ಕಾಣಿಸಿಕೊಂಡಿರುವ ಬ್ರೋಕರೇಜ್ ಪ್ಲಾಟ್‌ಫಾರ್ಮ್ ಆಗಿದೆ. ಈ ಕಂಪನಿಯು ಡಿಮ್ಯಾಟ್ ಖಾತೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಒದಗಿಸುತ್ತದೆ. ಅಲ್ಲದೇ ಇದು ಕೂಡಾ ತನ್ನದೇ ಆದ ಮೊಬೈಲ್ ಅಪ್ಲಿಕೇಶನ್ ಹೊಂದಿದೆ.
5 ಪೈಸಾ ಆಪ್
5 ಪೈಸಾ ಆಪ್ ಡಿಮ್ಯಾಟ್ ಖಾತೆ ತೆರೆಯಲು ಇತ್ತೀಚಿನ ಆಪ್ ಆಗಿದೆ. ಇದು ಬಳಕೆದಾರರಿಗೆ ಹಲವಾರು ಟ್ರೇಡಿಂಗ್ ಆಯ್ಕೆಗಳು, ಮಾರುಕಟ್ಟೆ ಸಂಶೋಧನಾ ಪರಿಕರಗಳು, ಕಲಿಕಾ ಪರಿಕರಗಳು, ಪೋರ್ಟ್‌ಫೋಲಿಯೋ ವಿಶ್ಲೇಷಣೆ ಪರಿಕರಗಳು ಸೇರಿದಂತೆ ಇತರೆ ಸೇವೆಗಳನ್ನು ಒದಗಿಸುತ್ತದೆ.
IIFL ಡಿಮ್ಯಾಟ್
IIFL ಡಿಮ್ಯಾಟ್ ಸಂಸ್ಥೆಯು 25 ವರ್ಷಗಳಿಂದ ಟ್ರೆಂಡಿಂಗ್ ಉದ್ಯಮದಲ್ಲಿ ಕಾಣಿಸಿಕೊಂಡಿದೆ. ಈ ತಾಣವು ಡಿಮ್ಯಾಟ್ ಖಾತೆಯನ್ನು ಉಚಿತವಾಗಿ ತೆರೆಯಲು ಅವಕಾಶ ನೀಡುತ್ತದೆ. ಇದಲ್ಲದೇ IIFL ಸ್ಟಾಕ್ ಖರೀದಿಸಲು, ಐಪಿಓ ಖರೀದಿಸಲು ಬಳಕೆದಾರರಿಗೆ ಪೂರಕವಾಗಿದೆ.
ಮೋತಿಲಾಲ್ ಓಸ್ವಾಲ್
ಮೋತಿಲಾಲ್ ಓಸ್ವಾಲ್ ಹೂಡಿಕೆ ವ್ಯವಹಾರಗಳಿಗೆ ಒಂದು ಅಪ್ಲಿಕೇಶನ್ ಆಗಿದೆ. ಈ ಸಂಸ್ಥೆಯು ವ್ಯಾಪಾರ ಮತ್ತು ಹೂಡಿಕೆ ಉದ್ಯಮದಲ್ಲಿ 20+ ವರ್ಷಗಳ ಅನುಭವವನ್ನು ಪಡೆದಿದೆ. ಡಿಮ್ಯಾಟ್ ಖಾತೆ ತೆರೆಯಲು, ಸ್ಟಾಕ್ ಖರೀದಿಸವ ಸೇವೆಗಳನ್ನು ಇದು ಒದಗಿಸುತ್ತದೆ.


Click it and Unblock the Notifications








