ಒಂದೇ ರೀಚಾರ್ಜ್‌ನಲ್ಲಿ ಭರ್ಜರಿ ಸೌಲಭ್ಯ ಬೇಕಿದ್ರೆ, ಜಿಯೋದ ಈ ಪ್ಲ್ಯಾನ್‌ಗಳು ಬೆಸ್ಟ್!
ಮೂಂಚೂಣಿಯ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಜಿಯೋ ಪ್ರೀಪೇಯ್ಡ್ ಪ್ಲ್ಯಾನ್‌ಗಳು ಈಗಾಗಲೇ ಗ್ರಾಹಕರನ್ನು ಸೆಳೆದಿವೆ. ಹಾಗೆಯೇ ಜಿಯೋ ಸಂಸ್ಥೆಯು ಕೆಲವು ಅತ್ಯುತ್ತಮ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಈ ಯೋಜನೆಗಳು ಜಬರ್ದಸ್ತ್ ಪ್ರಯೋಜನಗಳನ್ನು ಒಳಗೊಂಡಿವೆ.
ಹೌದು, ಜಿಯೋ ಟೆಲಿಕಾಂ ಪ್ರತಿದಿನ ಅಧಿಕ ಡೇಟಾ ಸೌಲಭ್ಯದ ಜೊತೆಗೆ ಹೆಚ್ಚಿನ ವ್ಯಾಲಿಡಿಟಿ ಇರುವ ಕೆಲವು ಪ್ಲ್ಯಾನ್‌ಗಳನ್ನು ಹೊಂದಿದೆ. ಇದರೊಂದಿಗೆ ಅಧಿಕ ಡೇಟಾ, ಅನಿಯಮಿತ ವಾಯಿಸ್ ಕರೆ ಸೌಲಭ್ಯ, ಎಸ್‌ಎಮ್‌ಎಸ್ ಪ್ರಯೋಜನಗಳ ಪೋಸ್ಟ್‌ಪೇಯ್ಡ್ ಆಯ್ಕೆಗಳನ್ನು ಹೊಂದಿದೆ. 399 ರೂ. ಪ್ಲ್ಯಾನ್ ಆರಂಭಿಕ ಪೋಸ್ಟ್‌ಪೇಯ್ಡ್ ಯೋಜನೆ ಆಗಿದೆ.

ಇನ್ನುಳಿದಂತೆ ಜಿಯೋ 599ರೂ. ಮತ್ತು ಜಿಯೋ 799 ರೂ. ಪೋಸ್ಟ್‌ಪೇಯ್ಡ್ ಯೋಜನೆಗಳು ಹೆಚ್ಚಿನ ಪ್ರಯೋಜನ ಪಡೆದಿವೆ. ಈ ಮೂರು ಪೋಸ್ಟ್‌ಪೇಯ್ಡ್‌ಗಳು ಡೇಟಾ ಜೊತೆಗೆ ಹೆಚ್ಚುವರಿ ಯಾಗಿ ಓಟಿಟಿ ಪ್ರಯೋಜನ ಸಹ ಪಡೆದಿವೆ. ಹಾಗಾದರೆ ಜಿಯೋ ಟೆಲಿಕಾಂನ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಜಿಯೋ 399ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಜಿಯೋ 399 ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ 75 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಈ ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ 200 GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ ಮತ್ತು ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಲಭ್ಯವಾಗಲಿದೆ.

ಹಾಗೆಯೇ ಈ ಯೋಜನೆಯಲ್ಲಿ ಹೆಚ್ಚುವರಿ ಯಾಗಿ ನೆಟ್‌ಫ್ಲಿಕ್ಸ್, ಒಂದು ವರ್ಷದ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಸಿಗಲಿದೆ. ಇದಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಲಭ್ಯವಾಗಲಿವೆ.
ಜಿಯೋ 599ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಜಿಯೋ 599 ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ 100 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಕಳುಹಿಸುವ ಅವಕಾಶವು ಸಿಗಲಿದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ 200 GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ ಮತ್ತು ಹೆಚ್ಚುವರಿ ಒಂದು ಸಿಮ್ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

ಇನ್ನುಳಿದಂತೆ ಈ ಯೋಜನೆಯಲ್ಲಿ ಹೆಚ್ಚುವರಿ ಯಾಗಿ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಸಿಗಲಿದೆ. ಇದಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಲಭ್ಯವಾಗಲಿವೆ.
ಜಿಯೋ 799ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಜಿಯೋ 799 ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ 150 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಗ್ರಾಹಕರಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಕಳುಹಿಸುವ ಅವಕಾಶವು ಸಿಗಲಿದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ 200 GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ ಮತ್ತು ಹೆಚ್ಚುವರಿ ಎರಡು ಸಿಮ್ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

ಇದರೊಂದಿಗೆ ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಹೆಚ್ಚುವರಿ ಯಾಗಿ ಗ್ರಾಹಕರಿಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಸಿಗಲಿದೆ. ಇದಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಲಭ್ಯವಾಗಲಿವೆ.


Click it and Unblock the Notifications








