Home
ಸುದ್ದಿಜಾಲ

ನಿಮ್ಮ ಫೋನ್‌ ಸ್ಕ್ರೀನ್‌ ಪಳಪಳ ಹೊಳೆಯಬೇಕೆ?..ಈ 'ಸ್ಪ್ರೇ' ಬಳಸಿ!

ಸ್ಮಾರ್ಟ್‌ಫೋನ್‌ ಅಗತ್ಯ ಡಿವೈಸ್‌ ಎಂಬುದರಲ್ಲಿ ಎರಡು ಮಾತಿಲ್ಲ ಆದರೆ ಸ್ಮಾರ್ಟ್‌ಫೋನ್‌ ಕಾಳಜಿ ಸಹ ಮುಖ್ಯವಾಗಿರುತ್ತದೆ. ಹೀಗಾಗಿ ಅನೇಕ ಬಳಕೆದಾರರು ಹಾನಿ ತಪ್ಪಿಸುವುದಕ್ಕಾಗಿ ತಮ್ಮ ಮೊಬೈಲ್‌ಗಳಿಗೆ ಸ್ಕ್ರೀನ್‌ ಗಾರ್ಡ್‌, ಬ್ಯಾಕ್‌ ಕವರ್‌ ಗಳನ್ನು ಹಾಕಿಸುತ್ತಾರೆ. ಇನ್ನು ಫೋನ್‌ ಅನ್ನು ಸ್ಕ್ರೀನ್‌ ಸ್ವಚ್ಛವಾಗಿ ಇಡಲು ಬಳಕೆದಾರರು ಕ್ಲೀನಿಂಗ್ ಲಿಕ್ವಿಡ್‌ ಸಹ ಬಳಕಸಬಹುದಾಗಿದೆ.

ಮಾರುಕಟ್ಟೆಯಲ್ಲಿ ತರಹೇವಾರಿ ಮೊಬೈಲ್‌ ಕ್ಲಿನಿಂಗ್ ಉತ್ಪನ್ನಗಳು ಖರೀದಿಗೆ ಲಭ್ಯ ಇವೆ. ಅವುಗಳಲ್ಲಿ ಸ್ಕ್ರೀನ್‌ ಕ್ಲೀನಿಂಗ್ ಲಿಕ್ವಿಡ್‌ ಸಹ ಒಂದಾಗಿದೆ. ಜಿಡ್ಡು ಗಟ್ಟಿದ ಮೊಬೈಲ್‌ ಸ್ಕ್ರೀನ್‌ ಒರೆಸಲು ಈ ಕ್ಲೀನಿಂಗ್ ಲಿಕ್ವಿಡ್‌ ನೆರವಾಗಲಿದೆ. ಅಂದಹಾಗೆ ಈ ಸ್ಕ್ರೀನ್‌ ಕ್ಲೀನಿಂಗ್ ಲಿಕ್ವಿಡ್‌ಗಳು ಸುರಕ್ಷಿತವಾಗಿದ್ದು, ಬಳಕೆಯೂ ಸಹ ಸುಲಭವಾಗಿದೆ. ಹಾಗಾದರೆ ಆನ್‌ಲೈನ್‌ ಇ ಕಾಮರ್ಸ್‌ ತಾಣಗಳಲ್ಲಿ ಖರೀದಿಸಬಹುದಾದ ಸ್ಕ್ರೀನ್‌ ಕ್ಲೀನಿಂಗ್ ಲಿಕ್ವಿಡ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನಿಮ್ಮ ಫೋನ್‌ ಸ್ಕ್ರೀನ್‌ ಪಳಪಳ ಹೊಳೆಯಬೇಕೆ?..ಈ 'ಸ್ಪ್ರೇ' ಬಳಸಿ!

Onliest ಸ್ಕ್ರೀನ್‌ ಕ್ಲೀನಿಂಗ್ ಜೆಲ್‌ :
Onliest ಸ್ಕ್ರೀನ್‌ ಕ್ಲೀನಿಂಗ್ ಜೆಲ್‌ ಬೆಲೆ ಅಮೆಜಾನ್‌ ತಾಣದಲ್ಲಿ 79ರೂ. ಆಗಿದೆ. ಸ್ಕ್ರೀನ್‌ ಒರೆಸುವ ಬಟ್ಟೆಯನ್ನು ಈ ಪ್ಯಾಕ್ ಒಳಗೊಂಡಿದೆ. ಈ ಜೆಲ್‌ ಮೂಲಕ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಮೊಬೈಲ್‌ಗಳು, ಐಪ್ಯಾಡ್ ಸ್ಕ್ರೀನ್‌ಗಳನ್ನು ಒರೆಸಬಹುದು. ಹಾಗೆಯೇ ಕ್ಯಾಮೆರಾ ಲೆನ್ಸ್ ಗ್ಲಾಸ್‌ಗಳು, ಸನ್‌ಗ್ಲಾಸ್‌ಗಳು, ಟಿವಿ ಸ್ಕ್ರೀನ್‌ಗಳು, LED LCD ಸ್ಕ್ರೀನ್‌ಗಳನ್ನು ಕ್ಲೀನ್‌ ಮಾಡಬಹುದು.

