Home
ಮೊಬೈಲ್

ಒಪ್ಪೋ ಫೈಂಡ್ N3 ಫ್ಲಿಪ್‌: ಫ್ಲಿಪ್‌ ಮಾದರಿಯಲ್ಲೇ ಅತ್ಯುತ್ತಮ ಕ್ಯಾಮೆರಾ ಫೋನ್‌!

ಒಪ್ಪೋ ಫೈಂಡ್ N3 ಫ್ಲಿಪ್‌: ಫ್ಲಿಪ್‌ ಮಾದರಿಯಲ್ಲೇ ಅತ್ಯುತ್ತಮ ಕ್ಯಾಮೆರಾ ಫೋನ್‌!

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಹೊಸ ಹೊಸ ಆವಿಷ್ಕಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಕ್ರಿಯಾತ್ಮಕ ಜಗತ್ತಿನಲ್ಲಿ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು ಭರವಸೆಯ ತಾಂತ್ರಿಕ ಮೈಲುಗಲ್ಲಿನಂತೆ ಕಾಣಿಸಿಕೊಳ್ಳುತ್ತಿವೆ.

ಹೌದು, ಈ ಫೋಲ್ಡಬಲ್‌ ಡಿವೈಸ್‌ಗಳು ಅವುಗಳ ಹೊಂದಿಕೊಳ್ಳುವ ಹಿಂಜ್‌ ವಿನ್ಯಾಸಗಳು, ಕವರ್ ಡಿಸ್‌ಪ್ಲೇ ಮತ್ತು ಫೋಲ್ಡ್‌ ಮಾಡಬಹುದಾದ ಡಿಸ್‌ಪ್ಲೇ ಮೂಲಕ ಇತರೆ ಫೋನ್‌ಗಳಿಗಿಂತ ಭಿನ್ನವಾಗಿವೆ. ಅದರಲ್ಲೂ ಕ್ರಾಂತಿಕಾರಿ ಅದ್ಭುತಗಳಂತೆ ಕಾಣಿಸಿಸಿಕೊಂಡಿದ್ದು, ನಮ್ಮೆಲ್ಲರ ಕುತೂಹಲವನ್ನು ಇನ್ನಷ್ಟು ಕೆರಳುವಂತೆ ಮಾಡಿವೆ. ಅದರಂತೆ ಹೊಸ ಒಪ್ಪೋ ಫೈಂಡ್‌ N3 ಫ್ಲಿಪ್‌ನೊಂದಿಗೆ ಫ್ಲಿಪ್ ಫೋನ್‌ಗಳು ಇದೀಗ ಮುಖ್ಯವಾಹಿನಿಗೆ ಬಂದಿವೆ.

ಈ ಫೋನ್‌ಗೂ ಮೊದಲು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪರಿಪೂರ್ಣ ಪ್ಲಿಪ್‌ ಫೋನ್‌ಗಳನ್ನು ಕಾಣಲು ಸಾಧ್ಯವಿರಲಿಲ್ಲ. ಈವರೆಗೂ ಫ್ಲಿಪ್ ಫೋನ್‌ಗಳು ಕಾರ್ಯನಿರ್ವಹಿಸದ ಕವರ್ ಡಿಸ್‌ಪ್ಲೇಯಿಂದ ಹಿಡಿದು ಓಪನ್‌ ಡಿಸ್‌ಪ್ಲೇಯಲ್ಲಿ ಗೋಚರಿಸುವ ಕ್ರೀಸ್‌ನವರೆಗೆ ಹಲವಾರು ಸಮಸ್ಯೆಗಳಿಂದ ಕೂಡಿದ್ದವು. ಜೊತೆಗೆ ಆಗಾಗ್ಗೆ ಕೆಲವು ಕ್ಯಾಮೆರಾ ಸಾಮರ್ಥ್ಯಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದವು. ಆದರೆ, ಈ ಎಲ್ಲಾ ಸಮಸ್ಯೆ ಒಪ್ಪೋ ಫೈಂಡ್‌ N3 ಫ್ಲಿಪ್ ಆಗಮನದವರೆಗೂ ಮಾತ್ರ ಇತ್ತು.

ಈ ಮೂಲಕ ಪರಿಪೂರ್ಣ ಫ್ಲಿಪ್ ಫೋನ್‌ನ ಅನ್ವೇಷಣೆಯು ಅಪೂರ್ಣವಾಗಿಯೇ ಉಳಿದಿತ್ತು. ಒಪ್ಪೋ ಫೈಂಡ್‌ N3 ಫ್ಲಿಪ್ ಟ್ರಿಪಲ್ ಕ್ಯಾಮೆರಾದೊಂದಿಗೆ ಫ್ಲ್ಯಾಗ್‌ಶಿಪ್ ಗುಣಮಟ್ಟದ ಲೆನ್ಸ್‌ಗಳು, ವರ್ಟಿಕಲ್ ಕವರ್ ಸ್ಕ್ರೀನ್ ಮತ್ತು ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಪಡೆದುಕೊಂಡಿದ್ದು, ಇದು ಫೋಲ್ಡಬಲ್ ಫ್ಲಿಪ್ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಪರಿವರ್ತನೆಯನ್ನು ತೋರಿಸುತ್ತಿದೆ.

ಈ ನಡುವೆ ಒಪ್ಪೋ ಫೈಂಡ್‌ N3 ಫ್ಲಿಪ್ ಫೋನ್‌ ಸಂಪೂರ್ಣ ಫ್ಲಿಪ್ ಸ್ಮಾರ್ಟ್‌ಫೋನ್ ಆಗಿದ್ದು, ಹೊಸ ಮಾನದಂಡಗಳನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಅದರ ಪೂರ್ವವರ್ತಿಗಳನ್ನು ಮೀರಿಸುವ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದ್ದು, ಈ ಮೂಲಕ ಬಳಕೆದಾರರು ಮೊಬೈಲ್ ತಂತ್ರಜ್ಞಾನದ ಹೊಸ ಭವಿಷ್ಯವನ್ನು ಯಾವುದೇ ರಾಜಿಯಿಲ್ಲದೆ ಅನುಭವಿಸಬಹುದಾಗಿದೆ.

ಅಂದರೆ ಕ್ರಿಯಾತ್ಮಕ ಕವರ್ ಡಿಸ್‌ಪ್ಲೇ ಆಯ್ಕೆ, ಅತ್ಯಾಧುನಿಕ ಕ್ಯಾಮೆರಾ ಸಿಸ್ಟಮ್ ಮತ್ತು ಸ್ಮಾರ್ಟ್‌ಫೋನ್‌ ವಿನ್ಯಾಸದಲ್ಲಿ ಪರಿಪೂರ್ಣತೆಯನ್ನು ಮರುವ್ಯಾಖ್ಯಾನಿಸುವ ತಡೆರಹಿತ ಫೋಲ್ಡಬಲ್ ಡಿಸ್‌ಪ್ಲೇ ಅನ್ನು ಈ ಫೋನ್‌ ಹೊಂದಿದೆ. ಅದರಲ್ಲೂ ಪ್ರಮುಖವಾಗಿ ಈ ಅಸಾಧಾರಣ ಡಿವೈಸ್‌ ನಾವೀನ್ಯತೆ ಮತ್ತು ಉತ್ಕೃಷ್ಟತೆಯನ್ನು ಸಂಯೋಜಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಮೂಲಕ ಫ್ಲಿಪ್ ಫೋನ್‌ಗಳ ಜಗತ್ತಿನಲ್ಲಿ ಸಾಟಿಯಿಲ್ಲದ ಗುಣಮಟ್ಟವನ್ನೂ ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸುತ್ತದೆ.

