ಭಾರತದಲ್ಲಿ ಲಭ್ಯ ಇರುವ ಅತ್ಯುತ್ತಮ ಗೇಮಿಂಗ್ ಲ್ಯಾಪ್‌ಟಾಪ್‌ಗಳಿವು: ಬೆಲೆ ಎಷ್ಟು?
ಲ್ಯಾಪ್‌ಟಾಪ್‌ಗಳು ಇಂದು ಬಹು ಬೇಡಿಕೆಯ ಡಿವೈಸ್‌ಗಳಾಗಿದ್ದು, ಅದರಲ್ಲೂ ಬಳಕೆದಾರರ ಆದ್ಯತೆಗೆ ತಕ್ಕಂತೆ ಲಭ್ಯವಾಗುತ್ತಿವೆ. ಅಂದರೆ ವಿದ್ಯಾರ್ಥಿಗಳು, ಉದ್ಯೋಗಿಗಳು, ಗೇಮರ್‌ಗಳಿಗೆ ಅಗತ್ಯವಾದ ಸೌಲಭ್ಯವನ್ನು ಹೊಂದಿರುವ ವಿವಿಧ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಯಲ್ಲಿದ್ದು, ಇದರಲ್ಲಿ ಬಜೆಟ್ ಬೆಲೆಯ ಈ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಹೆಚ್ಚು ಜನಪ್ರಿಯವಾಗಿವೆ.
ಹೌದು, ಲ್ಯಾಪ್‌ಟಾಪ್‌ಗಳು ಹಲವು ರೀತಿಯಲ್ಲಿ ಬಳಕೆದಾರರಿಗೆ ಅನುಕೂಲ ಆಗುತ್ತಿದ್ದು, ಅವುಗಳಲ್ಲಿ ಏಸರ್, ಲೆನೊವೊ, ಹೆಚ್‌ಪಿ ಸೇರಿದಂತೆ ಇನ್ನಿತರೆ ಪ್ರಮುಖ ಬ್ರ್ಯಾಂಡ್ ನ ಲ್ಯಾಪ್‌ಟಾಪ್‌ಗಳಿಗೆ ಭಾರೀ ಬೇಡಿಕೆ ಇದೆ. ಅದರಲ್ಲೂ ಇವು ಉತ್ತಮ ಫೀಚರ್ಸ್ ಹೊಂದಿರುವುದು ವಿಶೇಷ. ಹಾಗಿದ್ರೆ, ಈ ವಿಶೇಷ ಲ್ಯಾಪ್‌ಟಾಪ್‌ಗಳ ಫೀಚರ್ಸ್ ಏನು?, ಆಫರ್ ಬೆಲೆ ಎಷ್ಟು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಏಸರ್ ಆಸ್ಪೈರ್ 7 A715: ಏಸರ್‌ನ ಆಸ್ಪೈರ್ 7 A715 ಲ್ಯಾಪ್‌ಟಾಪ್ 15.6 ಇಂಚಿನ FHD, TFT LCD ಡಿಸ್‌ಪ್ಲೇ ಹೊಂದಿದ್ದು, 81.6% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದಿದೆ. ಹಾಗೆಯೇ AMD ರೈಜೆನ್ 5 ಹೆಕ್ಸಾ ಕೋರ್ 5500U ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುವ ಈ ಲ್ಯಾಪ್‌ಟಾಪ್ 8GB RAM ಹಾಗೂ 512GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಇದನ್ನು ಅಮೆಜಾನ್ ಮೂಲಕ 74,999 ರೂ. ಗಳ ದರದಲ್ಲಿ ಖರೀದಿ ಮಾಡಬಹುದಾಗಿದೆ.
MSI GF63 ಥಿನ್: ಈ ಲ್ಯಾಪ್‌ಟಾಪ್ 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದರೊಂದಿಗೆ 144Hz ಸ್ಕ್ರೀನ್ ರಿಫ್ರೆಶ್ ರೇಟ್‌ನ FHD IPS-ಲೆವೆಲ್ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಇಂಟೆಲ್ ಕೋರ್ i5-11400H ಪ್ರೊಸೆಸರ್ ಬಲ ಪಡೆದಿದ್ದು, 8GB RAM ಹಾಗೂ 512GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಬ್ಯಾಕ್‌ಲಿಟ್ ಕೀಬೋರ್ಡ್ ಬೆಂಬಲವನ್ನು ಪಡೆದಿರುವ ಈ ಲ್ಯಾಪ್‌ಟಾಪ್ ಅನ್ನು ಅಮೆಜಾನ್‌ನಲ್ಲಿ 59,500 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

