Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಟಿವಿಗಳಿಗೆ ಬೊಂಬಾಟ್ ಡಿಸ್ಕೌಂಟ್‌!

ಫ್ಲಿಪ್‌ಕಾರ್ಟ್‌ ಸಮ್ಮರ್ ಸೇವರ್‌ ಡೇಸ್‌ ಸೇಲ್‌ ನಡೆಸುತ್ತಿದ್ದು, ಇದರಲ್ಲಿ ಸ್ಮಾರ್ಟ್‌ಫೋನ್, ಸ್ಮಾರ್ಟ್‌ಟಿವಿ, ಏರ್‌ ಕೂಲರ್‌, ಲ್ಯಾಪ್‌ಟಾಪ್‌ ಸೇರಿದಂತೆ ವಿವಿಧ ರೀತಿಯ ಸ್ಮಾರ್ಟ್‌ಡಿವೈಸ್‌ಗಳಿಗೆ ಭರ್ಜರಿ ಆಫರ್‌ ಘೋಷಣೆ ಮಾಡಲಾಗಿದೆ. ಈ ಮೂಲಕ ಅತ್ಯುತ್ತಮವಾದ ಬ್ರ್ಯಾಂಡೆಂಡ್ ಡಿವೈಸ್‌ಗಳನ್ನು ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ.

ಹೌದು, ಸಮ್ಮರ್ ಸೇವರ್ ಡೇಸ್ ಮಾರಾಟವು ಏಪ್ರಿಲ್ 13 ರಂದು ಆರಂಭ ಆಗಿದ್ದು, ಇದು ಏಪ್ರಿಲ್ 17 ರಂದು ಕೊನೆಗೊಳ್ಳುತ್ತದೆ. ಈ ನಡುವೆ ಪ್ರಮುಖವಾಗಿ ಸ್ಮಾರ್ಟ್‌ಟಿವಿಗಳಿಗೆ ಭಾರೀ ರಿಯಾಯಿತಿ ಘೋಷಣೆ ಮಾಡಲಾಗಿದೆ. ಇದರೊಂದಿಗೆ ನೀವು ಕೆಲವು ಬ್ಯಾಂಕ್‌ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದರೆ ಇನ್ನೂ ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಬಹುದು. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಯಾವೆಲ್ಲಾ ಸ್ಮಾರ್ಟ್‌ಟಿವಿಗಳು ಅಗ್ಗದ ಬೆಲೆಗೆ ಲಭ್ಯ ಇವೆ ಎಂಬುದನ್ನು ತಿಳಿದುಕೊಳ್ಳಿ.

ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಟಿವಿಗಳಿಗೆ ಬೊಂಬಾಟ್ ಡಿಸ್ಕೌಂಟ್‌!

ಬ್ಯಾಂಕ್‌ ಆಫರ್‌ ಏನಿದೆ? : ಈ ಸ್ಮಾರ್ಟ್‌ಟಿವಿ ಖರೀದಿ ಮಾಡುವಾಗ ನೀವು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ 1,500 ರೂ.ವರೆಗೆ ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಬಹುದು. ಹಾಗೆಯೇ ಇಎಮ್‌ಐ ವಹಿವಾಟುಗಳ ಮೇಲೆ 10% ರಿಯಾಯಿತಿ. ಸಹ ಲಭ್ಯವಾಗಲಿದೆ. ಇದರೊಂದಿಗೆ ಪೇಟಿಎಂ ವಾಲೆಟ್‌ನಲ್ಲಿ 100 ತ್ವರಿತ ಕ್ಯಾಶ್‌ಬ್ಯಾಕ್ ಸಹ ಲಭ್ಯ.

ಮಿ X ಸರಣಿ : ಮಿ ಸ್ಮಾರ್ಟ್‌ಟಿವೈಸ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದ್ದು, ಅತ್ಯುತ್ತಮ ಕಾರ್ಯಕ್ಷಮತೆಯನ್ನು ಇವು ಹೊಂದಿವೆ. ಅದರಂತೆ ಮಿ X ಸರಣಿಯ 43 ಇಂಚಿನ ಸ್ಮಾರ್ಟ್‌ಟಿವಿಗೆ ಭರ್ಜರಿ ಆಫರ್‌ ಇದೆ. ಅದರಂತೆ ಈ ಟಿವಿ LED UHD 4K ಡಿಸ್‌ಪ್ಲೇ ಹೊಂದಿದ್ದು, 60Hz ರಿಫ್ರೆಶ್ ರೇಟ್‌ ಬೆಂಬಲಿಸುತ್ತದೆ. ಜೊತೆಗೆ ಡಾಲ್ಬಿ ವಿಷನ್ ಆಯ್ಕೆ ಸಹ ಇದೆ.

ಕನೆಕ್ಟಿವಿಟಿ ವಿಚಾರದಲ್ಲಿ 3 ಹೆಚ್‌ಡಿಎಮ್‌ಐ ಪೋರ್ಟ್‌ಗಳು ಮತ್ತು 2 ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿದೆ. ಇನ್ನುಳಿದಂತೆ 30 ವ್ಯಾಟ್ ಔಟ್‌ಪುಟ್ ಸ್ಪೀಕರ್‌ ನೊಂದಿಗೆ ಪ್ಯಾಕ್‌ ಆಗಿದೆ. ಈ ಟಿವಿಯನ್ನು ನೀವು 26,999ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, 16,900ರೂ. ವರೆಗಿನ ಎಕ್ಸ್‌ಚೇಂಜ್ ಆಫರ್‌ ಸಹ ಲಭ್ಯ.

ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಟಿವಿಗಳಿಗೆ ಬೊಂಬಾಟ್ ಡಿಸ್ಕೌಂಟ್‌!
ಇಫ್ಫಾಲ್ಕನ್ ಬೈ ಟಿಸಿಎಲ್‌ U62 : ಈ ಸ್ಮಾರ್ಟ್‌ಟಿವಿ 43 ಇಂಚಿನ LED UHD 4K ಡಿಸ್‌ಪ್ಲೇ ಹೊಂದಿದ್ದು, 60Hz ರಿಫ್ರೆಶ್ ರೇಟ್‌ ಅನ್ನು ಪಡೆದುಕೊಂಡಿದೆ. ಜೊತೆಗೆ ಇದು HDR 10 ಮತ್ತು ಡಾಲ್ಬಿ ವಿಷನ್ ಅನ್ನು ಸಹ ಬೆಂಬಲಿಸುತ್ತದೆ. ಇನ್ನುಳಿದಂತೆ 3 ಹೆಚ್‌ಡಿಎಮ್‌ಐ ಪೋರ್ಟ್‌ಗಳು ಮತ್ತು 1 ಯುಎಸ್‌ಬಿ ಪೋರ್ಟ್ ಆಯ್ಕೆಯನ್ನು ಪಡೆದುಕೊಂಡಿದೆ.

ಇದರೊಂದಿಗೆ ಡಾಲ್ಬಿ ಆಡಿಯೋ ಬೆಂಬಲದೊಂದಿಗೆ ಟಿವಿ 24 ವ್ಯಾಟ್ ಔಟ್‌ಪುಟ್ ಸ್ಪೀಕರ್‌ಗಳನ್ನು ಹೊಂದಿದೆ. ಇನ್ನುಳಿದಂತೆ ನೀವು ಈ ಸ್ಮಾರ್ಟ್‌ಟಿವಿಯನ್ನು 19,999ರೂ. ಗಳ ಆಫರ್‌ ಬೆಲೆಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ಬ್ಯಾಂಕ್ ಕೊಡುಗೆಗಳು ಮತ್ತು ಹೆಚ್ಚುವರಿ 7,000 ರೂ. ಗಳ ಹೆಚ್ಚುವರಿ ರಿಯಾಯಿತಿಯನ್ನು ವಿನಿಮಯ ಆಫರ್‌ನಲ್ಲಿ ಪಡೆದುಕೊಳ್ಳಬಹುದು.

ಸ್ಯಾಮ್‌ಸಂಗ್‌ ಕ್ರಿಸ್ಟಲ್ 4K ನಿಯೋ ಸರಣಿ: ಸ್ಯಾಮ್‌ಸಂಗ್‌ ನ ಈ ಬಹುಬೇಡಿಕೆಯ ಸ್ಮಾರ್ಟ್‌ಟಿವಿ 108 cm ಅಥವಾ 43 ಇಂಚಿನ LED UHD 4K ಡಿಸ್‌ಪ್ಲೇ ಹೊಂದಿದ್ದು, ಇದು 50Hz ರಿಫ್ರೆಶ್ ರೇಟ್‌ ಬೆಂಬಲದೊಂದಿಗೆ ಕಂಡುಬಂದಿದೆ. ಇನ್ನುಳಿದಂತೆ 3 ಹೆಚ್‌ಡಿಎಮ್‌ಐ ಪೋರ್ಟ್‌ಗಳು ಮತ್ತು 1 ಯುಎಸ್‌ಬಿ ಪೋರ್ಟ್‌ ಆಯ್ಕೆಯನ್ನು ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ ಕ್ರಿಸ್ಟಲ್ನ ಈ ಟಿವಿ 20 ವ್ಯಾಟ್ ಸೌಂಡ್ ಔಟ್‌ಪುಟ್ ನೊಂದಿಗೆ ಕಾಣಿಸಿಕೊಂಡಿದ್ದು, ಡಾಲ್ಬಿ ಡಿಜಿಟಲ್ ಪ್ಲಸ್‌ನೊಂದಿಗೆ ಪ್ಯಾಕ್‌ ಆಗಿದೆ. ಇದರ ಬೆಲೆ ವಿಚಾರಕ್ಕೆ ಬರುವುದಾದರೆ ಇದು 29,999ರೂ. ಗಳ ಎಕ್ಸ್‌ಚೇಂಜ್ ಆಫರ್‌ನೊಂದಿಗೆ ಕಂಡುಬಂದಿದ್ದು, 4,789ರೂ. ವರೆಗೆ ಹೆಚ್ಚುವರಿ ರಿಯಾಯಿತಿ ಮತ್ತು ಬ್ಯಾಂಕ್ ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
In the Flipkart Summer Saver Days sale, these three smart TVs have a huge price reduction, you can buy them at cheap price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+