ಒಪ್ಪೋ ಫೈಂಡ್ N3 ಫ್ಲಿಪ್‌: ಫ್ಲಿಪ್‌ ಮಾದರಿಯಲ್ಲೇ ಅತ್ಯುತ್ತಮ ಕ್ಯಾಮೆರಾ ಫೋನ್‌!

ಸೊಗಸಾದ ವಿನ್ಯಾಸ: ಒಪ್ಪೋ ಫೈಂಡ್‌ N3 ಫ್ಲಿಪ್ ಫೋನ್ ವಿನ್ಯಾಸದ ವಿಷಯದಲ್ಲಿ ಸಾಟಿಯಿಲ್ಲದ ನೋಟವನ್ನು ನೀಡಿದೆ. ಅಂದರೆ ಚಿಂತನಶೀಲ ವಿನ್ಯಾಸದ ಉತ್ತುಂಗವನ್ನು ಪ್ರತಿನಿಧಿಸಲಿದ್ದು, ಈ ಮೂಲಕ ಕ್ರಿಯಾತ್ಮಕತೆ ಮತ್ತು ಸುಂದರ ಶೈಲಿಯ ನಡುವೆ ಸಾಮರಸ್ಯದ ಸಮತೋಲನವನ್ನು ಈ ಫೋನ್ ನೀಡಿದೆ. ಈ ಫೋನ್ ಎರಡು ಆಕರ್ಷಕ ಬಣ್ಣದಲ್ಲಿ ಲಭ್ಯವಿದೆ. ಅದರಲ್ಲಿ ಕ್ರೀಮ್ ಗೋಲ್ಡ್ ಮತ್ತು ಸ್ಲೀಕ್ ಬ್ಲ್ಯಾಕ್. ಮೊದಲೇ ಇದರ ನೋಟವೇ ಮನಸೆಳೆಯುವಂತೆ ಇದೆ. ಅದಕ್ಕೆ ಇನ್ನಷ್ಟು ಇಂಬು ನೀಡುವಂತೆ ಇರುವ ಈ ಬಣ್ಣಗಳು ಫೋನ್‌ ಕಡೆ ಎಲ್ಲರನ್ನೂ ತನ್ನತ್ತ ಸೆಳೆಯುವಂತೆ ಮಾಡುತ್ತದೆ.

ಈ ಫೋನ್‌ನಲ್ಲಿನ ಒಂದು ಗಮನಾರ್ಹ ಫೀಚರ್ಸ್‌ ಏನೆಂದರೆ ವರ್ಟಿಕಲ್‌ ಅಂದರೆ ಲಂಬವಾಗಿರುವ ಕವರ್ ಸ್ಕ್ರೀನ್. ಇದು ಸಾಮಾನ್ಯವಾಗಿ ಮೊದಲ ನೋಟದಲ್ಲಿ ಸಾಂಪ್ರದಾಯಿಕ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯನ್ನೇ ಹೋಲುತ್ತದೆ. ಆದರೆ, ಇದು ಕೇವಲ ಫೋನ್‌ನ ಅಂದಕ್ಕಷ್ಟೇ ಕೊಡುಗೆ ನೀಡದೆ ಯಾವುದೇ ಫ್ಲಿಪ್ ಫೋನ್‌ನಲ್ಲಿ ಅತಿ ದೊಡ್ಡ ಬ್ಯಾಟರಿಯನ್ನು ಅಳವಡಿಸಲು ಸಹಾಯ ಮಾಡುತ್ತದೆ.

ಈ ವಿನ್ಯಾಸದ ಆಯ್ಕೆಯು ಫ್ಲಿಪ್‌ ಫೋನ್‌ಗಳಿಗೆ ಗಣನೀಯ ಪ್ರಯೋಜನವನ್ನು ನೀಡಲಿದ್ದು, ಹೆಚ್ಚಿನ ಆಪ್‌ಗಳು ಮತ್ತು ಗೇಮ್‌ಗಳನ್ನು ಈ ಕವರ್ ಡಿಸ್‌ಪ್ಲೇನಲ್ಲಿ ಮನಬಂದಂತೆ ಬಳಕೆ ಮಾಡಬಹುದಾಗಿದೆ. ಇದಕ್ಕೆ ವಿರುದ್ಧವಾಗಿ ಇತರ ಫ್ಲಿಪ್ ಫೋನ್‌ಗಳು ಸಾಮಾನ್ಯವಾಗಿ ಪ್ರಮಾಣಿತವಲ್ಲದ, ವಿಭಿನ್ನ ಆಕಾರದ ಕವರ್ ಡಿಸ್‌ಪ್ಲೇನೊಂದಿಗೆ ಕಾಣಿಸಿಕೊಂಡಿವೆ. ಜೊತೆಗೆ ಅವುಗಳ ಕಾರ್ಯಚಟುವಟಿಕೆಯನ್ನು ಸೀಮಿತಗೊಳಿಸುತ್ತವೆ.

ಅರೇ.. ಬೇರೆ ಫೋನ್‌ನಲ್ಲಿಯೂ ಈ ಸಾಮರ್ಥ್ಯ ಇದೆ ಎಂದು ನೀವು ಅಂದುಕೊಳ್ಳಬಹುದು. ಆದರೆ, ಈ ಒಪ್ಪೋ ಫೋನ್ ವಿಭಿನ್ನವಾಗಿ ಹೇಗಿದೆ ಎಂಬುದನ್ನು ಸಾಬೀತುಪಡಿಸಿದೆ. ಅಂದರೆ
40 ಕ್ಕೂ ಹೆಚ್ಚು ಜನಪ್ರಿಯ ಆಪ್‌ಗಳಿಗೆ ಬೆಂಬಲ ನೀಡಲಿದೆ. ವಾಟ್ಸಾಪ್‌ ಜಿಮೇಲ್‌,ಗೂಗಲ್ ಮ್ಯಾಪ್ಸ್‌, ಯೂಟ್ಯೂಬ್ ಸೇರಿದಂತೆ ಇನ್ನೂ ಅನೇಕ ಆಪ್‌ಗಳು ಕವರ್ ಸ್ಕ್ರೀನ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಕಾರ್ಯನಿರ್ವಹಿಸುತ್ತವೆ.

ಈ ರೀತಿಯ ಕವರ್ ಸ್ಕ್ರೀನ್‌ ನೀಡಲಾಗಿದೆ ಎಂದ ಮಾತ್ರಕ್ಕೆ ಬೇರೆ ವಿಷಯದಲ್ಲಿ ಈ ಫೋನ್‌ ರಾಜಿಮಾಡಿಕೊಂಡಿಲ್ಲ. ಬದಲಾಗಿ ಈ ರೀತಿಯ ನಾವೀನ್ಯತೆ ಒಪ್ಪೋದ ಸಮರ್ಪಣೆಗೆ ಸಾಕ್ಷಿಯಾಗಿದೆ. ಅದರಲ್ಲೂ ಕ್ಯಾಮರಾ ಸೆನ್ಸರ್‌ ಗಾತ್ರದಲ್ಲಿ ರಾಜಿ ಮಾಡಿಕೊಳ್ಳದೆ ಅಥವಾ ಕ್ಯಾಮೆರಾಗಳನ್ನು ಅನವಶ್ಯಕವಾಗಿ ಬೇರೆ ಕಡೆ ಅದರಲ್ಲೂ ಮೂಲೆಗೆ ತಳ್ಳುವ ಕೆಲಸ ಮಾಡಿಲ್ಲ. ಜೊತೆಗೆ ಡಿಸ್‌ಪ್ಲೇಗೆ ಇದರಿಂದ ಯಾವುದೇ ಸಮಸ್ಯೆ ಉಂಟಾಗುವಂತೆಯೂ ಮಾಡಿಲ್ಲ ಎಂಬುದನ್ನು ಈ ವೇಳೆ ಗಮನಿಸಬಹುದಾಗಿದೆ.

