Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ಖರೀದಿಗೆ ಮುಂದಾಗಿದ್ದೀರಾ!?:ಈ ಫೋನ್‌ಗಳಿಗಿದೆ ಬೊಂಬಾಟ್‌ ಆಫರ್‌!

ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಇದು ಉತ್ತಮ ಸಮಯ. ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ನಲ್ಲಿ ಈ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಮೇಲೆ ಬರೋಬ್ಬರಿ 35% ವರೆಗೂ ರಿಯಾಯಿತಿ ಸಿಗಲಿದೆ. ಇದಿಷ್ಟೇ ಅಲ್ಲದೆ ಬ್ಯಾಂಕ್‌ ಅಫರ್‌ ಸಹ ಲಭ್ಯ.

ಹೌದು, ಉತ್ತಮ ಕಾರ್ಯಕ್ಷಮತೆಯ ಫೋನ್‌ಗಳನ್ನು ಖರೀದಿ ಮಾಡಬೇಕು ಎಂದರೆ ಹೆಚ್ಚಿನ ಬೆಲೆ ನೀಡಬೇಕು. ಆದರೆ, ಅಮೆಜಾನ್‌ ನಿಮಗಾಗಿ ಡಿಸ್ಕೌಂಟ್‌ ಆಫರ್‌ ಘೋಷಣೆ ಮಾಡಲಾಗಿದ್ದು, ಈ ಮೂಲಕ ಹೆಚ್ಚಿನ ಬೆಲೆಯ ಫೋನ್‌ಗಳನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಆಫರ್‌ನಲ್ಲಿ ನೀವು ಸ್ಯಾಮ್‌ಸಂಗ್‌, ಒಪ್ಪೋ, ವಿವೋ, ನೋಕಿಯಾ ಹಾಗೂ ಐಕ್ಯೂ ಫೋನ್‌ಗಳನ್ನು ಖರೀದಿ ಮಾಡಬಹುದು. ಹಾಗಿದ್ರೆ, ಇವುಗಳ ಆಫರ್‌ ಬೆಲೆ ಹಾಗೂ ಪ್ರಮುಖ ಫೀಚರ್ಸ್‌ ವಿವರವನ್ನು ಗಮನಿಸಿ.

ಸ್ಮಾರ್ಟ್‌ಫೋನ್‌ ಖರೀದಿಗೆ ಮುಂದಾಗಿದ್ದೀರಾ!?:ಈ ಫೋನ್‌ಗಳಿಗಿದೆ ಬೊಂಬಾಟ್‌ ಆಫರ್‌!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 FE 5G: 8GB RAM ಹಾಗೂ 128GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಈ ಫೋನ್‌ ಅನ್ನು ನೀವು 34,999ರೂ.ಗಳಿಗೆ ಖರೀದಿ ಮಾಡಬಹುದು. ಇದರ ಮೂಲ ದರ 74,999ರೂ. ಗಳಾಗಿದೆ. ಇನ್ನು ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 865 ಆಕ್ಟಾ-ಕೋರ್ ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದೆ. ಇದರೊಂದಿಗೆ ಸೂಪರ್ ಫಾಸ್ಟ್ ಚಾರ್ಜಿಂಗ್ ಆಯ್ಕೆಯೊಂದಿಗೆ 4500mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ವಿವೋ Y16: ವಿವೋದ ಈ ಫೋನ್‌ನ 4GB RAM, 64GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಫೋನ್‌ ಅನ್ನು ನೀವು ನೋ ಕಾಸ್ಟ್‌ ಇಎಂಐ ಆಫರ್‌ನೊಂದಿಗೆ 12,499 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 15,999ರೂ. ಗಳಾಗಿದೆ. ಅದರಂತೆ ಮೀಡಿಯಾಟೆಕ್ MT6765 ಹಿಲಿಯೋ P35 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 13MP+2MP ಡ್ಯುಯರ್‌ ರಿಯರ್‌ ಕ್ಯಾಮೆರಾ ಹಾಗೂ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ 10W ವೇಗದ ಚಾರ್ಜಿಂಗ್ ಅನ್ನು ಪಡೆದುಕೊಂಡಿದೆ.

ಸ್ಮಾರ್ಟ್‌ಫೋನ್‌ ಖರೀದಿಗೆ ಮುಂದಾಗಿದ್ದೀರಾ!?:ಈ ಫೋನ್‌ಗಳಿಗಿದೆ ಬೊಂಬಾಟ್‌ ಆಫರ್‌!

ಐಕ್ಯೂ Z6 5G: ಐಕ್ಯೂನ 4GB RAM, 128GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಈ ಫೋನ್‌ ಅನ್ನು ನೀವು 14,499ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದ್ದು, ಇದು 19,990ರೂ. ಗಳ ಮೂಲ ಬೆಲೆ ಹೊಂದಿದೆ. ಅದರಂತೆ ಈ ಫೋನ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, 50MP+2MP+2MPನ ಟ್ರಿಪಲ್‌ ರಿಯರ್‌ ಕ್ಯಾಮೆರಾ ಹಾಗೂ 16MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ನೋಕಿಯಾ G21:ಈ ಫೋನ್‌ನ 6GB RAM+128GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಫೋನ್‌ಗೆ 13,399ರೂ.ಗಳ ಆಫರ್‌ ಬೆಲೆ ನಿಗದಿ ಮಾಡಲಾಗಿದ್ದು, ಇದು 16,999ರೂ. ಗಳ ಸಾಮಾನ್ಯ ದರ ಹೊಂದಿದೆ. ಇದರೊಂದಿಗೆ ಯೂನಿಸೋಕ್‌ T606 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 50ಮೆಗಾಪಿಕ್ಸೆಲ್‌ ಪ್ರಮುಖ ಕ್ಯಾಮೆರಾದೊಂದಿಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆನ್ಸರ್‌ ಹೊಂದಿದೆ. ಹಾಗೆಯೇ 5050mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್‌ ಆಗಿದ್ದು, ಒಂದು ಪೂರ್ಣ ಚಾರ್ಜಿಂಗ್‌ ನಲ್ಲಿ ಮೂರು ದಿನ ಬ್ಯಾಕಪ್‌ ನೀಡಲಿದೆ.

ಸ್ಮಾರ್ಟ್‌ಫೋನ್‌ ಖರೀದಿಗೆ ಮುಂದಾಗಿದ್ದೀರಾ!?:ಈ ಫೋನ್‌ಗಳಿಗಿದೆ ಬೊಂಬಾಟ್‌ ಆಫರ್‌!

ಒಪ್ಪೋ A17k ಸ್ಮಾರ್ಟ್‌ಫೋನ್‌ನ 3GB RAM ಹಾಗೂ 64GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಸ್ಮಾರ್ಟ್‌ಫೋನ್‌ ಅನ್ನು ನೀವು 9,499 ರೂ. ಗಳಿಗೆ ಖರೀದಿ ಮಾಡಬಹುದಾಗಿದ್ದು, ಇದು 12,999 ರೂ. ಗಳ ಸಾಮಾನ್ಯ ದರ ಹೊಂದಿದೆ. ಇನ್ನುಳಿದಂತೆ ಈ ಫೋನ್ ಮೀಡಿಯಾಟೆಕ್‌ P35 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, 8MP ರಿಯರ್‌ ಕ್ಯಾಮೆರಾ ಹಾಗೂ 5MP ಸೆಲ್ಪಿ ಕ್ಯಾಮೆರಾದ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದರಲ್ಲಿದೆ.

Best Mobiles in India

English summary
Amazon has already announced a discount for several smartphones, meanwhile these flagship smartphones are also getting attractive discounts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+