ನೀವು ಜಿಯೋ ಗ್ರಾಹಕರೇ?..ಹಾಗಿದ್ರೆ, ಈ ಮೂರು ಪ್ಲ್ಯಾನ್‌ಗಳಲ್ಲಿ ಒಂದನ್ನು ರೀಚಾರ್ಜ್ ಮಾಡಿ!
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಮೂಂಚೂಣಿಯ ಸಂಸ್ಥೆಯಾಗಿ ಕಾಣಿಸಿಕೊಂಡಿರುವ ರಿಲಯನ್ಸ್ ಜಿಯೋ, ಚಂದಾದಾರರನ್ನು ಸೆಳೆಯಲು ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಹೆಚ್ಚಿನ ಡೇಟಾ ಪ್ರಯೋಜನದ ಪ್ಲ್ಯಾನ್‌ಗಳ ಆಯ್ಕೆ ನೀಡಿದೆ. ಸಂಸ್ಥೆಯ ಬಹುತೇಕ ಪ್ರೀಪೇಯ್ಡ್ ಯೋಜನೆಗಳು ದೈನಂದಿನ ಡೇಟಾ ಪ್ರಯೋಜನ ಪಡೆದಿದ್ದು, ಜೊತೆಗೆ ಆಕರ್ಷಕ ವ್ಯಾಲಿಡಿಟಿ ಸಹ ಪಡೆದಿವೆ. ಅದಾಗ್ಯೂ, ಜಿಯೋ ಮೂರು ಪ್ರಿಪೇಯ್ಡ್ ಪ್ಲ್ಯಾನ್ ಸದ್ದು ಮಾಡುತ್ತಿವೆ.
ಹೌದು, ರಿಲಯನ್ಸ್ ಜಿಯೋ ಸಂಸ್ಥೆಯ ಕೆಲವು ಯೋಜನೆಗಳು ಹೆಚ್ಚು ಜನಪ್ರಿಯವಾಗಿವೆ. ಅದರಲ್ಲಿಯೂ ಮುಖ್ಯವಾಗಿ ಅಧಿಕ ಡೇಟಾ ಸೌಲಭ್ಯದ ಜೊತೆಗೆ ದೀರ್ಘಾವಧಿ ವ್ಯಾಲಡಿಟಿ ಪ್ರಯೋಜನ ಪಡೆದ ಪ್ಲ್ಯಾನ್‌ಗಳು ಹೆಚ್ಚು ಗಮನಾರ್ಹವಾಗಿ ಕಾಣಿಸಿಕೊಂಡಿವೆ. ಆ ಪೈಕಿ ಜಿಯೋ ತನ್ನ ಮೂರು ಪ್ರಿಪೇಯ್ಡ್ ಯೋಜನೆಗಳ ಹೆಚ್ಚಿನ ಡೇಟಾ ಪ್ರಯೋಜನ ಸೇರ್ಪಡೆ ಮಾಡಿದ್ದು, ಮತ್ತಷ್ಟು ಗ್ರಾಹಕರನ್ನು ಸೆಳೆಯುವಂತೆ ಆಗಿದೆ.

ಜಿಯೋ ಸಂಸ್ಥೆಯು ತನ್ನ 999ರೂ, 399ರೂ ಮತ್ತು 219ರೂ. ಬೆಲೆಯ ಪ್ರೀಪೇಯ್ಡ್ ಯೋಜನೆಗಳಲ್ಲಿ ಹೆಚ್ಚಿನ ಡೇಟಾ ಪ್ರಯೋಜನ ಸೇರಿಸಿದ್ದು, ಗ್ರಾಹಕರಿಗೆ ಖುಷಿ ನೀಡಿದೆ. ಅಂದಹಾಗೆ ಈ ಮೂರು ಯೋಜನೆಗಳು ಭಿನ್ನ ಡೇಟಾ ಸೌಲಭ್ಯ ಹಾಗೂ ಭಿನ್ನ ವ್ಯಾಲಿಡಿಟಿ ಪ್ರಯೋಜನ ಪಡೆದಿವೆ. ಹೀಗಾಗಿ ಈ ಮೂರು ಯೋಜನೆಗಳು ರೀಚಾರ್ಜ್‌ಗೆ ಹೆಚ್ಚು ಆಕರ್ಷಕವಾಗಿ ಕಾಣಿಸಿವೆ. ಇನ್ನುಳಿದಂತೆ ಈ ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಜಿಯೋ 999ರೂ. ಯೋಜನೆಯ ಸೌಲಭ್ಯಗಳ ಮಾಹಿತಿ : ರಿಲಾಯನ್ಸ್ ಜಿಯೋ 999ರೂ. ಪ್ರೀಪೇಯ್ಡ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅನ್ನು ಹೊಂದಿದೆ. ಹಾಗೆಯೇ ಇದು ಪ್ರತಿದಿನ 3GB ಡೇಟಾ ಸೌಲಭ್ಯ ಪಡೆದಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 292 GB ಡೇಟಾ ಪ್ರಯೋಜನ ನೀಡಲಿದೆ. ಅಲ್ಲದೇ ಅನಿಯಮಿತ ಜಿಯೋ ಟು ಜಿಯೋ ವಾಯಿಸ್ ಕರೆಗಳು, ಜಿಯೋ ದಿಂದ ಇತರೆ ನೆಟವರ್ಕ್ ವಾಯಿಸ್ ಕರೆಗಳಿಗೂ ಅನಿಯಮಿತ ವಾಯಿಸ್ ಕರೆ ಲಭ್ಯ.