ಈ ಫೋನ್‌ ಅನ್ನು ಹಿಡಿದುಕೊಳ್ಳಲು ಬಳಕೆದಾರರಿಗೆ ಖಂಡಿತಾ ಹೆಮ್ಮೆ ಅನಿಸುತ್ತದೆ. ಯಾಕೆಂದರೆ ಇದರ ಗ್ಲಾಸ್‌ ಮತ್ತು ಮೆಟಲ್‌ ಕೇಸ್‌ ಫೋನ್‌ ಡಿವೈಸ್‌ನ ಅಂದಕ್ಕಷ್ಟೇ ಸೀಮಿತವಾಗದೆ ಹಿಡಿದುಕೊಂಡಾದ ಅಥವಾ ಬಳಕೆ ಮಾಡುವಾಗ ಅತ್ಯುತ್ತಮ ಅನುಭವ ನೀಡುವ ಕೆಲಸ ಮಾಡುತ್ತದೆ. ಜೊತೆಗೆ ರಿಯರ್‌ನಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ ಪಡೆದುಕೊಂಡಿದ್ದು, ಇದು ಪ್ರೀಮಿಯಂ ಭಾವನೆಯನ್ನು ನೀಡಲಿದೆ. ಅಷ್ಟೇ ಅಲ್ಲದೆ ದೀರ್ಘ ಬಾಳಿಕೆಯನ್ನು ಈ ಮೂಲಕ ಖಾತ್ರಿಪಡಿಸುತ್ತದೆ.

ಈ ಫೋನ್‌ ಮಧ್ಯದಲ್ಲಿ ವಿಮಾನ-ದರ್ಜೆಯ ಸ್ಟೇನ್‌ಲೆಸ್ ಸ್ಟೀಲ್ ಅನ್ನು ಹೊಂದಿದೆ. ಅಂದರೆ ಊಹೆ ಮಾಡಿಕೊಳ್ಳಿ. ಇದರ ಸಾಮರ್ಥ್ಯ ಎಂತಹುದು ಎಂದು. ಇದು ಅದರ ಡ್ರಾಪ್ ಪ್ರತಿರೋಧವನ್ನು 25% ರಷ್ಟು ಹೆಚ್ಚಿಗೆ ಮಾಡಲಿದ್ದು, ಯಾವುದೇ ತೀವ್ರತರವಾದ ತಾಪಮಾನದ ವಿರುದ್ಧ ಹೋರಾಡುವ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಟ್ಟಿಗೆ ಈ ಫೋನ್ IPX4 ರೇಟಿಂಗ್‌ ಅನ್ನೂ ಹೊಂದಿದೆ. ಇದು ದೈನಂದಿನ ಬಳಕೆಯಲ್ಲಿ ಆಗುವ ಸ್ಪ್ಲಾಶ್‌ಗಳು ಮತ್ತು ಸಣ್ಣ ಸಮಸ್ಯೆಗಳಿಂದ ಫೋನ್‌ ಅನ್ನು ಮುಕ್ತ ಮಾಡುತ್ತದೆ.

ಒಪ್ಪೋ ಫೈಂಡ್ N3 ಫ್ಲಿಪ್‌: ಫ್ಲಿಪ್‌ ಮಾದರಿಯಲ್ಲೇ ಅತ್ಯುತ್ತಮ ಕ್ಯಾಮೆರಾ ಫೋನ್‌!

ಇನ್ನು ಈ ಫ್ಲಿಪ್‌ಫೋನ್‌ನಲ್ಲಿ ಹೆಚ್ಚು ಗಮನಸೆಳೆಯುವ ವಿಷಯ ಏನೆಂದರೆ ಫ್ಲೆಕ್ಸಿಯಾನ್ ಹಿಂಜ್. ಒಪ್ಪೋ ಈ ವಿಷಯದಲ್ಲಿ ಪ್ರತಿಷ್ಠಿತ TÜV ರೈನ್‌ಲ್ಯಾಂಡ್ ವಿಶ್ವಾಸಾರ್ಹ ಫೋಲ್ಡಿಂಗ್ ಪ್ರಮಾಣೀಕರಣವನ್ನು ಹೊಂದಿದೆ. ಇದು ಗಮನಾರ್ಹವಾದ 600,000 ಫೋಲ್ಡ್‌ಗಳನ್ನು ತಡೆದುಕೊಳ್ಳಲು ಸಾಮರ್ಥ್ಯ ಪಡೆದಿದೆ. ಜೊತೆಗೆ ಈ ವಿಷಯದಲ್ಲಿ ಕಠಿಣವಾಗಿ ಪರೀಕ್ಷಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ. ಸರಳವಾಗಿ ಹೇಳುವುದಾದರೆ 16 ವರ್ಷಗಳ ಬಳಕೆಗೆ ಇದು ಸಮಾನವಾಗಿರುತ್ತದೆ. ಈ ಮೂಲಕ ಈ ಫೋನ್‌ ದೀರ್ಘ ಬಾಳಿಕೆಯನ್ನು ಖಾತ್ರಿಪಡಿಸುತ್ತದೆ.

ಈ ಫೋನ್‌ನಲ್ಲಿ ಗಮನಿಸಬೇಕಾದ ಮತ್ತೊಂದು ಫೀಚರ್ಸ್‌ ಎಂದರೆ ಅಲರ್ಟ್‌ ಸ್ಲೈಡರ್‌ ಈ ಫೋನ್‌ನ ಕಾರ್ಯವನ್ನು ವರ್ಧಿಸುವ ಭಾಗವಾಗಿ ಎಚ್ಚರಿಕೆ ಸ್ಲೈಡರ್‌ನ ಪರಿಚಯಿಸಲಾಗಿದೆ. ಈ ಫೀಚರ್ಸ್‌ ಬಳಕೆದಾರರಿಗೆ ಸುಲಭವಾಗಿ ಸೈಲೆಂಟ್‌, ವೈಬ್ರೇಟ್ ಮತ್ತು ರಿಂಗ್ ಮೋಡ್ ಬದಲಾಯಿಸಲು ಅನುಮತಿಸುತ್ತದೆ. ಇದು ಸ್ಪಷ್ಟ ಹಾಗೂ ತೃಪ್ತಿಕರವಾದ ಪ್ರತಿಕ್ರಿಯೆಯೊಂದಿಗೆ ಸಂಯೋಜಿಸಲ್ಪಟ್ಟಿದ್ದು, ಈ ಸ್ಲೈಡರ್ ಫೋನ್‌ನ ನೋಟಿಫಿಕೇಶನ್‌ ಸೆಟ್ಟಿಂಗ್‌ಗಳನ್ನು ನಿಯಂತ್ರಿಸುವ ತಡೆರಹಿತ ವಿಧಾನವನ್ನು ಬಳಕೆದಾರರಿಗೆ ನೀಡುತ್ತದೆ.

ಇನ್ನು ಫೋನ್‌ ಅನ್ನು ವೀಕ್ಷಣೆ ಮಾಡದೆಯೇ ಫೋನ್‌ ಸ್ಟೇಟಸ್‌ ಅನ್ನು ನೀವು ಸುಲಭವಾಗಿ ಈ ಫೀಚರ್ಸ್‌ ಮೂಲಕ ತಿಳಿದುಕೊಳ್ಳಬಹುದು. ಅಂದರೆ ಕಡಿಮೆ ಕಂಪನ ಇದ್ದರೆ ಅದು ಸೈಲೆಂಟ್‌ ಆಗಿದೆ ಎಂದು ಸೂಚಿಸುತ್ತದೆ. ಅಲ್ಪ ಸಮಯದ ಕಂಪನ ಏನಾದರೂ ಆದರೆ ಅದು ಕಂಪನದ ಮೋಡ್ ಅನ್ನು ಸಂಕೇತಿಸುತ್ತದೆ ಮತ್ತು ದೀರ್ಘಕಾಲದ ಕಂಪನವು ಫೋನ್ ರಿಂಗ್ ಮೋಡ್‌ನಲ್ಲಿದೆ ಎಂದು ತಿಳಿಯುವಂತೆ ಮಾಡುತ್ತದೆ. ಈ ಅರ್ಥಗರ್ಭಿತ ಇಂಟರ್ಫೇಸ್ ನೋಟಿಫಿಕೇಶನ್‌ ಕಾರ್ಯನಿರ್ವಹಣೆ ಅತ್ಯಂತ ಸುಲಭವಾಗಿದ್ದು, ಇದು ಬಳಕೆದಾರರ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ.

