Smartphone: ಮಿಡ್ ರೇಂಜ್ ಫೋನ್‌ಗಳಲ್ಲಿ ಇವುಗಳೇ ಬೆಸ್ಟ್, ಉತ್ತಮ ಪ್ರೊಸೆಸರ್, ವಿಶೇಷ ಕ್ಯಾಮೆರಾ!
ಸ್ಮಾರ್ಟ್‌ಫೋನ್ (Smartphone) ಅನ್ನು ಗ್ರಾಹಕರು ಅವರ ಅವಶ್ಯಕತೆಗೆ ತಕ್ಕಂತೆ ಖರೀದಿ ಮಾಡುತ್ತಾರೆ. ಅಂದರೆ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ (Camera, battery, processor) ಸೇರಿದಂತೆ ವಿವಿಧ ವಿಷಯಗಳನ್ನು ಆಧಾರವಾಗಿರಿಸಿಕೊಂಡು ಫೋನ್‌ಗಳನ್ನು ಖರೀದಿ ಮಾಡುವುದು ಸಾಮಾನ್ಯ. ಅದರಂತೆ ಇತ್ತೀಚಿನ ದಿನಗಳಲ್ಲಿ ಮಿಡ್‌ರೇಂಜ್ ಫೋನ್‌ಗಳಿಗೆ ಬಹಳಷ್ಟು ಬೇಡಿಕೆ ಇದೆ.
ಹೌದು, ಭಾರತದಲ್ಲಿ ಮಿಡ್ ರೇಂಜ್ ಫೋನ್‌ಗಳಿಗೆ (Mid range phone) ವಿಶೇಷವಾದ ಬೇಡಿಕೆ ಇದ್ದು, ಈ ಬೆಲೆಯಲ್ಲಿ ಪೊಕೊ, ಸ್ಯಾಮ್‌ಸಂಗ್ ಹಾಗೂ ಒನ್‌ಪ್ಲಸ್ (Poco, Samsung and OnePlus) ಸೇರಿದಂತೆ ಅನೇಕ ಪ್ರಮುಖ ಬ್ರ್ಯಾಂಡ್‌ನ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಈ ನಡುವೆ ನೀವೇನಾದರೂ ಮೂವತ್ತು ಸಾವಿರದ ಒಳಗೆ ಲಭ್ಯ ಇರುವ ಅತ್ಯುತ್ತಮ ಮಿಡ್‌ರೇಂಜ್ ಫೋನ್ ಅನ್ನು ಸರ್ಚ್ ಮಾಡುತ್ತಿದ್ದರೆ ಅದರಲ್ಲೂ ಮೇಲೆ ತಿಳಿಸಿದ ವಿಷಯಗಳ ಆಧಾರದ ಮೇಲೆ ಫೋನ್ ಬೇಕು ಎಂದರೆ ಇಲ್ಲಿವೆ ನೋಡಿ.

