ಒಪ್ಪೋ ಫೋನಿಗೆ ಇಂಥಾ ಆಫರ್ ಇದೆಯಾ?.. ಗ್ರಾಹಕರು ಫುಲ್ ಖುಷ್!
ಮಾರುಕಟ್ಟೆಯಲ್ಲಿ ಒಪ್ಪೋ ಮೊಬೈಲ್ ಸಂಸ್ಥೆಯು ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಅಧಿಕ ಗ್ರಾಹಕರ ಗಮನ ಸೆಳೆದಿವೆ. ಆ ಪೈಕಿ A ಸರಣಿಯ ಒಪ್ಪೋ A38 ಫೋನ್ ಬಜೆಟ್ ದರದಲ್ಲಿ ಆಕರ್ಷಕ ಫೀಚರ್ಸ್ ಪಡೆದಿದೆ. ಇದೀಗ ಒಪ್ಪೋ A38 ಮೊಬೈಲ್ ಅಮೆಜಾನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಬೊಂಬಾಟ್ ಡಿಸ್ಕೌಂಟ್ ದರದಲ್ಲಿ ಖರೀದಿಗೆ ಲಭ್ಯವಿದ್ದು, ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡಿದೆ.
ಹೌದು, ಅಮೆಜಾನ್ ತಾಣದಲ್ಲಿ ಒಪ್ಪೋ A38 ಮೊಬೈಲ್ ಶೇ. 24% ರಷ್ಟು ರಿಯಾಯಿತಿಯಲ್ಲಿ ಕಾಣಿಸಿಕೊಂಡಿದೆ. ಅಮೆಜಾನ್‌ನಲ್ಲಿ 16,999ರೂ. ಗಳ ಬೆಲೆ ಅನ್ನು ಹೊಂದಿರುವ 4GB RAM + 128GB ಸ್ಟೋರೇಜ್ ವೇರಿಯಂಟ್ ಆಫರ್‌ನಲ್ಲಿ ಈಗ 12,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಹಾಗೆಯೇ ನೋ ಕಾಸ್ಟ್ ಇಎಮ್‌ಐ ಸೌಲಭ್ಯದ ಆಯ್ಕೆ ಸಹ ಸಿಗಲಿದ್ದು, ಜೊತೆಗೆ ಎಕ್ಸ್‌ಚೇಂಜ್ ಕೊಡುಗೆಯು ಸಹ ದೊರೆಯುತ್ತದೆ. ಹಾಗಾದರೇ ಒಪ್ಪೋ A38 ಮೊಬೈಲ್ ಫೋನಿನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಒಪ್ಪೋ A38 ಡಿಸ್‌ಪ್ಲೇ ರಚನೆ ಹೀಗಿದೆ
ಒಪ್ಪೋ A38 ಮೊಬೈಲ್ 6.56 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 1612x720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ 90Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಇದ್ದು, ಡಿಸ್‌ಪ್ಲೇ 720 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಲೆವೆಲ್ ಅನ್ನು ಬೆಂಬಲಿಸಲಿದೆ. ಜೊತೆಗೆ ಇದು 84.2% ಸ್ಕ್ರೀನ್ ಟು ಬಾಡಿ ನಡುವಿನ ಅನುಪಾತವನ್ನು ಒಳಗೊಂಡಿದೆ. ಇದು 20:9 ರಚನೆಯ ಅನುಪಾತವನ್ನು ಹೊಂದಿದೆ.
ಒಪ್ಪೋ A38 ಪ್ರೊಸೆಸರ್ ಸಾಮರ್ಥ್ಯ
ಒಪ್ಪೋ A38 ಮೊಬೈಲ್ ಮೀಡಿಯಾ ಟೆಕ್ ಹಿಲಿಯೋ G85 SoC ಪ್ರೊಸೆಸರ್ ಪವರ್ ಅನ್ನು ಹೊಂದಿದ್ದು, ಜೊತಗೆ ಆಂಡ್ರಾಯ್ಡ್ 13 ಆಧಾರಿತ ColorOS 13.1 ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಈ ಫೋನ್ 4GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರ ಜೊತೆಗೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶ ಇದೆ.
ಒಪ್ಪೋ A38 ಕ್ಯಾಮೆರಾ ಸೆನ್ಸಾರ್
ಒಪ್ಪೋ A38 ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ AI-ಬೆಂಬಲಿತ ಸೆನ್ಸಾರ್ ಮತ್ತು ದ್ವಿತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಹೊಂದಿದೆ. ಮುಂಭಗಾದಲ್ಲಿ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಎಲ್ಇಡಿ ಫ್ಲ್ಯಾಷ್, ಹೆಚ್‌ಆರ್‌ಡಿ, ಪನೋರಮಾ ಆಯ್ಕೆಗಳನ್ನು ಒದಗಿಸಲಾಗಿದೆ.
ಒಪ್ಪೋ A38 ಬ್ಯಾಟರಿ ಬ್ಯಾಕ್‌ಅಪ್
ಒಪ್ಪೋ A38 ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಜೊತೆಗೆ 33W ವೈರ್ಡ್ SuperVOOC ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡಾ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ವೈಫೈ 5, ಬ್ಲೂಟೂತ್ 5.3, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಕೂಡಾ ಪಡೆದಿದೆ. ಇದಲ್ಲದೆ ಮೊಬೈಲ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಟ್ ಸೆನ್ಸಾರ್ ಸಹ ಬೆಂಬಲಿಸಲಿದೆ.
ಒಪ್ಪೋ A38 ಮೆಮೊರಿ ಹಾಗೂ ಕಲರ್
ಒಪ್ಪೋ A38 ಮೊಬೈಲ್ 4GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಅನ್ನು ಪಡೆದುಕೊಂಡಿದೆ. ಇನ್ನು ಈ ಫೋನ್ ಗ್ಲೋಯಿಂಗ್ ಗೋಲ್ಡ್ ಮತ್ತು ಗ್ಲೋಯಿಂಗ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.


Click it and Unblock the Notifications