ಒಪ್ಪೋ ಫೈಂಡ್ N3 ಫ್ಲಿಪ್‌: ಫ್ಲಿಪ್‌ ಮಾದರಿಯಲ್ಲೇ ಅತ್ಯುತ್ತಮ ಕ್ಯಾಮೆರಾ ಫೋನ್‌!

ಕ್ರಿಯಾತ್ಮಕ, ರೋಮಾಂಚಕ ಡಿಸ್‌ಪ್ಲೇ: ಒಪ್ಪೋ ಫೈಂಡ್ N3 ಫ್ಲಿಪ್ ಫೋನ್‌ಗಳ ಜಗತ್ತಿಗೆ ಒಂದು ಅದ್ಭುತ ಫೀಚರ್ಸ್‌ ಅನ್ನು ಪರಿಚಯಿಸುತ್ತದೆ. ಅದುವೇ 3.26 ಇಂಚಿನ ವರ್ಟಿಕಲ್‌ ಕವರ್ ಡಿಸ್‌ಪ್ಲೇ. ಮೊದಲೇ ತಿಳಿಸಿದಂತೆ ಇದು ಹೊಸ ಮಾನದಂಡವನ್ನು ಪಡೆದುಕೊಂಡಿದೆ. ಈ ಆವಿಷ್ಕಾರವು ಫೋನ್‌ಗಳ ವಿಭಾಗದಲ್ಲಿ ಕ್ರಾಂತಿಕಾರಿ ಮಾತ್ರವಲ್ಲದೆ ಅಸಾಧಾರಣವಾಗಿ ಬಹುಮುಖವಾಗಿದೆ. ಇದರಲ್ಲಿ ಏಕಕಾಲದಲ್ಲಿ ಮೂರು ವಿಜೆಟ್‌ಗಳನ್ನು ಹೋಸ್ಟ್ ಮಾಡಬಹುದು, ಈ ಮೂಲಕ ಫೋನ್ ಅನ್ನು ಓಪನ್‌ ಮಾಡದೆಯೇ ಅಗತ್ಯ ಮಾಹಿತಿಗೆ ತ್ವರಿತ ಪ್ರವೇಶದ ಆಯ್ಕೆಯನ್ನು ನೀಡುತ್ತದೆ.

ಇಷ್ಟೇನಾ ಎಂದುಕೊಳ್ಳಬೇಡಿ. ಇದರೊಂದಿಗೆ ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಆಯ್ಕೆ ಸಹ ಇದ್ದು, ಇದು ಸಂಪೂರ್ಣ ಡಿಸ್‌ಪ್ಲೇಯಾದ್ಯಂತ ವಿಸ್ತರಿಸುತ್ತದೆ. ಬಳಕೆದಾರರು ಒಂದೇ ನೋಟದಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಹಾಗಂದ ಮಾತ್ರಕ್ಕೆ ಮುಖ್ಯ ಡಿಸ್‌ಪ್ಲೇ ಕೆಲಸ ಏನು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಮುಖ್ಯ ಡಿಸ್‌ಪ್ಲೇನ ದಕ್ಷತೆಯನ್ನು ಇದು ಪ್ರತಿಬಿಂಬಿಸುತ್ತದೆ ಈ ಮೂಲಕ ನಿಮ್ಮ ಬಳಕೆಯ ಅನುಭವವನ್ನು ಸುಲಭಗೊಳಿಸುತ್ತದೆ.

ಇದಲ್ಲದೆ ಈ ಡಿಸ್‌ಪ್ಲೇ ವಿಜೆಟ್‌ಗಳು, 3D ಆಯ್ಕೆಯ ಸಾಕುಪ್ರಾಣಿಗಳು, ನೇರ ಹವಾಮಾನ ವಾಲ್‌ಪೇಪರ್‌ಗಳು, GIF ವಾಲ್‌ಪೇಪರ್‌ಗಳು ಮತ್ತು ಎಡಿಟ್ ಮಾಡಬಹುದಾದ ಕವರ್ ಡಿಸ್‌ಪ್ಲೇ ಶೈಲಿಗಳೊಂದಿಗೆ ವಿವಿಧ ರೀತಿಯಲ್ಲಿ ವೈಯಕ್ತೀಕರಿಸುವ ಸಾಮರ್ಥ್ಯವನ್ನು ಬಳಕೆದಾರರಿಗೆ ನೀಡುತ್ತದೆ. ಈ ಗ್ರಾಹಕೀಕರಣವು ಬಳಕೆದಾರರ ಅನುಭವವನ್ನು ಹೆಚ್ಚಿಸುವುದಲ್ಲದೆ ಡಿವೈಸ್‌ನ ಸೌಂದರ್ಯಕ್ಕೆ ಅತ್ಯಾಧುನಿಕತೆಯ ಸ್ಪರ್ಶವನ್ನು ಕೂಡ ನೀಡುತ್ತದೆ.

ಈವರೆಗೂ ನಾವು ಹೇಳಿದ್ದು ಈ ಫೋನ್‌ನ ಆರಂಭ. ಅಂದರೆ ಕವರ್‌ ಡಿಸ್‌ಪ್ಲೇ ಈ ಫೋನ್‌ನ ಆರಂಭಿಕ ಹಂತವನ್ನು ಸೂಚಿಸುತ್ತದೆ. ಒಮ್ಮೆ ನೀವು ಅದನ್ನು ಫ್ಲಿಪ್ ಮಾಡಿ ತೆರೆದರೆ ಒಳಗಿನ 6.8 ಇಂಚಿನ ಡಿಸ್‌ಪ್ಲೇ ಅನುಭವವನ್ನು ಪಡೆದುಕೊಳ್ಳಲು ಮುಂದಾಗಬಹುದು. ಒಳಗಿನ ಡಿಸ್‌ಪ್ಲೇ ನೋಡಲು ಅದ್ಭುತವಾಗಿದೆ. ನಯವಾದ ಅನುಭವಕ್ಕಾಗಿ 120Hz ರಿಫ್ರೆಶ್ ರೇಟ್‌ ಮತ್ತು 900 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಹಾಗೂ HDR10+ ಪ್ರಮಾಣೀಕರಣದೊಂದಿಗೆ ಇದು ಕಾಣಿಸಿಕೊಂಡಿದೆ.

ಈ ಡಿಸ್‌ಪ್ಲೇನಲ್ಲಿ ಕಂಟೆಂಟ್‌ ಅನ್ನು ವೀಕ್ಷಿಸುವುದು ಖಂಡಿತಾ ವಿಶೇಷ ಅನುಭವ ನೀಡುತ್ತದೆ. ಈ ಡಿಸ್‌ಪ್ಲೇ ಕಂಟೆಂಟ್‌ ಅನ್ನು ಆಧರಿಸಿ 1Hz-120Hz ನಡುವೆ ಸೈಕಲ್ ಮಾಡುವ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಆಯ್ಕೆ ಪಡೆದುಕೊಂಡಿದ್ದು, ಎಸ್ಪೋರ್ಟ್ಸ್-ಗ್ರೇಡ್ ಗೇಮಿಂಗ್ ವಿಭಾಗದಲ್ಲಿ ಹೊಸ ಲೋಕಕ್ಕೆ ನೀವು ಪದಾರ್ಪಣೆ ಮಾಡಬಹುದು.