ಅಂದಹಾಗೆ ಎಕ್ಸ್‌ಟ್ರಾ ಡೇಟಾ ಆಫರ್ ಕೊಡುಗೆಯಲ್ಲಿ ಗ್ರಾಹಕರಿಗೆ ಹೆಚ್ಚುವರಿಯಾಗಿ 40GB ಡೇಟಾ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ಉಚಿತ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ರಿಲಯನ್ಸ್ ಜಿಯೋ ಆಪ್ ಸೇವೆಗಳು ಸಹ ಗ್ರಾಗಕರಿಗೆ ದೊರೆಯುತ್ತವೆ.
ಜಿಯೋ 399ರೂ. ರೀಚಾರ್ಜ್ ಯೋಜನೆಯ ಸೌಲಭ್ಯಗಳ ಮಾಹಿತಿ : ಜಿಯೋ 399ರೂ. ಪ್ರೀಪೇಯ್ಡ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅನ್ನು ಪಡೆದುಕೊಂಡಿದೆ. ಇನ್ನು ಈ ಯೋಜನೆಯು ಪ್ರತಿದಿನ 3GB ಡೇಟಾ ಪ್ರಯೋಜನ ಪಡೆದಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 90GB ಡೇಟಾ ಪ್ರಯೋಜನ ಒದಗಿಸಲಿದೆ. ಅಲ್ಲದೇ ಅನಿಯಮಿತ ಅನಿಯಮಿತ ವಾಯಿಸ್ ಕರೆ ಲಭ್ಯ ಪಡೆದುಕೊಂಡಿದೆ.
ಅಂದಹಾಗೆ ಎಕ್ಸ್‌ಟ್ರಾ ಡೇಟಾ ಆಫರ್ ಕೊಡುಗೆಯಲ್ಲಿ ಗ್ರಾಹಕರಿಗೆ ಹೆಚ್ಚುವರಿಯಾಗಿ 61ರೂ. ಮೌಲ್ಯದ ಡೇಟಾ ಪ್ರಯೋಜನ ಸಿಗಲಿದೆ. ಇದರ ಜೊತೆಗೆ ಉಚಿತ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ರಿಲಯನ್ಸ್ ಜಿಯೋ ಆಪ್ ಸೇವೆಗಳು ಸಹ ಗ್ರಾಗಕರಿಗೆ ದೊರೆಯುತ್ತವೆ.
ಜಿಯೋ 219ರೂರೂ. ರೀಚಾರ್ಜ್ ಯೋಜನೆಯ ಸೌಲಭ್ಯಗಳ ಮಾಹಿತಿ : ಜಿಯೋ 219ರೂ. ಪ್ರೀಪೇಯ್ಡ್ ಯೋಜನೆಯು ಒಟ್ಟು 14 ದಿನಗಳ ವ್ಯಾಲಿಡಿಟಿ ಅನ್ನು ಹೊಂದಿದೆ. ಇನ್ನು ಈ ಯೋಜನೆಯು ಪ್ರತಿದಿನ 3GB ಡೇಟಾ ಪ್ರಯೋಜನ ಪಡೆದಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 44GB ಡೇಟಾ ಪ್ರಯೋಜನ ನೀಡಲಿದೆ. ಅಲ್ಲದೇ ಅನಿಯಮಿತ ಅನಿಯಮಿತ ವಾಯಿಸ್ ಕರೆ ಲಭ್ಯ ಪಡೆದುಕೊಂಡಿದೆ. ಜೊತೆಗೆ 25ರೂ. ಮೌಲ್ಯದ ಹೆಚ್ಚುವರಿ ಡೇಟಾ ಪ್ರಯೋಜನ ಸಹ ನೀಡಲಿದೆ.


Click it and Unblock the Notifications








