Home
ಸುದ್ದಿಜಾಲ

25,000 ರೂ.ಗಳ ಒಳಗೆ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು!

ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಆಫರ್‌ಗೆ ಬೆಲೆಗೆ ಖರೀದಿ ಆಗುತ್ತಿವೆ. ಅದರಲ್ಲೂ ಈಗಂತೂ ಹಲವಾರು ರೀತಿಯ ಬ್ರ್ಯಾಂಡ್‌ಗಳು ವಿವಿಧ ಫೋನ್‌ಗಳನ್ನು ಲಾಂಚ್‌ ಮಾಡಿದ್ದು, ಭಿನ್ನ ಪ್ರೊಸೆಸರ್‌ ಹಾಗೂ ವಿವಿಧ ಫೀಚರ್ಸ್‌ಗಳ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ.

25,000 ರೂ.ಗಳ ಒಳಗೆ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು!

ಹೌದು, ನೀವೇನಾದರೂ 25,000 ರೂ. ಗಳ ಒಳಗೆ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕು ಎಂದುಕೊಂಡಿದ್ದರೆ. ಅದರಲ್ಲೂ ಈ ಬೆಲೆಯೊಳಗೆ ಲಭ್ಯವಾಗುವ ಹಲವಾರು ಫೋನ್‌ಗಳಲ್ಲಿ ಯಾವುದು ಬೆಸ್ಟ್‌ ಎಂದು ನಿಮ್ಮಲ್ಲಿ ಗೊಂದಲ ಇದ್ದರೆ ಇಲ್ಲಿವೆ ನೋಡಿ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌.

ರಿಯಲ್‌ಮಿ 10 ಪ್ರೊ ಪ್ಲಸ್‌ 5G

ರಿಯಲ್‌ಮಿ 10 ಪ್ರೊ ಪ್ಲಸ್‌ 5G ಸ್ಮಾರ್ಟ್‌ಫೋನ್‌ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು, 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ನೀಡಲಿದೆ. ಇನ್ನುಳಿದಂತೆ ಈ ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 1080 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6 GB RAM ಹಾಗೂ 128GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ. ಅದರಂತೆ ಟ್ರಿಪಲ್‌ ಕ್ಯಾಮೆರಾ ರಚನೆಯೊಂದಿಗೆ 108MP ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಹಾಗೂ 2MP ಮ್ಯಾಕ್ರೋ ಸೆನ್ಸರ್‌ ಆಯ್ಕೆ ಪಡೆದುಕೊಂಡಿದೆ. ಇನ್ನು
5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 66W ನ ಫಾಸ್ಟ್‌ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಇನ್ನು ಈ ಫೋನ್‌ 24,999 ರೂ. ಗಳ ಬೆಲೆ ಹೊಂದಿದೆ.

ರಿಯಲ್‌ಮಿ 9 ಪ್ರೊ ಪ್ಲಸ್

ಮಿಡ್‌ ರೇಂಜ್‌ ಫೋನ್‌ಗಳಲ್ಲಿ ರಿಯಲ್‌ಮಿ 9 ಪ್ರೊ ಪ್ಲಸ್ ಫೋನ್‌ ಸಾಕಷ್ಟು ಸೇಲ್‌ಆಗಿದೆ. ಅದರಂತೆ ಈ ಫೋನ್‌ 6.4 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೇಟ್ ನೀಡಲಿದೆ. ಅದರಂತೆ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿರುವ ಈ ಫೋನ್ 6 GB RAM ಹಾಗೂ 128GB ಇಂಟರ್ನಲ್‌ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 50 MP + 8 MP + 2 MP ಯ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಪಡೆದಿದೆ. ಜೊತೆಗೆ ಸೆಲ್ಫಿಗಾಗಿ 16 MP ಕ್ಯಾಮೆರಾ ಆಯ್ಕೆ ಇದರಲ್ಲಿದೆ. ಇನ್ನುಳಿದಂತೆ 4500 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್‌ ಆಗಿದೆ. ಈ ಫೋನ್‌ನ ಸಾಮಾನ್ಯ ದರ 25,000 ರೂ. ಗಳು.