ಇಲ್ಲಿ ನೀವು ನಿಜವಾಗಿ ರೋಮಾಂಚನಗೊಳ್ಳುತ್ತೀರಾ ಯಾಕೆಂದರೆ ಅದೃಶ್ಯ ಕ್ರೀಸ್ ಆಯ್ಕೆಯನ್ನು ಈ ಫೋನ್ ಪಡೆದಿದ್ದು, ಇದು ಫ್ಲಿಪ್‌ ಮಾಡಬಹುದಾದ ಫೋನ್‌ ಇದೇನಾ ಎಂದು ಗೊಂದಲಕ್ಕೆ ಒಳಗಾಗುವಂತೆ ಮಾಡುತ್ತದೆ. ಅಷ್ಟರ ಮಟ್ಟಿದೆ ಸ್ಪಷ್ಟ ಡಿಸ್‌ಪ್ಲೇ ಅನುಭವ ಪಡೆದುಕೊಳ್ಳಬಹುದು. ಇದಕ್ಕಾಗಿ ಹೊಸ ಫ್ಲೆಕ್ಸಿಯಾನ್ ಹಿಂಜ್‌ ಆಯ್ಕೆಯನ್ನು ಇದು ಹೊಂದಿದೆ. ಡಿಸ್‌ಪ್ಲೇಯನ್ನು ಮುಚ್ಚಿದಾಗ ಪರಿಪೂರ್ಣವಾದ ವಾಟರ್-ಡ್ರಾಪ್ ಆಕಾರಕ್ಕೆ ಬರುತ್ತದೆ.

ಒಪ್ಪೋ ಫೈಂಡ್ N3 ಫ್ಲಿಪ್‌: ಫ್ಲಿಪ್‌ ಮಾದರಿಯಲ್ಲೇ ಅತ್ಯುತ್ತಮ ಕ್ಯಾಮೆರಾ ಫೋನ್‌!

ಫ್ಲಿಪ್ ಫೋಟೋಗ್ರಫಿ...: ಒಪ್ಪೋ ಪೈಂಡ್ N3 ಫ್ಲಿಪ್ ಮೊಬೈಲ್ ಛಾಯಾಗ್ರಹಣ ವಿಷಯದಲ್ಲಿ ಜಗತ್ತಿನಲ್ಲಿ ಯಾವುದಕ್ಕೂ ಸಾಟಿಯಿಲ್ಲದ ಮೈಲಿಗಲ್ಲಾಗಿದೆ. ಅದರಲ್ಲೂ ಟ್ರಿಪಲ್-ಕ್ಯಾಮೆರಾ ಆಯ್ಕೆಯ ಫ್ಲಿಪ್ ಫೋನ್ ಎಂಬ ಶೀರ್ಷಿಕೆಯನ್ನು ಹೆಮ್ಮೆಯಿಂದ ಒಪ್ಪೋ ಹೇಳಿಕೊಳ್ಳುತ್ತದೆ. ಐಕಾನಿಕ್ ಕ್ಯಾಮರಾ ಬ್ರ್ಯಾಂಡ್ ಹ್ಯಾಸೆಲ್ಬ್ಲಾಡ್ ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ಫ್ಲಿಪ್ ಫೋನ್ ವಿಭಾಗದಲ್ಲಿ ಕ್ಯಾಮೆರಾ ತಂತ್ರಜ್ಞಾನದ ಉತ್ತುಂಗವನ್ನು ಪ್ರತಿನಿಧಿಸುತ್ತದೆ.

ಇದರ ಬಗ್ಗೆ ಕೂಲಕಂಷವಾಗಿ ಮಾಹಿತಿ ತಿಳಿಸುವುದಾದರೆ ಕ್ಯಾಮೆರಾ ಸಿಸ್ಟಮ್‌ನ ಮಧ್ಯಭಾಗದಲ್ಲಿ 50MP ಸೋನಿ IMX890 ಪ್ರಾಥಮಿಕ ಕ್ಯಾಮೆರಾ ಇದೆ. ಇದನ್ನು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ನೊಂದಿಗೆ ವರ್ಧಿಸಲಾಗಿದೆ. ಈ ಪ್ರಾಥಮಿಕ ಕ್ಯಾಮೆರಾವು ರೋಮಾಂಚಕ ಮತ್ತು ನೈಸರ್ಗಿಕ ಬಣ್ಣಗಳೊಂದಿಗೆ ಫೋಟೋಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ.

ಹೆಚ್ಚುವರಿಯಾಗಿ ಈ ಫೋನ್ 48MP ಸೋನಿ IMX581 ಅಲ್ಟ್ರಾ-ವೈಡ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಇದು ವಿಶಾಲವಾದ 114 ಡಿಗ್ರಿ ಫೀಲ್ಡ್ ಆಫ್ ವ್ಯೂ (FOV) ನಿಂದ ರೂಪುಗೊಂಡಿದೆ. ಇದು ಎಷ್ಟೇ ಕಡಿಮೆ ನೆರಳಿನ ಪ್ರದೇಶದಲ್ಲೂ ಅತ್ಯುತ್ತಮ ಚಿತ್ರವನ್ನು ಅದರಲ್ಲೂ ಸ್ಪಷ್ಟ ಚಿತ್ರವನ್ನು ಸೆರೆಹಿಡಿಯಲು ಸಹಾಯಕ.

ಇದರೊಂದಿಗೆ 2X ಆಪ್ಟಿಕಲ್ ಜೂಮ್‌ನೊಂದಿಗೆ 32MP ಸೋನಿ IMX709 ಟೆಲಿಫೋಟೋ ಪೋರ್ಟ್ರೇಟ್ ಕ್ಯಾಮೆರಾ ಈ ಫೋನ್‌ಗೆ ಮತ್ತಷ್ಟು ಸೊಬಗನ್ನು ಹಾಗೂ ಈ ಫೋನ್‌ನ ಸಾಮರ್ಥ್ಯವನ್ನು ಹೆಚ್ಚಿಗೆ ಮಾಡಿದೆ. ಈ ಕ್ರಾಂತಿಕಾರಿ ಕ್ಯಾಮೆರಾವು ಹೈಬ್ರಿಡ್ ಜೂಮ್‌ನೊಂದಿಗೆ ಫೋಟೋಗ್ರಫಿಯಲ್ಲಿ ಹೊಸ ಹಾರಿಜಾನ್‌ಗಳನ್ನು ನೀಡುತ್ತದೆ. ಈ ಫೋನ್ ಈ ಹಿಂದೆ ಫ್ಲಿಪ್ ಫೋನ್‌ಗಳಲ್ಲಿ ಸಾಧಿಸಲಾಗದ ಅಸಾಧಾರಣ ಬಹುಮುಖ ಕ್ಯಾಮೆರಾ ವ್ಯವಸ್ಥೆಯನ್ನು ಸಾಧಿಸಿ ತೋರಿಸಿದೆ.

ಒಪ್ಪೋ ಫೈಂಡ್ N3 ಫ್ಲಿಪ್‌: ಫ್ಲಿಪ್‌ ಮಾದರಿಯಲ್ಲೇ ಅತ್ಯುತ್ತಮ ಕ್ಯಾಮೆರಾ ಫೋನ್‌!

