Home
ಸುದ್ದಿಜಾಲ

Smartphones: 25,000 ರೂ. ಒಳಗಿನ ಅತ್ಯುತ್ತಮ ಹೊಸ ಸ್ಮಾರ್ಟ್‌ಫೋನ್‌ಗಳಿವು!

ಸ್ಮಾರ್ಟ್‌ಫೋನ್‌ಗಳು (Smartphones) ಇತ್ತೀಚೆಗೆ ಭಿನ್ನ ಫೀಚರ್ಸ್‌ ಮೂಲಕ ಕಾಣಿಸಿಕೊಳ್ಳುತ್ತಿದ್ದು, ಈ ಮೂಲಕ ಬಳಕೆದಾರರ ವಿವಿಧ ಆಸಕ್ತಿಗಳನ್ನು ಪೂರೈಕೆ ಮಾಡುತ್ತಿವೆ. ಕೆಲವು ಫೋನ್‌ಗಳು ಕ್ಯಾಮೆರಾ ವಿಭಾಗದಲ್ಲಿ ವಿಶೇಷತೆ ಪಡೆದಿದ್ದರೆ ಇನ್ನೂ ಕೆಲವು ಫೋನ್‌ಗಳು ಪ್ರೊಸೆಸರ್‌ ವಿಚಾರದಲ್ಲಿ ಭಿನ್ನವಾಗಿರುತ್ತವೆ.

ಹೌದು, ಭಾರತದಲ್ಲಿ ಸ್ಮಾರ್ಟ್‌ಫೋನ್‌ ಖರೀದಿ ಮಾಡುವವರು ವಿವಿಧ ವಿಷಯಗಳನ್ನು ಗಮನಿಸುತ್ತಾರೆ. ಅದರಲ್ಲಿ ಬ್ಯಾಟರಿ, ಕ್ಯಾಮೆರಾ, ಪ್ರೊಸೆಸರ್‌, ವಿನ್ಯಾಸ ಎಲ್ಲವೂ ಸೇರಿವೆ. ಈ ತಿಂಗಳು ನೀವು ಫೋನ್‌ ಖರೀದಿ ಮಾಡಲು ಮುಂದಾಗಿದ್ದರೆ ನಾವಿಲ್ಲಿ ತಿಳಿಸಿಕೊಟ್ಟಿರುವ ಕೆಲವು ಫೋನ್‌ಗಳ ಕಡೆ ಕಣ್ಣಾಯಿಸಬಹುದಾಗಿದೆ. ಈ ಫೋನ್‌ಗಳು 25,000 ರೂ. ಒಳಗಿನ ಬೆಲೆಯಲ್ಲಿ ಲಭ್ಯ ಇವೆ. ಹಾಗಿದ್ರೆ ಬನ್ನಿ ಫೋನ್‌ಗಳ ಲಿಸ್ಟ್‌ ಗಮನಿಸೋಣ.

Smartphones: 25,000 ರೂ. ಒಳಗಿನ ಅತ್ಯುತ್ತಮ ಹೊಸ ಸ್ಮಾರ್ಟ್‌ಫೋನ್‌ಗಳಿವು!

ನಥಿಂಗ್ ಫೋನ್ (2a): ಇತ್ತೀಚೆಗೆ ಬಿಡುಗಡೆಯಾದ ನಥಿಂಗ್ ಫೋನ್ (2a) (Nothing Phone 2a) ಅನ್ನು ಈ ವೇಳೆ ನೀವು ಖರೀದಿ ಮಾಡಬಹುದಾಗಿದೆ. ಈ ಫೋನ್ 25,000 ರೂ.ಗಳ ಬೆಲೆಯಲ್ಲಿ ಲಭ್ಯ ಇದ್ದು, 120Hz ರಿಫ್ರೆಶ್‌ ರೇಟ್‌ ಆಯ್ಕೆಯ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ OS 2.5 ಅನ್ನು ರನ್‌ ಮಾಡಲಿದ್ದು, ನಿಮಗೆ ಅಗತ್ಯವಿರುವ ಎಲ್ಲವನ್ನೂ ಮಾಡಲು ಡೈಮೆನ್ಸಿಟಿ 7200 ಪ್ರೊ ಚಿಪ್‌ಸೆಟ್ ಅನ್ನು ನೀಡಲಾಗಿದೆ.ಇದರ ಜೊತೆಗೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಈ ಫೋನ್ ಉತ್ತಮ ಆಲ್ ರೌಂಡರ್ ಆಗಿದೆ.

