ಒಂದು ಸಾವಿರದೊಳಗೆ ಲಭ್ಯ ಭರ್ಜರಿ ಸೌಂಡ್ ಮಾಡೋ ಸ್ಪೀಕರ್‌ಗಳು! ಅದ್ಧೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ!
ಯಾವುದೇ ಸಂಭ್ರಮಾಚರಣೆ ಇರಲಿ ಅಲ್ಲಿ ಒಂದು ಸ್ಪೀಕರ್ ಇದ್ದರೆ ಅದರ ಮಜವೇ ಬೇರೆ. ಎಲ್ಲರೂ ಸಹ ಕುಣಿದು ಕುಪ್ಪಳಿಸಿಬಿಡುತ್ತಾರೆ. ಅದರಂತೆ ಇನ್ನೇನು ಕೆಲವೇ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ (Independence day celebration) ಬರುತ್ತಿದ್ದು, ಈ ನಡುವೆ ಸ್ಪೀಕರ್ ಸೇರಿದಂತೆ ಅನೇಕ ಸ್ಮಾರ್ಟ್ ಡಿವೈಸ್‌ಗಳಿಗೆ ಇ-ಕಾಮರ್ಸ್ ಸೈಟ್‌ಗಳಿಗೂ ಭರ್ಜರಿ ಆಫರ್ ಘೋಷಣೆ ಮಾಡಿವೆ. ಪರಿಣಾಮ ನೀವು ಭರ್ಜರಿಯಾಗಿ ಸೌಂಡ್ ಮಾಡುವ ಅತ್ಯುತ್ತಮ ಸ್ಪೀಕರ್‌ಗಳನ್ನು (Speakers) ಕೇವಲ ಒಂದು ಸಾವಿರದ ಒಳಗೆ ಖರೀದಿ ಮಾಡಬಹುದು.
ಹೌದು, ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯ ಪೋರ್ಟಬಲ್ ಸ್ಪೀಕರ್‌ಗಳು (Portable speakers) ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅದರಲ್ಲೂ ಬೆಲೆಗೆ ತಕ್ಕಂತ ಫೀಚರ್ಸ್ ಆಯ್ಕೆಯನ್ನು ಇವು ಹೊಂದಿದ್ದು, ಈ ನಡುವೆ ನಿಮಗೆ ಯಾವ ಸ್ಪೀಕರ್ ಉತ್ತಮ ಹಾಗೂ ಅಗ್ಗದ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಸ್ಪೀಕರ್ ಯಾವುದು ಎಂಬ ಗೊಂದಲ ಇದ್ದರೆ ತಲೆ ಕೆಡಿಸಿಕೊಳ್ಳಬೇಡಿ. ನಾವಿಲ್ಲಿ ತಿಳಿಸಲಿರುವ ಸ್ಕೀಕರ್‌ಗಳು ಅಮೆಜಾನ್‌ನಲ್ಲಿ ಒಂದು ಸಾವಿರದ ಒಳಗೆ ಲಭ್ಯ ಇವೆ.