ಇನ್ನು ಸೆಲ್ಫಿ ವಿಷಯಕ್ಕೆ ಬರೋಣ. ಈ ಫೋನ್‌ ಬಹುಮುಖತೆಯು ಸೆಲ್ಫಿ ಉತ್ಸಾಹಿಗಳಿಗೆ ಉತ್ತಮ ಅನುಭವ ನೀಡುತ್ತದೆ. ಯಾಕೆಂದರೆ ಈ ಕ್ಯಾಮೆರಾವು ನವೀನ ಫ್ಲೆಕ್ಸ್‌ಫಾರ್ಮ್ ಕ್ಯಾಮೆರಾದ ಮೂಲಕ ಸೃಜನಶೀಲ ಸಾಮರ್ಥ್ಯವನ್ನು ಅನಾವರಣಗೊಳಿಸಲು ಬಳಕೆದಾರರಿಗೆ ಅನುಮತಿ ನೀಡುತ್ತದೆ. ಅದರಲ್ಲೂ ಕವರ್ ಸ್ಕ್ರೀನ್‌ನಲ್ಲಿ ಫೋಟೋಗಳ ಪೂರ್ವವೀಕ್ಷಣೆ ಮತ್ತು ಕೈಯನ್ನು ಬೀಸುವ ಮೂಲಕ ಹ್ಯಾಂಡ್ಸ್-ಫ್ರೀ ಕ್ಯಾಪ್ಚರ್ ಆಯ್ಕೆಯನ್ನು ಇದು ನೀಡುತ್ತದೆ.

ಅಷ್ಟೇ ಅಲ್ಲದೆ ಯಾವುದೇ ಟ್ರೈಪಾಡ್ ಇಲ್ಲದೆ ಇದರಲ್ಲಿ ಫೋಟೋಗಳನ್ನು ಸೆರೆಹಿಡಿಯಬಹುದು. ಯಾಕೆಂದರೆ ಇದು ಹೇಳಿ ಕೇಳಿ ಫ್ಲಿಪ್ ಫೋನ್. ಅಂದರೆ ಫೋನ್ ಅನ್ನು ಭಾಗಶಃ ಫೋಲ್ಡ್‌ ಮಾಡಿದಾಗ ಟ್ರೈಪಾಡ್ ತರಹದ ಆಯ್ಕೆಯನ್ನು ನೀಡುತ್ತದೆ. ಇದರಿಂದ ದೀರ್ಘ-ಎಕ್ಸ್‌ಪೋಸರ್ ಶಾಟ್‌ಗಳನ್ನು ಸೆರೆಹಿಡಿಯಲು ಅನುಕೂಲವಾಗಿದೆ. ಟೈಮ್‌ ಲ್ಯಾಪ್ಸ ವಿಡಿಯೋಗಳನ್ನು ಸೆರೆಹಿಡಿಯುವ ಜೊತೆಗೆ ಹಲವಾರು ಆಯ್ಕೆಗಳನ್ನು ಇದು ನೀಡುತ್ತದೆ.

ಈ ಫೈಂಡ್ N3 ಫ್ಲಿಪ್ ಇಮೇಜ್ ಪ್ರೊಸೆಸಿಂಗ್‌ಗಾಗಿ ಒಪ್ಪೋನ ವೈಟಾಲಿಟಿ ಎಂಜಿನ್ ಅನ್ನು ಕಂಟ್ರೋಲ್‌ ಮಾಡುತ್ತದೆ. ಅಂದರೆ ಇದು ರೋಮಾಂಚಕ ಮತ್ತು ನೈಸರ್ಗಿಕ ಬಣ್ಣಗಳು ಮತ್ತು ವಿಸ್ತಾರವಾದ ಡೈನಾಮಿಕ್ ಶ್ರೇಣಿಯನ್ನೇ ನೀಡುತ್ತದೆ. ಇದರೊಂದಿಗೆ ಹ್ಯಾಸೆಲ್‌ಬ್ಲಾಡ್ ತಂಡದ ಕ್ಯಾಮರಾ ಸಿಸ್ಟಮ್‌ನ ಟ್ಯೂನಿಂಗ್ HNCS, XPAN ಕ್ಲಾಸಿಕ್ ರೆಟ್ರೊ ಸ್ಟೈಲ್ ಮೋಡ್ ಮತ್ತು ಮಾಸ್ಟರ್ ಸ್ಟೈಲ್‌ನಂತಹ ವಿಶೇಷ ಫೀಚರ್ಸ್‌ ಆಯ್ಕೆಯನ್ನು ಈ ಫೋನ್‌ ಹೊಂದಿದ್ದು, ಫೋಟೋಗ್ರಫಿಯ ಅನುಭವವನ್ನು ಈ ಮೂಲಕ ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತದೆ.

ಒಪ್ಪೋ ಫೈಂಡ್ N3 ಫ್ಲಿಪ್‌: ಫ್ಲಿಪ್‌ ಮಾದರಿಯಲ್ಲೇ ಅತ್ಯುತ್ತಮ ಕ್ಯಾಮೆರಾ ಫೋನ್‌!

ಬಲಿಷ್ಠ ಕಾರ್ಯಕ್ಷಮತೆ: ಈ ಫ್ಲಿಪ್ ಫೋನ್‌ನ ಹೃದಯಭಾಗದಲ್ಲಿ ಫ್ಲ್ಯಾಗ್‌ಶಿಪ್-ಗ್ರೇಡ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್ ಇದ್ದು, ಇದು ಈ ಡಿವೈಸ್‌ ಅನ್ನು ರನ್‌ ಮಾಡುವ ಪವರ್‌ಹೌಸ್ ಆಗಿದೆ. ಈ ಚಿಪ್‌ಸೆಟ್ ತ್ವರಿತ ಮತ್ತು ಪರಿಣಾಮಕಾರಿ ಕಾರ್ಯಾಚರಣೆಯನ್ನು ಮಾತ್ರವಲ್ಲದೆ ಗಮನಾರ್ಹ ಶಕ್ತಿಯ ದಕ್ಷತೆಯನ್ನು ಖಾತ್ರಿಗೊಳಿಸುವ ಕೆಲಸ ಮಾಡುತ್ತದೆ. ಇದರಿಂದಾಗಿ ಬಳಕೆದಾರರು ಹಲವು ಆಪ್‌ಗಳಲ್ಲಿ ಮನಬಂದಂತೆ ಬಹು-ಕೆಲಸಗಳನ್ನು ಮಾಡಬಹುದಾಗಿದೆ.

ಇದರೊಂದಿಗೆ ಇದರಲ್ಲಿನ ಗ್ರಾಫಿಕ್ಸ್ ಗೇಮಿಂಗ್ ಸೆಷನ್‌ಗಳಲ್ಲಿ ಉತ್ತಮವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲಿದ್ದು, ಅದರಲ್ಲೂ ಪ್ರಮುಖವಾಗಿ ಯಾವುದೇ ವಿಳಂಬದ 4K ವಿಡಿಯೋಗಳನ್ನು ಎಡಿಟ್‌ ಮಾಡಬಹುದಾಗಿದೆ. ಜೊತೆಗೆ ಒಪ್ಪೋ ಫೈಂಡ್‌ N3 ಫ್ಲಿಪ್ ದೈನಂದಿನ ಬಳಕೆಯಲ್ಲಿ ಮೃದುತ್ವ ಮತ್ತು ದಕ್ಷತೆಯ ಮಟ್ಟವನ್ನು ಬಳಕೆದಾರರಿಗೆ ನೀಡುತ್ತದೆ. ಇದು ಖಂಡಿತವಾಗಿಯೂ ಗಮನಾರ್ಹ ವಿಷಯವಾಗಿದೆ. ಈ ಮೂಲಕ ವಿನ್ಯಾಸ ಮತ್ತು ದೃಢವಾದ ಕ್ಯಾಮರಾ ಸಾಮರ್ಥ್ಯಗಳನ್ನು ಮನಬಂದಂತೆ ಸಂಯೋಜಿಸಲಾಗಿದೆ.