ಸೌನ್ಸ್ LCD ಸ್ಕ್ರೀನ್ ಕ್ಲೀನರ್ (Sounce LCD) :
ಸೌನ್ಸ್ LCD ಸ್ಕ್ರೀನ್ ಕ್ಲೀನಿಂಗ್ ಸ್ಪ್ರೇ 3 ಇನ್‌ 1 ಆಗಿದ್ದು, ಇದು ಕ್ಲೀನಿಂಗ್ ಸ್ಪ್ರೇ, ಕ್ಲಾತ್ ಹಾಗೂ ಬ್ರಷ್ ಕ್ಲೀನ್ ಟೂಲ್‌ ಅನ್ನು ಒಳಗೊಂಡಿದೆ. ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಇದರ ಬೆಲೆಯು 199 ರೂ. ಆಗಿದೆ. ಈ ಕ್ಲೀನಿಂಗ್ ಸ್ಪ್ರೇ ಮೂಲಕ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಮೊಬೈಲ್‌ಗಳು, ಐಪ್ಯಾಡ್ ಸ್ಕ್ರೀನ್‌ಗಳನ್ನು ಒರೆಸಬಹುದು.

ಹೆವಾನ್ 7 ಇನ್ 1 ಎಲೆಕ್ಟ್ರಾನಿಕ್ ಕ್ಲೀನಿಂಗ್ ಕಿಟ್ :
ಹೆವಾನ್ 7 ಇನ್ 1 ಎಲೆಕ್ಟ್ರಾನಿಕ್ ಕ್ಲೀನಿಂಗ್ ಕಿಟ್ (Hewan 7 in 1 Electronic Cleaning Kit) ಹಲವು ಇತರೆ ಕ್ಲೀನಿಂಗ್ ಉತ್ಪನ್ನಗಳನ್ನು ಒಳಗೊಂಡಿದೆ. ಈ ಕಿಟ್‌ನಲ್ಲಿ ಮೊಬೈಲ್‌ ಕ್ಲೀನಿಂಗ್ ಕಿಟ್, ಲ್ಯಾಪ್‌ಟಾಪ್‌ ಕ್ಲೀನಿಂಗ್ ಕಿಟ್, ಏರ್‌ಪಾಡ್‌ ಕ್ಲೀನಿಂಗ್ ಕಿಟ್, ಮಾನಿಟರ್ ಕೀಬೋರ್ಡ್‌ ಕ್ಲೀನಿಂಗ್ ಬ್ರಶ್‌, ಕೀ ಪುಲ್ಲರ್ ಹಾಗೂ ಸ್ಪ್ರೇ ಬಾಟಲ್‌ ಇರುತ್ತವೆ. ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಇದರ ಬೆಲೆಯು 299 ರೂ. ಆಗಿದೆ.

ನಿಮ್ಮ ಫೋನ್‌ ಸ್ಕ್ರೀನ್‌ ಪಳಪಳ ಹೊಳೆಯಬೇಕೆ?..ಈ 'ಸ್ಪ್ರೇ' ಬಳಸಿ!

ಪೋರ್ಟಬಲ್ 2 ಇನ್ 1 ಮೊಬೈಲ್ ಸ್ಕ್ರೀನ್ ಕ್ಲೀನರ್ :
ಪೋರ್ಟಬಲ್ 2 ಇನ್ 1 ಮೊಬೈಲ್ ಸ್ಕ್ರೀನ್ ಕ್ಲೀನರ್ ಸ್ಪ್ರೇ ಮತ್ತು ಮೈಕ್ರೋಫೈಬರ್ ಕ್ಲಾತ್ (Portible 2 in 1 Mobile Screen Cleaner) ಇದು ಸ್ಪ್ರೇ ಮತ್ತು ಕ್ಲೀನಿಂಗ್ ಕ್ಲಾತ್‌ ಅನ್ನು ಒಳಗೊಂಡಿದೆ. ಈ ಉತ್ಪನ್ನವು ಚಿಕ್ಕದಾಗಿದ್ದು, ಸುಲಭವಾಗಿ ಜೊತೆಗೆ ಕೊಂಡೊಯ್ಯಬಹುದು. ಈ ಕ್ಲೀನಿಂಗ್ ಸ್ಪ್ರೇ ಮೂಲಕ ಲ್ಯಾಪ್‌ಟಾಪ್‌ ಕ್ಯಾಮೆರಾ ಲೆನ್ಸ್‌, ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಮೊಬೈಲ್‌ಗಳು, ಐಪ್ಯಾಡ್ ಸ್ಕ್ರೀನ್‌ಗಳನ್ನು ಒರೆಸಬಹುದು.

ಅಂದಹಾಗೆ ಪೋರ್ಟಬಲ್ 2 ಇನ್ 1 ಮೊಬೈಲ್ ಸ್ಕ್ರೀನ್ ಕ್ಲೀನರ್ ಕಿಟ್‌ 100ml ಲಿಕ್ವಿಡ್‌ ಅನ್ನು ಒಳಗೊಂಡಿರುತ್ತದೆ. ಲಿಕ್ವಿಡ್ ಒರೆಸಲು ಮೈಕ್ರೋಫೈಬರ್ ಕ್ಲಾತ್ ಸಹ ಇದೆ. ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಈ ಕಿಟ್‌ ಬೆಲೆಯು 349 ರೂ. ಆಗಿದೆ.

Best Mobiles in India

English summary
Best Phone Screen Cleaner Spray and Gel. all details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+