Home
ಸುದ್ದಿಜಾಲ

ಬಜೆಟ್ ಬೆಲೆಯಲ್ಲಿ ಲಭ್ಯವಿರುವ ದೀರ್ಘಾವಧಿಯ ಪ್ರೀಪೇಡ್ ಪ್ಲ್ಯಾನ್‌ಗಳು!

ದೇಶದ ಟೆಲಿಕಾಂ ವಯಲದಲ್ಲಿ ಪ್ರೀಪೇಡ್ ಪ್ಲ್ಯಾನ್‌ಗಳ ದರ ಹೆಚ್ಚಳವು ಭಾರಿ ಸದ್ದು ಮಾಡಿದೆ. ಬಹುತೇಕ ಬಳಕೆದಾರರು ಬೇರೆ ಟೆಲಿಕಾಂ ಸಂಸ್ಥೆಗಳಿಗೆ ಪೋರ್ಟ್‌ ಆಗೋದಾ ಅಥವಾ ಇರುವ ಟೆಲಿಕಾಂ ಸಂಸ್ಥೆಯಲ್ಲಿಯೇ ಉತ್ತಮ ಪ್ಲ್ಯಾನ್ ರೀಚಾರ್ಜ್‌ ಮಾಡಿಸೊದಾ ಎನ್ನುವ ಬಗ್ಗೆ ಯೋಚಿಸುತ್ತಿದ್ದಾರೆ. ಖಾಸಗಿ ಟೆಲಿಕಾಂ ಸಂಸ್ಥೆಗಳು ಬೆಲೆ ಹೆಚ್ಚಿಸಿದ್ದು, ಅವುಗಳಲ್ಲಿ ಕೆಲವು ಪ್ಲ್ಯಾನ್‌ಗಳು ಅತ್ಯುತ್ತಮವಾಗಿಯೇ ಇವೆ.

ಏರ್‌ಟೆಲ್‌

ಹೌದು, ಜಿಯೋ, ಏರ್‌ಟೆಲ್‌ ಮತ್ತು ವೊಡಾಫೋನ್ ಈಗಾಗಲೇ ದರ ಹೆಚ್ಚಳ ಮಾಡಿವೆ. ಆದರೆ ಹೊಸ ಪ್ರೀಪೇಡ್ ಪ್ಲ್ಯಾನ್‌ಗಳಲ್ಲಿ ಕೆಲವೊಂದು ದೀರ್ಘಾವಧಿಯ ಪ್ಲ್ಯಾನ್‌ಗಳು ಉಪಯುಕ್ತ ಅನಿಸುತ್ತವೆ. ಅವುಗಳಲ್ಲಿ ಸುಮಾರು 400ರೂ.ಒಳಗಿನ ಪ್ರೈಸ್‌ಟ್ಯಾಗ್‌ನಲ್ಲಿನ ಪ್ಲ್ಯಾನ್‌ಗಳು ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸಿವೆ ಎನ್ನಬಹುದಾಗಿದೆ. ಹಾಗಾದರೇ ಸುಮಾರು 400ರರೂ. ಬೆಲೆಯಲ್ಲಿನ ಲಭ್ಯವಿರುವ ಖಾಸಗಿ ಟೆಲಿಕಾಂ ಸಂಸ್ಥೆಗಳ ಪ್ರೀಫೇಡ್ ಪ್ಲ್ಯಾನ್‌ಗಳ ಬಗ್ಗೆ ನೋಡೋಣ.

ರಿಲಯನ್ಸ್ ಜಿಯೋ 329.ರೂ

ರಿಲಯನ್ಸ್ ಜಿಯೋ 329.ರೂ

ರಿಲಯನ್ಸ್ ಜಿಯೋ ಸಂಸ್ಥೆಯ 329.ರೂ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಅನಿಯಮಿತ ಜಿಯೋ-ಟು-ಜಿಯೋ ವಾಯ್ಸ್ ಕರೆಗಳು, 3,000 ಜಿಯೋ ಅಲ್ಲದ ನಿಮಿಷಗಳು, 1000 ಎಸ್‌ಎಂಎಸ್ಗಳು ಮತ್ತು ಒಟ್ಟು 6 ಜಿಬಿ 4 ಜಿ ಡೇಟಾವನ್ನು ಸಿಗಲಿದೆ. ಜಿಯೋ ಬಳಕೆದಾರರು ಕಂಪನಿಯ ಜನಪ್ರಿಯ ಅಪ್ಲಿಕೇಶನ್‌ಗಳಾದ ಜಿಯೋಟಿವಿ, ಜಿಯೋ ಸಿನೆಮಾ ಮತ್ತು ಮುಂತಾದವುಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ.

ವೊಡಾಪೊನ್ 379ರೂ.

ವೊಡಾಪೊನ್ 379ರೂ.

ವೊಡಾಫೋನ್ ಕಂಪನಿಯು 379ರೂ. ಪ್ರೀಪೇಡ್ ಪ್ಲ್ಯಾನ್‌ ಅನ್ನು ಪರಿಚಯಿಸಿದ್ದು, ಈ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಹಾಗೆಯೇ ಈ ಅವಧಿಯಲ್ಲಿ ಭಾರತದೊಳಗಿನ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳು ಮತ್ತು 1000 ಎಸ್‌ಎಮ್‌ಎಸ್‌ ಸೌಲಭ್ಯಗಳು ಸಿಗಲಿವೆ. ಹಾಗೆಯೇ ಪೂರ್ಣ ಅವಧಿಗೆ ಒಟ್ಟು 6GB ಡಾಟಾ ಸೌಲಭ್ಯ ದೊರೆಯುತ್ತದೆ.

ಏರ್‌ಟೆಲ್ 399ರೂ. ಪ್ಲ್ಯಾನ್‌

ಏರ್‌ಟೆಲ್ 399ರೂ. ಪ್ಲ್ಯಾನ್‌

ಏರ್‌ಟೆಲ್‌ನ 399ರೂ. ಪ್ರೀಪೇಡ್ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ವಾಯಿಸ್‌ ಕರೆಗಳು ಲಭ್ಯವಾಗಲಿದೆ. ಹಾಗೂ ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಸಹ ದೊರೆಯಲಿದೆ. ಇದರೊಂದಿಗೆ ಪ್ರತಿದಿನ 1.5GB ಡಾಟಾ ಪ್ರಯೋಜನ ಸಹ ಸಿಗಲಿದೆ.

ಪ್ಲ್ಯಾನ್ ಉತ್ತಮವೇ

ಪ್ಲ್ಯಾನ್ ಉತ್ತಮವೇ

ಬಹುತೇಕ ಹೆಚ್ಚು ಡಾಟಾ ಜೊತೆಗೆ ವ್ಯಾಲಿಡಿಟಿ ಸಹ ಬಯಸುತ್ತಾರೆ. ಇನ್ನು ಕೆಲವರು ಬಳಕೆದಾರರು ಕನಿಷ್ಠ ಡಾಟಾ ಜೊತೆಗೆ ದೀರ್ಘಕಾಲದ ವ್ಯಾಲಿಡಿಟಿ ಅವಧಿಯನ್ನು ಇಷ್ಟಪಡುತ್ತಾರೆ. ಇಂತಹ ಬಳಕೆದಾರರಿಗೆ ಈ ಮೇಲಿನ ಪ್ಯಾನ್‌ಗಳು ಉತ್ತಮ ಅನಿಸಲಿವೆ.

Best Mobiles in India

English summary
Reliance Jio, Bharti Airtel and Vodafone Idea raised the prepaid tariff prices earlier this month, but they are continuing to offer long-term plans on budget. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+