ಈ ಶಕ್ತಿಯುತ ಚಿಪ್‌ಸೆಟ್‌ಗೆ ಪೂರಕವಾಗಿ ಈ ಫೋನ್ 12GB LPDDR5X RAM ಆಯ್ಕೆ ಪಡೆದುಕೊಂಡಿದೆ. ಇದು UFS 4.0 ಸ್ಟೋರೇಜ್‌ ತಂತ್ರಜ್ಞಾನವನ್ನು ಬಳಕೆ ಮಾಡುತ್ತದೆ. ಈ ಅತ್ಯಾಧುನಿಕ ಘಟಕಗಳು ಮುಖ್ಯ ಡಿಸ್‌ಪ್ಲೇನ ಅಡಾಪ್ಟಿವ್ 120Hz ರಿಫ್ರೆಶ್ ರೇಟ್‌ನೊಂದಿಗೆ ಸೇರಿ ಕೆಲಸ ಮಾಡಲಿದ್ದು, ಫ್ಲಿಪ್ ಫೋನ್‌ಗಳ ವಿಭಾಗದಲ್ಲಿ ಅತ್ಯುತ್ಕೃಷ್ಟ ಪ್ರಮುಖ ಕಾರ್ಯಕ್ಷಮತೆಯನ್ನು ನೀಡುವ ಸಲುವಾಗಿ ಇವುಗಳನ್ನು ಒಂದು ಮಾಡಲಾಗಿದೆ.

ಇದೆಲ್ಲಕ್ಕಿಂತ ಮಿಗಿಲಾಗಿ ಈ ಫೋನ್‌ ಉತ್ತಮವಾದ ಬ್ಯಾಟರಿ ಆಯ್ಕೆ ಹೊಂದಿದೆ. ಅಂದರೆ ಇದು 4300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಇದು ಫ್ಲಿಪ್ ಫೋನ್‌ನಲ್ಲಿ ಇದುವರೆಗೆ ನೋಡಿದ ಅತಿದೊಡ್ಡ ಸಾಮರ್ಥ್ಯವನ್ನು ಹೊಂದಿದೆ. ಈ ಮೂಲಕ ಬಳಕೆದಾರರು ಒಂದೇ ಚಾರ್ಜ್‌ನಲ್ಲಿ ಒಂದು ದಿನದವರೆಗೆ ಆರಾಮವಾಗಿ ಬಳಕೆ ಮಾಡಬಹುದಾಗಿದೆ. ಇದರೊಂದಿಗೆ ಈ ವಿಷಯದಲ್ಲಿ ಇನ್ನಷ್ಟು ಮೇಲುಗೈ ಸಾಧಿಸಿರುವ ಒಪ್ಪೋ 44W ಸೂಪರ್‌ವೋಕ್‌ಟಿಎಮ್ ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ.

ಒಪ್ಪೋ ಫೈಂಡ್ N3 ಫ್ಲಿಪ್‌: ಫ್ಲಿಪ್‌ ಮಾದರಿಯಲ್ಲೇ ಅತ್ಯುತ್ತಮ ಕ್ಯಾಮೆರಾ ಫೋನ್‌!

ಈ ಮೂಲಕ ಕೇವಲ 56 ನಿಮಿಷಗಳಲ್ಲಿ ಬ್ಯಾಟರಿಯನ್ನು 0% ರಿಂದ ಪೂರ್ಣ 100% ವರೆಗೆ ರೀಚಾರ್ಜ್ ಮಾಡಬಹುದಾಗಿದೆ. ಜೊತೆಗೆ ನೀವು 10 ನಿಮಿಷದ ರೀಚಾರ್ಜ್ ಮಾಡಿದ್ರೆ 21% ವರೆಗೆ ಬ್ಯಾಟರಿ ಚಾರ್ಜಿಂಗ್‌ ಆಗುತ್ತದೆ. 30 ನಿಮಿಷದ ಚಾರ್ಜ್ ನಲ್ಲಿ 58% ವರೆಗೆ ಚಾರ್ಜಿಂಗ್‌ ಮಾಡುತ್ತದೆ. ಈ ಬ್ಯಾಟರಿ ಪರಾಕ್ರಮವು ಈ ಫೋನ್‌ ಅನ್ನು ನಿಜವಾದ ಶಕ್ತಿ ಕೇಂದ್ರವಾಗಿ ರೂಪಿಸಿದೆ.

ಪ್ರತಿಸ್ಪರ್ಧಿ ಡಿವೈಸ್‌ಗಳಲ್ಲಿ ಇರುವ ನ್ಯೂನತೆಗಳನ್ನು ಪರಿಹರಿಸುವ ಎಲ್ಲಾ ಸಾಮರ್ಥ್ಯಗಳೊಂದಿಗೆ ಇರುವ ಪ್ರತ್ಯೇಕ ಸ್ಮಾರ್ಟ್‌ಫೋನ್ ಹಾಗೂ ಅದರ ವಿಭಾಗವನ್ನು ಹೊಂದಿರುವುದನ್ನು ನಾವು ಅಪರೂಪವಾಗಿ ನೋಡುತ್ತೇವೆ. ಜೊತೆಗೆ ಫೋನ್‌ ಅನ್ನು ಹಿಡಿದುಕೊಳ್ಳಲು ಹೊಸ ಮಾನದಂಡವನ್ನು ಇದು ಹೊಂದಿಸುತ್ತದೆ. ಫೈಂಡ್ N3 ಫ್ಲಿಪ್ ಇಂದು ಸ್ಮಾರ್ಟ್‌ಫೋನ್ ಉದ್ಯಮವು ಎಷ್ಟು ಸ್ಪರ್ಧಾತ್ಮಕವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದು, ರೇಸ್‌ನಲ್ಲಿ ಅದರ ವರ್ಟಿಕಲ್‌ ಕವರ್ ಡಿಸ್‌ಪ್ಲೇ, ಫ್ಲ್ಯಾಗ್‌ಶಿಪ್ ಟ್ರಿಪಲ್ ಕ್ಯಾಮೆರಾ, ಸೂಪರ್-ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಫೈಂಟ್ N3 ಫ್ಲಿಪ್ ಅತ್ಯುತ್ತಮ ಫ್ಲಿಪ್ ಫೋನ್ ಎಂಬ ಹೆಗ್ಗಳಿಕೆಯನ್ನು ಪಡೆಯುತ್ತದೆ ಎಂಬುದು ಒಪ್ಪೋ ಅಭಿಪ್ರಾಯವಾಗಿದೆ.

ಇನ್ನು ಒಪ್ಪೋ ಫೈಂಡ್‌ N3 ಫ್ಲಿಪ್ ಎರಡು ಬಣ್ಣಗಳಲ್ಲಿ ಲಭ್ಯವಿದೆ ಅದರಲ್ಲಿ ಒಂದು ಕ್ರೀಮ್ ಗೋಲ್ಡ್ ಮತ್ತೊಂದು ಸ್ಲೀಕ್ ಬ್ಲ್ಯಾಕ್. ಈ ಸ್ಮಾರ್ಟ್‌ಫೋನ್‌ನ ಬೆಲೆ 94,999 ರೂ.ಗಳಾಗಿದ್ದು, ಕ್ಯಾಶ್‌ಬ್ಯಾಕ್ ಮತ್ತು ಇತರೆ ಆಪರ್‌ಗಳ ಮೂಲಕ ಖರೀದಿ ಮಾಡಿದ್ರೆ ಇದು ನಿಮಗೆ 82,999ರೂ.ಗಳ ಆಕರ್ಷಕ ಬೆಲೆಯಲ್ಲಿ ಲಭ್ಯ ಇದೆ. ಇದನ್ನು ನೀವು ಫ್ಲಿಪ್‌ಕಾರ್ಟ್, ಮೇನ್‌ಲೈನ್ ರಿಟೇಲ್ ಔಟ್‌ಲೆಟ್‌ಗಳು ಮತ್ತು ಒಪ್ಪೋ ಸ್ಟೋರ್‌ನಲ್ಲಿ ಅಕ್ಟೋಬರ್ 22 ರಿಂದ ಸಂಜೆ 6 ರಿಂದ ಖರೀದಿ ಮಾಡಬಹುದಾಗಿದೆ. ಗುಡ್‌ ನ್ಯೂಸ್ ಏನೆಂದರೆ ಈ ಡಿವೈಸ್‌ ಅನ್ನು ಖರೀದಿಸುವಾಗ ಗ್ರಾಹಕರು ವಿವಿಧ ಕೊಡುಗೆಗಳನ್ನು ಸಹ ಪಡೆಯಬಹುದು.