ಒನ್‌ಪ್ಲಸ್‌ ನಾರ್ಡ್‌ CE4 5G: ಈ ಸ್ಮಾರ್ಟ್‌ಫೋನ್ (OnePlus Nord CE4 5G) ಸಹ ಈ ಬೆಲೆ ವಿಭಾಗದಲ್ಲಿ ಉತ್ತಮ ಫೋನ್‌ ಆಗಿ ಗುರುತಿಸಿಕೊಂಡಿದೆ. ಇದು 120Hz ರಿಫ್ರೆಶ್‌ ರೇಟ್‌ ಆಯ್ಕೆಯ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 2,160Hz PWM ಮಬ್ಬಾಗಿಸುವಿಕೆ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ನಿಮ್ಮ ಬೆರಳುಗಳು ಅಥವಾ ಡಿಸ್‌ಪ್ಲೇ ಒದ್ದೆಯಾಗಿರುವಾಗಲೂ ಸಹ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 100W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಹೊಂದಿದೆ.

Smartphones: 25,000 ರೂ. ಒಳಗಿನ ಅತ್ಯುತ್ತಮ ಹೊಸ ಸ್ಮಾರ್ಟ್‌ಫೋನ್‌ಗಳಿವು!

ಐಕ್ಯೂ Z7 ಪ್ರೊ: ಈ ಸ್ಮಾರ್ಟ್‌ಫೋನ್‌ (IQOO Z7 Pro) ಅನ್ನು ನೀವೀಗ 21,999 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ ಆಕ್ಟಾ ಕೋರ್ (2.8 GHz, ಡ್ಯುಯಲ್ ಕೋರ್ + 2.8 GHz, ಹೆಕ್ಸಾ ಕೋರ್) ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8 GB RAM, 6.78 ಇಂಚಿನ FHD+ ಅಮೋಲೆಡ್‌ ಡಿಸ್‌ಪ್ಲೇ ಜೊತೆಗೆ 120 Hz ರಿಫ್ರೆಶ್ ರೇಟ್‌ ಬೆಂಬಲ ಪಡೆದಿದೆ. ಇದರ ಜೊತೆಗೆ 64 MP + 2 MP ಡ್ಯುಯಲ್ ರಿಯರ್‌ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, 4600 mAh ಸಾಮರ್ಥ್ಯದ ಬ್ಯಾಟರಿಯನ್ನು ಕಾಣಬಹುದಾಗಿದೆ.

ಪೊಕೊ X6 5G: ಈ ಸ್ಮಾರ್ಟ್‌ಫೋನ್ (Poco X6 5G) 12GB RAM ಜೊತೆಗೆ ಸ್ನಾಪ್‌ಡ್ರಾಗನ್ 7s ಜನ್ 2 ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದ್ದು, ಗೇಮಿಂಗ್‌ನಿಂದ ಹಿಡಿದು ಬಹುಕಾರ್ಯಗಳಿಗೆ ಬೆಂಬಲ ನೀಡಲಿದೆ. ಹಾಗೆಯೇ120Hz ರಿಫ್ರೆಶ್‌ ರೇಟ್‌ ಆಯ್ಕೆಯ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 5,100mAh ಸಾಮರ್ಥ್ಯದ ಬ್ಯಾಟರಿಯು ನಿಮಗೆ ಸಂಪೂರ್ಣ ದಿನ ಬ್ಯಾಕಪ್‌ ನೀಡಲಿದೆ. ಪ್ರಮುಖವಾಗಿ 67W ವೇಗದ ಚಾರ್ಜಿಂಗ್ ಅನ್ನು ಈ ಫೋನ್‌ ಬೆಂಬಲಿಸಲಿದೆ.

Smartphones: 25,000 ರೂ. ಒಳಗಿನ ಅತ್ಯುತ್ತಮ ಹೊಸ ಸ್ಮಾರ್ಟ್‌ಫೋನ್‌ಗಳಿವು!

ಮೊಟೊರೊಲಾ ಎಡ್ಜ್ 40 ನಿಯೋ: ಈ ಸ್ಮಾರ್ಟ್‌ಫೋನ್ (Motorola Edge 40 Neo) ಸಹ ನಿಮಗೆ 25,000 ರೂ.ಗಳ ಒಳಗೆ ಲಭ್ಯ ಇರುವ ಅತ್ಯುತ್ತಮ ಫೋನ್‌ ಆಗಿದೆ. ಈ ಮಧ್ಯಮ-ಶ್ರೇಣಿಯ ಈ ಫೋನ್ ಬೆಣ್ಣೆಯಂತಹ ಮೃದುವಾದ 144Hz ರಿಫ್ರೆಶ್‌ ರೇಟ್‌ ಆಯ್ಕೆಯ ಪೋಲೆಡ್ ಕರ್ವ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯು ಉತ್ತಮ ಬ್ಯಾಕಪ್‌ ಅನ್ನು ನೀಡಲಿದ್ದು, 68W ವೇಗದ ಚಾರ್ಜಿಂಗ್‌ಗೆ ಬೆಂಬಲ ಪಡೆದಿದೆ.

Best Mobiles in India

English summary
If you are planning to buy a Smartphones this month, you can take a look at some of the smartphone that we have mentioned here. these phones Available under Rs 25,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+