ಒಂದು ವೇಳೆ ಫೋನ್ ಚಾರ್ಜರ್ ಕೈ ಕೊಟ್ರೆ, ಯಾವುದಕ್ಕೂ ಈ ಚಾರ್ಜರ್ ಇರಲಿ!
ಪ್ರಸ್ತುತ ಮೊಬೈಲ್ ಮಾರುಕಟ್ಟೆಗೆ ಆಕರ್ಷಕ ಫೀಚರ್ಸ್‌ಗಳೊಂದಿಗೆ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡುತ್ತಲೇ ಸಾಗಿವೆ. ಇತ್ತೀಚಿನ ಬಹುತೇಕ ಸ್ಮಾರ್ಟ್‌ಫೋನ್‌ಗಳು ಅಧಿಕ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿರುತ್ತವೆ. ವೇಗದ ಚಾರ್ಜರ್‌ಗಳು ಬ್ಯಾಟರಿಯನ್ನು ಬಹುಬೇಹನೇ ಪೂರ್ಣ ಭಾರ್ತಿ ಮಾಡುವ ಸೌಲಭ್ಯ ಪಡೆದಿವೆ. ಅದಾಗ್ಯೂ, ನಾನಾ ಕಾರಣಗಳಿಂದಾಗಿ ಕೆಲವೊಮ್ಮೆ ಫೋನ್ ಚಾರ್ಜರ್ ಕೈಕೊಡುವ ಸಾಧ್ಯತೆಗಳಿರುತ್ತವೆ.
ಹೌದು, ಇತ್ತೀಚಿನ ವರ್ಷಗಳಲ್ಲಿ ಯುಎಸ್‌ಬಿ - ಟೈಪಿ ಸಿ ಚಾರ್ಜರ್‌ಗಳು ಹೆಚ್ಚು ಜನಪ್ರಿಯವಾಗಿ ಕಾಣಿಸಿಕೊಂಡಿವೆ. ಫೋನ್ ಜೊತೆಗೆ ಅತ್ಯುತ್ತಮ ಚಾರ್ಜರ್ ನೀಡಿರುತ್ತಾರೆ. ಅದಾಗ್ಯೂ, ಯಾವುದೋ ಕಾರಣದಿಂದಾಗಿ ಚಾರ್ಜರ್ ಹಾನಿಯಾದರೆ ಅಥವಾ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಪರ್ಯಾಯ ವ್ಯವಸ್ಥೆ ಮಾಡಬೇಕಲ್ಲವೇ?.. ಅಂತಹ ಸಂದರ್ಭ ದಲ್ಲಿ ಇತರೆ ಜನಪ್ರಿಯ ಸಂಸ್ಥೆಗಳ ಚಾರ್ಜರ್‌ಗಳು ನೆರವಾಗುತ್ತವೆ.

ಗ್ರಾಹಕರು ತಮ್ಮ ಫೋನಿಗೆ ಸರಿಹೊಂದುವ ಚಾರ್ಜರ್ ಅಡಾಪ್ಟರ್ ಖರೀದಿಸಬಹುದು. ಹಾಗೆಯೇ ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಚಾರ್ಜಿಂಗ್ ಅಡಾಪ್ಟರ್ ಗಳು ಸಹ ದೊರೆಯುತ್ತವೆ. ಅಲ್ಲದೇ ಕೆಲವೊಂದು ಸಂಸ್ಥೆಗಳ ಚಾರ್ಜರ್‌ಗಳು ವಾರಂಟಿ ಆಯ್ಕೆ ಸಹ ಪಡೆದಿವೆ. ಹಾಗಾದರೆ ಆನ್‌ಲೈನ್ ಮಾರುಕಟ್ಟೆ ಯಲ್ಲಿ ಖರೀದಿಗೆ ಲಭ್ಯವಿರುವ ಕೆಲವು ಅತ್ಯುತ್ತಮ ಚಾರ್ಜರ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಮಿ 18W ಡ್ಯುಯಲ್ ಪೋರ್ಟ್ ಚಾರ್ಜರ್: ಶಿಯೋಮಿ ಸಂಸ್ಥೆಯ (Mi 18W Dual Port Charger) ಈ ಚಾರ್ಜರ್ ಡ್ಯುಯಲ್ ಪೋರ್ಟ್ ಆಯ್ಕೆ ಪಡೆದಿದೆ. ಇದು ಕ್ವಾಲ್ಕಮ್ ಕ್ವಿಕ್ ಚಾರ್ಜ್ 3.0 ಆಗಿದ್ದು, ವೇಗದ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಹಾಗೆಯೇ ಇದು BIS ಸರ್ಟಿಫೈಡ್ ಆಗಿದೆ. 100-240V ಸಪೋರ್ಟ್ ಪಡೆದಿದ್ದು, ಅಧಿಕೃತ ಮಿ ವೆಬ್‌ಸೈಟ್ ಅಥವಾ ಇತರೆ ಆನ್‌ಲೈನ್ ತಾಣಗಳಲ್ಲಿ ಖರೀದಿಸಬಹುದಾಗಿದೆ.