25,000 ರೂ.ಗಳ ಒಳಗೆ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು!

ಐಕ್ಯೂ Z6 ಪ್ರೊ

ಐಕ್ಯೂ Z6 ಪ್ರೊ ಫೋನ್‌ 6.44 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೇಟ್‌ ನೀಡಲಿದೆ. ಹಾಗೆಯೇ 1,300nits ಬ್ರೈಟ್‌ನೆಸ್‌ ಅನ್ನು ಹೊಂದಿದ್ದು, ಆಕರ್ಷಕವಾಗಿದೆ. ಇನ್ನುಳಿದಂತೆ ಈ ಫೋನ್ ಸ್ನಾಪ್‌ಡ್ರಾಗನ್ 778G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6 GB RAM ಹಾಗೂ 128GB ಸೇರಿದಂತೆ ಎರಡು ವೇರಿಯಂಟ್‌ನಲ್ಲಿ ಲಭ್ಯ. ಇನ್ನು 64 MP + 8 MP + 2 MP ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆಯೊಂದಿಗೆ 16 MP ಸೆಲ್ಫಿ ಕ್ಯಾಮೆರಾ ಪಡೆದುಕೊಂಡಿದೆ. ಇನ್ನು ಈ ಫೋನ್‌ 4700 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಫ್ಲ್ಯಾಶ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ. ಈ ಫೋನ್ 22,999 ರೂ. ಗಳ ಬೆಲೆ ಹೊಂದಿದೆ.

ಮೊಟೊ G82

ಮೊಟೊ G82 ಸ್ಮಾರ್ಟ್‌ಫೋನ್‌ 6.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೇಟ್ ನೀಡಲಿದೆ. ಅದರಂತೆ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಿದೆ. ಹಾಗೆಯೇ ಈ ಫೋನ್‌ 6 GB RAM ಹಾಗೂ 128GB ಇಂಟರ್ನಲ್ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ. ಇನ್ನು 50 MP + 8 MP + 2 MP ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಹೊಂದಿದ್ದು, 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದೆ. ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇದು ಟರ್ಬೊ ಪವರ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಈ ಫೋನ್ 23,659 ರೂ. ಗಳ ಬೆಲೆ ಹೊಂದಿದೆ.

25,000 ರೂ.ಗಳ ಒಳಗೆ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F62

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F62 ಫೋನ್‌ 6.7 ಇಂಚಿನ ಸೂಪರ್ ಅಮೋಲೆಡ್‌ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, 60 Hz ರಿಫ್ರೆಶ್ ರೇಟ್‌ ಆಯ್ಕೆ ನೀಡಲಿದೆ. ಇದರೊಂದಿಗೆ ಸ್ಯಾಮ್‌ಸಂಗ್‌ ಎಕ್ಸಿನೋಸ್ 9 ಆಕ್ಟಾ 9825 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6 GB RAM ಹಾಗೂ 128GB ಇಂಟರ್ನಲ್ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ. ಇನ್ನುಳಿದಂತೆ 64 + 12 + 5 + 5 MP ಕ್ವಾಡ್ ರಿಯರ್‌ ಕ್ಯಾಮೆರಾ ರಚನೆಯೊಂದಿಗೆ 32 MP ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದ. ಇದರೊಂದಿಗೆ 7000 mAh ಸಾಮರ್ಥ್ಯದ ಬ್ಯಾಟರಿ ಅಯ್ಕೆ ಹೊಂದಿದ್ದು, ಇದು ಫಾಸ್ಟ್‌ ಚಾರ್ಜಿಂಗ್‌ ಬೆಂಬಲ ಪಡೆದುಕೊಂಡಿದೆ. ಅಂತೆಯೇ ನೀವು ಈ ಫೋನ್‌ ಅನ್ನು 23,999 ರೂ. ಗಳ ಬೆಲೆಗೆ ಖರೀದಿ ಮಾಡಬಹುದು.

Best Mobiles in India

English summary
Best phones under 25,000 in India can now boasts of offering flagship performance at an affordable price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+