ಬೋಟ್ ಸ್ಟೋನ್ 180 5W ಬ್ಲೂಟೂತ್ ಸ್ಪೀಕರ್ : ಈ ಸ್ಪೀಕರ್ ಅಮೆಜಾನ್‌ನಲ್ಲಿ 64 % ಡಿಸ್ಕೌಂಟ್ ಪಡೆದಿದ್ದು, 899ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಉಳಿದಂತೆ ಈ ಮಿನಿ ಸ್ಪೀಕರ್ 1.75 ಡೈನಾಮಿಕ್ ಡ್ರೈವರ್‌ಗಳೊಂದಿಗೆ ಪ್ಯಾಕ್ ಆಗಿದ್ದು, ಶಕ್ತಿಯುತ ಆಡಿಯೊವನ್ನು ನೀಡುತ್ತದೆ. ಜೊತೆಗೆ 5W ಪ್ರೀಮಿಯಂ ಹೈ ಡೆಫಿನಿಷನ್ ಸೌಂಡ್ ನೀಡಲಿದ್ದು,800mAh ಸಾಮರ್ಥ್ಯ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 10 ಗಂಟೆಗಳ ವರೆಗೆ ಬಳಕೆ ಮಾಡಬಹುದು. ಈ ಡಿವೈಸ್ ನೀಲಿ, ಕಪ್ಪು ಮತ್ತು ಕೆಂಪು ಬಣ್ಣದಲ್ಲಿ ಲಭ್ಯ.
ಝೆಬ್ರಾನಿಕ್ಸ್ ಝೆಬ್-ಕೌಂಟಿ ವೈರ್‌ಲೆಸ್ ಬ್ಲೂಟೂತ್ ಪೋರ್ಟಬಲ್ ಸ್ಪೀಕರ್ : ಈ ಡಿವೈಸ್ 45 % ಡಿಸ್ಕೌಂಟ್ ಪಡೆಯುವ ಮೂಲಕ 549ರೂ.ಗಳಿಗೆ ಲಭ್ಯ ಇದೆ. ಈ ಸ್ಪೀಕರ್ 3W ಸೌಂಡ್ ಔಟ್‌ಪುಟ್‌ನೊಂದಿಗೆ ಕಾಣಿಸಿಕೊಂಡಿದ್ದು, ಸಂಪರ್ಕಕ್ಕಾಗಿ, ಬ್ಲೂಟೂತ್, ಎಸ್‌ಬಿ ಪೋರ್ಟ್, ಆಕ್ಸ್ ಇನ್‌ಪುಟ್ ಜಾಕ್ ಇತ್ಯಾದಿಗಳನ್ನು ಬೆಂಬಲಿಸಲಿದೆ. ಇದೆಲ್ಲವನ್ನು ಒಳಗೊಂಡಂತೆ ಪೂರ್ಣ ಚಾರ್ಜ್‌ನಲ್ಲಿ 10 ಗಂಟೆಗಳವರೆಗೆ ಪ್ಲೇಟೈಮ್ ಅನ್ನು ನೀಡುತ್ತದೆ. ಈ ಡಿವೈಸ್ ಬರೋಬ್ಬರಿ 9 ಬಣ್ಣಗಳ ಆಯ್ಕೆಯಲ್ಲಿ ಲಭ್ಯ.
ಅಮೆಜಾನ್ ಬೇಸಿಕ್ಸ್ 2 X 3W ಮಲ್ಟಿಮೀಡಿಯಾ PC ಗೇಮಿಂಗ್ ಸ್ಪೀಕರ್: ಹೆಸರೇ ಸೂಚಿಸುವಂತೆ ಇದು ಗೇಮಿಂಗ್ ಸ್ಪೀಕರ್ ಆಗಿದ್ದು, ಅಮೆಜಾನ್‌ನಲ್ಲಿ 64% ಡಿಸ್ಕೌಂಟ್ ಪಡೆಯುವ ಮೂಲಕ 729ರೂ.ಗಳಿಗೆ ಲಭ್ಯ ಇದೆ. ಈ ಡಿವೈಸ್ 3.5mm ಇನ್‌ಪುಟ್ ಜ್ಯಾಕ್, ಆರ್‌ಜಿಬಿ ಲೈಟ್ಸ್, ಆಕ್ಸ್ ಬೆಂಬಲವನ್ನು ಪಡೆದಿದ್ದು, 6W ಸೌಂಡ್ ಔಟ್‌ಪುಟ್ ನೀಡಲಿದೆ. ಗೇಮಿಂಗ್ ಹೊರತುಪಡಿಸಿ ಸಿನಿಮಾ ವೀಕ್ಷಣೆ ಹಾಗೂ ಹಾಡುಗಳನ್ನು ಆಲಿಸುವಾಗ ಮತ್ತಷ್ಟು ಮನರಂಜನೆ ಪಡೆದುಕೊಳ್ಳಬಹುದು.
ಬ್ಲೂಪಂಕ್ಟ್ BT02 ಪೋರ್ಟಬಲ್ ವೈರ್‌ಲೆಸ್ ಬ್ಲೂಟೂತ್ ಸ್ಪೀಕರ್: ನೀವು ಈ ಬ್ಲೂಪಂಕ್ಟ್ BT02 ಪೋರ್ಟಬಲ್ ಸ್ಪೀಕರ್ ಅನ್ನು 999ರೂ.ಗಳಿಗೆ ಖರೀದಿ ಮಾಡಬಹುದು. ಇದು ಮೂಲ ದರದಿಂದ 50 % ರಿಯಾಯಿತಿ ಪಡೆದಿದೆ. ಉಳಿದಂತೆ 52mm ಡ್ರೈವರ್ ಅನ್ನು ಹೊಂದಿದ್ದು, 5W ಸೌಂಡ್ ಔಟ್ ಪುಟ್ ಲಭ್ಯ. ಹಾಗೆಯೇ 1200mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ 7 ರಿಂದ 8 ಗಂಟೆಗಳ ಕಾಲ ಬಳಕೆ ಮಾಡಬಹುದಾಗಿದೆ. ಈ ಡಿವೈಸ್ ನಿಮಗೆ ನಾಲ್ಕು ಬಣ್ಣಗಳಲ್ಲಿ ಲಭ್ಯ.

ಇನ್ಫಿನಿಟಿ - ಜೆಬಿಎಲ್ ಫ್ಯೂಜ್ ಪಿಂಟ್, ವೈರ್‌ಲೆಸ್ ಅಲ್ಟ್ರಾ ಪೋರ್ಟಬಲ್ ಮಿನಿ ಸ್ಪೀಕರ್: ಈ ಡಿವೈಸ್ ಅಮೆಜಾನ್‌ನಲ್ಲಿ 50 % ಡಿಸ್ಕೌಂಟ್ ಪಡೆದುಕೊಂಡಿದ್ದು, ಈ ಮೂಲಕ ನೀವು ಇದನ್ನು 999ರೂ.ಗಳಿಗೆ ಖರೀದಿ ಮಾಡಬಹುದು. ಉಳಿದಂತೆ ಇದು ಡ್ಯುಯಲ್ ಈಕ್ವಲೈಜರ್ ಮೋಡ್, ಮೈಕ್, ವೈರ್‌ಲೆಸ್ ಬ್ಲೂಟೂತ್ ಮತ್ತು ವಾಯ್ಸ್ ಅಸಿಸ್ಟೆಂಟ್ ಆಯ್ಕೆ ಪಡೆದುಕೊಂಡಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ ಐದು ಗಂಟೆಗಳ ಬ್ಯಾಕಪ್ ನೀಡಲಿದೆ. ಈ ಡಿವೈಸ್ ಕಪ್ಪು, ನೀಲಿ ಮತ್ತು ಕೆಂಪು ಬಣ್ಣದಲ್ಲಿ ಲಭ್ಯ.


Click it and Unblock the Notifications