ಏಸರ್ ನೈಟ್ರೋ 5 AN515-57: ಏಸರ್ ನೈಟ್ರೋ 5 AN515-57 ಲ್ಯಾಪ್‌ಟಾಪ್ ಸಹ 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು,144Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಇಂಟೆಲ್ ಕೋರ್ i5-11400H ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುವ ಈ ಡಿವೈಸ್ 16GB RAM ಹಾಗೂ 512GB ಇಂಟರ್ ಸ್ಟೋರೇಜ್ ಆಯ್ಕೆ ಹೊಂದಿದೆ. ಈ ಮೂಲಕ ನೀವು ಈ ಲ್ಯಾಪ್‌ಟಾಪ್ ಅನ್ನು 62,990 ರೂ. ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.
ಲೆನೊವೊ ಲೀಜನ್ 5: ಲೆನೊವೊ ಲೀಜನ್ 5 ಲ್ಯಾಪ್‌ಟಾಪ್ 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ನೀಡಲಿದೆ. ಹಾಗೆಯೇ AMD ರೈಜೆನ್ 5-(4600H) 6 ಕೋರ್ ಪ್ರೊಸೆಸರ್‌ನೊಂದಿಗೆ ಕಾಣಿಸಿಕೊಂಡಿದ್ದು, NVIDIA ಜಿಫೋರ್ಸ್ GTX 1650 ಗ್ರಾಫಿಕ್ಸ್ ಕಾರ್ಡ್ ಬಲ ಪಡೆದುಕೊಂಡಿದೆ. ಜೊತೆಗೆ 8 GB RAM ಮತ್ತು 1 TB ಇಂಟರ್ ಸ್ಟೋರೇಜ್ ಆಯ್ಕೆ ಇದರಲ್ಲಿದೆ. ಈ ಲ್ಯಾಪ್‌ಟಾಪ್ ಅನ್ನು ನೀವು 64,790 ರೂ. ಗಳ ದರದಲ್ಲಿ ಕೊಂಡುಕೊಳ್ಳಬಹುದು.

ಲೆನೊವೊ ಐಡಿಯಾಪ್ಯಾಡ್ ಗೇಮಿಂಗ್ 3: ಗೇಮಿಂಗ್ ವಲಯದಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಇರುವ ಲ್ಯಾಪ್‌ಟಾಪ್ ಆಗಿ ಈ ಲ್ಯಾಪ್‌ಟಾಪ್ ಗುರುತಿಸಿಕೊಂಡಿದ್ದು, ಇದು 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಪಡೆದಿದೆ. ಹಾಗೆಯೇ 3.1GHz ಗಡಿಯಾರದ ವೇಗದೊಂದಿಗೆ 11ನೇ ಜನ್ ಇಂಟೆಲ್ ಕೋರ್ i5-11300H 4ಕೋರ್ ಪ್ರೊಸೆಸರ್ ಬಲ ಪಡೆದುಕೊಂಡಿದೆ. ಜೊತೆಗೆ 8GBRAM ಹಾಗೂ 512GB ಇಂಟರ್ ಸ್ಟೋರೇಜ್ ಆಯ್ಕೆಯ ಈ ಲ್ಯಾಪ್‌ಟಾಪ್‌ಗೆ 53,990ರೂ.ಗಳ ಬೆಲೆ ನಿಗದಿ ಮಾಡಲಾಗಿದೆ.


Click it and Unblock the Notifications