ಒಪ್ಪೋ ಫೈಂಡ್ N3 ಫ್ಲಿಪ್‌: ಫ್ಲಿಪ್‌ ಮಾದರಿಯಲ್ಲೇ ಅತ್ಯುತ್ತಮ ಕ್ಯಾಮೆರಾ ಫೋನ್‌!

ಕೊಡುಗೆಗಳೇನು?: ಗ್ರಾಹಕರು ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಕಾರ್ಡ್‌ಗಳು, ಬಜಾಜ್ ಫಿನ್‌ಸರ್ವ್, ಟಿವಿಎಸ್ ಕ್ರೆಡಿಟ್, ಕೋಟಕ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಎಚ್‌ಡಿಬಿ ಫೈನಾನ್ಶಿಯಲ್ ಸರ್ವಿಸಸ್ ಇತರೆ ಮುಖ್ಯ ಚಿಲ್ಲರೆ ಮಳಿಗೆಗಳಿಂದ 24 ತಿಂಗಳ ಇಎಮ್ಐ ಆಯ್ಕೆ ಮೂಲಕ ಖರೀದಿ ಮಾಡಿದ್ರೆ 12,000ರೂ. ವರೆಗೆ ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಬಹುದಾಗಿದೆ. ಈ ವಿಭಾಗದಲ್ಲಿ ನೊ-ಕಾಸ್ಟ್ ಇಎಮ್‌ಐ ಆಯ್ಕೆ ಲಭ್ಯ ಇದೆ.

ಹಾಗೆಯೇ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸುವ ಗ್ರಾಹಕರು ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಕೋಟಾಕ್ ಬ್ಯಾಂಕ್‌ ಕಾರ್ಡ್‌ ಬಳಕೆ ಮಾಡಿದರೆ 12,000 ರೂ. ವರೆಗಿನ ಕ್ಯಾಶ್‌ಬ್ಯಾಕ್ ಜೊತೆಗೆ 12 ತಿಂಗಳ ನೊ-ಕಾಸ್ಟ್ ಇಎಮ್‌ಐ ಅನ್ನು ಪಡೆಯಬಹುದು. ಇದರೊಂದಿಗೆ ಒಪ್ಪೋ ಗ್ರಾಹಕರು 8,000ರೂ. ವರೆಗೆ ವಿನಿಮಯ ಬೋನಸ್ ಅನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇದಿಷ್ಟೇ ಅಲ್ಲದೆ ಖರೀದಿಸಿದ ದಿನಾಂಕದಿಂದ 6 ತಿಂಗಳವರೆಗೆ ಒಂದು ಬಾರಿಯ ಡಿಸ್‌ಪ್ಲೇ ಬದಲಿ ಸೌಲಭ್ಯವನ್ನೂ ಸಹ ಪಡೆಯಬಹುದು. ಈ ಆಫರ್ ಅಕ್ಟೋಬರ್ 29, 2023 ರವರೆಗಿನ ಖರೀದಿಗಳ ಮೇಲೆ ಮಾತ್ರ ಮಾನ್ಯವಾಗಿರುತ್ತದೆ ಎಂಬುದು ತಿಳಿದಿರಲಿ.

ಒಪ್ಪೋ ಫೈಂಡ್ N3 ಫ್ಲಿಪ್‌: ಫ್ಲಿಪ್‌ ಮಾದರಿಯಲ್ಲೇ ಅತ್ಯುತ್ತಮ ಕ್ಯಾಮೆರಾ ಫೋನ್‌!

ಒಪ್ಪೋ ಪ್ರೀಮಿಯಂ ಸೇವಾ ಕೊಡುಗೆ:
-ಒಪ್ಪೋ ಫೈಂಡ್ N3 ಫ್ಲಿಪ್‌ನಲ್ಲಿ ಅಂತಾರಾಷ್ಟ್ರೀಯ ವಾರಂಟಿ ಹಕ್ಕುಗಳೊಂದಿಗೆ ಯಾವುದೇ ಸಮಸ್ಯೆ ಇಲ್ಲದ ಪ್ರಯಾಣಕ್ಕೆ ಅನುಮತಿ ಇರಲಿದೆ.
-ರಿಫ್ರೆಶ್ ಸೇವೆಯು ಬಳಕೆದಾರರು ತಮ್ಮ ಸ್ಕ್ರೀನ್ ಗಾರ್ಡ್ ಮತ್ತು ಫೈಂಡ್‌ N3 ಫ್ಲಿಪ್‌ನ ರಿಯರ್‌ ಕವರ್ ಅನ್ನು ಎರಡು ಬಾರಿ ವಾರಂಟಿ ಅವಧಿಯೊಳಗೆ ಬದಲಾಯಿಸಲು ಅನುಮತಿಸುತ್ತದೆ.

- ಈ ಫೋನ್‌ನ ಸೇವೆ/ದುರಸ್ತಿಗಾಗಿ ಒಪ್ಪೋ ಇಎಮ್‌ಐ ಆಯ್ಕೆಯನ್ನೂ ಸಹ ಪರಿಚಯಿಸಿದೆ. ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಇಎಂಐ ಕಂತು ಮತ್ತು ಅವಧಿಯನ್ನು ನಿರ್ಧರಿಸಿಕೊಳ್ಳಬಹುದಾಗಿದೆ.
- ಆಕಸ್ಮಿಕ ಹಾನಿಯ ಸಂದರ್ಭದಲ್ಲಿ ಗ್ರಾಹಕರು ಡಿಸ್‌ಪ್ಲೇನ ಮೊದಲ ದುರಸ್ತಿಗೆ 15% ರಿಯಾಯಿತಿಯನ್ನು ಪಡೆಯಬಹುದು.
- ಅಷ್ಟೇ ಅಲ್ಲದೆ ಈ ಫೋನ್‌ ನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಪ್ಪೋ ತಜ್ಞರೊಂದಿಗೆ ವಾಟ್ಸಾಪ್‌ ಮೂಲಕ ಸಂಪರ್ಕ ಸಾಧಿಸಬಹುದಾಗಿದೆ.

- ಉಚಿತ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳು ಸಹ ಇದ್ದು, ಈ ಸೇವೆಯನ್ನು ಭಾರತದ 25,000+ ಪಿನ್ ಕೋಡ್‌ಗಳಲ್ಲಿ ನೀಡಲಾಗಿದೆ. ದೂರು ನೀಡಿದ 72 ಗಂಟೆಗಳ ಒಳಗೆ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ.
-ಆಯ್ದ ಸೇವಾ ಕೇಂದ್ರಗಳಲ್ಲಿ ಫ್ಲ್ಯಾಶ್ ಫಿಕ್ಸ್ ಆಯ್ಕೆಮಾಡಿದ ಸಮಸ್ಯೆಗಳಲ್ಲಿ ನಿಮ್ಮ ಫ್ಲಿಪ್ ಡಿವೈಸ್‌ಗೆ 2 ಗಂಟೆಗಳ ದುರಸ್ತಿ ಭರವಸೆ ನೀಡಲಾಗುತ್ತದೆ.

Best Mobiles in India

English summary
Oppo Find N3 Flip gets flagship quality lenses with triple camera, vertical cover screen and fast charging option, marking a transition in the foldable flip smartphone segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+