ರಿಯಲ್‌ಮಿ 11 ಪ್ರೊ ಪ್ಲಸ್ : ಈ ಸ್ಮಾರ್ಟ್‌ಫೋನ್ (Realme 11 Pro Plus) ಪ್ರೀಮಿಯಂ ವಿನ್ಯಾಸವನ್ನು ಹೊಂದಿದ್ದು, ಕರ್ವ್ಡ್ ಅಮೋಲೆಡ್ ಡಿಸ್ಪ್ಲೇಯೊಂದಿಗೆ ಪ್ಯಾಕ್ ಆಗಿದ್ದು, ಇದು 200 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಉಳಿದಂತೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 100W ಚಾರ್ಜಿಂಗ್ ಬೆಂಬಲಿಸುತ್ತದೆ. ಈ ಮೂಲಕ ನೀವು ಈ ಫೋನ್ ಅನ್ನು 26 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜಿಂಗ್ ಮಾಡಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ M34 : ಈ ಸ್ಮಾರ್ಟ್‌ಫೋನ್ (Samsung Galaxy M34) ದಿನನಿತ್ಯದ ಬಳಕೆಗಾಗಿ ಉತ್ತಮ ಆಯ್ಕೆಯಾಗಿದೆ. ಇದು 120Hz ರಿಫ್ರೆಶ್ ರೇಟ್‌ನೊಂದಿಗೆ 6.5 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಸ್ಯಾಮ್‌ಸಂಗ್‌ನ ಒನ್‌ಯುಐ ನೊಂದಿಗೆ ಕಾಣಿಸಿಕೊಂಡಿದೆ. ಇದರೊಂದಿಗೆ 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.
ಪೊಕೊ F5 : ಈ ಫೋನ್ (Poco F5) ಮೂವತ್ತು ಸಾವಿರದ ಒಳಗೆ ಲಭ್ಯ ಇರುವ ಅತ್ಯುತ್ತಮ ಫೋನ್ ಆಗಿದೆ. ಇದು ಸ್ನಾಪ್ಡ್ರಾಗನ್ 7+ ಜನ್ 2 ಚಿಪ್‌ಸೆಟ್‌ನೊಂದಿಗೆ ಕಾಣಿಸಿಕೊಂಡಿದ್ದು, 120Hz ರಿಫ್ರೆಶ್ ರೇಟ್ ಆಯ್ಕೆ ಇರುವ 6.67 ಇಂಚಿನ ಫುಲ್ ಹೆಚ್‌ಡಿ + OLED ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಡಿವೈಸ್ ಅನ್ನು ತಂಪಾಗಿರಿಸಲು ಆವಿ ಚೇಂಬರ್ ಕೂಲಿಂಗ್ ಸೌಲಭ್ಯ ಸಹ ಇದೆ. ಉಳಿದಂತೆ ಈ ಫೋನ್ 67W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಮೂಲಕ ಪ್ಯಾಕ್ ಆಗಿದೆ.
ಐಕ್ಯೂ ನಿಯೋ 7 : ಈ ವಿಭಾಗದಲ್ಲಿ ಮಗದೊಂದು ಫೋನ್ ಎಂದರೆ ಅದುವೇ ಐಕ್ಯೂ ನಿಯೋ 7 (IQOO Neo 7). ಈ ಫೋನ್ 6.78 ಇಂಚಿನ ಫುಲ್ ಹೆಚ್‌ಡಿ + ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 120Hz ರಿಫ್ರೆಶ್ ರೇಟ್ ಅನ್ನು ಇದು ಹೊಂದಿದೆ. ಇದರ ಜೊತೆಗೆ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಈ ಫೋನ್‌ನಲ್ಲಿದೆ.
ಒನ್‌ಪ್ಲಸ್ ನಾರ್ಡ್ CE 3 5G : ಈ ಫೋನ್ (OnePlus Nord CE 3 5G) ತುಂಬಾ ಹಗುರವಾಗಿದ್ದು, ವಿನ್ಯಾಸದಲ್ಲಿ ಹೆಚ್ಚು ಆಕರ್ಷಕವಾಗಿದೆ. ಜೊತೆಗೆ ಆಕ್ಸಿಜನ್ ಓಎಸ್‌ನಲ್ಲಿ ರನ್ ಆಗುವ ಈ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಕ್ಯಾಮೆರಾ ಪ್ರಿಯರು ಈ ಫೋನ್ ಅನ್ನು ಆಯ್ಕೆ ಮಾಡಬಹುದು. ಇದರ ಜೊತೆಗೆ 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.

ಮೊಟೊರೊಲಾ ಎಡ್ಜ್ 40 : ಭಾರತದಲ್ಲಿ ಮೊಟೊರೊಲಾ ಫೋನ್‌ಗಳಿಗೆ ಬಹಳ ಬೇಡಿಕೆ ಇದೆ. ಈ ವಿಭಾಗದಲ್ಲಿ ಈ ಫೋನ್ (Motorola Edge 40) ಅನ್ನು ಸಹ ನೀವು ಖರೀದಿ ಮಾಡಬಹುದು. ಇದು 144Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ 6.55 ಇಂಚಿನ ಫುಲ್ ಹೆಚ್‌ಡಿ + ಪೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಡೈಮೆನ್ಸಿಟಿ 8020 ಪ್ರೊಸೆಸರ್ ಬಲದೊಂದಿಗೆ 8 GB RAM ಮತ್ತು 256 GB ಇಂಟರ್ ಸ್ಟೋರೇಜ್ ಆಯ್ಕೆ ಹೊಂದಿದೆ. ಹಾಗಯೇ 50MP + 13MP ರಿಯರ್ ಕ್ಯಾಮೆರಾ ಹಾಗೂ 32MP ಸೆಲ್ಫಿ ಕ್ಯಾಮೆರಾ ಹೊಂದಿದೆ.


Click it and Unblock the Notifications