ಮಿ 67W ಸೋನಿಕ್‌ಚಾರ್ಜ್ 3.0 ಚಾರ್ಜರ್ ಕಾಂಬೊ: ಶಿಯೋಮಿ ಕಂಪನಿಯ (Mi 67W SonicCharge 3.0 Charger Combo) ಈ ಕಾಂಬೊ ಚಾರ್ಜರ್ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಮತ್ತು ಟೈಪ್ ಸಿ ಚಾರ್ಜಿಂಗ್ ಆಯ್ಕೆ ಪಡೆದ ಡಿವೈಸ್‌ಗಳಿಗೆ ಸಪೋರ್ಟ್ ಮಾಡುತ್ತದೆ. ಇದು 67W ಫಾಸ್ಟ್ ಚಾರ್ಜಿಂಗ್ ಔಟ್‌ಪುಟ್ ಸಪೋರ್ಟ್ ಹೊಂದಿದ್ದು, ಇದು BIS ಸರ್ಟಿಫೈಡ್ ಆಗಿದೆ. ಇದು ಯುಎಸ್‌ಬಿ-ಎ ಪೋರ್ಟ್ ಸೌಲಭ್ಯ ಸಹ ಹೊಂದಿದೆ. ಅಧಿಕೃತ ಮಿ ವೆಬ್‌ಸೈಟ್ ಅಥವಾ ಇತರೆ ಆನ್‌ಲೈನ್ ತಾಣಗಳಲ್ಲಿ ಖರೀದಿಸಬಹುದಾಗಿದೆ.
ಅಂಬ್ರೇನ್ 30W ಬೂಸ್ಟೆಡ್ ಸ್ಪೀಡ್ ಚಾರ್ಜರ್ : ಅಂಬ್ರೇನ್ 30W ಬೂಸ್ಟೆಡ್‌ಸ್ಪೀಡ್ ಒಂದು ಟೈಪ್-ಸಿ ಪೋರ್ಟ್ ಮತ್ತು ಒಂದು ಯುಎಸ್‌ಬಿ-ಎ ಪೋರ್ಟ್‌ನೊಂದಿಗೆ ಬರುತ್ತದೆ ಮತ್ತು 30W ಚಾರ್ಜಿಂಗ್ ವೇಗವನ್ನು ಬೆಂಬಲಿಸುತ್ತದೆ. ಇದಲ್ಲದೆ, ಇದು USB PD ಜೊತೆಗೆ ಕ್ವಿಕ್ ಚಾರ್ಜ್ ವೇಗದ ಚಾರ್ಜಿಂಗ್ ಮಾನದಂಡಗಳೊಂದಿಗೆ ಹೊಂದಿಕೊಳ್ಳುತ್ತದೆ. ಇದು ಶಾರ್ಟ್-ಸರ್ಕ್ಯೂಟ್ ರಕ್ಷಣೆ, ಓವರ್-ವೋಲ್ಟೇಜ್ ರಕ್ಷಣೆ, ಓವರ್‌ಲೋಡ್ ರಕ್ಷಣೆ ಮತ್ತು ತಾಪಮಾನ ರಕ್ಷಣೆ ಸೇರಿದಂತೆ ರಕ್ಷಣೆಯ ಬಹು ಪದರಗಳನ್ನು ಒಳಗೊಂಡಿದೆ.

ಬೆಲ್ಕಿನ್ ಡ್ಯುಯಲ್ USB-C 40W ಚಾರ್ಜರ್ : ಗ್ರಾಹಕರೇ, ನೀವೇನಾದರೂ USB PD ಹೊಂದಾಣಿಕೆಯ ವೇಗದ ಚಾರ್ಜರ್ ಅನ್ನು ಹುಡುಕುತ್ತಿದ್ದರೆ ಬೆಲ್ಕಿನ್ ಡ್ಯುಯಲ್ ಯುಎಸ್‌ಬಿ-ಸಿ PD 40W ಚಾರ್ಜರ್ ನಿಮಗೆ ಮತ್ತೊಂದು ಗುಣಮಟ್ಟದ ಆಯ್ಕೆಯಾಗಿದೆ. ಚಾರ್ಜರ್ USB-IF ಪ್ರಮಾಣೀಕರಿಸಲ್ಪಟ್ಟಿದೆ ಮತ್ತು USB PD 3.0 ಬೆಂಬಲದೊಂದಿಗೆ ಬರುತ್ತದೆ, ಆದ್ದರಿಂದ ಇದು ನಿಮ್ಮ ಹೆಚ್ಚಿನ ಯುಎಸ್‌ಬಿ-ಸಿ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳೊಂದಿಗೆ ಯಾವುದೇ ಸಮಸ್ಯೆಗಳಿಲ್ಲದೆ ಕಾರ್ಯನಿರ್ವಹಿಸುತ್ತದೆ.


Click it and Unblock the Notifications








